• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಸಿದ್ದರಾಮಯ್ಯನವರು ಈಗ ಅಡಳಿತದ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ: ಜಗದೀಶ್​ ಶೆಟ್ಟರ್

Sambrama Prabha News by Sambrama Prabha News
January 6, 2026
in Politics
0
ಸಿದ್ದರಾಮಯ್ಯನವರು ಈಗ ಅಡಳಿತದ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ: ಜಗದೀಶ್​ ಶೆಟ್ಟರ್

Updated By: Priyalachhi 

ಹುಬ್ಬಳ್ಳಿ: ದೇವರಾಜ ಅರಸು ಅವರು ಎರಡು ಅವಧಿ ಗ್ಯಾಪ್ ಇಲ್ಲದೇ ಸಿಎಂ ಆಗಿ ದಾಖಲೆ ಮಾಡಿದರು. ಆದರೆ, ಸಿದ್ದರಾಮಯ್ಯನವರು ಸತತ ಎರಡು ಅವಧಿ ಸಿಎಂ ಆಗಿಲ್ಲ, ಗ್ಯಾಪ್ ಇದೆ ಎಂದು ಮಾಜಿ‌ ಸಿಎಂ ಹಾಗೂ ಸಂಸದ ಜಗದೀಶ್​ ಶೆಟ್ಟರ್​ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾಖಲೆ ಮಾಡುವುದು ಮುಖ್ಯವಲ್ಲ. ಜನಪರ ಆಡಳಿತ ಎಷ್ಟರಮಟ್ಟಿಗೆ ನೀಡಿದರು ಅನ್ನೋದು ಮುಖ್ಯ. ಈಗಿನ ಸಿದ್ದರಾಮಯ್ಯನವರ ಅವಧಿಯಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಸಿದ್ದರಾಮಯ್ಯನವರು ಈಗ ಅಡಳಿತದ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಆರ್ಥಿಕ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಜನಪರ ಯೋಜನೆಗಳಿಗೆ ಅನುದಾನ ಇಲ್ಲ, ಗುತ್ತಿಗೆದಾರರ ಬಿಲ್ ಬಾಕಿ ಉಳಿದಿವೆ. ಕೇಂದ್ರ ಸರ್ಕಾರಗಳ ಯೋಜನೆಗೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು.

ಸಿಎಂಗೆ ಯಾವ ನೈತಿಕತೆ ಇದೆ?: ಬೆಳಗಾವಿ – ಧಾರವಾಡ ರೈಲ್ವೆ ಯೋಜನೆ ಇಲ್ಲಿನ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯದಿಂದ ನಿಂತಿದೆ. ದಾಖಲೆಯ ಸಿಎಂ‌ ಅವಧಿ ಪೂರೈಸಿದ್ದೇನೆ ಎನ್ನುವುದಕ್ಕೆ ಸಿದ್ದರಾಮಯ್ಯನವರಿಗೆ ಯಾವ ನೈತಿಕತೆ ಇದೆ?. ಬಳ್ಳಾರಿಯಲ್ಲಿ ಅವರದ್ದೇ ಶಾಸಕನ ಗಲಾಟೆಯಿಂದ ಹಿಡಿದು ಬೆಂಗಳೂರಿನ ಮಾಲಾಧಾರಿಗಳ ಮೇಲೆ ಕಲ್ಲೆಸೆತ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ತೋರಿಸುತ್ತದೆ. ಕಾನೂನು ಸುವ್ಯವಸ್ಥೆಯಿಂದ ಅಭಿವೃದ್ಧಿ ಸೇರಿ ವಾಣಿಜ್ಯ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಪಕ್ಕದ ಆಂಧ್ರದಲ್ಲಿನ ಸಿಎಂ ಅವರು ವಿದೇಶಿ ಬಂಡವಾಳ ಕಂಪನಿಗಳನ್ನು ತಮ್ಮ ರಾಜ್ಯದತ್ತ ಸೆಳೆಯುತ್ತಿದ್ದಾರೆ‌ ಎಂದು ಹೇಳಿದರು.

Tags: ಜಗದೀಶ್​ ಶೆಟ್ಟರ್
Previous Post

ರಾಜಶೇಖರ್ ಪೋಸ್ಟ್ ಮಾರ್ಟಂ ಎರಡು ಬಾರಿ ಆಗಿಲ್ಲ ಎಂದು ವೈದ್ಯರೇ ಹೇಳಿದ್ದಾರೆ: ಸಚಿವ ಪರಮೇಶ್ವರ್

Next Post

ಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರ್ತಾರೆ: ಸಚಿವ ಸತೀಶ್ ಜಾರಕಿಹೊಳಿ

Next Post
ಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರ್ತಾರೆ: ಸಚಿವ ಸತೀಶ್ ಜಾರಕಿಹೊಳಿ

ಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರ್ತಾರೆ: ಸಚಿವ ಸತೀಶ್ ಜಾರಕಿಹೊಳಿ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.