• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಅಕ್ಟೋಬರ್​ನಲ್ಲಿ 1.96 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ

Sambrama Prabha News by Sambrama Prabha News
November 2, 2025
in Latest News, Politics, Special News
0
ಅಕ್ಟೋಬರ್​ನಲ್ಲಿ 1.96 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ

Updated By: Priyalachhi

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳಲ್ಲಿ ಕಡಿತದ ಹೊರತಾಗಿಯೂ ಹಬ್ಬಗಳಲ್ಲಿ ಖರೀದಿ ಭರಾಟೆಯಿಂದಾಗಿ ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ. ಅಕ್ಟೋಬರ್‌ ತಿಂಗಳಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹ ಶೇ. 4.6 ರಷ್ಟು ಹೆಚ್ಚಾಗಿ ಸುಮಾರು 1.96 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಇದು ಹಬ್ಬದ ಋತುವಿನ ಮಾರಾಟದ ಪರಿಣಾಮ ಮತ್ತು ಹೆಚ್ಚಿನ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ.

ಅಡುಗೆ ಸಾಮಗ್ರಿಗಳಿಂದ ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್​​ಗಳವರೆಗೆ ಸುಮಾರು 375 ವಸ್ತುಗಳ ಮೇಲಿನ ಜಿಎಸ್​ಟಿ ದರವನ್ನು ಕಡಿತಗೊಳಿಸಿ ಕೇಂದ್ರ ಸರ್ಕಾರವು ಗ್ರಾಹಕರಿಗೆ ನವರಾತ್ರಿ ಉಡುಗೊರೆ ನೀಡಿತ್ತು. ನೂತನ ಜಿಎಸ್​ಟಿ ದರವು ನವರಾತ್ರಿಯ ಮೊದಲ ದಿನ ಸೆ.22 ರಂದು ಜಾರಿಗೆ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ದೀಪಾವಳಿಗೆ ಮುಂಚಿತವಾಗಿ ಜಿಎಸ್‌ಟಿ ದರಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಇದರಿಂದ ಗ್ರಾಹಕರು ಖರೀದಿ ಮಾಡದೇ ಜಿಎಸ್​ಟಿ ಕಡಿತ ಜಾರಿಗಾಗಿ ಕಾಯುತ್ತಿದ್ದರು. ನವರಾತ್ರಿ ದಿನ ಪರಿಷ್ಕೃತ ದರ ಜಾರಿಯಾದ ಬಳಿಕ ಖರೀದಿಗೆ ಮುಂದಾದರು.

ಶನಿವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಸದ್ಯ ಅಕ್ಟೋಬರ್‌ ತಿಂಗಳಲ್ಲಿ ಒಟ್ಟು 1.96 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದೆ. ಇನ್ನು ಕಳೆದ 2024ರ ಅಕ್ಟೋಬರ್ ತಿಂಗಳಲ್ಲಿ 1.87 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹವಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ ಶೇ. 4.6 ರಷ್ಟು ಹೆಚ್ಚು ತೆರಿಗೆ ಖಜಾನೆ ಸೇರಿದೆ.

ಈ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ, ಕ್ರಮವಾಗಿ 1.86 ಲಕ್ಷ ಕೋಟಿ ರೂ ಮತ್ತು 1.89 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ. ಅಕ್ಟೋಬರ್‌ನಲ್ಲಿ ವರ್ಷದಿಂದ ವರ್ಷಕ್ಕೆ ಜಿಎಸ್‌ಟಿ ಸಂಗ್ರಹದಲ್ಲಿನ ಬೆಳವಣಿಗೆಯ ದರವು ಶೇ. 4.6 ರಷ್ಟಿದೆ.

ಸ್ಥಳೀಯ ಮಾರಾಟ ಪ್ರತಿಬಿಂಬಿಸುವ ಒಟ್ಟು ದೇಶೀಯ ಆದಾಯವು ಶೇ.2 ರಷ್ಟು ಹೆಚ್ಚಾಗಿ 1.45 ಲಕ್ಷ ಕೋಟಿ ರೂ.ಗೆ ತಲುಪಿದೆ. ಇನ್ನು ಆಮದುಗಳಿಂದ ಅಕ್ಟೋಬರ್‌ನಲ್ಲಿ ಶೇ.13 ರಷ್ಟು ತೆರಿಗೆ ಹೆಚ್ಚಾಗಿ 50,884 ಕೋಟಿ ರೂ.ಗೆ ತಲುಪಿದೆ.

ಹಾಗೆಯೇ ಜಿಎಸ್‌ಟಿ ಮರುಪಾವತಿಗಳು ಸಹ ವರ್ಷದಿಂದ ವರ್ಷಕ್ಕೆ ಶೇ. 39.6 ರಷ್ಟು ಹೆಚ್ಚಾಗಿದ್ದು, 26,934 ಕೋಟಿ ರೂಗೆ ತಲುಪಿದೆ. 2025ರ ಅಕ್ಟೋಬರ್ ತಿಂಗಳಲ್ಲಿ ನಿವ್ವಳ ಜಿಎಸ್​ಟಿ ಆದಾಯವು 1.69 ಲಕ್ಷ ಕೋಟಿ ರೂ. ಆಗಿದ್ದು, ಇದು ವರ್ಷಕ್ಕೆ ಶೇ.0.2 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

Tags: GST
Previous Post

ಗಡುವು ಮುಗಿದರೂ ರಸ್ತೆ ಗುಂಡಿಗಿಲ್ಲ ಮುಕ್ತಿ

Next Post

ಬಸ್​ಗಳನ್ನೇ ಕನ್ನಡ ತೇರನ್ನಾಗಿ ಸಿಂಗರಿಸಿದ ಸಂಸ್ಥೆ

Next Post
ಬಸ್​ಗಳನ್ನೇ ಕನ್ನಡ ತೇರನ್ನಾಗಿ ಸಿಂಗರಿಸಿದ ಸಂಸ್ಥೆ

ಬಸ್​ಗಳನ್ನೇ ಕನ್ನಡ ತೇರನ್ನಾಗಿ ಸಿಂಗರಿಸಿದ ಸಂಸ್ಥೆ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.