Author: Sambrama Prabha News
'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ನಾಯಕತ್ವ ಬದಲಾವಣೆ ವದಂತಿಗಳ ನಡುವೆ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಮೇ 15 ಶುಕ್ರವಾರ ತಮ್ಮ 64ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದ ಹೊರಗೆ ಅರ್ಚಕರು ವೇದ ಮಂತ್ರಗಳನ್ನು ಘೋಷಿಸಿ ಪೂಜೆ ಸಲ್ಲಿಸಿದರು. ಅವರ ಆಸೆ-ಆಕಾಂಕ್ಷೆಗಳು ಶೀಘ್ರವೇ ನೆರವೇರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ನನಗೆ ಇಂದು ಹುಟ್ಟುಹಬ್ಬ ಆಚರಿಸುವ ಇಚ್ಛೆಯಿರಲಿಲ್ಲ. ತಪ್ಪಿಸಲು ಬಯಸಿದ್ದೆ. ಅದಕ್ಕಾಗಿಯೇ ನಿನ್ನೆ ಮುಂಬೈನಲ್ಲಿ ಊರಿನ ಹೊರಗಿದ್ದೆ. ಇಂದೂ ಇದನ್ನು ತಪ್ಪಿಸಲು ಪ್ರಯತ್ನಿಸಿದ್ದೆ. ಆದರೆ ರಾತ್ರಿಯಿಂದಲೇ ಕಾರ್ಯಕರ್ತರು ಕಾಯುತ್ತಿದ್ದರು. ನನ್ನ ಸ್ನೇಹಿತರು, ನಾಯಕರು, ಶಾಸಕರು, ಸಚಿವರು – ಎಲ್ಲರೂ ಕಾಯುತ್ತಿದ್ದರು. ಅವರ ಪ್ರೀತಿ, ವಿಶ್ವಾಸ, ಶುಭಾಶಯಗಳು ಮತ್ತು ಆಶೀರ್ವಾದಗಳನ್ನು ನಾನು ನಿರಾಕರಿಸಲು ಸಾಧ್ಯವಾಗಲಿಲ್ಲ ಎಂದರು. ನನ್ನ ಪೋಸ್ಟರ್‌ಗಳನ್ನು ಹಾಕಬಾರದೆಂದು ನನ್ನ ಬೆಂಬಲಿಗರಿಗೆ ಸೂಚಿಸಿದ್ದೇನೆ ಹಾಗೂ ಅವನ್ನು ತೆರವುಗೊಳಿಸುವಂತೆ ಪಾಲಿಕೆಗೆ ತಿಳಿಸಿದ್ದೇನೆ ಎಂದರು. 1962ರಲ್ಲಿ ಕನಕಪುರದಲ್ಲಿ ಜನಿಸಿದ ಡಿ ಕೆ ಶಿವಕುಮಾರ್ 1989ರಿಂದ…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ನವದೆಹಲಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ನಿರಾಕರಿಸಿದ್ದು, ವಿಚಾರಣಾ ನ್ಯಾಯಾಲಯವು ಒಂದು ವರ್ಷದೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಿ ಪ್ರಕರಣವನ್ನು ತೀರ್ಮಾನಿಸಬೇಕೆಂದು ಆದೇಶ ನೀಡಿದೆ. ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ನೇತೃತ್ವದ ಇಬ್ಬರು ನ್ಯಾಯಮೂರ್ತಿಗಳ ಪೀಠ ಈ ಆದೇಶ ನೀಡಿದ್ದು, ಇಂದಿನಿಂದಲೇ ವಿಚಾರಣೆಯನ್ನು ಆದ್ಯತೆಯ ಮೇರೆಗೆ ನಡೆಸಬೇಕು ಎಂದು ಹೇಳಿದೆ. ಜೈಲಿನಲ್ಲಿ ಇತರ ಕೈದಿಗಳಿಗೆ ನೀಡಲಾಗುವಂತೆ ದರ್ಶನ್ ಅವರಿಗೆ ಸಹ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಒಂದು ವರ್ಷದವರೆಗೆ ಅರ್ಜಿ ಸಲ್ಲಿಕೆ ಇಲ್ಲ ಮುಂದಿನ ಒಂದು ವರ್ಷದವರೆಗೆ ದರ್ಶನ್ ಯಾವುದೇ ಜಾಮೀನು ಅರ್ಜಿ ಸಲ್ಲಿಸಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ. ಆದರೆ ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ, ಆ ಬಳಿಕ ಅವರಿಗೆ ಜಾಮೀನು ಪರಿಗಣಿಸಬಹುದು ಎಂದು ಹೇಳಿದೆ. ಹಿಂದಿನ ವಿಚಾರಣೆಗಳಲ್ಲಿ, ಜೈಲಿನಲ್ಲಿನ ಅಕ್ರಮಗಳು ಹಾಗೂ ಸಹ ಕೈದಿಗಳಿಂದ…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿದ್ದಾಗ ನೀತಿ ನಿರೂಪಣೆಗಳನ್ನು ಮಾಡುತ್ತಿರಲಿಲ್ಲವೇ, ಜನರು ಚೆನ್ನಾಗಿರಬೇಕೆಂದು ಕಾನೂನು, ನೀತಿಗಳನ್ನು ಅವರು ಮಾಡಿದ್ದಾರಾ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಪ್ರಚೋದನೆ ಮಾಡುವ ರೀತಿಯಲ್ಲಿ ಸರ್ಕಾರ ನೀತಿ, ಕಾನೂನುಗಳನ್ನು ತರಬಾರದು. ಕರ್ನಾಟಕದಲ್ಲಿ ಹಿಜಾಬ್ ಹಿಂದಿನಿಂದಲೂ ಇದ್ದ ಧಾರ್ಮಿಕ ಪದ್ಧತಿ, ಹೊಸದಾಗಿ ನಾವು ನೀತಿ ತಂದಿಲ್ಲ ಎಂದರು. ಬಿಜೆಪಿಯವರೇ ಮಧ್ಯದಲ್ಲಿ ಹಿಜಾಬ್ ಧರಿಸಬಾರದು ಎಂದು ಕಾನೂನು ತಂದರು. ಎಷ್ಟೋ ವರ್ಷಗಳಿಂದ ಇದ್ಧ ಪದ್ಧತಿಗೆ ತಡೆ ತಂದಿದ್ದೇ ಅವರು. ಜನಿವಾರ ಹಾಕಿ ಎಂದು ನಾವು ಹೊಸದಾಗಿ ಹೇಳುತ್ತಿಲ್ಲ, ಈಗಾಗಲೇ ಧರಿಸುವವರಿಗೆ ಬೇಡ ಅಂದಿಲ್ಲ, ಬಿಜೆಪಿಯವರು ಏನೇ ಟೀಕೆ ಟಿಪ್ಪಣಿ ಮಾಡಲಿ ಎಂದರು.
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೆಂಗಳೂರು: ಕರ್ನಾಟಕದಲ್ಲಿ ಜೂನ್ 20 ರಂದು ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಲಿದ್ದು, ಅಕ್ಟೋಬರ್ 7, 2026 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ವಿವಿಧ ರಾಜ್ಯಗಳಲ್ಲಿ ಮೂರನೇ ಹಂತದ SIR ಪ್ರಕ್ರಿಯೆ ಆರಂಭವನ್ನು ಭಾರತೀಯ ಚುನಾವಣಾ ಆಯೋಗ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯುಕ್ತರು ಈ ಮಾಹಿತಿ ನೀಡಿದ್ದಾರೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೊರತುಪಡಿಸಿ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತೀಯ ಚುನಾವಣಾ ಆಯೋಗ SIR ಘೋಷಿಸಿದೆ. ಅಕ್ಟೋಬರ್ 1 ರಂದು SIR ಗೆ ನಿಗದಿಯಾಗಿರುವ ಅರ್ಹತಾ ದಿನಾಂಕಕ್ಕಾಗಿ ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿಯೊಂದಿಗೆ ಕರ್ನಾಟಕವನ್ನು ಸೇರಿಸಲಾಗಿದೆ. ಆಗಸ್ಟ್ 5 ರಂದು ಕರಡು ಪಟ್ಟಿ ಪ್ರಕಟ: ಇಲ್ಲಿಯವರೆಗೆ ಶೇಕಡಾ 86.37 ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ ಮತ್ತು ಆಗಸ್ಟ್ 5, 2026 ರಂದು SIR ಕರಡು…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೆಂಗಳೂರು: ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಕಂಗಾಲಾಗಿರುವ ಸಾಮಾನ್ಯ ಜನರಿಗೆ ಖಾಸಗಿ ಬಸ್ ಮಾಲೀಕರು ಮತ್ತೊಂದು ಬೆರೆ ಏರಿಕೆ ಶಾಕ್ ಕೊಟ್ಟಿದ್ದಾರೆ. ಇಂದು ಬೆಳಗ್ಗೆಯಿಂದ ಪೆಟ್ರೋಲ್, ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ 3 ರೂ. ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಖಾಸಗಿ ಬಸ್ ಪ್ರಯಾಣ ದರ ಏರಿಕೆಗೆ ತೀರ್ಮಾನಿಸಲಾಗಿದೆ. ಶೇ.20 ರಿಂದ ಶೇ. 30ರಷ್ಟು ಟಿಕೆಟ್ ದರ ಏರಿಕೆ ಮಾಡುವ ಬಗ್ಗೆ ಖಾಸಗಿ ಬಸ್ ಮಾಲಕರು ಮಾಹಿತಿ ನೀಡಿದ್ದಾರೆ. ಪ್ರತಿದಿನ ಬಸ್ ಒಂದಕ್ಕೆ ಕನಿಷ್ಠ 150 ಲೀಟರ್ ಡಿಸೇಲ್ ಹಾಕಿಸುತ್ತೇವೆ. ಇಂಧನ ಬೆಲೆಯಲ್ಲಿ 3 ರೂ. ಹೆಚ್ಚಳವಾಗಿರುವ ಕಾರಣ ನಿತ್ಯ 450 ರೂಪಾಯಿ ಹೆಚ್ಚುವರಿಯಾಗಿ ನಮಗೆ ಹೊರೆಯಾಗಲಿದೆ. ಹೀಗಾಗಿ ಟಿಕೆಟ್ ದರ ಏರಿಸೋದು ನಮಗೂ ಅನಿವಾರ್ಯವಾಗಿದೆ. ಇದರ ಪರಿಣಾಮ ಪ್ರಯಾಣಿಕರ ಮೇಲೆ ಉಂಟಾಗಲಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಆದಾಯ 10 ವರ್ಷಗಳ ಹಿಂದೆ ಏನೂ ಇರಲಿಲ್ಲ. ಬಿಜೆಪಿಯವರು ಲಕ್ಷಾಂತರ ಕೋಟಿ ರೂಪಾಯಿ ಕೊಟ್ಟು ಇಡೀ ದೇಶವನ್ನು ಅದಾನಿ, ಅಂಬಾನಿಗೆ ಮಾರಾಟ ಮಾಡಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ನ್ನು ಟೀಕಿಸುವ ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ಪರಿವಾರ ಈ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ, ಜೀವ ಬಲಿದಾನ ಮಾಡಿದ್ದಾರೆ. ಮೋದಿಯವರು ಧರಿಸುವ ಡ್ರೆಸ್ ಎಷ್ಟು ಬೆಲೆಬಾಳುತ್ತದೆ, ಅವರ ವಿದೇಶ ಪ್ರಯಾಣದ ಖರ್ಚನ್ನು ದೇಶದ ಜನತೆ ಮುಂದಿಡಲಿ ಎಂದರು. ಸುಳ್ಳು, ಮೋಸ, ವಂಚನೆ ಬಿಜೆಪಿಯರ ಅಭ್ಯಾಸ, ವಿದೇಶದಿಂದ ಕಪ್ಪು ಹಣ ತಂದರಾ, ರೈತರ ಆಧಾಯ ದುಪ್ಪಟ್ಟಾಯಿತಾ, ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದಾರಾ, ಎಲ್ಲಾ ಬಡವರಿಗೆ ಮನೆ ಕೊಡುತ್ತೇವೆ ಎಂದು ಭರವಸೆ ಕೊಟ್ಟರೇ ಹೊರತು ಅದು ನಿಜವಾಗಲಿಲ್ಲ ಎಂದರು. ಈಗ ಪೆಟ್ರೋಲ್-ಡೀಸೆಲ್ ದರ ಹೆಚ್ಚಿಸಿದ್ದಾರೆ, ಯುದ್ಧದ ಕಷ್ಟದ ಪರಿಸ್ಥಿತಿಗೆ ಏನು ಸಿದ್ಧತೆ…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಭಾರತಕ್ಕೆ ಬರುತ್ತಿದ್ದ ಎರಡು ದ್ರವೀಕೃತ ಪೆಟ್ರೋಲಿಯಂ ಅನಿಲ(LPG) ಹೊತ್ತ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿವೆ. ಆದರೆ ಭಾರತದ ಧ್ವಜ ಹೊಂದಿದ್ದ ಮತ್ತೊಂದು ಹಡಗು ಆಯಕಟ್ಟಿನ ಹಡಗು ಕಾರಿಡಾರ್ ಬಳಿ ಡಿಕ್ಕಿ ಹೊಡೆದು ಮುಳುಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಎಲ್‌ಪಿಜಿ ಟ್ಯಾಂಕರ್ ಸಿಮಿ, ಮೇ 13 ರಂದು ಜಲಸಂಧಿಯ ಮೂಲಕ ಸಾಗಿತು. ಅಲ್ಲದೆ ಎನ್‌ವಿ ಸನ್‌ಶೈನ್ ಗುರುವಾರ ಜಲಮಾರ್ಗವನ್ನು ಸುರಕ್ಷಿತವಾಗಿ ದಾಟಿತು. ಇದರೊಂದಿಗೆ ಎರಡು ತಿಂಗಳ ಹಿಂದೆ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಂತರ ಟೆಹ್ರಾನ್ ಪ್ರತೀಕಾರ ತೀರಿಸಿಕೊಳ್ಳಲು ಹಾರ್ಮುಜ್ ಮುಚ್ಚಲ್ಪಟ್ಟ ನಂತರ ಆ ಜಲ ಮಾರ್ಗವನ್ನು ದಾಟಿದ ಒಟ್ಟು ಭಾರತೀಯ ಹಡಗುಗಳ ಸಂಖ್ಯೆ 13 ಕ್ಕೆ ತಲುಪಿದೆ. ಪ್ರತ್ಯೇಕ ಘಟನೆಯಲ್ಲಿ, ಸೊಮಾಲಿಯಾದಿಂದ ಯುಎಇಯ ಶಾರ್ಜಾಗೆ ಪ್ರಯಾಣಿಸುತ್ತಿದ್ದ ಭಾರತೀಯ ಧೋವ್ ಅಥವಾ ಯಾಂತ್ರಿಕೃತ ನೌಕಾಯಾನ ಹಡಗು(MSV) ಹಾಜಿ ಅಲಿ ಬುಧವಾರ ಬೆಳಗ್ಗೆ ಒಮಾನಿ ನೀರಿನಲ್ಲಿ ದಾಳಿಗೆ ಒಳಗಾಗಿದೆ. ದಾಳಿ…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ನವದೆಹಲಿ: ಆಘಾತಕಾರಿ ಬೆಳವಣಿಗೆಯಲ್ಲಿ ಭಾರತದಾದ್ಯಂತ ಸುಮಾರು 12 ಲಕ್ಷಕ್ಕಿಂತ ಹೆಚ್ಚು ಔಷಧ ವ್ಯಾಪಾರಿಗಳು ಮತ್ತು ಔಷಧ ವಿತರಕರು ಮೇ 20ರಂದು ದೇಶವ್ಯಾಪಿ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ. ಈ ಮುಷ್ಕರಕ್ಕೆ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಕರೆ ನೀಡಿದ್ದು, ಈ ಒಂದು ದಿನದ ಬಂದ್‌ನಿಂದ ಅನೇಕ ರಾಜ್ಯಗಳಲ್ಲಿ ಸಾಮಾನ್ಯ ಔಷಧ ಖರೀದಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಸಣ್ಣ ಪಟ್ಟಣಗಳು ಮತ್ತು ಅರೆನಗರ ಪ್ರದೇಶಗಳಲ್ಲಿ ಸ್ಥಳೀಯ ಮೆಡಿಕಲ್ ಅಂಗಡಿಗಳೇ ಮುಖ್ಯ ಔಷಧ ಮೂಲವಾಗಿರುವುದರಿಂದ ಪರಿಣಾಮ ಹೆಚ್ಚು ಕಾಣಿಸಬಹುದು ಎನ್ನಲಾಗಿದೆ. ಆನ್ಲೈನ್ ಪ್ಲಾಟ್ ಫಾರ್ಮ್ ಗಳ ವಿರುದ್ಧ ಆಕ್ರೋಶ AIOCD (All India Organisation of Chemists and Druggists) ಪ್ರಕಾರ, ಸುಮಾರು 12.4 ಲಕ್ಷ ಔಷಧ ವ್ಯಾಪಾರಿಗಳು ಮತ್ತು ವಿತರಕರು ಆನ್‌ಲೈನ್ ಫಾರ್ಮಸಿ ವೇದಿಕೆಗಳ ಹೆಚ್ಚುತ್ತಿರುವ ಪ್ರಭಾವ ಮತ್ತು “ನಿಯಂತ್ರಣವಿಲ್ಲದ ಕಾರ್ಯಾಚರಣೆ” ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಸಂಘಟನೆಯು ಕೆಲವು ಆನ್‌ಲೈನ್ ಔಷಧ ವಿತರಣಾ…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರಿಗೆ ಆಡಳಿತ ಅನುಭವದ ಕೊರತೆಯಿದೆ. ಹಣಕಾಸು ನಿರ್ವಹಣೆ ಬಗ್ಗೆ ಯೋಚನೆ ಮಾಡದೆ ಅವರು ಏಕಾಏಕಿ 700ಕ್ಕೂ ಹೆಚ್ಚು ಮದ್ಯದಂಗಡಿಗಳನ್ನು ಮುಚ್ಚುವಂತೆ ಆತುರದ ನಿರ್ಧಾರ ತೆಗೆದುಕೊಂಡು ಆದೇಶಿಸಿದ್ದಾರೆ ಎಂದು ಶಾಸಕ ಹಿರಿಯ ನಾಯಕ ಕೆ ಎನ್ ರಾಜಣ್ಣ ಟೀಕಿಸಿದ್ದಾರೆ. ಮಧುಗಿರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯದಂಗಡಿಗಳಿಂದ ಹೆಚ್ಚಿನ ಆದಾಯ ಬರುತ್ತದೆ, ಆದಾಯದ ಹಾದಿ ಮುಚ್ಚಿಕೊಂಡರೆ ಫ್ರೀ ಬೀಸ್ ನೀಡಲು ಸಾಧ್ಯವೇ, ವಿಜಯ್ ಮುಂದಿನ ದಿನಗಳಲ್ಲಿ ಎಲ್ಲವನ್ನೂ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂದರು. ರಾಹುಲ್ ಗಾಂಧಿಯವರು ಹೋಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರು ಹೋದರೆ ಎಲ್ಲಾ ಕಾಂಗ್ರೆಸ್ ನಾಯಕರು ಭಾಗಿಯಾದಂತೆ, ವಿಜಯ್ ಅವರಿಗೆ ಕಾಂಗ್ರೆಸ್ ಪಕ್ಷ ಒಂದೇ ಅಲ್ಲ, ಬೇರೆ ಪಕ್ಷಗಳೂ ಬೆಂಬಲ ನೀಡಿದ್ದಾರೆ ಎಂದರು. ವಿಜಯ್ ಅವರು ಹೋಗುವ ಹಾದಿ ಬಹಳ ಮುಳ್ಳಿನದ್ದಾಗಿದೆ, ಕರ್ನಾಟಕದಲ್ಲಿ ಉಚಿತ ಭಾಗ್ಯಗಳನ್ನು ಕೊಟ್ಟು ಸರ್ಕಾರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡುತ್ತಿದ್ದೇವೆ, ಆ ತರ ತಮಿಳು ನಾಡು ಸರ್ಕಾರದಲ್ಲಿ…
ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಆಡಳಿತ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ತುಮಕೂರಿನಲ್ಲಿ ಮೇ 20 ರಂದು ನಡೆಸುವ ಬೃಹತ್ ಸಮಾವೇಶ ಆಯೋಜಿಸಿದೆ. ಇದು ಕೇವಲ ಸಾಧನಾ ಸಮಾವೇಶವಾಗದೆ ಪರಿವರ್ತನೆಯ ಹಂತವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಪಾಳಯಕ್ಕೆ ಈ ಸಮಾವೇಶವು ಒಂದು ಪ್ರಮುಖ ಸವಾಲಾಗಲಿದೆ, ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಮತ್ತು ಸಚಿವ ಸಂಪುಟ ಪುನರ್ರಚನೆಗಾಗಿ ಲಾಬಿ ನಡೆಸುತ್ತಿದ್ದಾರೆ. ಸರ್ಕಾರದ ಸಾಧನೆಗಳು ಪೂರ್ಣವಾಗಿ ಪ್ರದರ್ಶನಗೊಳ್ಳಲಿವೆ, ಇದು ಯಾವುದೇ ಆಡಳಿತ ವಿರೋಧಿ ಅಲೆಯನ್ನುತಡೆಯುವ ಇಮೇಜ್ ಬದಲಾವಣೆಯ ಪ್ರಯತ್ನವಾಗಿದೆ. ತಮ್ಮ ತವರು ಜಿಲ್ಲೆಯಲ್ಲಿ ಈ ರ್‍ಯಾಲಿಯನ್ನು ಆಯೋಜಿಸಲಾಗುತ್ತಿದ್ದು, ದಲಿತ ಕೋಟಾದಡಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನೀಡುತ್ತಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿದ್ದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹಿಂದಿಕ್ಕುವ ಪ್ರಯತ್ನವಾಗಿದೆ. 2023 ರಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಮಾಡಿಕೊಂಡ ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಮುಖ್ಯಮಂತ್ರಿಯಾಗುವ ಭರವಸೆಯನ್ನು…
Subscribe to Updates
Get the latest creative news from FooBar about art, design and business.