Author: Sambrama Prabha News
'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)
Updated By: Priyalachhi ಶಿವಮೊಗ್ಗ: ನಗರದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ನಾನ್ ಎಸಿ ಸ್ಲೀಪರ್ ಬಸ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಸೂಡೂರು ಗ್ರಾಮದ ಬಳಿ ನಡೆದಿದೆ. ಈ ದೃಶ್ಯ ಭಯಾನಕವಾಗಿದೆ. ಹೊಸನಗರ ತಾಲೂಕು ಅರಸಾಳು ಬಳಿಯ 9ನೇ ಮೈಲಿಗಲ್ಲಿನ ಬಳಿ ಬಸ್ಗೆ ಆಕಸ್ಮಿಕ ಬೆಂಕಿ ತಗುಲಿದೆ. ಈ ವೇಳೆ ಬಸ್ನಲ್ಲಿ ಸುಮಾರು 36 ಜನ ಪ್ರಯಾಣಿಕರಿದ್ದರು. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇದರಲ್ಲಿ 12 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ರಿಪ್ಪನ್ಪೇಟೆಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ. ಸ್ಥಳಕ್ಕೆ ರಿಪ್ಪನ್ಪೇಟೆ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅನ್ನಪೂರ್ಣ ಹೆಸರಿನ ಖಾಸಗಿ ಬಸ್ ಹೊಸನಗರ ತಾಲೂಕು ನಗರದಿಂದ ಬೆಂಗಳೂರಿಗೆ ಬಸ್ ಪ್ರಯಾಣ ಬೆಳೆಸಿದೆ. ಬಸ್ ನಗರ, ಹೊಸನಗರ ಹಾಗೂ ರಿಪ್ಪನ್ಪೇಟೆಯಲ್ಲಿ ಪ್ರಯಾಣಿಕರನ್ನು ಪಿಕ್ ಅಪ್ ಮಾಡಿಕೊಂಡು ಅರಸಾಳು ಗ್ರಾಮವನ್ನು ದಾಟಿ…
Updated By: Priyalachhi ಬೆಂಗಳೂರು: ಕೈಮಗ್ಗ ನೇಕಾರರು ಹಾಗೂ ಜವಳಿ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರಿಗೆ 2ರಿಂದ 3 ಸಾವಿರ ರೂಪಾಯಿ ಪ್ರೋತ್ಸಾಹ ಧನ ಸೇರಿದಂತೆ ಇನ್ನಿತರ ಅಂಶಗಳು ಒಳಗೊಂಡ ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿಯನ್ನು ಪರಿಷ್ಕರಿಸಲಾಗಿದ್ದು, ಶೀಘ್ರದಲ್ಲಿ ಇದನ್ನು ಘೋಷಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಜವಳಿ ಸಚಿವ ಶಿವಾನಂದ ಎಸ್. ಪಾಟೀಲ್ ತಿಳಿಸಿದರು. ವಿಧಾನಪರಿಷತ್ನಲ್ಲಿ ಮಂಗಳವಾರ ಬಿಜೆಪಿ ಸದಸ್ಯ ಎಂ. ನಾಗರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದಿನ ಮೂರು ಜವಳಿ ನೀತಿಗಳ ಸಾಧಕ-ಬಾಧಕಗಳ ಅಧ್ಯಯನ ಮಾಡಿ, ಎಲ್ಲರ ಸಲಹೆ ಸೂಚನೆಗಳನ್ನು ಪರಿಗಣಿಸಿ, 2025ರಿಂದ 2030ರ ವರೆಗೆ ಹೊಸ ಜವಳಿ ನೀತಿ ರೂಪಿಸಲಾಗಿದೆ. ಶೀಘ್ರದಲ್ಲಿ ಇದನ್ನು ಘೋಷಿಸಿ, ಕಾರ್ಯಾರೂಪಕ್ಕೆ ತರಲಾಗುವುದು ಎಂದರು. ನೂತನ ನೀತಿಯಲ್ಲಿ ಜವಳಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರಿಗೆ ಹಾಗೂ ಕೈಮಗ್ಗ ನೇಕಾರರಿಗೆ 2ರಿಂದ 3 ಸಾವಿರ ಸಹಾಯಧನ ನೀಡಲಾಗುವುದು. ನೇಕಾರ ಸನ್ಮಾನ ಯೋಜನೆಯಡಿ ಕೊಡಲಾಗುತ್ತಿದ್ದ 2,500 ರೂ.ಗಳನ್ನು 5 ಸಾವಿರ ರೂ.ಗೆ…
Updated By: Priyalachhi ಬೆಂಗಳೂರು: ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಪರಿಹಾರ ಒದಗಿಸಲು ಶೀಘ್ರದಲ್ಲೇ ಸಭೆ ಕರೆದು ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸಭೆಯ ಗಮನ ಸೆಳೆವ ಸೂಚನೆ ವೇಳೆ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಉತ್ತರ ನೀಡಿದರು. ಬಿಜೆಪಿ ಶಾಸಕ ಮುನಿರಾಜು ಅವರು ಅರ್ಕಾವತಿ ಬಡಾವಣೆ ನಿರ್ಮಾಣವಾಗಿ 20 ವರ್ಷವಾಗಿದ್ದರೂ ನಿವೇಶನ ಸ್ವಾಧೀನ, ರೈತರಿಗೆ ಪರಿಹಾರ ನೀಡದಿರುವ ಬಗ್ಗೆ ಕೇಳಿದಾಗ, “ಅರ್ಕಾವತಿ ಬಡಾವಣೆ ಎಸ್.ಎಂ ಕೃಷ್ಣ ಅವರ ಕಾಲದಲ್ಲೇ ಆರಂಭವಾಯಿತು. ಈ ಮಧ್ಯೆ ನಿವೇಶನಕ್ಕೆ ಅನೇಕರು ಅರ್ಜಿ ಹಾಕಿಕೊಂಡು, ಅವರಿಗೆ ನಿವೇಶನ ಮಂಜೂರಾಯಿತು. ಭೂಸಂತ್ರಸ್ತರಿಗೆ ಅದೇ ಜಾಗದಲ್ಲಿ ಪರಿಹಾರವಾಗಿ ಜಾಗ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ಮುಂದೆ ಯಾವ ರೀತಿ ಮಾಡಬೇಕು ಎಂದು ನಿರ್ಧರಿಸಲು ಕೇಶವ ನಾರಾಯಣ ಸಮಿತಿ ನೇಮಿಸಿದೆ. ಈ ಸಮಿತಿ ಪರಿಶೀಲನೆ ಮಾಡುತ್ತಿದೆ. ಭೂಸಂತ್ರಸ್ತ ರೈತರಿಗೆ ಪರಿಹಾರವಾಗಿ ಭೂಮಿ ನೀಡಬೇಕು ಎಂಬುದಕ್ಕೆ ನಾನು ಬದ್ಧವಾಗಿದ್ದೇನೆ. ಈ…
Updated By: Priyalachhi ಬೆಂಗಳೂರು: ರಾಜ್ಯದ ಆರು ಸಾವಿರ ಗ್ರಾಮ ಪಂಚಾಯತಿಗಳಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹೆಸರು ಇಡಲು ತೀರ್ಮಾನ ಮಾಡಲಾಗಿದೆ. ಈ ಕುರಿತಾಗಿ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ರಾಜಭವನ ಚಲೋದಲ್ಲಿ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು. ಪ್ರತಿಭಟನೆ ಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಪ್ರತಿ ಗ್ರಾಮ ಪಂಚಾಯತಿಗೆ ಮಹಾತ್ಮಾ ಗಾಂಧಿ ಹೆಸರು. ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡುತ್ತೇವೆ. 6000 ಗ್ರಾಮ ಪಂಚಾಯತಿಗಳು ಇವೆ. ಅವುಗಳಿಗೆ ಮಹಾತ್ಮಾ ಗಾಂಧಿ ಹೆಸರು ಇಡುತ್ತೇವೆ” ಎಂದು ತಿಳಿಸಿದರು. ಮನರೇಗಾ ರದ್ದು ಮಾಡಿ ವಿಬಿ ಜಿ ರಾಮ್ ಜಿ ಕಾಯ್ದೆ ತಂದಿದ್ದಾರೆ. ದುರುದ್ದೇಶದಿಂದ ರಾಮ್ ಹೆಸರು ಬರುವ ರೀತಿ ಮಾಡಿದ್ದಾರೆ. ಅಲ್ಲಿ ಸೀತಾ ರಾಮ, ಕೌಶಲ್ಯ ರಾಮ, ದಶರಥ ರಾಮ ಇಲ್ಲ. ಮನಹೋಹನ್ ಸಿಂಗ್ ಇದ್ದಾಗ ಈ ಕಾಯ್ದೆ ಮಾಡಲಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಅನೇಕ ಕಾಯ್ದೆ ಜಾರಿಗೊಂಡಿತ್ತು. ಬಡವರು, ದಲಿತರು, ಅಲ್ಪಸಂಖ್ಯಾತರು, ರೈತರ ಬಗ್ಗೆ ಕಾಂಗ್ರೆಸ್ ಮಾತ್ರ ಚಿಂತನೆ ಮಾಡುತ್ತದೆ. ಬಿಜೆಪಿ…
Updated By: Priyalachhi ಪಂಚಾಂಗ : ದಿನಾಂಕ : 28-01-2026 ವಾರ : ಬುಧವಾರ ಸಂವತ್ಸರ : ವಿಶ್ವವಸು ಆಯನ : ಉತ್ತರಾಯಣ ಪಕ್ಷ : ಶುಕ್ಲ ತಿಥಿ : ದಶಮಿ ನಕ್ಷತ್ರ : ಕೃತಿಕಾ ಸೂರ್ಯೋದಯ : ಮುಂಜಾನೆ 06:45 ಗಂಟೆಗೆ ಅಮೃತ ಕಾಲ : ಮಧ್ಯಾಹ್ನ 01:57 ರಿಂದ 03:23ರ ವರೆಗೆ ದುರ್ಮುಹೂರ್ತ : ಮಧ್ಯಾಹ್ನ 12:21 ರಿಂದ 01:09ರ ತನಕ ರಾಹುಕಾಲ : ಮಧ್ಯಾಹ್ನ 12:31 ರಿಂದ 01:57ರ ವರೆಗೆ ಸೂರ್ಯಾಸ್ತ : ಸಂಜೆ 06:16 ಗಂಟೆಗೆ ರಾಶಿ ಭವಿಷ್ಯ : ಮೇಷ : ಅಂತೂ ಕೊನೆಗೆ, ನಿಮ್ಮ ಕುಟುಂಬ ಜೀವನ ಕಳೆದುಕೊಂಡು ನಿಮ್ಮ ಕೆಲಸದಲ್ಲಿ ಮುಳುಗಿ ಹೋಗಿದ್ದೀರಿ ಎಂದು ಅರ್ಥ ಮಾಡಿಕೊಂಡಿದ್ದೀರಿ. ಅದನ್ನು ಸರಿಪಡಿಸಲು ಸಾಕಷ್ಟು ಪರಿಶ್ರಮ ಬೇಕಾಗುತ್ತದೆ. ಹೊರಗಡೆ ತಿನ್ನಲು, ಚಲನಚಿತ್ರ ವೀಕ್ಷಣೆ ಮಾಡಲು ಅಥವಾ ಅತ್ಯುತ್ತಮ ತಾಣಗಳಿಗೆ ಶಾಪಿಂಗ್ ಹೊರಡಲು ಸಜ್ಜಾಗಿರಿ. ವೃಷಭ : ಈ ದಿನ ಸೌಂದರ್ಯವರ್ಧನೆಯ ದಿನವಾಗಿದೆ. ನಿಮ್ಮ ನೋಟ ಹಾಗೂ ಅಂದ…
Updated By: Priyalachhi ಬೆಂಗಳೂರು: ಕಿರುತೆರೆ ನಟಿ ಕಾವ್ಯ ಗೌಡ ಅವರ ಕೌಟುಂಬಿಕ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು-ಪ್ರತಿದೂರು ದಾಖಲಾಗಿದೆ. ಕಾವ್ಯ ಗೌಡ ಅವರು ತಮ್ಮ ಪತಿ ಸೋಮಶೇಖರ್ ಅವರ ಅಣ್ಣ ನಂದೀಶ್ ಕುಟುಂಬದ ವಿರುದ್ಧ ರಾಮಮೂರ್ತಿ ನಗರ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ನಂದೀಶ್ ಹಾಗೂ ಪ್ರೇಮಾ ದಂಪತಿಯೂ ಕಾವ್ಯ ಗೌಡ ಅವರ ಕುಟುಂಬದ ವಿರುದ್ಧ ದೂರು ನೀಡಿದ್ದಾರೆ. ಹಲ್ಲೆ ಮಾಡಿ ನಿಂದಿಸಲಾಗಿದೆ ಎಂದು ಪರಸ್ಪರ ದೂರುಗಳು ಬಂದಿದ್ದು, ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾವ್ಯ ಸಹೋದರಿ ಭವ್ಯಾ ಗೌಡ ಅವರ ದೂರೇನು?: ಕಾವ್ಯ ಗೌಡ ದಂಪತಿ ಹಾಗೂ ನಂದೀಶ್ – ಪ್ರೇಮಾ ದಂಪತಿ ಒಂದೇ ಕಟ್ಟಡದಲ್ಲಿ ವಾಸವಿದ್ದಾರೆ. ಪ್ರೇಮಾ, ನಂದೀಶ್, ರವಿಕುಮಾರ್, ಪ್ರಿಯಾ ಎಂಬವರು ಕಾವ್ಯ ಗೌಡರ ಮೇಲೆ ಹಲ್ಲೆ ನಡೆಸಿದ್ದಾರೆ. ಪತಿ ಸೋಮಶೇಖರ್ ಅವರಿಗೂ ಚಾಕುವಿನಿಂದ ಇರಿಯಲಾಗಿದೆ. ಅತ್ಯಾಚಾರದ ಬೆದರಿಕೆ ಹಾಕಲಾಗಿದೆ ಎಂದು ಕಾವ್ಯ ಸಹೋದರಿ ಭವ್ಯಾ ಗೌಡ ದೂರು ನೀಡಿದ್ದಾರೆ. ಪ್ರೇಮಾ…
Updated By: Priyalachhi ಬೆಂಗಳೂರು: ಅಡಿಕೆ ಸೇರಿದಂತೆ ಮತ್ತಿತರ ಬೆಳೆಗಳಿಗೆ ನೀಡಲಾಗುವ ಬೆಳೆ ವಿಮೆ ಪರಿಹಾರದ ವ್ಯಾಪ್ತಿಗೆ ತೆಂಗು ಬೆಳೆಯನ್ನ ಪರಿಗಣಿಸಬೇಕೆಂದು ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತೋಟಗಾರಿಕೆ ಸಚಿವರ ಪರವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಚಿದಾನಂದಗೌಡ: ವಿಧಾನಪರಿಷತ್ ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಚಿದಾನಂದ್ ಎಂ.ಗೌಡ, ತುಮಕೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯುವ ಪ್ರದೇಶವಾಗಿದೆ. ಆದರೆ ತೆಂಗಿನ ಮರಗಳಲ್ಲಿ ಕಾಣಿಸಿಕೊಳ್ಳುವ ಕೆಂಪುಮೂತಿ ಹುಳ ಹಾಗೂ ಅಣಬೆ ರೋಗದಿಂದ ಬೆಳೆ ನಷ್ಟಗೊಂಡು ರೈತರು ಭಾದಿತರಾಗುತ್ತಿದ್ದಾರೆ. ಹೀಗಾಗಿ ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆ ವಿಮೆ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು. ತೆಂಗಿನ ತೋಟಗಳ ಪುನಃಶ್ಚೇತನಕ್ಕೆ ಸಹಾಯಧನ ಎಂದ ಸಚಿವರು: ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತೆಂಗಿನಕಾಯಿಗೆ ಉತ್ತಮ ಬೆಲೆ ಇರುವುದು ಹರ್ಷ ತಂದಿದೆ. ತೆಂಗಿನ ತೋಟಗಳ ಪುನಃಶ್ಚೇತನ ಹಾಗೂ ಕೀಟ ನಿರೋಧಕ ಶಕ್ತಿ ಬೆಳೆಸಿಕೊಳ್ಳಲು…
Updated By: Priyalachhi ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ದಾಖಲೆಯ ಒಂಬತ್ತನೇ ಸತತ ಬಜೆಟ್ ಮಂಡಿಸಲಿದ್ದಾರೆ. ಜಾಗತಿಕ ಅಸ್ಥಿರತೆ ನಡುವೆ ಸೀತಾರಾಮನ್ ದಾಖಲೆಯ 9ನೇ ಬಜೆಟ್ ಮಂಡನೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿ ಮುಗಿಸಿದ್ದಾರೆ. ಅಸ್ಥಿರ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ನಡುವೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಸುಧಾರಣಾ ಕ್ರಮಗಳನ್ನು ಒಳಗೊಂಡಿರುವ ಬಜೆಟ್ ಮಂಡಿಸುವ ನಿರೀಕ್ಷೆಯಿದೆ. 10 ಬಜೆಟ್ ಗಳನ್ನು ಮಂಡಿಸಿರುವ ಮೊರಾರ್ಜಿ ದೇಸಾಯಿ: ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ವಿವಿಧ ಕಾಲಮಾನಗಳಲ್ಲಿ ಮಂಡಿಸಿದ 10 ಬಜೆಟ್ಗಳ ದಾಖಲೆಗೆ ಸೀತಾರಾಮನ್ ಅವರನ್ನು ಹತ್ತಿರ ತರುತ್ತಿದೆ. ಮೊರಾರ್ಜಿ ದೇಸಾಯಿ 1959 – 1964ರಲ್ಲಿ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಒಟ್ಟು 6 ಬಜೆಟ್ಗಳನ್ನು ಮತ್ತು 1967-1969ರ ನಡುವೆ 4 ಬಜೆಟ್ಗಳನ್ನು ಮಂಡಿಸಿದ್ದರು. ಮಾಜಿ ಹಣಕಾಸು ಸಚಿವರಾದ ಪಿ ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ ಅವರು ವಿವಿಧ ಪ್ರಧಾನ ಮಂತ್ರಿಗಳ ಅಡಿ ಕ್ರಮವಾಗಿ ಒಂಬತ್ತು ಮತ್ತು ಎಂಟು ಬಜೆಟ್ಗಳನ್ನು ಮಂಡಿಸಿದ್ದಾರೆ. ಈ…
Updated By: Priyalachhi ನವದೆಹಲಿ: ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಈ ಸಂಬಂಧ ಇಂದು ಕೇಂದ್ರ ಸರ್ಕಾರವು ಎಲ್ಲಾ ರಾಜಕೀಯ ಪಕ್ಷಗಳು – ಲೋಕಸಭೆ ಮತ್ತು ರಾಜ್ಯಸಭೆ – ಎರಡೂ ಸದನಗಳನ್ನು ಸುಗಮವಾಗಿ ನಡೆಸಲು ಸಹಕರಿಸುವಂತೆ ಮನವಿ ಮಾಡಿದೆ. ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸಲಾಗುವುದು. ಅದರ ನಂತರ ಸಂಸತ್ತಿನ ಎರಡೂ ಸದನಗಳಲ್ಲಿ ಬಜೆಟ್ ಕುರಿತು ಚರ್ಚೆ ನಡೆಯಲಿದೆ. ಅಧಿವೇಶನವನ್ನು ಸುಗಮವಾಗಿ ನಡೆಸಲು ಎಲ್ಲಾ ಪಕ್ಷಗಳು ಸಹಕರಿಸಬೇಕೆಂದು ನಾವು ವಿನಂತಿಸಿದ್ದೇವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬಜೆಟ್ ಅಧಿವೇಶನಕ್ಕೂ ಮುನ್ನ ನಡೆದ ಸರ್ವಪಕ್ಷ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸರ್ವಪಕ್ಷಗಳ ಸಭೆಯ ನೇತೃತ್ವ ವಹಿಸಿದ್ದರು ಎಂದು ರಿಜಿಜು ಹೇಳಿದರು. ರಾಜ್ಯಸಭಾ ಆಡಳಿತ ಪಕ್ಷದ ನಾಯಕ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ಎಲ್. ಮುರುಗನ್ ಕೂಡ ಸಭೆಯಲ್ಲಿ ಹಾಜರಿದ್ದರು. ವಿವಿಧ ಪಕ್ಷಗಳ ನಾಯಕರು…
Updated By: Priyalachhi ಬೆಂಗಳೂರು: ದೆಹಲಿ ರೀತಿಯಲ್ಲೇ ಬೆಂಗಳೂರಿನ ವಾಯು ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ ಎಂಬ ವರದಿಗಳ ನಡುವೆಯೇ ಮಂಗಳವಾರ ಸಿಲಿಕಾನ್ ಸಿಟಿಯ ವಾಯುಗುಣಮಟ್ಟ ಗಣನೀಯವಾಗಿ ಚೇತರಿಸಿಕೊಂಡಿದೆ. ಹೌದು.. ಕಳೆದ ಕೆಲ ವರ್ಷಗಳಿಂದಲೂ ಅಪಾಯಕಾರಿ ಮಟ್ಟದಲ್ಲೇ ಇದ್ದ ಬೆಂಗಳೂರು ವಾಯುಗುಣ ಮಟ್ಟ ಮಂಗಳವಾರ ಚೇತರಿಕೆ ಕಂಡಿದೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯದೆಲ್ಲೆಡೆ ವಾಯುಗುಣಮಟ್ಟ ಆತಂಕಕಾರಿ ಮಟ್ಟದಲ್ಲಿದ್ದರೂ ಇಂದಿನ ಮಟ್ಟಿಗೆ ಬೆಂಗಳೂರಿನ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿಂದೆ ಬೆಂಗಳೂರಿನ ವಾಯುಗುಣಮಟ್ಟ 200ಕ್ಕೇರಿ ದೆಹಲಿ ಹಾದಿಯಲ್ಲೇ ಸಾಗುತ್ತಿದೆ ಎಂಬ ಟೀಕೆಗಳಿಗೆ ಗುರಿಯಾಗಿತ್ತು. ಇದಾದ ಬಳಿಕ ಕೆಲ ದಿನ ಸುಧಾರಿಸಿದಂತೆ ಕಂಡರೂ ಮತ್ತೊಮ್ಮೆ ಏರ್ ಕ್ವಾಲಿಟಿ ಕಳಪೆಯಾಗಿತ್ತು. ಆದರೆ ಇದೀಗ ಕಳೆದ 2-3 ತಿಂಗಳಿಗೆ ಹೋಲಿಸಿದರೆ ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ.
Subscribe to Updates
Get the latest creative news from FooBar about art, design and business.