Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ಫೈನಾನ್ಸ್ ಡಿಪಾರ್ಟ್‌ಮೆಂಟ್ ಪತ್ರ ಲೀಕ್: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

ಧಾರವಾಡ ತಹಶೀಲ್ದಾರ್ ಲಂಚ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲಂಚ ನೀಡಿದ್ದ ಮಂಜುನಾಥ್ ವಿರುದ್ಧವೇ ಕೇಳಿಬಂತು ಭೂಕಬಳಿಕೆ ಆರೋಪ!

ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನ ಇಂದಿನಿಂದ ಆರಂಭ: ‘ಬರ’ ಚರ್ಚೆಗೂ ಮುನ್ನವೇ ‘ವಂದೇ ಮಾತರಂ’ ಕಿಚ್ಚು!

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ಬಿಡದಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಸ್ಥಾವರದಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ
Nation News Latest News

ಬಿಡದಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಸ್ಥಾವರದಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ

Sambrama Prabha NewsBy Sambrama Prabha NewsNovember 7, 2025No Comments2 Mins Read
Share WhatsApp Facebook Twitter Telegram
Share
WhatsApp Facebook Twitter Telegram

Updated By: Priyalachhi

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಬಿಡದಿಯಲ್ಲಿ ಸ್ಥಾಪಿಸಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕವು ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲ ನಿಯಮಗಳನ್ನು ಪಾಲಿಸುತ್ತಿದ್ದು, ಘಟಕದಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.

ಪರಿಸರ ಮಾಲಿನ್ಯಕಾರಕಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಸ್ಥಾವರ ವಿಫಲವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಸಿದೆ ಎನ್ನಲಾದ ವರದಿಗೆ ಸಂಬಂಧಿಸಿದಂತೆ, ‘ದಿ ಫ್ರೈಡೇಸ್‌ಫಾರ್‌ಫ್ಯೂಚರ್ – ಕರ್ನಾಟಕ’ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ಕೆಪಿಸಿಎಲ್, ಘಟಕದಲ್ಲಿ ಪರಿಸರ ನಿಯಮಗಳನ್ನು ಪಾಲಿಸುವ ಜೊತೆಗೆ ಸಮರ್ಪಕವಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ತಿಳಿಸಿದೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡದಿಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಸ್ಥಾವರದ ಕಾರ್ಯಾರಂಭಕ್ಕೆ 2024ರ ಜುಲೈ 20ರಂದು ಅನುಮತಿ ನೀಡಿದ್ದು, ಅದಾದ ಬಳಿಕವೇ ಘಟಕದ ಕಾರ್ಯಾಚರಣೆ ಆರಂಭಿಸಲಾಗಿದೆ. ಘನತ್ಯಾಜ್ಯ ನಿರ್ವಹಣಾ ನಿಯಮಗಳು-2016ರ ಅಡಿಯಲ್ಲಿ ಘಟಕಕ್ಕೆ ಅನುಮತಿ ಪಡೆಯುವ ಬಗ್ಗೆ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ 2025ರ ಅಕ್ಟೋಬರ್ 13ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.

ಸ್ಥಾವರ 2025ರ ಆಗಸ್ಟ್ 25ರಂದು ರಾಜ್ಯ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸರ್ವರ್​​​ಗಳೊಂದಿಗೆ ಸಂಪರ್ಕ ಸಾಧಿಸಿದೆ. ಪ್ರಸ್ತುತ ಸ್ಥಾವರದ ಎಲ್ಲಾ ಮಾಹಿತಿಗಳು ಆನ್​​ಲೈನ್ ಮೂಲಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಲಭ್ಯವಿದೆ. ಪ್ರತಿಕ್ಷಣದ ಮಾಹಿತಿಯೂ ಮಂಡಳಿಗೆ ಸಿಗುತ್ತಿದೆ ಎಂದು ಕೆಸಿಪಿಎಲ್ ಸ್ಪಷ್ಟಪಡಿಸಿದೆ.

ಆರೋಪಗಳು ಸತ್ಯಕ್ಕೆ ದೂರ: ಸ್ಥಾವರದಲ್ಲಿ ಉತ್ಪತ್ತಿಯಾಗುವ ಕಲ್ಮಶಯುಕ್ತ ನೀರು (leachate) ಪಕ್ಕದಲ್ಲೇ ಸಂಸ್ಕರಿಸಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಪರೀಕ್ಷಿಸಿ ಶುದ್ಧವಾಗಿದೆ ಎಂದು ಖಚಿತವಾದ ಬಳಿಕ ಸಂಸ್ಕರಿಸಿದ ನೀರನ್ನು ಸ್ಥಾವರದಲ್ಲಿ ಮತ್ತೆ ಬಳಸಿಕೊಳ್ಳಲಾಗುತ್ತಿದೆಯೇ ಹೊರತು ಪರಿಸರಕ್ಕೆ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಕಲ್ಮಶಯುಕ್ತ ನೀರನ್ನು ಸರಿಯಾದ ಮೇಲ್ವಿಚಾರಣೆ ಮತ್ತು ಪರೀಕ್ಷೆಯಿಲ್ಲದೆ ಬಿಡುಗಡೆ ಮಾಡಲಾಗಿದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾದುದು ಎಂದು ಕೆಪಿಸಿಎಲ್ ಹೇಳಿದೆ.

ವೈಜ್ಞಾನಿಕವಾಗಿ ಬೂದಿ ವಿಲೇವಾರಿ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಯಾದ ಬಳಿಕ ಹೊರಬರುವ ತಳ ಬೂದಿ ಮತ್ತು ಹಾರು ಬೂದಿಯನ್ನು ಪ್ರಸ್ತುತ ಬಿಬಿಎಂಪಿ ಮೂಲಕವೇ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಈ ಮಧ್ಯೆ, ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (ಸಿಆರ್​ಆರ್​​ಐ) ಗೆ 2025ರ ಜುಲೈ 1ರಂದು ಪ್ರಸ್ತಾವನೆ ಸಲ್ಲಿಸಿ, ಈ ಬೂದಿಯನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದರಂತೆ ಅವರು ಪತ್ರ ಬರೆದು ಸಂಶೋಧನೆಗೆ 44.84 ಲಕ್ಷ ರೂ. ಪಾವತಿಸುವಂತೆ ತಿಳಿಸಿದ್ದರು. ಅದರಂತೆ ಈ ಹಣವನ್ನು ಸಿಆರ್​​ಆರ್​​ಐಗೆ ನೀಡಲಾಗಿದೆ. ಶೀಘ್ರದಲ್ಲೇ ಅದು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ತಳ ಬೂದಿ ಮತ್ತು ಹಾರು ಬೂದಿಯನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಂಡರೆ, ಅವುಗಳ ವಿಲೇವಾರಿ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಬಗೆಹರಿಯಲಿದೆ ಎಂದು ಸ್ಪಷ್ಟಪಡಿಸಿದೆ.

ಪರಿಸರಕ್ಕೆ ಹಾನಿಯಾಗದಂತೆ ನಿರ್ವಹಣೆ: ಪ್ರತಿನಿತ್ಯ 600 ಟನ್ ತ್ಯಾಜ್ಯ ಸಂಸ್ಕರಿಸಿ 11.50 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಬಿಡದಿಯ ವಿದ್ಯುತ್ ಸ್ಥಾವರಕ್ಕೆ ಪ್ರಸ್ತುತ 200 ಟನ್ ಸಂಸ್ಕರಿಸಿದ ಒಣ ತ್ಯಾಜ್ಯ ಬರುತ್ತಿದೆ. ಈ ತಿಂಗಳಾಂತ್ಯದೊಳಗೆ ಇದರ ಪ್ರಮಾಣ 500 ಟನ್ ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ತ್ಯಾಜ್ಯದಲ್ಲಿ ಸ್ವಲ್ಪ ಮಟ್ಟಿನ ತೇವಾಂಶ ಇದೆಯಾದರೂ ಅದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಘಟಕದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಕೆಪಿಸಿಎಲ್ ಹೇಳಿದೆ.

ಪಸ್ತುತ ಬಿಡದಿಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕವು ಪರಿಸರಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾನದಂಡಗಳನ್ನು ಪೂರೈಸುವ ಮಾಲಿನ್ಯ ನಿಯಂತ್ರಣ ಮಂಡಳಿಯ ಕಣ್ಗಾವಲಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ, ವಿಷಕಾರಿ ಮಾಲಿನ್ಯಕಾರಕಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ವಿಫಲವಾಗಿದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾದುದು ಎಂದು ಕೆಪಿಸಿಎಲ್ ಸ್ಪಷ್ಟಪಡಿಸಿದೆ.

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
ವಿದ್ಯುತ್ ಉತ್ಪಾದನಾ
Add as Preferred on Google Follow on Google News
Share. WhatsApp Facebook Twitter Telegram
Previous Articleಹವಾಮಾನ ಬದಲಾವಣೆ ಹಿನ್ನೆಲೆ ಡೆಂಗ್ಯೂ, ಚಿಕೂನ್‌ಗುನ್ಯಾ ಪ್ರಕರಣಗಳ ಹೆಚ್ಚಳ
Next Article ಆನೆ, ಚಿರತೆ, ಹುಲಿ, ಆಯ್ತು ಈಗ ಹಂದಿ ಕಾಟ: ಕಾಡು ಹಂದಿ ದಾಳಿಗೆ ರೈತ ಬಲಿ
Sambrama Prabha News
  • Website

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Related Posts

ಧಾರವಾಡ ತಹಶೀಲ್ದಾರ್ ಲಂಚ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲಂಚ ನೀಡಿದ್ದ ಮಂಜುನಾಥ್ ವಿರುದ್ಧವೇ ಕೇಳಿಬಂತು ಭೂಕಬಳಿಕೆ ಆರೋಪ!

September 23, 2026

ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನ ಇಂದಿನಿಂದ ಆರಂಭ: ‘ಬರ’ ಚರ್ಚೆಗೂ ಮುನ್ನವೇ ‘ವಂದೇ ಮಾತರಂ’ ಕಿಚ್ಚು!

September 21, 2026

ಡಿ.ಕೆ. ಶಿವಕುಮಾರ್ ಮಂಗಳೂರಿನಲ್ಲಿ, ಸಿದ್ದರಾಮಯ್ಯ ತುಮಕೂರಿನಲ್ಲಿ: ಆಪ್ತ ರಾಜಣ್ಣ ಭೇಟಿ ಹಿಂದಿನ ಲೆಕ್ಕಾಚಾರವೇನು?

September 19, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ಫೈನಾನ್ಸ್ ಡಿಪಾರ್ಟ್‌ಮೆಂಟ್ ಪತ್ರ ಲೀಕ್: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

ಧಾರವಾಡ ತಹಶೀಲ್ದಾರ್ ಲಂಚ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲಂಚ ನೀಡಿದ್ದ ಮಂಜುನಾಥ್ ವಿರುದ್ಧವೇ ಕೇಳಿಬಂತು ಭೂಕಬಳಿಕೆ ಆರೋಪ!

ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನ ಇಂದಿನಿಂದ ಆರಂಭ: ‘ಬರ’ ಚರ್ಚೆಗೂ ಮುನ್ನವೇ ‘ವಂದೇ ಮಾತರಂ’ ಕಿಚ್ಚು!

ಡಿ.ಕೆ. ಶಿವಕುಮಾರ್ ಮಂಗಳೂರಿನಲ್ಲಿ, ಸಿದ್ದರಾಮಯ್ಯ ತುಮಕೂರಿನಲ್ಲಿ: ಆಪ್ತ ರಾಜಣ್ಣ ಭೇಟಿ ಹಿಂದಿನ ಲೆಕ್ಕಾಚಾರವೇನು?

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.