ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಬೇಕಾಗುವ ಪದಾರ್ಥಗಳು…
- ಮೊಸರು – 1 ಬಟ್ಟಲು
- ನೀರು – 2 ಬಟ್ಟಲು
- ಉಪ್ಪು – ರುಚಿಗೆ ತಕ್ಕಷ್ಟು
- ಜೀರಿಗೆ ಪುಡಿ – ½ ಚಮಚ
- ಶುಂಠಿ (ತುರಿದದ್ದು) – ½ ಚಮಚ
- ಕರಿಬೇವು – ಸ್ವಲ್ಪ
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಹಸಿಮೆಣಸಿನಕಾಯಿ – 1
ಮಾಡುವ ವಿಧಾನ…
- ಒಂದು ಬಟ್ಟಲಿನಲ್ಲಿ ಮೊಸರು ಹಾಗೂ ನೀರನ್ನು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ, ಚೆನ್ನಾಗಿ ಗ್ರೈಂಡ್ ಮಾಡಿ. ಮಜ್ಜಿಗೆ ಸಿದ್ಧಪಿಡಿಸಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ.
- ನಂತರ ಅದಕ್ಕೆ ಉಪ್ಪು, ಜೀರಿಗೆ ಪುಡಿ, ಸಣ್ಣಗೆ ಕತ್ತರಿಸಿಕೊಂಡ ಶುಂಠಿ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಮಾಸಾಲಾ ಮಜ್ಜಿಗೆ ಸವಿಯಲು ಸಿದ್ಧ.

