BREAKING NEWS
ಸಚಿವ ಸಂಪುಟ ವಿಸ್ತರಣೆ ಕಸರತ್ತು: “ಮಂತ್ರಿ ಗಾದಿ”ಗಾಗಿ ಜಮೀರ್ ಅಹ್ಮದ್ ಖಾನ್ ದಿಲ್ಲಿಯತ್ತ ದೌಡು, ‘ರಾಜಕೀಯ ಗುರು’ ಹೇಳಿಕೆಯ ಸಂಚಲನ!   •   ‘ಸಿದ್ದರಾಮಯ್ಯ ಸ್ವಚ್ಛ ರಾಜಕಾರಣಿ, ಆದರೆ ಪುತ್ರ ಹಾಗೂ ಭೈರತಿ ಸುರೇಶ್‌ರಿಂದ ಕಲುಷಿತ’: ಸ್ವಪಕ್ಷದ ವಿರುದ್ಧವೂ ಗುಡುಗಿದ ಯತ್ನಾಳ್!   •   ಬಿಡದಿ ಟೌನ್‌ಶಿಪ್ ವಿರುದ್ಧ ರೈತರ ಹೋರಾಟಕ್ಕೆ ಹೊಸ ರೂಪ: ‘ಜೆನ್ ಜೀ’, ಐಟಿ ಉದ್ಯೋಗಿಗಳ ಬೆಂಬಲಕ್ಕೆ ರೈತರ ಕರೆ!   •   ಲೋಕಸಭೆಯಲ್ಲಿ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗಕ್ಕೆ ಅಮಿತ್ ಶಾ ಆದೇಶ: ರಾಹುಲ್ ಗಾಂಧಿ ಆರೋಪಕ್ಕೆ ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?   •   ರಾಜಕೀಯ ಕಲುಷಿತ, 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸಿದ್ದರಾಮಯ್ಯ   •   ಸೌಜನ್ಯ ಪ್ರಕರಣ: ಸಿಬಿಐ ತನಿಖೆ ‘ಕಳಪೆ’, ರಾಜ್ಯದಿಂದಲೇ ತನಿಖೆಯಾಗಲಿ ಎಂದ ಸುಪ್ರೀಂ ಕೋರ್ಟ್   •   ‘ಬಾರ್ ಕಟ್ಟಡದಲ್ಲೇ ಬಿಸಿಎಂ ಹಾಸ್ಟೆಲ್’ – ‘ಸಂಭ್ರಮಪ್ರಭ’ ವರದಿಗೆ ಎಚ್ಚೆತ್ತ ಸರ್ಕಾರ   •   ಫಲಾನುಭವಿಗಳ ಗಮನಕ್ಕೆ: ಗೃಹಲಕ್ಷ್ಮಿಗೆ ವೋಟರ್ ಐಡಿ ಕಡ್ಡಾಯ, ಗೃಹಜ್ಯೋತಿ ಗೊಂದಲಕ್ಕೆ ಬೆಸ್ಕಾಂ ಹೆಲ್ಪ್‌ಲೈನ್   •  

—Advertisement—

ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಡಿಕೆಶಿ

Author Picture
Published On: December 25, 2025

—Advertisement—

Updated By: Priyalachhi

ಬೆಂಗಳೂರು: ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದು, ಇದು ರಾಜ್ಯದಲ್ಲಿ ಸಿಎಂ ಹುದ್ದೆಗಾಗಿ ನಡೆಯುತ್ತಿರುವ ಅಧಿಕಾರದ ಜಗಳಕ್ಕೆ ಸಂಬಂಧಿಸಿದ ಊಹಾಪೋಹಗಳಿಗೆ ಕಾರಣವಾಗಿದೆ.

ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ಈ ನಡುವೆ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಭೇಟಿಗೆ ಯತ್ನಿಸಿದ್ದಾರೆ. ಆದರೆ ಅದು ಆಗದಿದ್ದಕ್ಕೆ ಬರಿಗೈನಲ್ಲೇ ವಾಪಸ್ ಆಗಿದ್ದಾರೆ. ಇತ್ತ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (CWC) ಸಭೆಗೆ ಡಿಕೆಶಿಗೆ ಆಹ್ವಾನ ಬಂದಿಲ್ಲ. ಬದಲಿಗೆ ಸಿಎಂ ಸಿದ್ದರಾಮಯ್ಯಗೆ ಮಾತ್ರ ಆಹ್ವಾನ ನೀಡಲಾಗಿದೆ. ಹೀಗಾಗಿ ಡಿಸೆಂಬರ್ 26 ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿಕೆಶಿ, ಇಂದು (ಡಿಸೆಂಬರ್ 25) ಬೆಂಗಳೂರಿನಲ್ಲಿ ದಿಢೀರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು, ಮಹತ್ವದ ಚರ್ಚೆ ಮಾಡಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆಶಿವಕುಮಾರ್, ಡಿಸೆಂಬರ್ 27ರಂದು ದೆಹಲಿಯಲ್ಲಿ ಕಾಂಗ್ರೆಸ್​ ಕಾರ್ಯಕಾರಿಣಿ ಸಭೆ ಇದ್ದು, ಸಿಡಬ್ಲ್ಯುಸಿ ಸಭೆಗೆ ನನ್ನನ್ನು ಕರೆದಿಲ್ಲ. ಕರೆದರೆ ನಾನು ಹೋಗುತ್ತೇನೆ. ಸಿಎಂ ಸಿದ್ದರಾಮಯ್ಯರನ್ನು ಸಿಡಬ್ಲ್ಯುಸಿ ಸಭೆಗೆ ಕರೆದ ಮಾಹಿತಿ ಇದ್ದು, ಸಭೆಯಲ್ಲಿ ಭಾಗಿಯಾಗಲು ಸಿಎಂ ದೆಹಲಿಗೆ ಹೋಗುತ್ತಾರೆ ಎಂದರು.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp