Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ಸತೀಶ್ ಜಾರಕಿಹೊಳಿ ಮೇಲೆ ಇ.ಡಿ ದಾಳಿ: ಅಹಿಂದ ನಾಯಕನಾಗುವ ಆತಂಕವೇ? | Satish Jarkiholi ED Raid

ಸತೀಶ್ ಜಾರಕಿಹೊಳಿ ಬೆನ್ನಿಗೆ ನಿಂತ ಡಿಕೆಶಿ, ದಲಿತ ನಾಯಕರ ಬೆಳವಣಿಗೆ ಸಹಿಸುತ್ತಿಲ್ಲ ಎಂದು ಕೇಂದ್ರ ವಿರುದ್ಧ ಕೆಂಡ

ಕೆಪಿಎಸ್‌ಸಿ: ಅರ್ಜಿ ಸಲ್ಲಿಕೆಗೆ 7ರವರೆಗೆ ಅವಕಾಶ

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ಸತೀಶ್ ಜಾರಕಿಹೊಳಿ ಮೇಲೆ ಇ.ಡಿ ದಾಳಿ: ಅಹಿಂದ ನಾಯಕನಾಗುವ ಆತಂಕವೇ? | Satish Jarkiholi ED Raid
Latest News Politics

ಸತೀಶ್ ಜಾರಕಿಹೊಳಿ ಮೇಲೆ ಇ.ಡಿ ದಾಳಿ: ಅಹಿಂದ ನಾಯಕನಾಗುವ ಆತಂಕವೇ? | Satish Jarkiholi ED Raid

Sambrama Prabha NewsBy Sambrama Prabha NewsSeptember 9, 2026No Comments2 Mins Read
Share WhatsApp Facebook Twitter Telegram
ಸತೀಶ್ ಜಾರಕಿಹೊಳಿ ಮೇಲೆ ಇ.ಡಿ ದಾಳಿ: ಅಹಿಂದ ನಾಯಕನಾಗುವ ಆತಂಕವೇ? | Satish Jarkiholi ED Raid
Share
WhatsApp Facebook Twitter Telegram

ಬೆಂಗಳೂರು (ಸಂಭ್ರಮಪ್ರಭ ನ್ಯೂಸ್): ಕಾಂಗ್ರೆಸ್‌ನ ಎಸ್‌ಟಿ ವರ್ಗದ ಪ್ರಬಲ ನಾಯಕ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಸೇರಿ ಸುಮಾರು 15ಕ್ಕೂ ಹೆಚ್ಚು ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದೆ. ಈ ದಾಳಿಯನ್ನು ಕೇವಲ ತಾಂತ್ರಿಕವಾಗಿ ನೋಡುವುದಕ್ಕಿಂತ, ರಾಜಕೀಯವಾಗಿ ಬಹಳ ಮಹತ್ವ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿ ಅವರು ಬಿಜೆಪಿ ಪಾಲಿಗೆ ದೊಡ್ಡ ಆತಂಕವಾಗಲಿದ್ದಾರೆಯೇ ಎಂಬ ಪ್ರಶ್ನೆಗಳು ಇದೀಗ ಮೂಡುತ್ತಿವೆ.

ಬಿಜೆಪಿಗೆ 14 ಎಸ್‌ಟಿ ಕ್ಷೇತ್ರಗಳ ಸೋಲಿನ ಭೀತಿ

ಸತೀಶ್ ಜಾರಕಿಹೊಳಿ ಅವರು ಎಸ್‌ಟಿ ವರ್ಗದ ಪ್ರಬಲ ನಾಯಕರಾಗಿದ್ದು, ಕಾಂಗ್ರೆಸ್‌ನ ಎಸ್‌ಟಿ ಶಾಸಕರ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಟಿ ವರ್ಗದ 14 ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ; 14ಕ್ಕೆ 14 ಅಭ್ಯರ್ಥಿಗಳು ಸೋಲು ಕಂಡಿದ್ದರು. ಈ ಎಸ್‌ಟಿ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಹಿಡಿತ ಸಾಧಿಸಲು ಮತ್ತು ಹೆಚ್ಚು ಸ್ಥಾನ ಗೆಲ್ಲಲು ಸತೀಶ್ ಜಾರಕಿಹೊಳಿ ಅವರೇ ಪ್ರಮುಖ ಕಾರಣ. ಜಾರಕಿಹೊಳಿ ಅವರು ಈ ವರ್ಗದ ಮೇಲೆ ಹೊಂದಿರುವ ಪ್ರಾಬಲ್ಯವೇ ಬಿಜೆಪಿಗೆ ಆತಂಕ ತಂದಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

ಅಹಿಂದ ನಾಯಕತ್ವದ ಶೂನ್ಯ ತುಂಬುವ ಯತ್ನ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಕ್ರಿಯ ರಾಜಕಾರಣದಲ್ಲಿದ್ದರೂ ಚುನಾವಣಾ ರಾಜಕಾರಣದಿಂದ ದೂರವಾಗುತ್ತಿದ್ದಾರೆ. ಇದರಿಂದ ಅಹಿಂದ ವರ್ಗದ ಮುಂದಿನ ನಾಯಕ ಯಾರು, ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಬಂದಾಗ ಸತೀಶ್ ಜಾರಕಿಹೊಳಿ ಅವರ ಹೆಸರು ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಅಹಿಂದ ವರ್ಗದ ನಾಯಕತ್ವದಲ್ಲಿ ಸೃಷ್ಟಿಯಾಗುತ್ತಿರುವ ಶೂನ್ಯವನ್ನು (ವ್ಯಾಕ್ಯೂಮ್) ತುಂಬಲು ಮತ್ತು ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತ ಸಮುದಾಯವನ್ನು ಒಗ್ಗೂಡಿಸಲು ಸತೀಶ್ ಜಾರಕಿಹೊಳಿ ತೆರೆಮರೆಯಲ್ಲಿ ಗಂಭೀರ ಪ್ರಯತ್ನ ಮಾಡುತ್ತಿದ್ದರು. ಅವರು ದೊಡ್ಡಮಟ್ಟದ ಅಹಿಂದ ನಾಯಕನಾಗಿ ಹೊರಹೊಮ್ಮಿದರೆ, ದೊಡ್ಡ ಮತಬ್ಯಾಂಕ್ ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್ ಪಾಲಾಗುವ ಆತಂಕ ಬಿಜೆಪಿಯಲ್ಲಿದೆ.

ಎಸ್‌ಟಿ ನಾಯಕರೇ ಇ.ಡಿ ಟಾರ್ಗೆಟ್: ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ

ಈ ಇ.ಡಿ ದಾಳಿಯ ಬಗ್ಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. “ಇ.ಡಿ ಕೇವಲ ಎಸ್‌ಟಿ ವರ್ಗದ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದೆ. ಮೊದಲು ಎಸ್‌ಟಿ ವರ್ಗದ ಬಿ. ನಾಗೇಂದ್ರ ಅವರ ಮೇಲೆ ದಾಳಿಯಾಯಿತು, ಈಗ ಮತ್ತೋರ್ವ ಎಸ್‌ಟಿ ಪ್ರಬಲ ನಾಯಕ ಸತೀಶ್ ಜಾರಕಿಹೊಳಿ ಮೇಲೆ ದಾಳಿಯಾಗಿದೆ” ಎಂದು ಅವರು ದೂರಿದ್ದಾರೆ.

ಒಟ್ಟಾರೆಯಾಗಿ, ಮುಂದಿನ ದಿನಗಳಲ್ಲಿ ಅಹಿಂದ ಮತಬ್ಯಾಂಕ್ ಒಗ್ಗೂಡಬಾರದು, ಅದು ಚಿದ್ರವಾಗಿಯೇ ಉಳಿಯಬೇಕು ಹಾಗೂ ಸತೀಶ್ ಜಾರಕಿಹೊಳಿ ಅವರಂತಹ ನಾಯಕರು ಮುನ್ನೆಲೆಗೆ ಬರಬಾರದು ಎಂಬ ತೆರೆಮರೆಯ ತಂತ್ರಗಾರಿಕೆಯ ಭಾಗವಾಗಿಯೇ ಅವರನ್ನು ಕಟ್ಟಿಹಾಕುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನಗಳು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
Ahinda BJP Congress ED Raid Kannada News Online Karnataka Politics Sambrama Prabha Satish Jarkiholi ST Leader TV9 Kannada News ಕರ್ನಾಟಕ ರಾಜಕೀಯ. ಜಾರಿ ನಿರ್ದೇಶನಾಲಯ
Add as Preferred on Google Follow on Google News
Share. WhatsApp Facebook Twitter Telegram
Previous Articleಸತೀಶ್ ಜಾರಕಿಹೊಳಿ ಬೆನ್ನಿಗೆ ನಿಂತ ಡಿಕೆಶಿ, ದಲಿತ ನಾಯಕರ ಬೆಳವಣಿಗೆ ಸಹಿಸುತ್ತಿಲ್ಲ ಎಂದು ಕೇಂದ್ರ ವಿರುದ್ಧ ಕೆಂಡ
Sambrama Prabha News
  • Website

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Related Posts

ಸತೀಶ್ ಜಾರಕಿಹೊಳಿ ಬೆನ್ನಿಗೆ ನಿಂತ ಡಿಕೆಶಿ, ದಲಿತ ನಾಯಕರ ಬೆಳವಣಿಗೆ ಸಹಿಸುತ್ತಿಲ್ಲ ಎಂದು ಕೇಂದ್ರ ವಿರುದ್ಧ ಕೆಂಡ

September 9, 2026

ಕೆಪಿಎಸ್‌ಸಿ: ಅರ್ಜಿ ಸಲ್ಲಿಕೆಗೆ 7ರವರೆಗೆ ಅವಕಾಶ

September 2, 2026

ಮದ್ಯ ಕುಡಿದು ಗಲಾಟೆ: 50 ಸಸಿ ನೆಡುವ ವಿಶಿಷ್ಟ ಶಿಕ್ಷೆ ವಿಧಿಸಿದ ಚಿಕ್ಕೋಡಿ ನ್ಯಾಯಾಲಯ!

September 2, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ಸತೀಶ್ ಜಾರಕಿಹೊಳಿ ಮೇಲೆ ಇ.ಡಿ ದಾಳಿ: ಅಹಿಂದ ನಾಯಕನಾಗುವ ಆತಂಕವೇ? | Satish Jarkiholi ED Raid

ಸತೀಶ್ ಜಾರಕಿಹೊಳಿ ಬೆನ್ನಿಗೆ ನಿಂತ ಡಿಕೆಶಿ, ದಲಿತ ನಾಯಕರ ಬೆಳವಣಿಗೆ ಸಹಿಸುತ್ತಿಲ್ಲ ಎಂದು ಕೇಂದ್ರ ವಿರುದ್ಧ ಕೆಂಡ

ಕೆಪಿಎಸ್‌ಸಿ: ಅರ್ಜಿ ಸಲ್ಲಿಕೆಗೆ 7ರವರೆಗೆ ಅವಕಾಶ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2 ಕೆ.ಜಿ. ಚಿನ್ನ ಸಾಗಣೆ ಕೇಸ್: ಹೈಕೋರ್ಟ್‌ ಮಹತ್ವದ ತೀರ್ಪು

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.