• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಸರ್ಕಾರದ ವತಿಯಿಂದಲೇ ಆರೋಗ್ಯ ಕವಚ-108 ನಿರ್ವಹಣೆ : ಸಚಿವ ದಿನೇಶ್ ಗುಂಡೂರಾವ್

Sambrama Prabha News by Sambrama Prabha News
December 31, 2025
in Politics
0
ಸರ್ಕಾರದ ವತಿಯಿಂದಲೇ ಆರೋಗ್ಯ ಕವಚ-108 ನಿರ್ವಹಣೆ : ಸಚಿವ ದಿನೇಶ್ ಗುಂಡೂರಾವ್

Updated By: Priyalachhi 

ಬೆಂಗಳೂರು: ಪ್ರಸ್ತುತ 108 – ಆರೋಗ್ಯ ಕವಚ ಆಂಬುಲೆನ್ಸ್‌ ಸೇವೆಯನ್ನು ಒಡಂಬಡಿಕೆ ಮಾದರಿಯಲ್ಲಿ ನಿರ್ವಹಣೆ ಮಾಡುತ್ತಿದೆ. ಈ ಸೇವೆಯ ಕುರಿತು ಸಾರ್ವಜನಿಕರಿಂದ ಹಲವಾರು ಆಕ್ಷೇಪಣೆಗಳು, ಸಮಸ್ಯೆಗಳು ದಾಖಲಾಗಿದ್ದರಿಂದ ಆಯವ್ಯಯದಲ್ಲಿ ಘೋಷಿಸಿದಂತೆ ಸರ್ಕಾರದ ವತಿಯಿಂದಲೇ ಆರೋಗ್ಯ ಕವಚ-108 ನಿರ್ವಹಣೆ ಮಾಡಲು ಆರೋಗ್ಯ ಇಲಾಖೆ ಸಕಲ ಸಿದ್ಧತೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಆರೋಗ್ಯ ಇಲಾಖೆಯು ಅವಶ್ಯಕವಾದ ತಂತ್ರಜ್ಞಾನ, ಕಮಾಂಡ್ ಕಂಟ್ರೋಲ್ ಸೆಂಟರ್ ಮತ್ತು ಅದಕ್ಕೆ ಬೇಕಾದ ಮಾನವ ಸಂಪನ್ಮೂಲ ಸೇರಿದಂತೆ ಎಲ್ಲಾ ಸಿದ್ಧತೆಗಳು ಅಂತಿಮ ಹಂತ ತಲುಪಿದೆ. ಸದ್ಯದಲ್ಲಿಯೇ ಸರ್ಕಾರದ ವತಿಯಿಂದ ರಾಜ್ಯದಾದ್ಯಂತ ಆಂಬ್ಯುಲೆನ್ಸ್‌ ಸೇವೆ ಪ್ರಾರಂಭಗೊಳ್ಳಲಿದೆ. ಪ್ರಸ್ತುತ ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳಡಿಯಲ್ಲಿ ಒಟ್ಟಾರೆ 1841 ಆಂಬ್ಯುಲೆನ್ಸ್‌ ಲಭ್ಯವಿದ್ದು, ಇದರಲ್ಲಿ 108-ಆರೋಗ್ಯ ಕವಚ ಕಾರ್ಯಕ್ರಮದಡಿಯಲ್ಲಿ ಒಟ್ಟು 715 ಆಂಬ್ಯುಲೆನ್ಸ್‌ಗಳು ಹಾಗೂ ರಾಜ್ಯ ವಲಯದ 1126 ಆಂಬ್ಯುಲೆನ್ಸ್‌ಗಳು ಲಭ್ಯವಿದೆ ಎಂದು ತಿಳಿಸಿದೆ.

ಮಾನದಂಡಗಳನ್ವಯ ಹಾಲಿ ಜನಸಂಖ್ಯೆಗೆ 813 ಆಂಬ್ಯುಲೆನ್ಸ್‌ಗಳು ಅಗತ್ಯವಿದ್ದು, ಇತರೆ ಇಲಾಖೆಯ ಆಂಬ್ಯುಲೆನ್ಸ್‌ಗಳನ್ನು ಹೊರತುಪಡಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇವೆಗಳಡಿಯಲ್ಲಿ 1841 ಆಂಬ್ಯುಲೆನ್ಸ್​ಗಳು ಕಾರ್ಯನಿರ್ವಹಿಸುತ್ತಿದೆ. 108-ಆರೋಗ್ಯ ಕವಚ ನಿರ್ವಹಣೆಗೆ ವಾರ್ಷಿಕ ರೂ. 162.40 ಕೋಟಿ ಅನುದಾನ ಅಗತ್ಯವಿದ್ದು, ಸರ್ಕಾರದಿಂದ ರೂ.180.00 ಕೋಟಿಗಳ ಅನುದಾನವು 108-ಆರೋಗ್ಯ ಕವಚ ಲೆಕ್ಕ ಶೀರ್ಷಿಕೆಯಡಿಯಲ್ಲಿ ಅನುಮೋದನೆಯಾಗಿ, ಹಣ ಬಿಡುಗಡೆ ಮಾಡಲಾಗಿದೆ.

ಹಾಲಿ ಇರುವ 108-ಆರೋಗ್ಯ ಕವಚ ಸೇವೆಯ ಸೇವಾದಾರರಿಂದ ಸರ್ಕಾರ ವಹಿಸಿಕೊಳ್ಳುವ ಸಮಯದಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಇದ್ದರೂ, ಸಾರ್ವಜನಿಕರ ಸೇವೆಗೆ ಯಾವ ಸಮಸ್ಯೆಯೂ ಇರುವುದಿಲ್ಲ. ಇದು ತುರ್ತು ಆರೋಗ್ಯ ಸೇವೆಯಾಗಿರುವುದಿರಂದ ಇಲಾಖೆಯು ಸದಾ ಜಾಗರೂಕತೆಯಿಂದ ನಿರ್ವಹಣೆ ಮಾಡುತ್ತಿದೆ.

Tags: ಸಚಿವ ದಿನೇಶ್ ಗುಂಡೂರಾವ್
Previous Post

ಪತ್ರಕರ್ತರ ತರಬೇತಿ ಕಾಲೇಜು ತೆರೆಯಲು 1ಎಕರೆ ಭೂಮಿ: ಡಿ.ಕೆ. ಶಿವಕುಮಾರ್

Next Post

ಜಿ ರಾಮ್ ಜಿ ಕಾಯ್ದೆಯನ್ನು ತಡೆ ಹಿಡಿಯುವಂತೆ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಪತ್ರ

Next Post
ಜಿ ರಾಮ್ ಜಿ ಕಾಯ್ದೆಯನ್ನು ತಡೆ ಹಿಡಿಯುವಂತೆ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಪತ್ರ

ಜಿ ರಾಮ್ ಜಿ ಕಾಯ್ದೆಯನ್ನು ತಡೆ ಹಿಡಿಯುವಂತೆ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಪತ್ರ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.