• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಬಸ್​ಗಳನ್ನೇ ಕನ್ನಡ ತೇರನ್ನಾಗಿ ಸಿಂಗರಿಸಿದ ಸಂಸ್ಥೆ

Sambrama Prabha News by Sambrama Prabha News
November 2, 2025
in Latest News
0
ಬಸ್​ಗಳನ್ನೇ ಕನ್ನಡ ತೇರನ್ನಾಗಿ ಸಿಂಗರಿಸಿದ ಸಂಸ್ಥೆ

Updated By: Priyalachhi

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಮೆರಗು ನೀಡಿದೆ. ಕನ್ನಡ ನಾಡಿನ ಪರಂಪರೆ, ಸಂಸ್ಕೃತಿ ಬಿಂಬಿಸುವ ಸ್ತಬ್ದ ಚಿತ್ರಗಳನ್ನು ಸಿದ್ಧಪಡಿಸುವ ಮೂಲಕ ವಾಣಿಜ್ಯ ನಗರಿ ಜನರಲ್ಲಿ ಕನ್ನಡಾಭಿಮಾನ ಮೂಡುವಂತೆ ಮಾಡಿದೆ. ನಗರ ಹಾಗೂ ಗ್ರಾಮೀಣ ಸಾರಿಗೆ ವಿಭಾಗದಿಂದ ಚಿತ್ರದುರ್ಗದ ಕಲ್ಲಿನಕೋಟೆಯನ್ನು ಹಾಗೂ ಕಾರ್ಯಾಗಾರದ ಸಿಬ್ಬಂದಿ ಹಂಪಿಯ ತೇರಿನ ಮಾದರಿ ತಯಾರಿಸಿರುವುದು ಗಮನ ಸೆಳೆಯಿತು.

ಚಿತ್ರದುರ್ಗದ ಕೋಟೆಯ ಸ್ತಬ್ದಚಿತ್ರದಲ್ಲಿ ಸರ್ಕಾರದ ಶಕ್ತಿ ಯೋಜನೆ, ಅತಿ ಹೆಚ್ಚು ಮಹಿಳೆಯರ ಪ್ರಯಾಣಕ್ಕೆ ದೊರೆತ ಲಿಮ್ಕಾ ಅವಾರ್ಡ್ ಸಂಸ್ಥೆಯ ವಿವಿಧ ಬಸ್​ಗಳ ಮಾಹಿತಿ, ಚಿಗರಿ ಬಸ್ ಸೇವೆಯ ಮಾಹಿತಿ ನೀಡಲಾಗಿದೆ. ಹಂಪಿ ತೇರಿನ ಚಿತ್ರದಲ್ಲಿ ಅಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ಪರಿಚಯ ಮಾಡಿದ್ದಾರೆ. ಅಲ್ಲದೇ, ಕಾರ್ಯಾಗಾರದಲ್ಲಿ ಹಳೆಯ ಬಸ್ ಗಳನ್ನು ಪುನಶ್ಚೇತನಗೊಳಿಸಿದ ಚಿತ್ರಗಳನ್ನು ತೋರಿಸಲಾಗುತ್ತಿದೆ.

ದುಡಿಮೆಯ ಹಣದಲ್ಲಿ 1 ಲಕ್ಷ ರೂ.ಗೂ ಹೆಚ್ಚು ಖರ್ಚು: ವಾಯುವ್ಯ ಸಾರಿಗೆ ಸಂಸ್ಥೆಯ ಚಾಲಕರೊಬ್ಬರು ಬಸ್ಸನ್ನೇ ಕನ್ನಡದ ರಥವನ್ನಾಗಿ ಶೃಂಗರಿಸಿದ್ದಾರೆ. ಇಡೀ ಬಸ್​ನಲ್ಲಿ ಕನ್ನಡದ ಕಂಪನ್ನು ಸೂಸುವ ಭಿತ್ತಿಪತ್ರಗಳು, ಫಲಕಗಳೇ ರಾರಾಜಿಸುತ್ತಿವೆ. ಹುಬ್ಬಳ್ಳಿ ಗ್ರಾಮೀಣ ವಿಭಾಗದ ಒಂದನೇ ಗ್ರಾಮೀಣ ಘಟಕದ ಚಾಲಕ ನಾಗರಾಜ ಬೂಮಣ್ಣವರ್ ತಮ್ಮ ದುಡಿಮೆಯ ಒಂದು ಲಕ್ಷ ರೂ.ಗೂ ಹೆಚ್ಚು ಹಣ ಖರ್ಚು ಮಾಡಿ ಬಸ್‌ನ್ನು ಕನ್ನಡದ ತೇರನ್ನಾಗಿಸಿದ್ದಾರೆ. ಹಲವು ವರ್ಷಗಳಿಂದ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಹೆಚ್ಚಿನ ಮೆರಗು ನೀಡಿದ್ದಾರೆ.

ಹಳದಿ, ಕೆಂಪು ಬಣ್ಣದಿಂದ ‌ಬಸ್ ಕಂಗೊಳಿಸಿದ್ದಲ್ಲದೆ, ಕನ್ನಡ ಬಾವುಟಗಳು ರಾರಾಜಿಸಿದವು. ಕನ್ನಡದ ಪ್ರಮುಖ ಸಾಹಿತಿಗಳ ಭಾವಚಿತ್ರದೊಂದಿಗೆ ಮಾಹಿತಿ, ರಾಜ್ಯದ ಎಲ್ಲಾ ಜಿಲ್ಲೆಗಳ ನಕ್ಷೆ ಹಾಗೂ ಮಾಹಿತಿ. ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ವಿಭಾಗದ ಘಟಕಗಳ ಮಾಹಿತಿ, ಬಸವಾದಿ ಶರಣರ ಹೆಸರುಗಳು, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಿವೆ. ಈ ಬಾರಿ ಮಿನಿ ಗ್ರಂಥಾಲಯ ಮಾಡಿ ಪುಸ್ತಕಗಳನ್ನು ಇರಿಸಿದ್ದು, ವಿಶೇಷವಾಗಿತ್ತು.

ಕನ್ನಡದ ಬಗ್ಗೆ, ಕನ್ನಡದ ಬೆಳವಣಿಗೆಗೆ ಶ್ರಮಿಸಿದ ಧೀಮಂತರು, ಮಹನೀಯರು, ರಾಜವಂಶಸ್ಥರು, ಪ್ರಮುಖ, ಐತಿಹಾಸಿಕ ಸ್ಥಳಗಳ ಮಾಹಿತಿಯೊಂದಿಗೆ ಕನ್ನಡದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಒಂದೊಂದು ವಿಶೇಷ ಶೀರ್ಷಿಕೆಯ ಅಡಿ ಸ್ತಬ್ಧ ಚಿತ್ರವನ್ನು ಮಾಡಲಾಗುತ್ತದೆ. ಈ ವರ್ಷ ಕರ್ನಾಟಕದ ಹೆಮ್ಮೆಯ ಚಿತ್ರದುರ್ಗದ ಕಲ್ಲಿನ ಕೋಟೆಯ ಸ್ತಬ್ದ ಚಿತ್ರವನ್ನು ಮಾಡಲಾಗಿದೆ. ಕೋಟೆಯ ಮಾಹಿತಿಯ ಜೊತೆಗೆ, ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆಯ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯಲ್ಲಿ 500 ಕೋಟಿ ಮಹಿಳೆಯರ ಪ್ರಯಾಣದ ವಿಶ್ವ ದಾಖಲೆಯ ಪ್ರಮಾಣ ಪತ್ರದ ಪ್ರತಿರೂಪ ಅಳವಡಿಸಲಾಗಿದೆ. ರಾಜ್ಯದ ಸಾರಿಗೆ ಸಂಸ್ಥೆಗಳಲ್ಲಿ ಮೊದಲನೇ ಬಾರಿಗೆ ಜಾರಿಗೊಳಿಸಿರುವ ನಗದು ರಹಿತ ಪಾವತಿ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸಾಮಾನ್ಯ ಸಾರಿಗೆ, ವೇಗದೂತ ಸಾರಿಗೆ, ರಾಜಹಂಸ ಸಾರಿಗೆ, ಸ್ಲೀಪರ್ ಸಾರಿಗೆ ಹಾಗೂ ಐಷಾರಾಮಿ ಎ. ಸಿ. ಸಾರಿಗೆಗಳ ಬಸ್​​ಗಳ ಚಿತ್ರಗಳನ್ನು ಪ್ರದರ್ಶಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಚಾಲಕರು, ನಿರ್ವಾಹಕರು, ಇತರೆ ಹಲವಾರು ಸಿಬ್ಬಂದಿ ತಮ್ಮ ಸ್ವಂತ ಹಣ ಖರ್ಚು ಮಾಡಿ ಬಸ್​​ಗಳನ್ನು ಸಿಂಗರಿಸುವ ಮೂಲಕ ಕನ್ನಡ ಅಭಿಮಾನವನ್ನು ಮೆರೆಯುತ್ತಾರೆ. ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದ ಚಾಲಕ ನಾಗರಾಜ ಬೂಮಣ್ಣವರ್ ಹಾಗೂ ನಿರ್ವಾಹಕ ಸೇರಿಕೊಂಡು ಒಂದು ಲಕ್ಷ ರೂ. ಹಣ ಖರ್ಚು ಮಾಡಿ ಕರ್ನಾಟಕದ 31 ಜಿಲ್ಲೆಗಳ ನಕ್ಷೆ ಸಹಿತ ಮಾಹಿತಿ, ಕನ್ನಡದ ಸಾಹಿತಿಗಳ ಕುರಿತ ಮಾಹಿತಿ, ಸಾರಿಗೆ ಸಂಸ್ಥೆಯ ಬೆಳವಣಿಗೆ ಕುರಿತ ಮಾಹಿತಿ ಹಾಗೂ ಹಲವಾರು ವಿಶೇಷ ಪುಸ್ತಕಗಳನ್ನೊಳಗೊಂಡ ಪುಟ್ಟ ಗ್ರಂಥಾಲಯವನ್ನು ಅಳವಡಿಸಿದ್ದಾರೆ. ಇಡೀ ಬಸ್​​ನ್ನು ಕನ್ನಡದ ಮಾಹಿತಿಯ ತೇರನ್ನಾಗಿ ಪರಿವರ್ತಿಸಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Tags: Kannadaಕನ್ನಡ
Previous Post

ಅಕ್ಟೋಬರ್​ನಲ್ಲಿ 1.96 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ

Next Post

ಇಂದು IND vs SA ವಿಶ್ವಕಪ್​ ಫೈನಲ್​ ಕದನ

Next Post
ಇಂದು IND vs SA ವಿಶ್ವಕಪ್​ ಫೈನಲ್​ ಕದನ

ಇಂದು IND vs SA ವಿಶ್ವಕಪ್​ ಫೈನಲ್​ ಕದನ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.