Author: Sambrama Prabha News

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Updated By: Priyalachhi ಇಂದಿನ ಪಂಚಾಂಗ ದಿನಾಂಕ : 02-02-2026 ವಾರ : ಸೋಮವಾರ ಸಂವತ್ಸರ : ವಿಶ್ವವಸು ಆಯನ : ಉತ್ತರಾಯಣ ಪಕ್ಷ : ಕೃಷ್ಣ ತಿಥಿ : ಪ್ರತಿಪದಾ ನಕ್ಷತ್ರ : ಆಶ್ಲೇಷ ಸೂರ್ಯೋದಯ : ಮುಂಜಾನೆ 6:45 ಗಂಟೆಗೆ ಅಮೃತ ಕಾಲ : ಮಧ್ಯಾಹ್ನ 01:58 ರಿಂದ 03:25ರವರೆಗೆ ದುರ್ಮುಹೂರ್ತ : ಮಧ್ಯಾಹ್ನ 01:9 ರಿಂದ 01:57 ಮತ್ತು 03:33 ರಿಂದ 04:21ರವರೆಗೆ ರಾಹುಕಾಲ : ಬೆಳಗ್ಗೆ 08:11 ರಿಂದ 09:38ರವರೆಗೆ ಸೂರ್ಯಾಸ್ತ : ಸಂಜೆ 06:18ಕ್ಕೆ. ಮೇಷ: ಪೌಷ್ಠಿಕ ಮತ್ತು ಆರೋಗ್ಯಕರ ಆಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮಗಳು ನಿಮಗೆ ಅನುಕೂಲಕರ ಮತ್ತು ಅದನ್ನು ನೀವು ಒಂದು ದಿನ ಅರಿಯುತ್ತೀರಿ. ನೀವು ಹೊಸ ಸ್ಥಳ ಅಥವಾ ಹೊಸ ತಿನಿಸಿನ ಅನ್ವೇಷಣೆಯಲ್ಲಿರಬಹುದು. ನೀವು ನಿರ್ಲಕ್ಷ್ಯ ಮಾಡುತ್ತಿದ್ದ ಮಿತ್ರರೊಂದಿಗೆ ಕೊಂಚ ಸಮಯ ಕಳೆಯುವುದು ಅನುಕೂಲಕರವಾಗುತ್ತದೆ. ವೃಷಭ: ನಿಮ್ಮ ಮನಸ್ಸಿನಲ್ಲಿ ವಿರುದ್ಧ ಲಿಂಗಿಯಾದ ನಿಮ್ಮ ಮಿತ್ರರು. ಪ್ರೀತಿಯಲ್ಲಿರುವ ಭಾವನೆ ನಿಮ್ಮ ಮನೆಬಾಗಿಲನ್ನು ತಟ್ಟುತ್ತದೆ. ವಿಶೇಷ ವ್ಯಕ್ತಿಯೊಂದಿಗೆ ಪ್ರಣಯದ ಪಕ್ಷಿಯಾಗುವ ಅವಕಾಶ ದೊರೆತರೆ ಅದನ್ನು ಬಳಸಿಕೊಳ್ಳಿ. ನೀವು ನಿರೀಕ್ಷಿಸಿದ್ದಕ್ಕಿಂತ ಮುಂಚೆಯೇ ವಿವಾಹದ…

Read More

Updated By: Priyalachhi ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಇಂದು ಮಂಡಿಸಿದರು. ಈ ಬಾರಿಯ ಆಯವ್ಯಯದಂತೆ ಕೇಂದ್ರ ಸರ್ಕಾರಕ್ಕೆ ಯಾವ ಮೂಲದಿಂದ ಆದಾಯ ಬರುತ್ತದೆ ಮತ್ತು ಹೇಗೆ ಖರ್ಚಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ. ಯಾವ ಮೂಲದಿಂದ ಸರ್ಕಾರಕ್ಕೆ ಆದಾಯ?: ಸರ್ಕಾರದ ಖಜಾನೆಗೆ ಬರುವ ಪ್ರತಿ ರೂಪಾಯಿಯಲ್ಲಿ 64 ಪೈಸೆಯು ನೇರ ಮತ್ತು ಪರೋಕ್ಷ ತೆರಿಗೆಗಳಿಂದಲೇ ಬರುತ್ತದೆ ಎಂದು ಕೇಂದ್ರ ಬಜೆಟ್ 2026-27 ದಾಖಲೆಗಳು ತಿಳಿಸಿವೆ. ಇದೇ ಸರ್ಕಾರಕ್ಕೆ ಬಹುದೊಡ್ಡ ಆದಾಯದ ಮೂಲವಾಗಿದೆ. ಸರ್ಕಾರ ನೀಡಿದ ಸಾಲಗಳಿಗೆ ಬರುವ ಬಡ್ಡಿಯಿಂದ ಸುಮಾರು 24 ಪೈಸೆ, ಹೂಡಿಕೆಯಂತಹ ತೆರಿಗೆಯೇತರ ಆದಾಯದಿಂದ 10 ಪೈಸೆ, ಸಾಲವಲ್ಲದ ಬಂಡವಾಳ ರಶೀದಿಗಳಿಂದ 2 ಪೈಸೆ, ಆದಾಯ ತೆರಿಗೆಯಿಂದ 21 ಪೈಸೆ, ಕಾರ್ಪೊರೇಷನ್ ತೆರಿಗೆಯಿಂದ 18 ಪೈಸೆ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಿಂದ ಪ್ರತಿ ರೂಪಾಯಿಗೆ 15 ಪೈಸೆ ಬರುತ್ತದೆ ಎಂದು ಬಜೆಟ್ ದಾಖಲೆಗಳಲ್ಲಿ ತೋರಿಸಲಾಗಿದೆ. ಇದಲ್ಲದೆ, ಸರ್ಕಾರವು ಪ್ರತಿ…

Read More

Updated By: Priyalachhi 2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರೋಗ್ಯ ಕ್ಷೇತ್ರಕ್ಕೆ ಗಮನಾರ್ಹ ಆದ್ಯತೆ ನೀಡಿದ್ದಾರೆ. ವೈದ್ಯರು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದಾರೆ. ಬಜೆಟ್​​ನಲ್ಲಿ ಇರುವ ಪ್ರಮುಖ ಅಂಶಗಳು ಹೀಗಿವೆ. ಅಲೈಡ್ ಹೆಲ್ತ್ ಪ್ರೊಫೆಷನಲ್ (AHP) ಸಂಸ್ಥೆಗಳ ವಿಸ್ತರಣೆ ಮತ್ತು ಮೇಲ್ದರ್ಜೆಗೇರಿಸುವಿಕೆ ಆಪ್ಟೋಮೆಟ್ರಿ, ರೇಡಿಯಾಲಜಿ, ಅರಿವಳಿಕೆ, ಒಟಿ ತಂತ್ರಜ್ಞಾನ, ಅನ್ವಯಿಕ ಮನೋವಿಜ್ಞಾನ ಮತ್ತು ನಡವಳಿಕೆಯ ಆರೋಗ್ಯ ಸೇರಿದಂತೆ 10 ವಿಭಾಗಗಳ ವ್ಯಾಪ್ತಿ ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಎಹೆಚ್​​ಪಿಗಳ ಸೇರ್ಪಡೆ ಇದರ ಜೊತೆಗೆ, ವೃದ್ಧಾಪ್ಯದ ಮತ್ತು ಸಂಬಂಧಿತ ಆರೈಕೆಗಾಗಿ ಮುಂದಿನ ಒಂದು ವರ್ಷದಲ್ಲಿ 1.5 ಲಕ್ಷ ಆರೈಕೆದಾರರಿಗೆ ತರಬೇತಿ ನೀಡಲಾಗುವುದು. ಈ ಆರೈಕೆದಾರರು ಬಹು ವಿಧಗಳಲ್ಲಿ ಕಾರ್ಯನಿವಹಿಸಲಿದ್ದಾರೆ. ಅವರಿಗೆ ಆರೈಕೆಯಲ್ಲಿ ಮಾತ್ರವಲ್ಲ, ಯೋಗಕ್ಷೇಮ, ಯೋಗ ಮತ್ತು ವೈದ್ಯಕೀಯ ಮತ್ತು ಸಹಾಯಕ ಸಾಧನಗಳನ್ನು ಬಳಸಲು ತರಬೇತಿ ನೀಡಲಾಗುವುದು. ಕೇಂದ್ರ ಹಣಕಾಸು ಸಚಿವರ ಭಾಷಣದಲ್ಲಿನ ಅತ್ಯಂತ ಮಹತ್ವದ ವಿಷಯಗಳಲ್ಲಿ ತಂತ್ರಜ್ಞಾನ ಅಥವಾ ರಫ್ತು. ದೇಶದ…

Read More

Updated By: Priyalachhi ನವದೆಹಲಿ: 16ನೇ ಹಣಕಾಸು ಆಯೋಗಕ್ಕೆ ಒಪ್ಪಿಗೆ ನೀಡಿರುವ ಕೇಂದ್ರ ಸರ್ಕಾರ, 2026–27ನೇ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ 1.4 ಲಕ್ಷ ರೂ.ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ರಾಜ್ಯಗಳಿಗೆ ಕೇಂದ್ರದ ಹಣಕಾಸು ಬೆಂಬಲ ಮುಂದುವರಿದಿರುವುದನ್ನು ಸ್ಪಷ್ಟಪಡಿಸಿದೆ. ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಹಣಕಾಸು ಆಯೋಗದ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದ್ದು, ರಾಜ್ಯಗಳಿಗೆ ಒಟ್ಟು 1.4 ಲಕ್ಷ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ 16ನೇ ಹಣಕಾಸು ಆಯೋಗವು ತನ್ನ ಸಮಗ್ರ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿತ್ತು. ಆಯೋಗವು ನೀಡಿದ್ದ ಸಲಹೆ ಮತ್ತು ಶಿಫಾರಸುಗಳನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಅವುಗಳನ್ನು ಅಧಿಕೃತವಾಗಿ ಅಂಗೀಕರಿಸಿದೆ. ಇದರ ಅನ್ವಯ, ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ನೆರವು ಸಿಗಲಿದೆ. ಸಚಿವರ ಘೋಷಣೆಯಂತೆ ಈ 1.4 ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು 2026-27ನೇ ಆರ್ಥಿಕ ವರ್ಷದಲ್ಲಿ ರಾಜ್ಯಗಳಿಗೆ ಹಸ್ತಾಂತರವಾಲಗಿದೆ. ಇದು ರಾಜ್ಯ ಸರ್ಕಾರಗಳು…

Read More

Updated By: Priyalachhi ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಹೇಳಿದ್ದಾರೆ. ಆದಾಗ್ಯೂ, ನಾನಿನ್ನೂ ಈ ಬಜೆಟ್ ಅನ್ನು ವಿವರವಾಗಿ ಪರಿಶೀಲಿಸಬೇಕಾಗಿದೆ ಎಂದು ಹೇಳಿದರು. ‘ಕೇಂದ್ರ ಬಜೆಟ್‌ನಿಂದ ನಮ್ಮ ರಾಜ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ನಾನು ಅದನ್ನು ಗಮನಿಸುತ್ತಿದ್ದೆ. ಅವರು ಈಗ ಮಹಾತ್ಮ ಗಾಂಧಿಯವರ ಹೆಸರನ್ನು ಒಂದು ಕಾರ್ಯಕ್ರಮಕ್ಕೆ ಇಟ್ಟಿದ್ದಾರೆ (ಗಾಂಧಿಯವರ ಹೆಸರಿಡಲಾಗಿದ್ದ MGNREGA ಕಾಯ್ದೆಯನ್ನು ರದ್ದುಗೊಳಿಸಿದ ನಂತರ)’ ಎಂದು ಶಿವಕುಮಾರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, MGNREGA ಕಾಯ್ದೆಯನ್ನು ಪುನಃಸ್ಥಾಪಿಸಬೇಕು. ಏಕೆಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ 60:40 ಪ್ರತಿಶತ ನಿಧಿ ಹಂಚಿಕೆ ಸೂತ್ರದೊಂದಿಗೆ ಜಾರಿಗೆ ತರಲಾದ ಹೊಸ ಗ್ರಾಮೀಣ ಉದ್ಯೋಗ ಶಾಸನ – VB-G RAM G ಅನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Read More

Updated By: Priyalachhi ರಾಯಚೂರು: ರಾಜ್ಯದಲ್ಲಿ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕೆಲಸ ಮಾಡುತ್ತಿದ್ದು, ಗುರುಪೀಠದಲ್ಲಿ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಶಿಕ್ಷಣ, ಆಧ್ಯಾತ್ಮ ಮತ್ತು ಜಾತ್ಯಾತೀತ ಮನೋಭಾವಕ್ಕೆ ಹೆಚ್ಚು ಒತ್ತು ನೀಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ, ಕೆಲವರು ಶಿಕ್ಷಣ ದೊರೆತರೂ ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬಂದಿಲ್ಲ. ಸ್ವಾಭೀಮಾನಿಗಳಾಗಿ ಬದುಕುವುದು ಮುಖ್ಯ. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣ ಯುವಪೀಳಿಗೆ ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶೇ. 15ರಷ್ಟಿದ್ದ ಶಿಕ್ಷಣ ಈಗ ಶೇ.76 ಆಗಿದ್ದರೂ, ನಮ್ಮಲ್ಲಿ ಜಾತಿವ್ಯವಸ್ಥೆ ನಶಿಸಿಲ್ಲ. ಜಡತ್ವದಿಂದ ಕೂಡಿದ ಸಮಾಜಕ್ಕೆ ಚಲನೆ ಬರಲು ಆರ್ಥಿಕ, ಸಾಮಾಜಿಕ ಸಮಾನತೆಬೇಕು. ಸಮಾಜದ ಮೌಢ್ಯಗಳನ್ನು ಅಳಿಸುವ ಕಾರ್ಯದಲ್ಲಿ ಸ್ವಾಮೀಜಿಯವರು ತೊಡಗಿದ್ದರು. ಜನರ ಆರ್ಶೀವಾದದಿಂದ 8 ಬಾರಿ ಗೆದ್ದು, ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಾಡಿನ ಎಲ್ಲ ಜನರ ಪ್ರೀತಿಯಿಂದಲೇ ರಾಜಕೀಯದಲ್ಲಿಯೂ ಇಂದಿಗೂ ಬದುಕಿದ್ದೇನೆ. ಈ ಸಮಾಜದ ಪ್ರೀತಿಗೆ ಬೆಲೆಕಟ್ಟಲಾಗದು. ಧ್ವನಿಯಿಲ್ಲದವರ ಪರವಾಗಿ ಹೋರಾಡುವುದೇ ನನ್ನ ಕೆಲಸ ಎಂದರು.

Read More

Updated By: Priyalachhi ಬೆಂಗಳೂರು: ರಾಜ್ಯದ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿ ಹೊಂದಿದ ಪ್ರದೇಶಗಳ ಸಮಾನ ಮಟ್ಟಕ್ಕೆ ತರುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಮಾರ್ಚ್ 2024ರಲ್ಲಿ ರಚಿಸಿದ್ದ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ ತನ್ನ ವರದಿಯನ್ನು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಎಂ. ಗೋವಿಂದ ರಾವ್ ಅವರ ಅಧ್ಯಕ್ಷತೆಯಲ್ಲಿದ್ದ ಈ ಸಮಿತಿಯು ರಾಜ್ಯದ ಪ್ರಾದೇಶಿಕ ಅಸಮತೋಲನಗಳನ್ನು ವಿಶ್ಲೇಷಿಸಿ ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಿದೆ. ಈ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇರುವುದರಿಂದ ಅದನ್ನು ಇನ್ನೂ ಸಾರ್ವಜನಿಕವಾಗಿ ಪ್ರಕಟಿಸಲಾಗಿಲ್ಲ. ಸಮಿತಿಯ ಮುಖ್ಯ ಉದ್ದೇಶವು ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕ (Comprehensive Composite Development Index–CCDI)ವನ್ನು ನವೀಕರಿಸುವುದು ಹಾಗೂ ರಾಜ್ಯದ 236 ತಾಲ್ಲೂಕುಗಳಲ್ಲಿನ ಪ್ರಾದೇಶಿಕ ಅಸಮಾನತೆಗಳನ್ನು ಮೌಲ್ಯಮಾಪನ ಮಾಡುವುದಾಗಿತ್ತು. ಜೊತೆಗೆ, ಹಿಂದೆ ಗುರುತಿಸಲಾಗಿದ್ದ 35 ಹಿಂದುಳಿದ ತಾಲ್ಲೂಕುಗಳಲ್ಲಿ ನಡೆದ ಅಭಿವೃದ್ಧಿ ಪ್ರಗತಿಯನ್ನು ವಿಶೇಷವಾಗಿ ಪರಿಶೀಲಿಸಲಾಗಿದೆ. ಪ್ರೊ. ಎಂ. ಗೋವಿಂದ ರಾವ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಿದ ಸಮಿತಿಯಲ್ಲಿ…

Read More

Updated By: Priyalachhi ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಭಾಗವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇಂದು 2026-27ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆಯ ವ್ಯವಹಾರಗಳ ಪಟ್ಟಿಯ ಪ್ರಕಾರ ಸದನವು ಬೆಳಗ್ಗೆ 11 ಗಂಟೆಗೆ ಸಭೆ ಸೇರಲಿದೆ. 2026-27ರ ಭಾರತ ಸರ್ಕಾರದ ಅಂದಾಜು ಪಟ್ಟಿ ಮತ್ತು ವೆಚ್ಚದ ವಿವರಗಳನ್ನ ವಿತ್ತ ಸಚಿವೆ ಸೀತಾರಾಮನ್ ಮಂಡಿಸಲಿದ್ದಾರೆ. ಕೇಂದ್ರ ಹಣಕಾಸು ಸಚಿವರು 2003ರ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆಯ ಸೆಕ್ಷನ್ 3(1) ರ ಅಡಿಯಲ್ಲಿ ಎರಡು ಹೇಳಿಕೆಗಳನ್ನು ಸಹ ಇಂದು ಮಂಡಿಸಲಿದ್ದಾರೆ. ಇವುಗಳಲ್ಲಿ ಮಧ್ಯಮ – ಅವಧಿಯ ಹಣಕಾಸಿನ ನೀತಿ ಮತ್ತು ಹಣಕಾಸು ನೀತಿ ಕಾರ್ಯತಂತ್ರ ಹೇಳಿಕೆ ಹಾಗೂ ಸ್ಥೂಲ ಆರ್ಥಿಕ ಚೌಕಟ್ಟಿನ ವಿವರಗಳನ್ನು ಒಳಗೊಂಡಿರಲಿದೆ. ಸೀತಾರಾಮನ್ ಅವರು 2026 ರ ಹಣಕಾಸು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ಅನುಮತಿ ಕೋರುತ್ತಾರೆ. ಹಾಗೂ ಔಪಚಾರಿಕವಾಗಿ ಮಸೂದೆಯನ್ನು ಸಹ ಮಂಡಿಸಲಿದ್ದಾರೆ. ವಿತ್ತ ಮಸೂದೆಯು ಸರ್ಕಾರದ ಹಣಕಾಸು ಪ್ರಸ್ತಾವನೆಗಳಿಗೆ ಕಾನೂನುಬದ್ಧ ಮಾನ್ಯತೆಯನ್ನು…

Read More

Updated By: Priyalachhi ಬೆಂಗಳೂರು: ಮೈಸೂರಿನಲ್ಲಿ ರಹಸ್ಯ ಹೈಟೆಕ್ ಡ್ರಗ್ಸ್ ಘಟಕ ಕಾರ್ಯ ನಿರ್ವಹಿಸುತ್ತಿದ್ದುದನ್ನು ಎನ್’ಸಿಬಿ ಬಯಲುಗೊಳಿಸಿದ್ದು, ಇದರೊಂದಿಗೆ ರಾಜ್ಯದ ಗೃಹ ಸಚಿವರ ಹಾಗೂ ಗೃಹ ಇಲಾಖೆಯ ವೈಫಲ್ಯ ಬಯಲಾಗಿದೆ ಎಂದು ಬಿಜೆಪಿ ಕಿಡಿಕಾರಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಮೈಸೂರಿನಲ್ಲಿ ರಹಸ್ಯ ಹೈಟೆಕ್ ಡ್ರಗ್ಸ್ ಘಟಕ ಕಾರ್ಯ ನಿರ್ವಹಿಸುತ್ತಿದ್ದುದನ್ನು ಎನ್’ಸಿಬಿ ಬಯಲುಗೊಳಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಮೈಸೂರಿನಲ್ಲಿ ಡ್ರಗ್ಸ್ ದಂಧೆಯ ಜಾಲ, ತಯಾರಿಕಾ ಘಟಕವನ್ನು ಮಹಾರಾಷ್ಟ್ರ ಪೊಲೀಸ್ ಪತ್ತೆ ಮಾಡಿತ್ತು. ರಾಜ್ಯದ ಗೃಹ ಇಲಾಖೆಯ ಅಸಮರ್ಥ್ಯಕ್ಕೆ ಗೃಹ ಸಚಿವ ಪರಮೇಶ್ವರ್ ಅವರೇ ನೇರ ಹೊಣೆ ಎಂದು ಹೇಳಿದ್ದಾರೆ. ವಿಶೇಷವಾಗಿ ನಮ್ಮ ಯುವಜನತೆ, ಶಾಲಾ ಮಕ್ಕಳು ಕೂಡ ಈ ಡ್ರಗ್ಸ್ ನಂತಹ ಅಪಾಯಕಾರಿ ಜಾಲಕ್ಕೆ ಬಲಿಯಾಗುತ್ತಿರುವ ವರದಿಗಳು ಪದೇ ಪದೇ ಹೊರಬರುತ್ತಿದ್ದರೂ, ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ, ಅಸಾಮರ್ಥ್ಯ, ವೈಫಲ್ಯಗಳು ಅದರ ಆದ್ಯತೆ ಮತ್ತು ಕಾಳಜಿಗಳನ್ನು ಬಯಲು ಮಾಡಿದೆ. ಪರಿಸ್ಥಿತಿ ಕೈಮೀರುವ ಮುನ್ನ, ರಾಜ್ಯ…

Read More

Updated By: Priyalachhi ಬೆಂಗಳೂರು: ಕೇಂದ್ರ ಸರ್ಕಾರದ 2026-2027ನೇ ಸಾಲಿನ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ಇದರ ಬೆನ್ನಲ್ಲೇ ಈ ಬಾರಿ ಬಜೆಟ್ ನಲ್ಲಿ ನಮಗೆ ನ್ಯಾಯಯುತ ಪಾಲು ಬೇಕೇ ಬೇಕು ಕಾಂಗ್ರೆಸ್ ಆಗ್ರಹಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಈ ಬಾರಿ ಬಜೆಟ್ ನಲ್ಲಿ ನಮಗೆ ನ್ಯಾಯಯುತ ಪಾಲು ಬೇಕೇ ಬೇಕು. ನಾವು ಕೇಳುತ್ತಿರುವುದು ನಮ್ಮ ಹಕ್ಕನ್ನೇ ಹೊರತು ಭಿಕ್ಷೆಯನ್ನಲ್ಲ ಎಂದು ಹೇಳಿದೆ. ಸಾಕು ಕೇಂದ್ರದ ಅನ್ಯಾಯ, ಬೇಕು ಕರ್ನಾಟಕಕ್ಕೆ ನ್ಯಾಯ. ಕರ್ನಾಟಕಕ್ಕೆ ವಿಶೇಷ ಯೋಜನೆಗಳಿಲ್ಲ, ಕೇಂದ್ರ ಯೋಜನೆಗಳಿಗೆ ಪೂರಕ ಅನುದಾನವಿಲ್ಲ, ತೆರಿಗೆ ಹಂಚಿಕೆಯಲ್ಲಿ ನ್ಯಾಯವಿಲ್ಲ, ಇದು ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಪಾಲಿನ ಕೇಂದ್ರ ಬಜೆಟ್ಟಿನ ಚಿತ್ರಣವಾಗಿದೆ. ಈ ಬಾರಿ ಬಜೆಟ್ ನಲ್ಲಿ ನಮಗೆ ನ್ಯಾಯಯುತ ಪಾಲು ಬೇಕೇ ಬೇಕು. ನಾವು ಕೇಳುತ್ತಿರುವುದು ನಮ್ಮ ಹಕ್ಕನ್ನೇ ಹೊರತು ಭಿಕ್ಷೆಯನ್ನಲ್ಲ ಎಂದು ತಿಳಿಸಿದೆ. ಕೇಂದ್ರ ಸರ್ಕಾರ ಕನ್ನಡಿಗರಿಗೆ ಅಕ್ಷರಶಃ ನಾಮ ಇಡುತ್ತಿದೆ. ಇದರಲ್ಲಿ ಅನುಮಾನವೇ…

Read More