• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

‘ಮಾರ್ಕ್’​​ ಅಬ್ಬರ: 180+ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್

Sambrama Prabha News by Sambrama Prabha News
December 25, 2025
in Latest News
0
‘ಮಾರ್ಕ್’​​ ಅಬ್ಬರ: 180+ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್

Updated By: Priyalachhi

ರಾಜ್ಯಾದ್ಯಂತ ಇಂದು ಸಿನಿಮಾ ಸಂಭ್ರಮ ಬಹಳ ಜೋರಾಗಿದೆ. ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಅಭಿನಯ ಚಕ್ರವರ್ತಿ ಖ್ಯಾತಿಯ ಸುದೀಪ್​ ಮುಖ್ಯಭೂಮಿಕೆಯ 2025ರ ಬಹುನಿರೀಕ್ಷಿತ ಚಿತ್ರ ‘ಮಾರ್ಕ್​’ ಫೈನಲಿ ಚಿತ್ರಮಂದಿರ ಪ್ರವೇಶಿಸಿದೆ. ಕೋಟ್ಯಂತರ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಮುಂಜಾನೆಯೇ ಥಿಯೇಟರ್​ ಬಳಿ ಸಂಭ್ರಮಾಚರಣೆ ಶುರುವಾಗಿತ್ತು.

ಕರ್ನಾಟಕದಲ್ಲಿ 180ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಬೆಂಗಳೂರಿನ ಸಂತೋಷ್ ಸೇರಿ ಹಲವು ಥಿಯೇಟರ್​ಗಳಲ್ಲಿ ಬೆಳಗ್ಗೆ 6.30ಕ್ಕೆ ಶೋ ಆರಂಭಗೊಂಡಿದೆ. ಸುದೀಪ್ ಪುತ್ರಿ ಸಾನ್ವಿ ಹಾಗೂ ಪತ್ನಿ ಪ್ರಿಯಾ ಅವರು ಸಂತೋಷ್ ಚಿತ್ರಮಂದಿರದಲ್ಲಿ ಬೆಳಗ್ಗೆಯೇ ಅಭಿಮಾನಿಗಳ ಜೊತೆ ಕುಳಿತು ‘ಮಾರ್ಕ್’ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ.

Sudeep mark movie look

ಸಿನಿಮಾದ ‘ಮಸ್ತ್ ಮಲೈಕಾ’ ಸಾಂಗ್ ಮೂಲಕ​ ಸುದೀಪ್​ ಪುತ್ರಿ ಸಾನ್ವಿ ಅವರು ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಮಗಳು ಸಾನ್ವಿ ಈ ಹಾಡಿಗೆ ಕಂಠದಾನ ಮಾಡಿದ್ದು, ತಂದೆ ಕಿಚ್ಚ‌ ಸುದೀಪ್​ ಭರ್ಜರಿ ಡ್ಯಾನ್ಸ್​​ ಮಾಡಿದ್ದಾರೆ. ಈ ಮೂಲಕ ಸಾನ್ವಿ ಸುದೀಪ್​​ ಗಾಯಕಿಯಾಗಿ ಅಧಿಕೃತವಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು, ಇಂದು ಮೊದಲ ಶೋ ವೀಕ್ಷಿಸುವ ಮೂಲಕ ಅಪ್ಪನ ಸಿನಿಮಾಗೆ ಫುಲ್​ ಸಪೋರ್ಟ್​ ಕೊಟ್ಟಿದ್ದಾರೆ.

Tags: ಮಾರ್ಕ್
Previous Post

ಬಾಕ್ಸಿಂಗ್​ ಡೇ ಟೆಸ್ಟ್​ಗೆ 12 ಸದಸ್ಯರ ಆಸ್ಟ್ರೇಲಿಯಾ ತಂಡ ಪ್ರಕಟ!

Next Post

ಮೈಸೂರಿನ CBC ಕಚೇರಿ ಸ್ಥಗಿತಗೊಳಿಸುವುದು ಬೇಡ: ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಹೆಚ್‌ಡಿಕೆ ಪತ್ರ

Next Post
ಮೈಸೂರಿನ CBC ಕಚೇರಿ ಸ್ಥಗಿತಗೊಳಿಸುವುದು ಬೇಡ: ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಹೆಚ್‌ಡಿಕೆ ಪತ್ರ

ಮೈಸೂರಿನ CBC ಕಚೇರಿ ಸ್ಥಗಿತಗೊಳಿಸುವುದು ಬೇಡ: ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಹೆಚ್‌ಡಿಕೆ ಪತ್ರ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.