Author: Sambrama Prabha News
'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)
Updated By: Priyalachhi ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಶ್ಲಾಘಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಇದು “ಭಾರತದ ಉಜ್ವಲ ಭವಿಷ್ಯಕ್ಕೆ ಶುಭ ಸೂಚನೆ” ಎಂದು ಮಂಗಳವಾರ ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಈ ಒಪ್ಪಂದವು ಬಡವರು, ಮೀನುಗಾರರು, ರೈತರು ಮತ್ತು ಯುವಕರಿಗೆ ವಿಶಾಲ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ ಒಂದು ದಿನದ ನಂತರ ಸುಂಕವನ್ನು ಶೇಕಡಾ 50 ರಿಂದ 18 ಕ್ಕೆ ಇಳಿಸಿದ್ದು, ಗೋಯಲ್ ಅವರು ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಬಯಸಿದ್ದರು. ಈ ಒಪ್ಪಂದದ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಬಯಸಿದ್ದೆ. ಆದರೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸೃಷ್ಟಿಸಿದ ಗೊಂದಲಗಳಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ಗೋಯಲ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಜೊತೆ ಬಹುನಿರೀಕ್ಷಿತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ ಮತ್ತು ಇಡೀ ರಾಷ್ಟ್ರವು ಅವರನ್ನು ಅಭಿನಂದಿಸುತ್ತಿದೆ ಎಂದು…
Updated By: Priyalachhi ಬೆಂಗಳೂರು: ಸಿಎಂ ಸಿದ್ದರಾಮಯ್ಯ ‘ಹೌದು ಹುಲಿಯಾ’ ಹೋಗಿ ‘ಹೌದು ಇಲಿಯಾ’ ಆಗಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, “ಸಿಎಂ ಡಲ್ ಆಗಿದ್ದಾರೆ, ಮೊದಲಿನ ಹಾಗಿಲ್ಲ. ಅವರೀಗ ಹೌದು ಹುಲಿಯಾ ಬದಲು ಹೌದು ಇಲಿಯಾ ಆಗಿದ್ದಾರೆ. ಲೂಟಿಕೋರ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಇಲಾಖೆಗಳಲ್ಲಿ ಲೂಟಿ ನಿಲ್ಲುತ್ತಿಲ್ಲ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಲಂಚಾವತಾರ ತಾಂಡವವಾಡುತ್ತಿದ್ದು, ಸರ್ಕಾರಕ್ಕೆ ನೈತಿಕತೆಯೇ ಇಲ್ಲ” ಎಂದು ಟೀಕಿಸಿದರು. ಇದು 80 ಪರ್ಸೆಂಟ್ ಸರ್ಕಾರ-ಅಶೋಕ್: “ನಮ್ಮ ಸರ್ಕಾರದ ವಿರುದ್ಧ ಕೆಂಪಣ್ಣ ಆರೋಪ ಮಾಡಿದಾಗ ಆಗ ವಿಪಕ್ಷ ನಾಯಕರಿದ್ದಾಗ ಸಿದ್ದರಾಮಯ್ಯ, ಅವರನ್ನು ಪ್ರತಿದಿನ ಕರೆಸಿಕೊಳ್ಳುತ್ತಿದ್ದರು. ಆದರೆ, ಕೆಂಪಣ್ಣ ಸತ್ತಾಗ ಅವರ ಮುಖ ನೋಡಲು ಸಿದ್ದರಾಮಯ್ಯ ಅವರಾಗಲೀ ಕಾಂಗ್ರೆಸ್ಸಿಗರಾಗಲೀ ಹೋಗಲಿಲ್ಲ. ನಮ್ಮ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿದ್ರಿ. ಆದರೆ, ನಿಮ್ಮ ಸರ್ಕಾರದಲ್ಲಿ 80 ಪರ್ಸೆಂಟ್ ಆರೋಪವಿದೆ. ಕಾಂಟ್ರಾಕ್ಟರ್ಗಳು ನಿಮ್ಮ ಸರ್ಕಾರದ ವಿರುದ್ಧ…
Updated By: Priyalachhi ಬೆಂಗಳೂರು: ಇಡೀ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮ ಬಾಂಗ್ಲಾದವರನ್ನು ಗುರುತಿಸಿ ಗಡೀಪಾರು ಮಾಡಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ವಿಧಾನಸಭೆಯಲ್ಲಿ ಇಂದು ರಾಜ್ಯದ ಕಾನೂನು ಸುವ್ಯವಸ್ಥೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಾಂಗ್ಲಾದವರು ಇಡೀ ದೇಶದಲ್ಲಿ ಇದ್ದಾರೆ. ಅವರು ಎಲ್ಲಿಂದ ಬರುತ್ತಾರೆ?, ಅವರು ಬರದಂತೆ ಬಿಎಸ್ಎಫ್ ತಡೆಯಬೇಕು. ಅವರು ಕೇವಲ ಕರ್ನಾಟಕಕ್ಕೆ ಮಾತ್ರ ಬರುವುದಿಲ್ಲ. ದೇಶದಾದ್ಯಂತ ಬೇರೆ ಬೇರೆ ಕಡೆ ಹೋಗಿ ವಾಸವಾಗಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದವರು ಬಂದಿದ್ದಾರೆ ಅನ್ನೋದು ಸತ್ಯಕ್ಕೆ ದೂರವಾದ ಮಾತು. 2021ರಲ್ಲಿ 15 ಜನರನ್ನು ಗಡೀಪಾರು ಮಾಡಲಾಗಿದೆ. 2022ರಲ್ಲಿ 21 ಅಕ್ರಮ ಬಾಂಗ್ಲಾದವರನ್ನು ಗಡೀಪಾರು ಮಾಡಲಾಗಿದೆ ಎಂದರು. ನಮ್ಮ ಸರ್ಕಾರ ಬಂದ ಬಳಿಕ 2023ರಲ್ಲಿ 47 ಜನ, 2024ರಲ್ಲಿ 64 ಜನ, 2025ರಲ್ಲಿ 87 ಜನ ಸೇರಿ ಒಟ್ಟು 196 ಜನರನ್ನು ಗಡೀಪಾರು ಮಾಡಿದ್ದೇವೆ. ಇನ್ನು 376 ಜನರನ್ನು ಗುರುತು ಮಾಡಲಾಗಿದ್ದು, ಅವರನ್ನೂ ವಾಪಸ್ ಕಳುಹಿಸುವ ಕೆಲಸ ಆಗುತ್ತದೆ.…
Updated By: Priyalachhi ನವದೆಹಲಿ: ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯಲ್ಲಿನ ವಾಕ್ಯವನ್ನು ಉಲ್ಲೇಖಿಸಲು ಪ್ರಯತ್ನಿಸಿದ್ದು ಲೋಕಸಭೆಯಲ್ಲಿಂದು ಭಾರೀ ಗದ್ದಲ ಸೃಷ್ಟಿಸಿತು. ರಾಹುಲ್ ಗಾಂಧಿ ಅವರು ಲಡಾಖ್ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಲು ಆರಂಭಿಸಿದಾಗ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪುಸ್ತಕ ಪ್ರಕಟವಾಗಿಲ್ಲ. ಅದರ ಮಾಹಿತಿ ಸುಳ್ಳಾಗಿದೆ. ಸದನದಲ್ಲಿ ಈ ಬಗ್ಗೆ ಚರ್ಚಿಸುವಂತಿಲ್ಲ ಎಂದರು. ಆದರೂ, ರಾಹುಲ್ ಗಾಂಧಿ ಮಾಜಿ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಪ್ರಸ್ತಾಪಿಸಲು ಪದೇ ಪದೇ ಪ್ರಯತ್ನಿಸಿದರು. ಪುಸ್ತಕ ಪ್ರಕಟವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೇಳಿದರು. ದಿ ಕ್ಯಾರವಾನ್ ನಿಯತಕಾಲಿಕೆಯು ಫೆಬ್ರವರಿಯಲ್ಲಿ ತನ್ನ ಮುಖಪುಟದಲ್ಲಿ ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆಯ ಕುರಿತು ಪ್ರಕಟಿಸಿದೆ. ಇದು ಲಡಾಖ್ ಕುರಿತು…
Updated By: Priyalachhi ಬೆಂಗಳೂರು: ರಾಜ್ಯದ 52 ಸಾವಿರ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯಡಿ ಹಣ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಮೊದಲ ಹಂತದಲ್ಲಿ 20 ಸಾವಿರ ಫಲಾನುಭವಿಗಳ ಸಮಸ್ಯೆ ಇತ್ಯರ್ಥಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿ ಇರುವವರ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಇಂದು ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಬಿಜೆಪಿ ಸದಸ್ಯ ಪಿ.ಹೆಚ್.ಪೂಜಾರ್ ಅವರ ಪ್ರಶ್ನೆಗೆ ಸಚಿವೆ ಉತ್ತರಿಸಿದರು. ರಾಜ್ಯದಲ್ಲಿ ಸುಮಾರು 1.26 ಕೋಟಿ ಫಲಾನುಭವಿಗಳಿಗೆ ಗೃಹ ಲಕ್ಷ್ಮೀ ಹಣ ನೀಡಲಾಗುತ್ತಿದೆ. ಐಟಿ ಹಾಗೂ ಜಿಎಸ್ಟಿ ದಾಖಲೆಯಂತೆ 52 ಸಾವಿರ ಫಲಾನುಭವಿಗಳಿಗೆ ಯೋಜನೆಯಡಿ ಹಣ ತಲುಪುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈಗಾಗಲೇ 20 ಸಾವಿರ ಫಲಾನುಭವಿಗಳ ಸಮಸ್ಯೆ ಸರಿಪಡಿಸಲಾಗಿದೆ ಎಂದರು. ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿ ಮಾತನಾಡಿದ ಪೂಜಾರ್, ಐಟಿ ಹಾಗೂ ಜಿಎಸ್ಟಿ ಪಾವತಿ ಮಾಡುತ್ತಿರುವುದಾಗಿ ಹೇಳಿ ಬಾಗಲಕೋಟೆ ಜಿಲ್ಲೆಯಲ್ಲಿ 712 ಮಂದಿ ಫಲಾನುಭವಿಗಳನ್ನು ಯೋಜನೆ ವ್ಯಾಪ್ತಿಯಿಂದ…
Updated By: Priyalachhi ಬೆಂಗಳೂರು: ಸರ್ಕಾರ ಹಾದಿಯೂ ತಪ್ಪಿಲ್ಲ, ನಾನೂ ಅಸಹಾಯಕ ಮುಖ್ಯಮಂತ್ರಿಯೂ ಅಲ್ಲ. ಎರಡೂವರೆ ವರ್ಷದಲ್ಲಿ ಜನರಿಗೆ ಏನು ಹೇಳಿದ್ದೇವೋ ಅದನ್ನು ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ. ಮೊದಲ ಮೂರು ವಾಕ್ಯ ಹಾಗೂ ಕೊನೆಯ ವಾಕ್ಯವನ್ನು ಓದಿದರು. ಭಾಷಣದಲ್ಲಿ ಕೊನೆಗೆ ಜೈ ಸಂವಿಧಾನ ಅಂತನೂ ಉಲ್ಲೇಖಿಸಲಾಗಿತ್ತು. ಅದನ್ನು ಹೇಳದೆಯೇ ಆತುರ ಆತುರವಾಗಿ ಹೋದರು. ರಾಷ್ಟ್ರಗೀತೆ ಮುಗಿಯುವ ಮೊದಲೇ ಹೋದರು. ವಿಪಕ್ಷಗಳು ನನ್ನನ್ನು ಅಸಹಾಯಕ ಸಿಎಂ ಎಂದು ಟೀಕಿಸಿದ್ದಾರೆ. ಒಂದೊಂದು ಸಾರಿ ಅಸಹಾಯಕತೆಯನ್ನು ವ್ಯಕ್ತಪಡಿಸುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಅಸತ್ಯದ ಎದುರು ಸತ್ಯ ಅಸಹಾಯಕ ಆಗುತ್ತದೆ ಎಂದರು. ನಮ್ಮ ಐಡಿಯಾಲಜಿನೇ ಬೇರೆ, ವಿಪಕ್ಷಗಳ ಐಡಿಯಾಲಜಿನೇ ಬೇರೆ. ನಾವು ಐಡಿಯಾಲಜಿ ವಿರೋಧ ಮಾಡಬಹುದು. ಆದರೆ, ಸಂವಿಧಾನವನ್ನು ವಿರೋಧ ಮಾಡುವ ಹಾಗಿಲ್ಲ. ಅದನ್ನು ಎಲ್ಲರೂ ಒಪ್ಪಬೇಕು. ಸಂವಿಧಾನದಂತೆ ಸರ್ಕಾರ ನಡೆಯಬೇಕು. ರಾಜ್ಯಪಾಲರು ಮೂಲತಃ ಒಳ್ಳೆಯವರೇ.…
Updated By: Priyalachhi ಬೆಳಗಾವಿ: “ಒಕ್ಕುಂದ ಗ್ರಾಮದ ಐತಿಹಾಸಿಕ ತ್ರಿಕೂಟೇಶ್ವರ ಮಂದಿರ ಜೀರ್ಣೋದ್ಧಾರಪಡಿಸಿ, ಪ್ರಸಿದ್ಧ ಪ್ರವಾಸಿ ತಾಣ ಮಾಡಲಾಗುವುದು. ಮುಂಬರುವ ವರ್ಷ ಒಕ್ಕುಂದ ಉತ್ಸವ ಸರ್ಕಾರದಿಂದಲೇ ಆಚರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು” ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭರವಸೆ ನೀಡಿದರು. ಭಾನುವಾರ ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಸವದತ್ತಿ ರಟ್ಟರ ಕಾಲದಲ್ಲಿ ನಿರ್ಮಾಣಗೊಂಡ ಜೈನ ಬಸದಿ ಇಲ್ಲಿದೆ. ಅದ್ಭುತ ಕೆತ್ತನೆ ಮನಸ್ಸಿಗೆ ಮುದ ನೀಡುತ್ತದೆ. ಕನ್ನಡದ ಮೊದಲ ಆದ್ಯ ಗ್ರಂಥ ಕವಿರಾಜ ಮಾರ್ಗದಲ್ಲಿ ತಿರುಳ್ಗನ್ನಡನಾಡು ಅಂತಾ ಕರೆಸಿಕೊಂಡಿದ್ದು, ವಿವಿಧ ಸಾಮ್ರಾಜ್ಯಗಳು ಆಳಿರುವ ಗತವೈಭವ ಇರುವ ವಿಶಿಷ್ಟ ಗ್ರಾಮ ಒಕ್ಕುಂದ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಶೀಘ್ರವೇ ಪುರಾತತ್ವ ಇಲಾಖೆ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿ ಯೋಜನೆ ರೂಪಿಸಲಾಗುವುದು” ಎಂದರು. “ವಿವಿಧತೆಯಲ್ಲಿ ಏಕತೆ ಹೊಂದಿರುವ ಒಕ್ಕುಂದ ಇತರೆ ಗ್ರಾಮಗಳಿಗೆ ಮಾದರಿ ಆಗಿದೆ. ಇಲ್ಲಿನ ಜನರ ಪ್ರೀತಿ, ಆತಿಥ್ಯ ಕಂಡು ನನಗೆ ತುಂಬಾ ಸಂತೋಷವಾಗಿದೆ. ಗ್ರಾಮದ ಮಕ್ಕಳ ಉತ್ಸಾಹ ಅಪರಿಮಿತವಾಗಿದೆ.…
Updated By: Priyalachhi ನವದೆಹಲಿ/ ಹುಬ್ಬಳ್ಳಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ರ ಆರ್ಥಿಕ ಮುನ್ನೋಟವು ಪ್ರಧಾನಿ ನರೇಂದ್ರ ಮೋದಿ ಅವರ ʼವಿಕಸಿತ ಭಾರತʼ ಕನಸಿಗೆ ಪೂರಕವಾದ ಮತ್ತು ಭವ್ಯ ಭಾರತದ ಭವಿಷ್ಯ ನಿರ್ಮಾಣಕ್ಕೆ ದಾರಿದೀಪವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ. ಇದು ಭಾರತದ ಬೆಳವಣಿಗೆ ಕೇಂದ್ರಿತ ಬಜೆಟ್ ಆಗಿದ್ದು, ಏಳು ಪ್ರಮುಖ ಕ್ಷೇತ್ರಗಳಲ್ಲಿ ಉತ್ಪಾದನಾ ಸಾಮರ್ಥ್ಯ ಬಲಪಡಿಸುವಿಕೆ ಮೇಲೆ ಕೇಂದ್ರೀಕೃತವಾಗಿದೆ. ವಿಶೇಷವಾಗಿ ಬಯೋಫಾರ್ಮಾ ಕ್ಷೇತ್ರಕ್ಕೆ ₹10,000 ಕೋಟಿ ಮೀಸಲಿಟ್ಟು ನವೀನತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ಪಾದನೆಗೆ ಬಲವಾದ ಉತ್ತೇಜನ ನೀಡಲಾಗಿದೆ. ಇಂಡಿಯನ್ ಸೆಮಿಕಂಡಕ್ಟರ್ ಮಿಷನ್ 2.0 ಆರಂಭವು ಭಾರತವನ್ನು ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವನ್ನಾಗಿ ರೂಪಿಸುವಲ್ಲಿ ದಿಟ್ಟ ಹೆಜ್ಜೆಯಾಗಿದೆ ಎಂದಿದ್ದಾರೆ. ಕೈಗಾರಿಕಾ ಅಡಿಪಾಯಕ್ಕೆ ಸುಭದ್ರತೆ: ದೇಶೀಯ ಉತ್ಪಾದನೆಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಎಲೆಕ್ಟ್ರಾನಿಕ್ಸ್ ಘಟಕಗಳ ಉತ್ಪಾದನಾ ಯೋಜನೆಗೆ ನೀಡುವ ಹೂಡಿಕೆಯನ್ನು ಸುಮಾರು ₹40,000 ಕೋಟಿಗೆ ಹೆಚ್ಚಿಸಲಾಗಿದೆ. ಇದರ ಜೊತೆಗೆ ಅಪರೂಪದ…
Updated By: Priyalachhi ಗಂಗಾವತಿ: ತಮ್ಮ ಜೀವನದಲ್ಲಿ ಅಕ್ಷರ ಕಲಿಯದಿದ್ದರೂ ಪರ್ವಾಗಿಲ್ಲ.. ಆದರೆ, ಮಕ್ಕಳು ಅಕ್ಷರದಿಂದ ವಂಚಿತರಾಗಬಾರದು ಎಂಬ ಆಶಯ ಹೊಂದಿದ ಹಿರಿಯ ಜೀವವೊಂದು ತಮ್ಮ ಹೆಸರಲ್ಲಿದ್ದ ಒಂದು ಎಕರೆ ಜಮೀನು ಸರ್ಕಾರಿ ಶಾಲೆಗೆ ದಾನ ಮಾಡಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣವೇ ಮುಖ್ಯ ಎಂದರಿತು ಬಡತನದಲ್ಲಿ ಬೆಂದರೂ ಈ ಹಿಂದೆ ಕೊಪ್ಪಳ ಜಿಲ್ಲೆಯ ಕುಣಿಕೇರಿಯ ಹುಚ್ಚಮ್ಮ ಚೌದರಿ ತಮ್ಮ ಜಮೀನು ದಾನ ಮಾಡಿ ಗಮನ ಸೆಳೆದಿದ್ದರು. ಇದೀಗ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ತಾಯಿ ಹುಲಿಗೆಮ್ಮ ತಮ್ಮ ಹೆಸರಲ್ಲಿರುವ ಜಮೀನನ್ನು ಸರ್ಕಾರಿ ಶಾಲೆಗೆ ನೀಡಿ ಮಾದರಿಯಾಗಿದ್ದಾರೆ. ಕನಕಗಿರಿ ವಿಧಾನಸಭಾ ಕ್ಷೇತ್ರದ ನವಲಿ ಹೋಬಳಿಯ ಆದಾಪುರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಸರಿಯಾದ ಶೈಕ್ಷಣಿಕ ಸೌಲಭ್ಯಗಳು ಇಲ್ಲದಿರುವುದನ್ನು ಗಮನಿಸಿದ ಹುಲಿಗೆಮ್ಮ, ತಮ್ಮ ಹೆಸರಲಿದ್ದ ಒಂದು ಎಕರೆ ಜಮೀನು ದಾನ ಮಾಡುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಿದ್ದಾರೆ. ಶಾಲೆಯ ಮಕ್ಕಳ ಆಟೋಟಕ್ಕೆ ಮೈದಾನದ ಕೊರತೆ, ಪ್ರೌಢ, ಉನ್ನತ…
Updated By: Priyalachhi ಮೈಸೂರು: ಯುವ ಸಮುದಾಯಕ್ಕೆ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಹೆಚ್ಚು ಒತ್ತು ನೀಡುವ ಮೂಲಕ ವಿಕಸಿತ ಭಾರತದ ಆಶಯಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. 2026-27ನೇ ಸಾಲಿನ ಕೇಂದ್ರ ಆಯವ್ಯಯ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಸದ ಯದುವೀರ್ ಒಡೆಯರ್, ಇದು ಅಭಿವೃದ್ಧಿ ಹಾಗೂ ಜನಪರ ಬಜೆಟ್ ಆಗಿದೆ ಎಂದು ಬಣ್ಣಿಸಿದ್ದಾರೆ. ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ನೇತೃತ್ವದಲ್ಲಿ ಮೈಸೂರಿನಲ್ಲಿ ಮುಂಬರುವ COSMOS ತಾರಾಲಯ ಮತ್ತು ಖಗೋಳಶಾಸ್ತ್ರ ತರಬೇತಿ ಕೇಂದ್ರದಂತಹ ಯೋಜನೆಗಳು ಸಾಕಷ್ಟು ನೆರವಾಗಲಿವೆ. COSMOS, ಶಿಕ್ಷಣ, ತರಬೇತಿ, ಸಂಶೋಧನೆ ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಗೆ ಕೇಂದ್ರವಾಗಿ ಬೆಳೆಯಲು ಇದು ನೆರವಾಗಲಿದೆ. ಮುಂದಿನ ಪೀಳಿಗೆಯ ವಿಜ್ಞಾನಿಗಳಿಗೆ ಸ್ಫೂರ್ತಿ ನೀಡಲು ಮತ್ತು ವಿಕಸಿತ ಭಾರತ 2047ರ ಹಾದಿಯಲ್ಲಿ ದೇಶದ ವೈಜ್ಞಾನಿಕ ಸಾಮರ್ಥ್ಯ ಬಲಪಡಿಸಲು ಸಹಾಯ ಮಾಡುತ್ತದೆ. ಇದು ಬಜೆಟ್ನಲ್ಲಿ ಮಹತ್ವದ ಅಂಶವಾಗಿದೆ ಎಂದರು. ಹಣಕಾಸಿನ ಶಿಸ್ತು, ಆರ್ಥಿಕ ಸಮತೋಲನ ಮೂಲಸೌಕರ್ಯದಲ್ಲಿ…
Subscribe to Updates
Get the latest creative news from FooBar about art, design and business.