Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ಷೇರುಪೇಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್ 1,000 ಅಂಕ ಪತನ, ಒಂದೇ ದಿನದಲ್ಲಿ 9 ಲಕ್ಷ ಕೋಟಿ ರೂ. ನಷ್ಟ!

ಅಶೋಕ್ ಖೇಣಿ ಹೇಳಿಕೆಗೆ ಸಿದ್ದಲಿಂಗ ಶ್ರೀಗಳ ತೀವ್ರ ಬೇಸರ: ‘ಚಿನ್ನದ ಕಡಗ’ದ ಅಸಲಿ ಸತ್ಯ ಬಿಚ್ಚಿಟ್ಟ ಸ್ವಾಮೀಜಿ

ಫೈನಾನ್ಸ್ ಡಿಪಾರ್ಟ್‌ಮೆಂಟ್ ಪತ್ರ ಲೀಕ್: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ಅಶೋಕ್ ಖೇಣಿ ಹೇಳಿಕೆಗೆ ಸಿದ್ದಲಿಂಗ ಶ್ರೀಗಳ ತೀವ್ರ ಬೇಸರ: ‘ಚಿನ್ನದ ಕಡಗ’ದ ಅಸಲಿ ಸತ್ಯ ಬಿಚ್ಚಿಟ್ಟ ಸ್ವಾಮೀಜಿ
Latest News

ಅಶೋಕ್ ಖೇಣಿ ಹೇಳಿಕೆಗೆ ಸಿದ್ದಲಿಂಗ ಶ್ರೀಗಳ ತೀವ್ರ ಬೇಸರ: ‘ಚಿನ್ನದ ಕಡಗ’ದ ಅಸಲಿ ಸತ್ಯ ಬಿಚ್ಚಿಟ್ಟ ಸ್ವಾಮೀಜಿ

Sub EditorBy Sub EditorOctober 1, 2026Updated:October 1, 2026No Comments2 Mins Read
Share WhatsApp Facebook Twitter Telegram
ಅಶೋಕ್ ಖೇಣಿ ಹೇಳಿಕೆಗೆ ಸಿದ್ದಲಿಂಗ ಶ್ರೀಗಳ
Share
WhatsApp Facebook Twitter Telegram

ತುಮಕೂರು/ಬೆಂಗಳೂರು: ನೈಸ್ ಸಂಸ್ಥೆಯ ಅಶೋಕ್ ಖೇಣಿ ಅವರು ಶ್ರೀಮಠಕ್ಕೆ ಚಿನ್ನದ ಉಡುಗೊರೆ ನೀಡಿದ್ದರು ಎಂಬ ಹೇಳಿಕೆಯನ್ನು ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಖೇಣಿಯವರು ಕೇವಲ ತಮ್ಮ ಪ್ರಚಾರಕ್ಕಾಗಿ ಶ್ರೀಮಠದ ಹೆಸರನ್ನು ಬಳಸಿಕೊಂಡಿದ್ದು, ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಶ್ರೀಗಳು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದಲಿಂಗ ಶ್ರೀಗಳು, “ಅಶೋಕ್ ಖೇಣಿಯವರು ಮಠಕ್ಕೆ ಚಿನ್ನ ಕೊಟ್ಟಿದ್ದಾರೆ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ. ಅವರ ಸಂಪರ್ಕವೇ ನಮಗಿಲ್ಲ. ಪರಮಪೂಜ್ಯರು (ಡಾ. ಶಿವಕುಮಾರ ಸ್ವಾಮೀಜಿ) ಲಿಂಗೈಕ್ಯರಾದಾಗಲೂ ಅವರು ಮಠಕ್ಕೆ ಬಂದಿರಲಿಲ್ಲ. ಕೇವಲ ತಮ್ಮ ಪ್ರಚಾರಕ್ಕಾಗಿ ಇಂತಹ ಉತ್ಪ್ರೇಕ್ಷೆಯ ಮಾತುಗಳನ್ನು ಆಡುತ್ತಿದ್ದಾರೆ. ಖೇಣಿಯವರು ಯಾವುದೇ ಚಿನ್ನದ ಉಡುಗೊರೆ ನೀಡಿರುವ ಬಗ್ಗೆ ನಮಗೆ ಮಾಹಿತಿಯೂ ಇಲ್ಲ, ಮಠದಲ್ಲಿ ಯಾವುದೇ ದಾಖಲೆಯೂ ಇಲ್ಲ. ಯಾರದ್ದೋ ವೈಯಕ್ತಿಕ ವ್ಯವಹಾರಕ್ಕಾಗಿ ಶ್ರೀಮಠದ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿರುವುದು ನಮಗೆ ತೀವ್ರ ನೋವು ಮತ್ತು ಬೇಸರ ತರಿಸಿದೆ. ಈ ಕುರಿತು ಮಠದಿಂದ ಈಗಾಗಲೇ ಸ್ಪಷ್ಟೀಕರಣ ಪ್ರಕಟಣೆಯನ್ನೂ ಹೊರಡಿಸಲಾಗಿದೆ,” ಎಂದು ತಿಳಿಸಿದರು.

ಚಿನ್ನದ ಕಡಗ ನೀಡಿದ್ದು ಯಾರು?

ಪರಮಪೂಜ್ಯರು ಧರಿಸುತ್ತಿದ್ದ ಚಿನ್ನದ ಕಡಗದ ಹಿಂದಿನ ನೈಜ ಸಂಗತಿಯನ್ನು ವಿವರಿಸಿದ ಶ್ರೀಗಳು, “ಬಹಳ ವರ್ಷಗಳ ಹಿಂದೆ ಮಠದ ಭಕ್ತರಾದ, ಸ್ವಾತಿ ಪೆಟ್ರೋಲ್ ಬಂಕ್ ಮಾಲೀಕ ಹುಲಿಕುಂಟೆ ಸೋಮಣ್ಣ ಅವರು ಪೂಜ್ಯರಿಗೆ ಚಿನ್ನದ ಕಡಗ ನೀಡಲು ಮುಂದಾಗಿದ್ದರು. ಆಗ ಪೂಜ್ಯರು ‘ನನಗೆ ಅದೆಲ್ಲ ಬೇಡಪ್ಪ, ಆ ಹಣದಲ್ಲಿ ಮಠದ ಮಕ್ಕಳಿಗೆ ಎರಡು ಕೊಠಡಿ (ರೂಮ್) ಕಟ್ಟಿಸಿಕೊಡಿ’ ಎಂದು ಹೇಳಿದ್ದರು. ಆದರೆ, ಅವರ ಕುಟುಂಬದವರು ತೀವ್ರ ಒತ್ತಾಯ ಮಾಡಿ, ಭಕ್ತಿಯಿಂದ ಆ ಚಿನ್ನದ ಕಡಗವನ್ನು ತೊಡಿಸಿದ್ದರು. ಕೊನೆಯವರೆಗೂ ಪೂಜ್ಯರು ಅದೇ ಕಡಗವನ್ನು ಧರಿಸಿದ್ದರು. ಆ ಕಡಗ ಈಗಲೂ ಮಠದಲ್ಲಿ ಭದ್ರವಾಗಿದೆ. ಇದನ್ನು ಬಿಟ್ಟರೆ ಖೇಣಿಯವರು ಹೇಳುತ್ತಿರುವುದು ಶುದ್ಧ ಸುಳ್ಳು,” ಎಂದು ಸ್ಪಷ್ಟಪಡಿಸಿದರು.

ಡಿ.ಕೆ. ಶಿವಕುಮಾರ್ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಶ್ರೀಗಳು

ಇದೇ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದರ ಕುರಿತೂ ಶ್ರೀಗಳು ಮಾಹಿತಿ ನೀಡಿದರು. “ಸೋಂಪುರ ಭಾಗದಲ್ಲಿ ಟೋಲ್ ಹಾಗೂ ರಸ್ತೆ ಸಮಸ್ಯೆಯಿಂದ ರೈತರಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ರೈತರು ಬಹಳಷ್ಟು ಒತ್ತಾಯ ಮಾಡುತ್ತಿದ್ದರಿಂದ, ಅವರ ಪರವಾಗಿ ನಾವು ಅನಿವಾರ್ಯವಾಗಿ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿಯಾಗಬೇಕಾಯಿತು. ನಾವು ಭೇಟಿಯಾದಾಗ ಡಿ.ಕೆ. ಶಿವಕುಮಾರ್ ಅವರು, ‘ನೀವು ಅರ್ಜಿ ಹಿಡಿದುಕೊಂಡು ಬರಬೇಡಿ, ಕೇವಲ ಆಶೀರ್ವಾದ ಮಾಡಿ ಸಾಕು. ಕರೆದಿದ್ದರೆ ನಾನೇ ಬರುತ್ತಿದ್ದೆ’ ಎಂದು ಅತ್ಯಂತ ಸಂಸ್ಕಾರಯುತವಾಗಿ ಮಾತನಾಡಿದರು. ಆದರೆ ರೈತರ ಕೆಲಸ ಆಗಬೇಕಿದ್ದರಿಂದ ಮತ್ತು ಮಧ್ಯವರ್ತಿಗಳ ಮೂಲಕ ಹೇಳಿಸುವ ಬದಲು ನಾವೇ ನೇರವಾಗಿ ಹೋಗಿ ಸಮಸ್ಯೆ ವಿವರಿಸುವುದು ಸೂಕ್ತ ಎಂಬ ಕಾರಣಕ್ಕೆ ನಾವೇ ತೆರಳಿ ಮನವಿ ಮಾಡಿದ್ದೆವು,” ಎಂದು ಸಿದ್ದಲಿಂಗ ಶ್ರೀಗಳು ವಿವರಣೆ ನೀಡಿದರು.

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
Add as Preferred on Google Follow on Google News
Share. WhatsApp Facebook Twitter Telegram
Previous Articleಫೈನಾನ್ಸ್ ಡಿಪಾರ್ಟ್‌ಮೆಂಟ್ ಪತ್ರ ಲೀಕ್: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!
Next Article ಷೇರುಪೇಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್ 1,000 ಅಂಕ ಪತನ, ಒಂದೇ ದಿನದಲ್ಲಿ 9 ಲಕ್ಷ ಕೋಟಿ ರೂ. ನಷ್ಟ!
Sub Editor
  • Website

Related Posts

ಧಾರವಾಡ ತಹಶೀಲ್ದಾರ್ ಲಂಚ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲಂಚ ನೀಡಿದ್ದ ಮಂಜುನಾಥ್ ವಿರುದ್ಧವೇ ಕೇಳಿಬಂತು ಭೂಕಬಳಿಕೆ ಆರೋಪ!

September 23, 2026

ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನ ಇಂದಿನಿಂದ ಆರಂಭ: ‘ಬರ’ ಚರ್ಚೆಗೂ ಮುನ್ನವೇ ‘ವಂದೇ ಮಾತರಂ’ ಕಿಚ್ಚು!

September 21, 2026

ಡಿ.ಕೆ. ಶಿವಕುಮಾರ್ ಮಂಗಳೂರಿನಲ್ಲಿ, ಸಿದ್ದರಾಮಯ್ಯ ತುಮಕೂರಿನಲ್ಲಿ: ಆಪ್ತ ರಾಜಣ್ಣ ಭೇಟಿ ಹಿಂದಿನ ಲೆಕ್ಕಾಚಾರವೇನು?

September 19, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ಷೇರುಪೇಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್ 1,000 ಅಂಕ ಪತನ, ಒಂದೇ ದಿನದಲ್ಲಿ 9 ಲಕ್ಷ ಕೋಟಿ ರೂ. ನಷ್ಟ!

ಅಶೋಕ್ ಖೇಣಿ ಹೇಳಿಕೆಗೆ ಸಿದ್ದಲಿಂಗ ಶ್ರೀಗಳ ತೀವ್ರ ಬೇಸರ: ‘ಚಿನ್ನದ ಕಡಗ’ದ ಅಸಲಿ ಸತ್ಯ ಬಿಚ್ಚಿಟ್ಟ ಸ್ವಾಮೀಜಿ

ಫೈನಾನ್ಸ್ ಡಿಪಾರ್ಟ್‌ಮೆಂಟ್ ಪತ್ರ ಲೀಕ್: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

ಧಾರವಾಡ ತಹಶೀಲ್ದಾರ್ ಲಂಚ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲಂಚ ನೀಡಿದ್ದ ಮಂಜುನಾಥ್ ವಿರುದ್ಧವೇ ಕೇಳಿಬಂತು ಭೂಕಬಳಿಕೆ ಆರೋಪ!

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.