Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ಕಾರ್ಯಕರ್ತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಸಿಹಿಸುದ್ದಿ: ಒಂದೆರಡು ದಿನಗಳಲ್ಲಿ ನಿಗಮ-ಮಂಡಳಿ ನೇಮಕಾತಿ 2ನೇ ಪಟ್ಟಿ ಬಿಡುಗಡೆ!

“ತುರ್ತು ಪರಿಸ್ಥಿತಿಯ ಅತಿರೇಕಗಳಿಗೆ ಸಂಜಯ್ ಗಾಂಧಿ ಮಾತ್ರ ಕಾರಣರಲ್ಲ!”: ಅತ್ತೆ ಇಂದಿರಾ ಮೇಲಿದ್ದ ಒತ್ತಡ ಬಿಚ್ಚಿಟ್ಟ ಸೋನಿಯಾ ಗಾಂಧಿ

‘ತುಂಡು ತುಂಡಾಗಿ ಕತ್ತರಿಸುತ್ತಾರೆ’ ಹೇಳಿಕೆಗೆ ತಿರುಗೇಟು: ಛಲವಾದಿ ನಾರಾಯಣಸ್ವಾಮಿ ಮನೆಗೆ ಆನ್‌ಲೈನ್‌ನಲ್ಲಿ ಚಾಕು ಆರ್ಡರ್ ಮಾಡಿದ ಕಾಂಗ್ರೆಸ್!

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ಹವಾಮಾನ ಬದಲಾವಣೆ ಹಿನ್ನೆಲೆ ಡೆಂಗ್ಯೂ, ಚಿಕೂನ್‌ಗುನ್ಯಾ ಪ್ರಕರಣಗಳ ಹೆಚ್ಚಳ
Latest News Home

ಹವಾಮಾನ ಬದಲಾವಣೆ ಹಿನ್ನೆಲೆ ಡೆಂಗ್ಯೂ, ಚಿಕೂನ್‌ಗುನ್ಯಾ ಪ್ರಕರಣಗಳ ಹೆಚ್ಚಳ

Sambrama Prabha NewsBy Sambrama Prabha NewsNovember 7, 2025No Comments3 Mins Read
Share WhatsApp Facebook Twitter Telegram
Share
WhatsApp Facebook Twitter Telegram

Updated By: Priyalachhi

ಭಟಿಂಡಾ (ಪಂಜಾಬ್): ವೇಗವಾಗಿ ಹವಾಮಾನ ಬದಲಾಗುತ್ತಿರುವ ಹಿನ್ನೆಲೆ ಜನರು ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತಿದೆ. ಅದರಲ್ಲೂ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳು ವೇಗವಾಗಿ ಹರಡುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿವೆ.

ಡಾ. ಉಷಾ ಗೋಯಲ್ ಪ್ರತಿಕ್ರಿಯಿಸಿ, ”ಡೆಂಗ್ಯೂ ಇನ್ನು ಮುಂದೆ ಸಾಮಾನ್ಯ ರೋಗವಲ್ಲ, ಆರೋಗ್ಯ ಇಲಾಖೆಯು ಡೆಂಗ್ಯೂ ತಡೆಗಟ್ಟುವಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದೆ. ಇದರೊಂದಿಗೆ ಮನೆಯ ಒಳಗೆ ಅಥವಾ ಹೊರಗೆ ಎಲ್ಲಿಯೂ ನೀರು ನಿಲ್ಲಲು ಬಿಡಬೇಡಿ ಎಂದು ಜನರಿಗೆ ಮನವಿ ಮಾಡಲಾಗುತ್ತಿದೆ. ಯಾವುದೇ ಪಾತ್ರೆಯಲ್ಲಿ ನೀರು ಇದ್ದರೆ ಆ ಪಾತ್ರೆಯನ್ನು ತೊಳೆದು ಚೆನ್ನಾಗಿ ಸ್ವಚ್ಛಗೊಳಿಸಿ. ಡೆಂಗ್ಯೂ ತಡೆಗಟ್ಟಲು ಆರೋಗ್ಯ ಇಲಾಖೆಯು ಸರ್ಕಾರಿ ಹಾಗೂ ಸರ್ಕಾರೇತರ ಕಟ್ಟಡಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದೆ. ಜೊತೆಗೆ ಕೊಳಗಳಲ್ಲಿ ಸೊಳ್ಳೆ ನಿವಾರಕ ಪೌಡರ್ ಸಿಂಪಡಣೆ ಮಾಡಲಾಗುತ್ತಿದೆ. ಡೆಂಗ್ಯೂ ತಡೆಗಟ್ಟುವಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ.”

ಡೆಂಗ್ಯೂ, ಚಿಕೂನ್‌ಗುನ್ಯಾ ತಡೆಗಟ್ಟಲು ಟಿಪ್ಸ್: ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ತಪ್ಪಿಸಲು, ಸೊಳ್ಳೆಗಳ ಸಂತಾನೋತ್ಪತ್ತಿ ಮೂಲಗಳನ್ನು ನಿವಾರಿಸಬೇಕಾಗುತ್ತದೆ. ನೀರು ಎಲ್ಲೆಂದರಲ್ಲಿ ನಿಲ್ಲದಂತೆ ಗಮನಹರಿಸಬೇಕಾಗುತ್ತದೆ. ವಾಂತಿ ಅಥವಾ ಅತಿಸಾರ ಉಂಟಾದರೆ ORS ಬಳಸಿ. ಇದೀಗ ಆರೋಗ್ಯ ಇಲಾಖೆಯಿಂದ ORS ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಮನೆಯಲ್ಲಿ ಸುತ್ತ ಮುತ್ತ ಸ್ವಚ್ಛತೆಯನ್ನು ಕಾಪಾಡಬೇಕಾಗುತ್ತದೆ. ಇದರೊಂದಿಗೆ, ತೆರೆದ ಸ್ಥಳಗಳಲ್ಲಿ ಮಲವಿಸರ್ಜನೆ ಮಾಡಲು ಹೋಗಬೇಡಿ ಮತ್ತು ಕುದಿಸಿದ ನೀರನ್ನು ಕುಡಿಯಿರಿ. ನೀರನ್ನು ಶುದ್ಧೀಕರಿಸಲು ಆರೋಗ್ಯ ಇಲಾಖೆಯಿಂದ ಕ್ಲೋರಿನ್ ಮಾತ್ರೆಗಳನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ.

ಡೆಂಗ್ಯೂ ಲಕ್ಷಣಗಳೇನು?: “ನೀರು ನಿಂತ ಸ್ಥಳಗಳಲ್ಲಿ ಸೊಳ್ಳೆ ನಿವಾರಕ ಪೌಡರ್ ಸಿಂಪಡಣೆ ಮಾಡಬೇಕು. ಒಬ್ಬ ವ್ಯಕ್ತಿಯು ತೀವ್ರ ಜ್ವರ, ತಲೆನೋವು, ಸ್ನಾಯು ನೋವು, ಕಣ್ಣುಗಳ ಹಿಂದೆ ನೋವು, ಚರ್ಮದ ಮೇಲೆ ದದ್ದುಗಳು ಇತ್ಯಾದಿ ಸೇರಿದಂತೆ ಡೆಂಗ್ಯೂ ಜ್ವರದ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಹಾಗೂ ಪರೀಕ್ಷೆ ಮಾಡಿಕೊಳ್ಳಿ. ನೀವು ಔಷಧ ತೆಗೆದುಕೊಳ್ಳಬೇಕಾದರೆ, ಪ್ಯಾರಸಿಟಮಾಲ್ ಅನ್ನು ಮಾತ್ರ ತೆಗೆದುಕೊಳ್ಳಿ. ಡೆಂಗ್ಯೂ ಅಥವಾ ಚಿಕೂನ್‌ಗುನ್ಯಾ ಇರುವುದು ದೃಢಪಟ್ಟ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರು ಸೂಚಿಸಿದ ಮಾತ್ರೆಗಳನ್ನು ತೆಗೆದುಕೊಳ್ಳಬೇಕು” ಎಂದು ಡಾ. ಉಷಾ ತಿಳಿಸುತ್ತಾರೆ.

ಆರೋಗ್ಯ ಅಧಿಕಾರಿಯ ಸಲಹೆ: ಮಳೆಗಾಲದಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚುತ್ತಿದೆ. ಮನೆಗಳ ಛಾವಣಿಗಳ ಮೇಲೆ ಬಿದ್ದಿರುವ ಕಸ ಹಾಗೂ ಟೈರ್‌ಗಳಲ್ಲಿ ನೀರು ನಿಲ್ಲುವುದರಿಂದ ಡೆಂಗ್ಯೂ ಸೊಳ್ಳೆಗಳ ಸಂತಾನೋತ್ಪತ್ತಿಯ ಅಪಾಯ ಹೆಚ್ಚುತ್ತಿದೆ. ನಿಮ್ಮನ್ನು ನಿಮ್ಮ ಕುಟುಂಬವನ್ನು ಹಾಗೂ ಸಮಾಜವನ್ನು ಡೆಂಗ್ಯೂ ಜ್ವರದಿಂದ ರಕ್ಷಿಸಿಕೊಳ್ಳಲು, ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಸೊಳ್ಳೆಗಳ ಸಂತಾನೋತ್ಪತ್ತಿಯ ಮೂಲಗಳನ್ನು ತೊಡೆದುಹಾಕುವುದು. ಪ್ರತಿ ಶುಕ್ರವಾರ ಸರ್ಕಾರಿ ಕಚೇರಿಗಳಲ್ಲಿ ಒಣ ದಿನವನ್ನು ಆಚರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಈ ಸಮಯದಲ್ಲಿ ಮನೆಯಲ್ಲಿ ಇರುವ ಕೂಲರ್‌ಗಳು, ರೆಫ್ರಿಜರೇಟರ್ ಟ್ರೇಗಳು, ಪಕ್ಷಿಗಳಿಗಾಗಿ ಇರಿಸಲಾಗಿರುವ ನೀರಿನ ಬಟ್ಟಲುಗಳು ಇತ್ಯಾದಿಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಮನೆಯಲ್ಲಿರುವ ಹೆಚ್ಚುವರಿ ಕಸವನ್ನು ತೆಗೆದುಹಾಕಬೇಕು. ಇದರೊಂದಿಗೆ, ಸೊಳ್ಳೆ ಲಾರ್ವಾಗಳನ್ನು ನಿರ್ಮೂಲನೆ ಮಾಡಲು ಪ್ರತಿ ವಾರ ನಿಂತ ನೀರು ಮತ್ತು ಮನೆಯ ಸಮೀಪ ಇರುವ ಕೊಳಗಳಲ್ಲಿ ಕಪ್ಪು ಎಣ್ಣೆಯನ್ನು ಸಿಂಪಡಿಸಬೇಕು ಎಂದು ಭಟಿಂಡಾ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಉಷಾ ಗೋಯಲ್ ಸಲಹೆ ನೀಡಿದರು.

ಪಂಜಾಬ್‌ನಲ್ಲಿ ಡೆಂಗ್ಯೂ ಪ್ರಕರಣಗಳು & ಸಾವುಗಳ ಸಂಖ್ಯೆ: ರಾಷ್ಟ್ರೀಯ ಆರೋಗ್ಯ ಮಿಷನ್ ದತ್ತಾಂಶದ ಪ್ರಕಾರ, ಪಂಜಾಬ್‌ನಲ್ಲಿ ಡೆಂಗ್ಯೂ ಪ್ರಕರಣಗಳ ಬಗ್ಗೆ ತಿಳಿಯುವುದಾದರೆ, 2019ರಲ್ಲಿ 10,289 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದವು, 14 ಜನರು ಸಾವನ್ನಪ್ಪಿದ್ದಾರೆ, 2020ರಲ್ಲಿ 8,435 ಪಾಸಿಟಿವ್ ಪ್ರಕರಣಗಳು ಮತ್ತು 22 ಜನರು ಸಾವನ್ನಪ್ಪಿದ್ದಾರೆ, 2021ರಲ್ಲಿ 23,389 ಪಾಸಿಟಿವ್ ಪ್ರಕರಣಗಳು ಮತ್ತು 55 ಜನರು ಸಾವನ್ನಪ್ಪಿದ್ದಾರೆ. 2022ರಲ್ಲಿ 11,030 ಪಾಸಿಟಿವ್ ಪ್ರಕರಣಗಳು ಹಾಗೂ 41 ಜನರು ಸಾವನ್ನಪ್ಪಿದ್ದಾರೆ, 2023ರಲ್ಲಿ 13,687 ಪಾಸಿಟಿವ್ ಪ್ರಕರಣಗಳು ಹಾಗೂ 39 ಜನರು ಸಾವನ್ನಪ್ಪಿದ್ದಾರೆ. 2024 ರಲ್ಲಿ 6,260 ಪಾಸಿಟಿವ್ ಪ್ರಕರಣಗಳು ಹಾಗೂ 13 ಜನರು ಸಾವನ್ನಪ್ಪಿದ್ದಾರೆ. 2025ರಲ್ಲಿ 11,825 ಪಾಸಿಟಿವ್ ಪ್ರಕರಣಗಳು ಹಾಗೂ 7 ಜನರು ಸಾವನ್ನಪ್ಪಿದ್ದಾರೆ. ಈ ವರ್ಷ ನವೆಂಬರ್ 5 ರವರೆಗೆ ಪಂಜಾಬ್‌ನಲ್ಲಿ 2,625 ಡೆಂಗ್ಯೂ ಪ್ರಕರಣಗಳು ಮತ್ತು 37 ಚಿಕೂನ್‌ಗುನ್ಯಾ ಪ್ರಕರಣಗಳು ಹಾಗೂ 7 ಜನರು ಸಾವನ್ನಪ್ಪಿದ್ದಾರೆ. ಪಂಜಾಬ್‌ನ ಪಟಿಯಾಲ ಹಾಗೂ ಲುಧಿಯಾನದಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗಿ ಕಂಡು ಬರುತ್ತಿದೆ.

ಚಿಕೂನ್‌ಗುನ್ಯಾ ಪ್ರಕರಣಗಳು: ಚಿಕೂನ್‌ಗುನ್ಯಾ ಪ್ರಕರಣಗಳ ಬಗ್ಗೆ ಹೇಳುವುದಾದರೆ, 2018ರಲ್ಲಿ 25 ಪ್ರಕರಣಗಳು, 2019ರಲ್ಲಿ 11 ಪ್ರಕರಣಗಳು, 2020 ರಲ್ಲಿ 0 ಪ್ರಕರಣಗಳು, 2021ರಲ್ಲಿ 144 ಪ್ರಕರಣಗಳು, 2022 ರಲ್ಲಿ 469 ಪ್ರಕರಣಗಳು, 2023 ರಲ್ಲಿ 2072 ಪ್ರಕರಣಗಳು, 2024 ರಲ್ಲಿ 224 ಪ್ರಕರಣಗಳು ಮತ್ತು 2025 ರಲ್ಲಿ 37 ಪ್ರಕರಣಗಳು ವರದಿಯಾಗಿವೆ ಎಂಬುದು ತಿಳಿದಿದೆ.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
ಚಿಕೂನ್‌ಗುನ್ಯಾ
Add as Preferred on Google Follow on Google News
Share. WhatsApp Facebook Twitter Telegram
Previous Articleಭಾರತದ ಹಾಕಿಗೆ 100ರ ಸಂಭ್ರಮ
Next Article ಬಿಡದಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಸ್ಥಾವರದಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ
Sambrama Prabha News
  • Website

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Related Posts

ಕಾರ್ಯಕರ್ತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಸಿಹಿಸುದ್ದಿ: ಒಂದೆರಡು ದಿನಗಳಲ್ಲಿ ನಿಗಮ-ಮಂಡಳಿ ನೇಮಕಾತಿ 2ನೇ ಪಟ್ಟಿ ಬಿಡುಗಡೆ!

November 14, 2026

‘ತುಂಡು ತುಂಡಾಗಿ ಕತ್ತರಿಸುತ್ತಾರೆ’ ಹೇಳಿಕೆಗೆ ತಿರುಗೇಟು: ಛಲವಾದಿ ನಾರಾಯಣಸ್ವಾಮಿ ಮನೆಗೆ ಆನ್‌ಲೈನ್‌ನಲ್ಲಿ ಚಾಕು ಆರ್ಡರ್ ಮಾಡಿದ ಕಾಂಗ್ರೆಸ್!

November 7, 2026

ಗ್ರಾಹಕರಿಗೆ ಕೆಎಂಎಫ್ ಮತ್ತೊಂದು ಶಾಕ್: ನಂದಿನಿ ತುಪ್ಪ, ಬೆಣ್ಣೆ ಮತ್ತು ಪನೀರ್ ದರದಲ್ಲಿ ಭಾರಿ ಏರಿಕೆ

November 5, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ಕಾರ್ಯಕರ್ತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಸಿಹಿಸುದ್ದಿ: ಒಂದೆರಡು ದಿನಗಳಲ್ಲಿ ನಿಗಮ-ಮಂಡಳಿ ನೇಮಕಾತಿ 2ನೇ ಪಟ್ಟಿ ಬಿಡುಗಡೆ!

“ತುರ್ತು ಪರಿಸ್ಥಿತಿಯ ಅತಿರೇಕಗಳಿಗೆ ಸಂಜಯ್ ಗಾಂಧಿ ಮಾತ್ರ ಕಾರಣರಲ್ಲ!”: ಅತ್ತೆ ಇಂದಿರಾ ಮೇಲಿದ್ದ ಒತ್ತಡ ಬಿಚ್ಚಿಟ್ಟ ಸೋನಿಯಾ ಗಾಂಧಿ

‘ತುಂಡು ತುಂಡಾಗಿ ಕತ್ತರಿಸುತ್ತಾರೆ’ ಹೇಳಿಕೆಗೆ ತಿರುಗೇಟು: ಛಲವಾದಿ ನಾರಾಯಣಸ್ವಾಮಿ ಮನೆಗೆ ಆನ್‌ಲೈನ್‌ನಲ್ಲಿ ಚಾಕು ಆರ್ಡರ್ ಮಾಡಿದ ಕಾಂಗ್ರೆಸ್!

ಗ್ರಾಹಕರಿಗೆ ಕೆಎಂಎಫ್ ಮತ್ತೊಂದು ಶಾಕ್: ನಂದಿನಿ ತುಪ್ಪ, ಬೆಣ್ಣೆ ಮತ್ತು ಪನೀರ್ ದರದಲ್ಲಿ ಭಾರಿ ಏರಿಕೆ

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.