• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

AI ಯುಗದಲ್ಲಿ ಭಾರತದ ಬಗ್ಗೆ ಜಗತ್ತು ಆಶಾವಾದಿಯಾಗಿದೆ: ಮೈಕ್ರೋಸಾಫ್ಟ್‌ನ $17.5 ಶತಕೋಟಿ ಹೂಡಿಕೆ ಸ್ವಾಗತಿಸಿದ ಪ್ರಧಾನಿ

Sambrama Prabha News by Sambrama Prabha News
December 10, 2025
in Nation News, Politics
0
AI ಯುಗದಲ್ಲಿ ಭಾರತದ ಬಗ್ಗೆ ಜಗತ್ತು ಆಶಾವಾದಿಯಾಗಿದೆ: ಮೈಕ್ರೋಸಾಫ್ಟ್‌ನ $17.5 ಶತಕೋಟಿ ಹೂಡಿಕೆ ಸ್ವಾಗತಿಸಿದ ಪ್ರಧಾನಿ

Updated By: Priyalachhi

ನವದೆಹಲಿ: ದೇಶದ AI ಭವಿಷ್ಯಕ್ಕಾಗಿ ಮೂಲಸೌಕರ್ಯ ಮತ್ತು ಸಾರ್ವಭೌಮ ಸಾಮರ್ಥ್ಯಗಳನ್ನು ನಿರ್ಮಿಸಲು ಸಹಾಯ ಮಾಡುವುದಕ್ಕೆ ಮೈಕ್ರೋಸಾಫ್ಟ್ ಮುಂದೆ ಬಂದಿದೆ. ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾಡೆಲ್ಲಾ ಭಾರತದಲ್ಲಿ USD 17.5 ಶತಕೋಟಿ ಹೂಡಿಕೆ ಮಾಡುವ ಯೋಜನೆಯನ್ನು ಮಂಗಳವಾರ ಪ್ರಕಟಿಸಿದ್ದಾರೆ. ಇದು ಕಳೆದ ಎರಡು ತಿಂಗಳಲ್ಲಿ ದೇಶದಲ್ಲಿ ಹೂಡಿಕೆಯಾದ ಮೂರನೇ ಪ್ರಮುಖ AI-ಚಾಲಿತ ಇನ್ವೆಸ್ಟ್​ ಮೆಂಟ್​ ಆಗಿದೆ.

ಮೈಕ್ರೋಸಾಫ್ಟ್ ಈ ವರ್ಷದ ಆರಂಭದಲ್ಲಿ ಸುಮಾರು 3 ಬಿಲಿಯನ್​ ಎಂದರೆ ಸುಮಾರು 26,955 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿತ್ತು. ಇದೇ ಆಧಾರದ ಮೇಲೆ ಈಗ ಮತ್ತೆ 17.5 ಬಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 1.58 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಕಂಪನಿ ನಿರ್ಧರಿಸಿದೆ. 2026 ರ ಅಂತ್ಯದ ವೇಳೆಗೆ ಈ ಹಣವನ್ನು AIಯೋಜನೆಗೆ ಖರ್ಚು ಮಾಡುವ ಹಾದಿಯಲ್ಲಿ ಕಂಪನಿ ಇದೆ.

ದೇಶದ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸಲು, ಮೈಕ್ರೋಸಾಫ್ಟ್ ಭಾರತದ AI- ಭವಿಷ್ಯಕ್ಕೆ ಅಗತ್ಯ ಇರುವ ಮೂಲಸೌಕರ್ಯ, ಕೌಶಲ್ಯ ಮತ್ತು ಸಾರ್ವಭೌಮ ಸಾಮರ್ಥ್ಯಗಳನ್ನು ನಿರ್ಮಿಸಲು ಸಹಾಯ ಮಾಡಲು ಮುಂದೆ ಬಂದಿದೆ. ಈ ಭಾಗವಾಗಿಯೇ ಏಷ್ಯಾದಲ್ಲಿ ಇದುವರೆಗಿನ ಅತಿದೊಡ್ಡ ಹೂಡಿಕೆಯಾದ 17.5 ಬಿಲಿಯನ್ ಅಮೆರಿಕನ್​ ಡಾಲರ್‌ಗಳಷ್ಟು ಹೂಡಿಕೆಗೆ ನಿರ್ಧರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ನಾಡೆಲ್ಲಾ ಎಕ್ಸ್‌ ಪೋಸ್ಟ್​ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ ದೇಶದಲ್ಲಿ ಘೋಷಿಸಲಾದ ಮೂರನೇ ಪ್ರಮುಖ AI-ಚಾಲಿತ ಹೂಡಿಕೆ ಇದಾಗಿದೆ.

Tags: ಪ್ರಧಾನಿ
Previous Post

ಬೆಂಗಳೂರಲ್ಲಿ ಕಸ ವಿಲೇವಾರಿಗೆ ಹೊಸ ವಿಧಾನ: ಸಮೀಕ್ಷೆ ನಡೆಸಿ ಅಳವಡಿಕೆ; ಡಿಸಿಎಂ ಡಿ.ಕೆ. ಶಿವಕುಮಾರ್‌

Next Post

ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ಎಲ್ಲರ ಗಮನ ಸೆಳೆದ ಮತ್ಸ್ಯ 6000 ಜಲಾಂತರ್ಗಾಮಿ

Next Post
ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ಎಲ್ಲರ ಗಮನ ಸೆಳೆದ ಮತ್ಸ್ಯ 6000 ಜಲಾಂತರ್ಗಾಮಿ

ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ಎಲ್ಲರ ಗಮನ ಸೆಳೆದ ಮತ್ಸ್ಯ 6000 ಜಲಾಂತರ್ಗಾಮಿ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.