BREAKING NEWS
ಕೇವಲ 39 ಸೆಕೆಂಡುಗಳ ಅಂತರದಲ್ಲಿ 2 ಭೀಕರ ಭೂಕಂಪ: ವೆನೆಜುವೆಲಾದಲ್ಲಿ 10,000ಕ್ಕೂ ಹೆಚ್ಚು ಜನರ ಸಾವಿನ ಶಂಕೆ!   •   “ಕುಮಾರಣ್ಣನ ಪಂಚೆ ಮಾತ್ರ ಸಿಂಪಲ್, ಉಳಿದೆಲ್ಲವೂ ಕಾಸ್ಟ್ಲಿ”: ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ   •   ನಟಿ ಕೃಷಿ ತಾಪಂಡ ಫ್ಲಾಟ್‌ನಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ: ಸಾವಿಗೂ ಮುನ್ನ ಗೆಳತಿಗೆ ಕಳುಹಿಸಿದ ಕೊನೆಯ ಮೆಸೇಜ್‌ನಲ್ಲೇನಿತ್ತು?   •   ಕೆಎಸ್ಆರ್ ರೈಲು ನಿಲ್ದಾಣದ ಯಾರ್ಡ್ ಮೇಲ್ದರ್ಜೆಗೇರಿಕೆ: ಇನ್ನು ಮುಂದೆ ರೈಲು ಸಂಚಾರ ಸರಾಗ   •   ಬಿಡದಿ ಟೌನ್‌ಶಿಪ್‌ ವಿವಾದ: ಮೋದಿ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆ – ಎಚ್‌ಡಿಕೆ ಕಿಡಿ | Bidadi Township Row   •   ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ರದ್ದು: ಚುನಾವಣಾ ಆಯೋಗದ ನಡೆಗೆ ಜಾಲತಾಣಗಳಲ್ಲಿ ಆಕ್ರೋಶ   •   ಗೃಹಲಕ್ಷ್ಮಿ & ಗೃಹಜ್ಯೋತಿ ಪುನಃ ಅರ್ಜಿ – CM DK ಆದೇಶ   •   ಬೆಂಗಳೂರು: ಭ್ರಷ್ಟಾಚಾರ ವಿರುದ್ಧ ಮುಖ್ಯಮಂತ್ರಿ ಶಿವಕುಮಾರ್ ಕಠಿಣ ನಿರ್ದೇಶನ   •  

—Advertisement—

ಬೇಸಿಗೆ ರಜೆ ಹಿನ್ನೆಲೆ ಮೈಸೂರು, ಬೆಂಗಳೂರಿಂದ ವಿಶೇಷ ರೈಲು

Author Picture
Published On: April 20, 2026

—Advertisement—

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಹುಬ್ಬಳ್ಳಿ: ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಮೈಸೂರು-ಅಲಿಪುರದ್ವಾರ್ ಜಂಕ್ಷನ್-ಮೈಸೂರು ನಡುವೆ ತಲಾ ಒಂದು ಟ್ರಿಪ್ ಬೇಸಿಗೆ ವಿಶೇಷ ಎಕ್ಸ್​​ಪ್ರೆಸ್ ರೈಲುಗಳನ್ನು ಓಡಿಸಲಿದೆ.

ರೈಲು ಸೇವೆಗಳ ವಿವರಗಳು ಕೆಳಕಂಡಂತಿವೆ: ರೈಲು ಸಂಖ್ಯೆ 06289 ಮೈಸೂರಿನಿಂದ ಇಂದು (ಎಪ್ರಿಲ್ 20) ರಾತ್ರಿ 08:15 ಗಂಟೆಗೆ ಹೊರಟು, ಗುರುವಾರ ಬೆಳಗ್ಗೆ 05:30 ಗಂಟೆಗೆ ಅಲಿಪುರದ್ವಾರ್ ಜಂಕ್ಷನ್ ತಲುಪಲಿದೆ. ಮರಳಿ ದಿಕ್ಕಿನಲ್ಲಿ, ರೈಲು ಸಂಖ್ಯೆ 06290 ಅಲಿಪುರದ್ವಾರ್ ಜಂಕ್ಷನ್​ನಿಂದ ಎಪ್ರಿಲ್ 24(ಶುಕ್ರವಾರ)ರಂದು ಬೆಳಗ್ಗೆ 04:45 ಗಂಟೆಗೆ ಹೊರಟು, ಭಾನುವಾರ ಮಧ್ಯಾಹ್ನ 01:15 ಗಂಟೆಗೆ ಮೈಸೂರಿಗೆ ಆಗಮಿಸಲಿದೆ.

ಮಾರ್ಗ ಮಧ್ಯದಲ್ಲಿ ಈ ರೈಲು ಮಂಡ್ಯ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಬಂಗಾರಪೇಟೆ, ಕುಪ್ಪಂ, ಜೋಲಾರಪೇಟೆ, ಕಟ್ಪಾಡಿ, ರೇಣಿಗುಂಟಾ, ಗುಡೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಾಲಾಸಾ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಭದ್ರಕ್, ಖರಗ್ಪುರ್, ಅಂಡುಲ್, ಧನಕುಣಿ, ಬರ್ಧಮಾನ, ಬಾಲ್ಫೂರ್ ಎಸ್.ನಿಕ್ಟಿನ್, ರಾಮ್ಪುರ ಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಭಾರಸೊಯಿ, ಕಿಶನ್ ಗಂಜ್, ನ್ಯೂ ಜಲ್ಪೈಗುರಿ, ಸಿಲಿಗುರಿ, ಬಿನ್ನಗುರಿ ಹಾಗೂ ಹಸೀಮರ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆಗಳನ್ನು ಹೊಂದಿದೆ.

20 ಎಲ್​ಹೆಚ್​ಬಿ ಬೋಗಿಗಳನ್ನು ಹೊಂದಿರುವ ಈ ವಿಶೇಷ ರೈಲು ಎಸಿ 2-ಟೈರ್, ಎಸಿ 3-ಟೈರ್, ಸ್ಲೀಪರ್ ಕ್ಲಾಸ್, ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ಲಗೇಜ್-ಕಮ್-ಬ್ರೇಕ್ ವ್ಯಾನ್ ಬೋಗಿಗಳನ್ನು ಒಳಗೊಂಡಿದೆ.

ಬೆಂಗಳೂರು-ಅಲಿಪುರದ್ವಾರ್ ರೈಲು: ಮತ್ತೊಂದೆಡೆ, ನೈಋತ್ಯ ರೈಲ್ವೆಯು ರೈಲು ಸಂಖ್ಯೆ 06279/06280 ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಅಲಿಪುರದ್ವಾರ್ ಜಂಕ್ಷನ್​​-ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಒಂದು ಟ್ರಿಪ್ ಓಡಿಸಲಿದೆ.

ರೈಲು ಸಂಖ್ಯೆ 06279 ಎಸ್ಎಂವಿಟಿ ಬೆಂಗಳೂರು-ಅಲಿಪುರದ್ವಾರ್ ಜಂ. ವಿಶೇಷ ರೈಲು ಎಪ್ರಿಲ್ 22ರಂದು ಬೆಳಗ್ಗೆ 07:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಟು ಶುಕ್ರವಾರ ಮಧ್ಯಾಹ್ನ 01:50 ಗಂಟೆಗೆ ಅಲಿಪುರ್ದಾರ್ ಜಂಕ್ಷನ್​ ತಲುಪಲಿದೆ.

ರೈಲು ಸಂಖ್ಯೆ 06280 ಅಲಿಪುರದ್ವಾರ್ ಜಂ.-ಎಸ್ಎಂವಿಟಿ ಬೆಂಗಳೂರು ವಿಶೇಷ ರೈಲು ಏಪ್ರಿಲ್ 25ರಂದು ಸಂಜೆ 04:25 ಗಂಟೆಗೆ ಅಲಿಪುರದ್ವಾರ್ ಜಂಕ್ಷನ್‌ನಿಂದ ಹೊರಟು ಮಂಗಳವಾರ ಬೆಳಗಿನ ಜಾವ 12:30 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ಮಾರ್ಗಮಧ್ಯೆ ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಯಲಹಂಕ, ಹಿಂದೂಪುರ, ಧರ್ಮಾವರಂ, ಢೋಣ್ ನಂದ್ಯಾಲ, ಗುಂಟೂರು, ವಿಜಯವಾಡ, ರಾಜಮಂಡ್ರಿ, ಕೊತ್ತವಲಸ ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಭದ್ರಕ್, ಖರಗ್‌ಪುರ್ ಜಂ., ಆಂದುಲ್, ದಾಂಕುಣಿ, ಬರ್ಧಮಾನ್, ಬೋಲ್​​ಪುರ್ ಶಾಂತಿನಿಕೇತನ, ರಾಮ್​​ಪುರ್ ಹಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಬಾರ್ಸೋಯಿ, ಕಿಶನ್‌ಗಂಜ್ ಜಂಕ್ಷನ್, ನ್ಯೂ ಜಲ್ಪೈಗುರಿ, ಸಿಲಿಗುರಿ ಜಂಕ್ಷನ್, ಬಿನ್ನಾಗುರಿ ಮತ್ತು ಹಾಸಿಮಾರ ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿವೆ.

20 ಬೋಗಿಗಳು: ಈ ರೈಲುಗಳಲ್ಲಿ 03 ಎಸಿ 3-ಟೈರ್ ಬೋಗಿಗಳು, 11 ದ್ವಿತೀಯ ದರ್ಜೆ ಸ್ಲೀಪರ್ ಕೋಚ್‌ಗಳು, 04 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು, 01 ಲಗೇಜ್ ಕಂ ಬ್ರೇಕ್ ವ್ಯಾನ್ ಕಂ ಜನರೇಟರ್ ವ್ಯಾನ್ ಮತ್ತು 01 ದಿವ್ಯಾಂಗ ಸ್ನೇಹಿ ಕಂಪಾರ್ಟ್​ಮೆಂಟ್​​​ನೊಂದಿಗೆ ಲಗೇಜ್ ಮತ್ತು ಬ್ರೇಕ್ ವ್ಯಾನ್ ಬೋಗಿಗಳಿರಲಿವೆ.

ವೇಳಾಪಟ್ಟಿ: ಬಸ್​ಗಳು ಪ್ರತಿದಿನ ಬೆಳಗ್ಗೆ 9-00,10-00 ಹಾಗೂ 10-35ಕ್ಕೆ ಹೊರಟು ಪಣಜಿಗೆ ಮಧ್ಯಾಹ್ನ 2-15, 3-15 ಹಾಗೂ 3-45ಕ್ಕೆ ತಲುಪಲಿವೆ.

ಪಣಜಿ-ಹುಬ್ಬಳ್ಳಿ: ಬಳಿಕ ಪಣಜಿ ಬಸ್ ನಿಲ್ದಾಣದಿಂದ ಮಧ್ಯಾಹ್ನ 3-30, ಸಂಜೆ 4-00 ಹಾಗೂ 5-15ಕ್ಕೆ ಹೊರಟು ಹುಬ್ಬಳ್ಳಿಗೆ ರಾತ್ರಿ 8-30, 9-15 ಹಾಗೂ 10-30ಕ್ಕೆ ಆಗಮಿಸಲಿವೆ.

ಪ್ರಯಾಣ ದರ: ಅಪಘಾತ ಪರಿಹಾರ ವಿಮೆ, ಟೋಲ್ ಫೀ ಇತ್ಯಾದಿ ಸೇರಿದಂತೆ ಒಟ್ಟು ಪ್ರಯಾಣ ದರ 236 ರೂ. ನಿಗದಿಪಡಿಸಲಾಗಿದೆ.

ಮುಂಗಡ ಬುಕ್ಕಿಂಗ್ ರಿಯಾಯಿತಿ: www.ksrtc.in ವೆಬ್​​ಸೈಟ್, KSRTC Mobile App, ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮುಂಗಡ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಒಂದೇ ಟಿಕೆಟ್​​ನಲ್ಲಿ 4 ಹಾಗೂ ಹೆಚ್ಚಿನ ಆಸನಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಹಿಂದಿರುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದುಕೊಂಡರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ಸಿಗಲಿದೆ.

ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಹುಬ್ಬಳ್ಳಿಯಿಂದ ಗೋವಾ ರಾಜ್ಯದ ಇತರೆ ಪ್ರಮುಖ ಸ್ಥಳಗಳಿಗೆ ಬಸ್​​ಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp