Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

2027ನೇ ಸಾಲಿನ ಸರ್ಕಾರಿ ರಜಾ ಪಟ್ಟಿ ಪ್ರಕಟ; ಭಾನುವಾರ-ಶನಿವಾರವೇ 7 ಪ್ರಮುಖ ಹಬ್ಬಗಳು, ನೌಕರರಿಗೆ ನಿರಾಸೆ: ಇಲ್ಲಿದೆ ಸಂಪೂರ್ಣ ಪಟ್ಟಿ!

ಬಸವಣ್ಣನವರ ಕುರಿತು ಅವಹೇಳನಕಾರಿ ಪುಸ್ತಕ ವಿವಾದ: ದುಬೈಗೆ ತೆರಳುತ್ತಿದ್ದ ಲೇಖಕ ರವಿ ಹಂಜ್ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ

“ಅವ್ರು ಬಿಜೆಪಿಗೆ ಬರಲ್ಲ, ನಾನು ಕಾಂಗ್ರೆಸ್‌ಗೆ ಹೋಗಲ್ಲ; ನಾನು ಯಾರಿಗೂ ಹೆದರುವ ಮಗನಲ್ಲ!”: ರಮೇಶ್ ಜಾರಕಿಹೊಳಿ ನೇರ ಟಾಂಗ್

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » “ಅವ್ರು ಬಿಜೆಪಿಗೆ ಬರಲ್ಲ, ನಾನು ಕಾಂಗ್ರೆಸ್‌ಗೆ ಹೋಗಲ್ಲ; ನಾನು ಯಾರಿಗೂ ಹೆದರುವ ಮಗನಲ್ಲ!”: ರಮೇಶ್ ಜಾರಕಿಹೊಳಿ ನೇರ ಟಾಂಗ್
Latest News

“ಅವ್ರು ಬಿಜೆಪಿಗೆ ಬರಲ್ಲ, ನಾನು ಕಾಂಗ್ರೆಸ್‌ಗೆ ಹೋಗಲ್ಲ; ನಾನು ಯಾರಿಗೂ ಹೆದರುವ ಮಗನಲ್ಲ!”: ರಮೇಶ್ ಜಾರಕಿಹೊಳಿ ನೇರ ಟಾಂಗ್

Sub EditorBy Sub EditorNovember 21, 2026No Comments2 Mins Read
Share WhatsApp Facebook Twitter Telegram
"ಅವ್ರು ಬಿಜೆಪಿಗೆ ಬರಲ್ಲ, ನಾನು ಕಾಂಗ್ರೆಸ್‌ಗೆ ಹೋಗಲ್ಲ; ನಾನು ಯಾರಿಗೂ ಹೆದರುವ ಮಗನಲ್ಲ!" — ಲಕ್ಷ್ಮಣ ಸವದಿಗೆ ರಮೇಶ್ ಜಾರಕಿಹೊಳಿ ನೇರ ಟಾಂಗ್
Share
WhatsApp Facebook Twitter Telegram

ಬೆಳಗಾವಿ (ಸಂಭ್ರಮಪ್ರಭ ವಾರ್ತೆ): ತಮ್ಮ ಪಕ್ಷಾಂತರದ ಕುರಿತು ಹರಿದಾಡುತ್ತಿದ್ದ ಎಲ್ಲಾ ರಾಜಕೀಯ ಊಹಾಪೋಹಗಳಿಗೆ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ತೆರೆ ಎಳೆದಿದ್ದಾರೆ. “ಕಾಂಗ್ರೆಸ್ ಪಕ್ಷದಿಂದ ನನಗೆ ಮೇಲಿಂದ ಮೇಲೆ ಆಫರ್‌ಗಳು ಬರುತ್ತಿರುವುದು ನಿಜ. ಆದರೆ, ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್‌ಗೆ ಹೋಗುವುದಿಲ್ಲ; 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ” ಎಂದು ಅವರು ಘೋಷಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಕಾರ್ಯಕರ್ತರ ಸಭೆ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಲಕ್ಷ್ಮಣ ಸವದಿ ಮತ್ತೆ ಬಿಜೆಪಿಗೆ ಬರುವುದಿಲ್ಲ. ಹಿಂದೆ ಬಿಜೆಪಿಯಲ್ಲಿದ್ದಾಗ ಚುನಾವಣೆಯಲ್ಲಿ ಸೋತು ಮನೆಯಲ್ಲಿದ್ದ ಅವರನ್ನು ಕರೆದು ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಆದರೆ, ಸ್ಥಾನಮಾನ ನೀಡಿದವರಿಗೇ ಅವಮಾನ ಮಾಡಿದ ಅವರು ಇಂದು ಪಕ್ಷವನ್ನೇ ವಿರೋಧಿಸುತ್ತಿದ್ದಾರೆ” ಎಂದು ಕಿಡಿಕಾರಿದರು.

“ಕಿಮ್ಮತ್ತು ಇಲ್ಲದ ಕಡೆ ಹೋಗುವುದಿಲ್ಲ”

ಪಕ್ಷ ಬದಲಾವಣೆ ಕುರಿತ ಪ್ರಶ್ನೆಗಳಿಗೆ ಖಡಕ್ ಉತ್ತರ ನೀಡಿದ ಜಾರಕಿಹೊಳಿ, “ಒಮ್ಮೆ ಹೊರಬಂದ ಮೇಲೆ ಮತ್ತೆ ಹಿಂದಕ್ಕೆ ಹೋಗುವುದು ಸರಿಯಲ್ಲ. ನಾನು ಕಾಂಗ್ರೆಸ್‌ಗೆ ಹೋದರೆ ಅಲ್ಲಿ ನನಗೆ ಯಾವುದೇ ಕಿಮ್ಮತ್ತು ಉಳಿಯುವುದಿಲ್ಲ. ಬೇಡ ಎಂದವರ ಬಳಿ ಹೋಗಿ ಏನು ಮಾಡುವುದು? ನನಗೆ ಮತ್ತು ನನ್ನನ್ನು ನಂಬಿರುವ ಕಾರ್ಯಕರ್ತರಿಗೆ ಎಲ್ಲಿ ಗೌರವ ಸಿಗುತ್ತದೆಯೋ ಅಲ್ಲೇ ಇರುತ್ತೇನೆ. ಸ್ವಾಭಿಮಾನ ಮತ್ತು ಕಾರ್ಯಕರ್ತರ ಹಿತವೇ ನನಗೆ ಮುಖ್ಯ” ಎಂದು ಸ್ಪಷ್ಟಪಡಿಸಿದರು.

ಅಥಣಿ-ಕಾಗವಾಡ ಗೆಲ್ಲಲು ‘ಸೈಲೆಂಟ್ ತಂತ್ರ’

“ಲಕ್ಷ್ಮಣ ಸವದಿ ಸಚಿವರಾದ ಬಳಿಕ ಗೋಕಾಕ ಸಾಹುಕಾರ ಅಥಣಿಗೆ ಬರುವುದನ್ನು ನಿಲ್ಲಿಸಿದ್ದಾರೆ ಎಂದು ಕೆಲವರು ಭಾವಿಸಿದ್ದರೆ ಅದು ತಪ್ಪು. ನಾನು ಯಾರಿಗೂ ಹೆದರುವ ಮಗನೇ ಅಲ್ಲ, ನಮ್ಮ ಕಾರ್ಯಕರ್ತರೂ ಯಾರಿಗೂ ಅಂಜಬೇಕಿಲ್ಲ. ಅಥಣಿಯಲ್ಲಿ ನಾವು ಪದೇ ಪದೇ ಸಭೆ ನಡೆಸಿದರೆ ಸವದಿ ಎಚ್ಚೆತ್ತುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಗೋಕಾಕನಲ್ಲಿಯೇ ಕುಳಿತು ‘ಸೈಲೆಂಟ್ ತಂತ್ರ’ ಹೆಣೆದಿದ್ದೇವೆ” ಎಂದು ರಮೇಶ್ ಜಾರಕಿಹೊಳಿ ಗುಟ್ಟು ಬಿಟ್ಟುಕೊಟ್ಟರು.

ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಅಲ್ಲದೆ, 2028ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಮತ್ತು ಕಾಗವಾಡ ಎರಡೂ ಕ್ಷೇತ್ರಗಳನ್ನು ಗೆಲ್ಲುವುದು ಶತಃಸಿದ್ಧ. ಕಾಗವಾಡ ಕ್ಷೇತ್ರದ ಕುರಿತು ಶಾಸಕ ರಾಜು ಕಾಗೆ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಅಲ್ಲಿ ಸುಲಭವಾಗಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ವೈಯಕ್ತಿಕವಾಗಿ ಸಿದ್ದರಾಮಯ್ಯ ಯಾವಾಗಲೂ ನಮ್ಮ ನಾಯಕರೇ”

ಇದೇ ವೇಳೆ ಸಿದ್ದರಾಮಯ್ಯ ಅವರೊಂದಿಗಿನ ಭೇಟಿಯ ಕುರಿತು ಸ್ಪಷ್ಟನೆ ನೀಡಿದ ಜಾರಕಿಹೊಳಿ, “ನಮ್ಮಿಬ್ಬರ ಪಕ್ಷಗಳು ಬೇರೆ ಬೇರೆಯಾಗಿದ್ದರೂ, ವೈಯಕ್ತಿಕ ಸಂಬಂಧ ಉತ್ತಮವಾಗಿದೆ. ವೈಯಕ್ತಿಕವಾಗಿ ಸಿದ್ದರಾಮಯ್ಯ ಯಾವಾಗಲೂ ನಮ್ಮ ನಾಯಕರೇ. ಇತ್ತೀಚಿನ ನಮ್ಮ ಖಾಸಗಿ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಹಿಂದುಳಿದ ವರ್ಗಗಳ ನಾಯಕರಿಗೆ ಅಪಮಾನ ಮಾಡಿದರೆ, ಅವರನ್ನು ನಂಬಿರುವ ಜನರು ಮತ್ತು ವೋಟ್ ಬ್ಯಾಂಕ್ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದೆ” ಎಂದು ಮಾರ್ಮಿಕವಾಗಿ ನುಡಿದರು.

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
Add as Preferred on Google Follow on Google News
Share. WhatsApp Facebook Twitter Telegram
Previous Articleಸರ್ಕಾರಿ ನೌಕರರಿಗೆ ಬಿಗ್ ಶಾಕ್: ಡಿಸೆಂಬರ್ 1ರಿಂದ ‘ಕರ್ತವ್ಯ’ ಆ್ಯಪ್‌ನಲ್ಲಿ ನಗದು ಘೋಷಣೆ, ಚಲನವಲನ ದಾಖಲು ಕಡ್ಡಾಯ!
Next Article ಬಸವಣ್ಣನವರ ಕುರಿತು ಅವಹೇಳನಕಾರಿ ಪುಸ್ತಕ ವಿವಾದ: ದುಬೈಗೆ ತೆರಳುತ್ತಿದ್ದ ಲೇಖಕ ರವಿ ಹಂಜ್ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ
Sub Editor
  • Website

Related Posts

2027ನೇ ಸಾಲಿನ ಸರ್ಕಾರಿ ರಜಾ ಪಟ್ಟಿ ಪ್ರಕಟ; ಭಾನುವಾರ-ಶನಿವಾರವೇ 7 ಪ್ರಮುಖ ಹಬ್ಬಗಳು, ನೌಕರರಿಗೆ ನಿರಾಸೆ: ಇಲ್ಲಿದೆ ಸಂಪೂರ್ಣ ಪಟ್ಟಿ!

November 21, 2026

ಬಸವಣ್ಣನವರ ಕುರಿತು ಅವಹೇಳನಕಾರಿ ಪುಸ್ತಕ ವಿವಾದ: ದುಬೈಗೆ ತೆರಳುತ್ತಿದ್ದ ಲೇಖಕ ರವಿ ಹಂಜ್ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ

November 21, 2026

ಸರ್ಕಾರಿ ನೌಕರರಿಗೆ ಬಿಗ್ ಶಾಕ್: ಡಿಸೆಂಬರ್ 1ರಿಂದ ‘ಕರ್ತವ್ಯ’ ಆ್ಯಪ್‌ನಲ್ಲಿ ನಗದು ಘೋಷಣೆ, ಚಲನವಲನ ದಾಖಲು ಕಡ್ಡಾಯ!

November 19, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

2027ನೇ ಸಾಲಿನ ಸರ್ಕಾರಿ ರಜಾ ಪಟ್ಟಿ ಪ್ರಕಟ; ಭಾನುವಾರ-ಶನಿವಾರವೇ 7 ಪ್ರಮುಖ ಹಬ್ಬಗಳು, ನೌಕರರಿಗೆ ನಿರಾಸೆ: ಇಲ್ಲಿದೆ ಸಂಪೂರ್ಣ ಪಟ್ಟಿ!

ಬಸವಣ್ಣನವರ ಕುರಿತು ಅವಹೇಳನಕಾರಿ ಪುಸ್ತಕ ವಿವಾದ: ದುಬೈಗೆ ತೆರಳುತ್ತಿದ್ದ ಲೇಖಕ ರವಿ ಹಂಜ್ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ

“ಅವ್ರು ಬಿಜೆಪಿಗೆ ಬರಲ್ಲ, ನಾನು ಕಾಂಗ್ರೆಸ್‌ಗೆ ಹೋಗಲ್ಲ; ನಾನು ಯಾರಿಗೂ ಹೆದರುವ ಮಗನಲ್ಲ!”: ರಮೇಶ್ ಜಾರಕಿಹೊಳಿ ನೇರ ಟಾಂಗ್

ಸರ್ಕಾರಿ ನೌಕರರಿಗೆ ಬಿಗ್ ಶಾಕ್: ಡಿಸೆಂಬರ್ 1ರಿಂದ ‘ಕರ್ತವ್ಯ’ ಆ್ಯಪ್‌ನಲ್ಲಿ ನಗದು ಘೋಷಣೆ, ಚಲನವಲನ ದಾಖಲು ಕಡ್ಡಾಯ!

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.