• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಮೈಸೂರಿನಲ್ಲಿ ಹೈಟೆಕ್ ಡ್ರಗ್ಸ್ ಫ್ಯಾಕ್ಟರಿ ಪತ್ತೆ: ಗೃಹ ಸಚಿವ

Sambrama Prabha News by Sambrama Prabha News
February 1, 2026
in Politics
0
ಮೈಸೂರಿನಲ್ಲಿ ಹೈಟೆಕ್ ಡ್ರಗ್ಸ್ ಫ್ಯಾಕ್ಟರಿ ಪತ್ತೆ: ಗೃಹ ಸಚಿವ

Updated By: Priyalachhi

ಬೆಂಗಳೂರು: ಮೈಸೂರಿನಲ್ಲಿ ರಹಸ್ಯ ಹೈಟೆಕ್ ಡ್ರಗ್ಸ್ ಘಟಕ ಕಾರ್ಯ ನಿರ್ವಹಿಸುತ್ತಿದ್ದುದನ್ನು ಎನ್’ಸಿಬಿ ಬಯಲುಗೊಳಿಸಿದ್ದು, ಇದರೊಂದಿಗೆ ರಾಜ್ಯದ ಗೃಹ ಸಚಿವರ ಹಾಗೂ ಗೃಹ ಇಲಾಖೆಯ ವೈಫಲ್ಯ ಬಯಲಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಮೈಸೂರಿನಲ್ಲಿ ರಹಸ್ಯ ಹೈಟೆಕ್ ಡ್ರಗ್ಸ್ ಘಟಕ ಕಾರ್ಯ ನಿರ್ವಹಿಸುತ್ತಿದ್ದುದನ್ನು ಎನ್’ಸಿಬಿ ಬಯಲುಗೊಳಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಮೈಸೂರಿನಲ್ಲಿ ಡ್ರಗ್ಸ್ ದಂಧೆಯ ಜಾಲ, ತಯಾರಿಕಾ ಘಟಕವನ್ನು ಮಹಾರಾಷ್ಟ್ರ ಪೊಲೀಸ್ ಪತ್ತೆ ಮಾಡಿತ್ತು. ರಾಜ್ಯದ ಗೃಹ ಇಲಾಖೆಯ ಅಸಮರ್ಥ್ಯಕ್ಕೆ ಗೃಹ ಸಚಿವ ಪರಮೇಶ್ವರ್ ಅವರೇ ನೇರ ಹೊಣೆ ಎಂದು ಹೇಳಿದ್ದಾರೆ.

ವಿಶೇಷವಾಗಿ ನಮ್ಮ ಯುವಜನತೆ, ಶಾಲಾ ಮಕ್ಕಳು ಕೂಡ ಈ ಡ್ರಗ್ಸ್ ನಂತಹ ಅಪಾಯಕಾರಿ ಜಾಲಕ್ಕೆ ಬಲಿಯಾಗುತ್ತಿರುವ ವರದಿಗಳು ಪದೇ ಪದೇ ಹೊರಬರುತ್ತಿದ್ದರೂ, ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ, ಅಸಾಮರ್ಥ್ಯ, ವೈಫಲ್ಯಗಳು ಅದರ ಆದ್ಯತೆ ಮತ್ತು ಕಾಳಜಿಗಳನ್ನು ಬಯಲು ಮಾಡಿದೆ. ಪರಿಸ್ಥಿತಿ ಕೈಮೀರುವ ಮುನ್ನ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ನಮ್ಮ ಪೊಲೀಸ್ ಇಲಾಖೆಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿ, ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ನಮ್ಮ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

Tags: ಗೃಹ ಸಚಿವ
Previous Post

ಸಾಕು ಕೇಂದ್ರದ ಅನ್ಯಾಯ, ಬೇಕು ಕರ್ನಾಟಕಕ್ಕೆ ನ್ಯಾಯ: ಕಾಂಗ್ರೆಸ್ ಆಗ್ರಹ

Next Post

2026-27ರ ಭಾರತ ಸರ್ಕಾರದ ಅಂದಾಜು ಪಟ್ಟಿ ಮತ್ತು ವೆಚ್ಚದ ವಿವರಗಳನ್ನ ವಿತ್ತ ಸಚಿವೆ ಸೀತಾರಾಮನ್ ಮಂಡಿಸಲಿದ್ದಾರೆ

Next Post
2026-27ರ ಭಾರತ ಸರ್ಕಾರದ ಅಂದಾಜು ಪಟ್ಟಿ ಮತ್ತು ವೆಚ್ಚದ ವಿವರಗಳನ್ನ ವಿತ್ತ ಸಚಿವೆ ಸೀತಾರಾಮನ್ ಮಂಡಿಸಲಿದ್ದಾರೆ

2026-27ರ ಭಾರತ ಸರ್ಕಾರದ ಅಂದಾಜು ಪಟ್ಟಿ ಮತ್ತು ವೆಚ್ಚದ ವಿವರಗಳನ್ನ ವಿತ್ತ ಸಚಿವೆ ಸೀತಾರಾಮನ್ ಮಂಡಿಸಲಿದ್ದಾರೆ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.