BREAKING NEWS
ಕೆಎಸ್ಆರ್ ರೈಲು ನಿಲ್ದಾಣದ ಯಾರ್ಡ್ ಮೇಲ್ದರ್ಜೆಗೇರಿಕೆ: ಇನ್ನು ಮುಂದೆ ರೈಲು ಸಂಚಾರ ಸರಾಗ   •   ಬಿಡದಿ ಟೌನ್‌ಶಿಪ್‌ ವಿವಾದ: ಮೋದಿ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆ – ಎಚ್‌ಡಿಕೆ ಕಿಡಿ | Bidadi Township Row   •   ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ರದ್ದು: ಚುನಾವಣಾ ಆಯೋಗದ ನಡೆಗೆ ಜಾಲತಾಣಗಳಲ್ಲಿ ಆಕ್ರೋಶ   •   ಗೃಹಲಕ್ಷ್ಮಿ & ಗೃಹಜ್ಯೋತಿ ಪುನಃ ಅರ್ಜಿ – CM DK ಆದೇಶ   •   ಬೆಂಗಳೂರು: ಭ್ರಷ್ಟಾಚಾರ ವಿರುದ್ಧ ಮುಖ್ಯಮಂತ್ರಿ ಶಿವಕುಮಾರ್ ಕಠಿಣ ನಿರ್ದೇಶನ   •   ‘ಮೇಕಿನ್ ಇಂಡಿಯಾ ಕೇಳಿದ್ರೆ, ಲೀಕ್ ಇನ್ ಇಂಡಿಯಾ ಕೊಟ್ರಿ’: ದೆಹಲಿಯಲ್ಲಿ ‘ಕಾಕ್ರೋಚ್ ಪಾರ್ಟಿ’ಯಿಂದ ಬೃಹತ್ ಪ್ರತಿಭಟನೆ!   •   ಸಿಎಂ ಸ್ಥಾನದಿಂದ ಇಳಿದರೂ ಕಡಿಮೆಯಾಗದ ಸಿದ್ದರಾಮಯ್ಯ ಖದರ್: ಬಿ.ಕೆ. ಹರಿಪ್ರಸಾದ್ ಹೊಸ ಕೆಪಿಸಿಸಿ ಅಧ್ಯಕ್ಷ, ಆಪ್ತರಿಗೆ ಮಂತ್ರಿಗಿರಿ!   •   ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್   •  

—Advertisement—

ಜಗತ್ತಿನ ಟ್ರಾಫಿಕ್​ ದಟ್ಟಣೆಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ

Author Picture
Published On: January 22, 2026

—Advertisement—

Updated By: Priyalachhi

ಐಟಿ ಮೂಲಕ ವಿಶ್ವದ ಗಮನ ಸೆಳೆದಿದ್ದ ಬೆಂಗಳೂರು ನಗರ ಇತ್ತೀಚಿಗೆ ಟ್ರಾಫಿಕ್​ ಸಮಸ್ಯೆಯಿಂದಲೂ ಜಾಗತಿಕ ಸ್ಥಾನ ಪಡೆಯುತ್ತಿದೆ. ಜಗತ್ತಿನ ಅತಿ ದಟ್ಟಣೆಯ ಟ್ರಾಫಿಕ್​ನಲ್ಲಿ ಬೆಂಗಳೂರು ಎರಡನೇ ಸ್ಥಾನವನ್ನು ಪಡೆದಿದೆ ಎಂದು ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ 2025ರಲ್ಲಿ ತೋರಿಸಿದೆ. ಈ ಸೂಚ್ಯಂಕದಲ್ಲಿ 2023 ರಲ್ಲಿ 6ನೇ ಸ್ಥಾನದಲ್ಲಿದ್ದ ಬೆಂಗಳೂರು 2024ರಲ್ಲಿ 3ನೇ ಸ್ಥಾನ ಮತ್ತು 2025ರಲ್ಲಿ ಎರಡನೇ ಸ್ಥಾನ ಪಡೆದಿದ್ದು, ಜನದಟ್ಟಣೆಯ ಸಮಯದಲ್ಲಿ ಪ್ರಯಾಣದ ವೇಗ ಕಡಿಮೆಯಾಗಿದ್ದು, ಹೆಚ್ಚಿನ ಸಮಯವನ್ನು ಬೇಡುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಟಾಮ್‌ಟಾಮ್ ನೆದರ್‌ಲ್ಯಾಂಡ್ಸ್ ಮೂಲದ ಸಂಸ್ಥೆಯಾಗಿದ್ದು ಜಗತ್ತಿನಾದ್ಯಂತ ನಗರಗಳಲ್ಲಿ ದಟ್ಟಣೆಯ ಮಟ್ಟಗಳು ಮತ್ತು ಪ್ರಯಾಣದ ಸಮಯವನ್ನು ಹೋಲಿಕೆ ಮಾಡಿ ಪ್ರತಿವರ್ಷ ಟ್ರಾಫಿಕ್​ ಸೂಚ್ಯಂಕವನ್ನು ಪ್ರಕಟಿಸುತ್ತದೆ

ಹೆಚ್ಚಿನ ದಟ್ಟಣೆ ಸಮಯ: ಸಿಲಿಕಾನ್​ ಸಿಟಿಯಲ್ಲಿ ಪೀಕ್​ ಸಮಯದಲ್ಲಿದಲ್ಲಿ ನಿಧಾನಗತಿಯ ಟ್ರಾಫಿಕ್​ ಇದ್ದು, ಸರಾಸರಿ ಶೇ 74.4ರಷ್ಟಿದೆ. 2024ಕ್ಕೆ ಹೋಲಿಕೆ ಮಾಡಿದರೆ ಇದು ಶೇ 1.7ರಷ್ಟು ಹೆಚ್ಚಾಗಿದೆ. ಅಂದರೆ, ನಗರದಲ್ಲಿ 10 ಕಿ.ಮೀ ದೂರು ಕ್ರಮಿಸಲು ಪಡೆಯುವ ಸರಾಸರಿ ಸಮಯ 36 ನಿಮಿಷದ 9 ಸೆಕೆಂಡ್​ಗಳಾಗಿವೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು 2 ನಿಮಿಷದ 4 ಸೆಕೆಂಡ್​ಗಳಷ್ಟು ಹೆಚ್ಚಾಗಿರುವುದನ್ನು ತೋರಿಸುತ್ತದೆ.

ಬೆಂಗಳೂರು ಮಾತ್ರವಲ್ಲದೇ, ಲಂಡನ್ ನಲ್ಲಿಯೂ ಈ ದಟ್ಟಣೆಯ ಸಮಯ ಹೆಚ್ಚುತ್ತಿದೆ ಎಂಬುದು ಈ ವರದಿಯಲ್ಲಿ ಬಯಲಾಗಿದೆ. ಈ ಸೂಚ್ಯಂಕದಲ್ಲಿ ಐರ್ಲೆಂಡ್​ನ ಡಬ್ಲಿನ್, ಮೆಕ್ಸಿಕೋ ನಗರ, ಸ್ಪೇನ್​ನ ಬಾರ್ಸಿಲೋನಾ, ಗ್ರೀಸ್​ನ ಅಥೆನ್ಸ್​, ಇಟಲಿಯ ಮಿಲನ್​, ಅರ್ಜೆಂಟಿನಾದ ರೊಸಾರಿಯೊ, ಜಪಾನ್​ನ ಹಿರೋಷಿಮಾ, ಯುಎಸ್​ಎಯ ಸ್ಯಾನ್​​ ಫ್ರಾನ್ಸಿಸ್ಕೋ ಸೇರಿದಂತೆ ಹಲವು ನಗರಗಳು ಪಟ್ಟಿಯಲ್ಲಿ ಸೇರಿವೆ.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp