Author: Sambrama Prabha News
'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)
Updated By: Priyalachhi ಬೆಂಗಳೂರು: ಮನರೇಗಾ ಹಾಗೂ ವಿಬಿ ಜಿ ರಾಮ್ ಜಿ ಹೋರಾಟವನ್ನು ತೀವ್ರಗೊಳಿಸಲು ಕೈ ಪಡೆ ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಇಂದು ಮಂಗಳವಾರ ರಾಜಭವನ ಚಲೋ ಹಮ್ಮಿಕೊಂಡಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ರಾಷ್ಟ್ರೀಯ ನಾಯಕರು ಈ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ರಾಜ್ ಭವನ ಚಲೋ ಪ್ರತಿಭಟನೆಯ ಭಾಗವಾಗಿ ಲೋಕ ಭವನದ ಕಡೆಗೆ ಮೆರವಣಿಗೆ ನಡೆಸಲು ನಿರ್ಧರಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಪಕ್ಷದ ಶಾಸಕರು ಮತ್ತು ಸಂಸದರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದರು. MGNREGA ಬದಲಾಗಿ VB-G RAM G ತರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರವು ಗ್ರಾಮೀಣ ಉದ್ಯೋಗ ಖಾತರಿ ಚೌಕಟ್ಟನ್ನು ಕಿತ್ತುಹಾಕುತ್ತಿದೆ. ಪಂಚಾಯತ್ಗಳ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದು ಆರೋಪಿಸಿ ಲೋಕ ಭವನದ ಕಡೆಗೆ ತೆರಳಲು ಯತ್ನಿಸಿದ ಕಾಂಗ್ರೆಸ್ ನಾಯಕರನ್ನು ಪೊಲೀಸರು ತಡೆದರು.…
Updated By: Priyalachhi ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಮಂಗಳವಾರ ನಡೆದ ಸರ್ವಪಕ್ಷ ಸಭೆಯಲ್ಲಿ, ವಿರೋಧ ಪಕ್ಷಗಳು ಯುಪಿಎ ಯುಗದ ಎಂಜಿಎನ್ಆರ್ಇಜಿಎ ಪುನಃಸ್ಥಾಪನೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್), ಭಾರತದ ವಿದೇಶಾಂಗ ನೀತಿ ಮತ್ತು ಹೊಸ ಯುಜಿಸಿ ಮಾರ್ಗಸೂಚಿಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ರಚನಾತ್ಮಕ ಚರ್ಚೆಗೆ ಆಗ್ರಹಿಸಿದವು. ಆದಾಗ್ಯೂ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಹೊಸದಾಗಿ ಜಾರಿಗೆ ತರಲಾದ ವಿಬಿ–ಜಿ RAM ಜಿ ಕಾನೂನನ್ನು ಸರ್ಕಾರ ಹಿಂದಕ್ಕೆ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಜೆಟ್ ಅಧಿವೇಶನದ ಪ್ರಾಥಮಿಕ ಗಮನ ಬಜೆಟ್ ಆಗಿರುತ್ತದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದ್ದು, ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಸದಸ್ಯರು ಇತರ ವಿಷಯಗಳನ್ನು ಎತ್ತಬಹುದು ಎಂದು ಅವರು ಹೇಳಿದರು.
Updated By: Priyalachhi ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (ಮನರೇಗಾ) ಹೆಸರು ಬದಲಾವಣೆ ಮಾಡಿ ಕಾಯ್ದೆ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ, ರಾಜಭವನ ಚಲೋ ನಡೆಸಿದರು. ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು. ಮನರೇಗಾ ಹೆಸರು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮನರೇಗಾ ಹೆಸರು ಮರು ಸ್ಥಾಪನೆ ಮಾಡುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು. ಇನ್ನು ಪ್ರತಿಭಟನಾ ವೇದಿಕೆ ಮೇಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕುಳಿತಿದ್ದರು. ಈ ವೇಳೆ ಮಾತನಾಡಲು ಸಿಎಂ ಸಿದ್ದರಾಮಯ್ಯ ಬರುತ್ತಿದ್ದಂತೆ ಡಿಕೆ ಶಿವಕುಮಾರ್ ಅಭಿಮಾನಿಗಳು ಡಿಕೆ ಡಿಕೆ…
Updated By: Priyalachhi ಬೆಂಗಳೂರು: ಶಾಲೆಗಳಲ್ಲಿ ಮಕ್ಕಳಿಗೆ, ಸರ್ಕಾರಿ ಕಚೇರಿಗಳಲ್ಲಿ ದೇಶದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು ಮುಂದಿನ ಪೀಳಿಗೆಗೆ ಕೂಡ ಉಳಿಸಿ ಬೆಳೆಸಿಕೊಂಡು ಹೋಗಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇವತ್ತು ಪ್ರತಿ ಹಂತದಲ್ಲಿ ಸಂವಿಧಾನ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರದಿಂದ ಗ್ರಾಮೀಣ ಬಡವರ ಉದ್ಯೋಗ ಖಾತ್ರಿ ಯೋಜನೆಗೆ ತೊಂದರೆಯಾಗಿರುವುದು ನಮಗೆಲ್ಲಾ ಅಚ್ಚರಿ ತಂದಿದೆ. ಇದರ ವಿರುದ್ಧ ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿದೆ. ನಾಳೆ ಬೆಳಗ್ಗೆ ರಾಜಭವನಕ್ಕೆ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಂತರ ಪ್ರತಿ ತಾಲ್ಲೂಕಿನಲ್ಲಿ 5 ಕಿಲೋ ಮೀಟರ್ ಉದ್ದ ಪಾದಯಾತ್ರೆ ಹಮ್ಮಿಕೊಂಡು ಪ್ರತಿ ಪಂಚಾಯತಿಯಲ್ಲಿ ಹೋರಾಟ ಮಾಡುತ್ತೇವೆ, ಇದಕ್ಕೆ ಪ್ರಜಾ ಪ್ರತಿನಿಧಿಗಳಿಗೆ, ಪಂಚಾಯತ್ ಸದಸ್ಯರಿಗೆ ಮತ್ತು ಮುಖಂಡರುಗಳಿಗೆ ನಿರ್ದೇಶನ ನೀಡಿದ್ದೇವೆ ಎಂದರು.
Updated By: Priyalachhi ಪಂಚಾಂಗ: ದಿನಾಂಕ : 27-01-2026 ವಾರ : ಮಂಗಳವಾರ ಸಂವತ್ಸರ : ವಿಶ್ವವಸು ಆಯನ : ಉತ್ತರಾಯಣ ಪಕ್ಷ : ಶುಕ್ಲ ತಿಥಿ : ನವಮಿ ನಕ್ಷತ್ರ : ಭರಣಿ ಸೂರ್ಯೋದಯ : ಮುಂಜಾನೆ 06:45 ಗಂಟೆಗೆ ಅಮೃತ ಕಾಲ : ಮಧ್ಯಾಹ್ನ 12:30 ರಿಂದ 01:57ರ ವರೆಗೆ ದುರ್ಮುಹೂರ್ತ : ಬೆಳಗ್ಗೆ 09:09 ರಿಂದ 09:57 ಹಾಗೂ ಮಧ್ಯಾಹ್ನ 12:21 ರಿಂದ 01:09ರ ತನಕ ರಾಹುಕಾಲ : ಮಧ್ಯಾಹ್ನ 03:23 ರಿಂದ 04:49ರ ವರೆಗೆ ಸೂರ್ಯಾಸ್ತ : ಸಂಜೆ 06:15 ಗಂಟೆಗೆ ರಾಶಿ ಭವಿಷ್ಯ ಮೇಷ: ಇಂದು, ನೀವು ಯಾರದೋ ಒಬ್ಬರ ಹೃದಯಕ್ಕೆ ಘಾಸಿಯುಂಟು ಮಾಡುತ್ತೀರಿ. ಮತ್ತೊಂದೆಡೆ, ನೀವು ಸ್ಥಿರವಾದ ಬಾಂಧವ್ಯಕ್ಕೆ ಬದ್ಧರಾಗಿರಲು ಕೂಡಾ ಬಯಸುತ್ತಿದ್ದೀರಿ. ವಿವಾಹಿತರಿಗೆ, ಬಂಧಗಳು ಸದೃಢವಾಗಿರುತ್ತವೆ. ವೃಷಭ: ನೀವು ಹಾಕಿದ ಕಠಿಣ ಪರಿಶ್ರಮದ ನಂತರವೂ ಪ್ರತಿಫಲ ತಕ್ಕಷ್ಟಿಲ್ಲ ಎಂದು ನೀವು ಕಾಣುತ್ತೀರಿ. ಮಧ್ಯಾಹ್ನದಂದು ನೀವು ಪ್ರಯಾಣ ಮಾಡಲು ಉತ್ಸಾಹದಲ್ಲಿರುವುದಿಲ್ಲ, ಆದರೆ ಸಂಜೆಗಳು ನಿಮ್ಮ ಪ್ರೀತಿಪಾತ್ರರೊಂದಿಗೆ…
Updated By: Priyalachhi ಬೆಳಗಾವಿ: ಮಹಾರಾಷ್ಟ್ರ ಗಡಿಯಲ್ಲಿರುವ ಚೋರ್ಲಾ ಘಾಟ್ ನಲ್ಲಿ ಸಿನಿಮಾ ರೀತಿಯಲ್ಲಿ 400 ಕೋಟಿ ರೂ. ದರೋಡೆ ನಡೆದಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂ ಹಣ ಸಾಗಿಸುತ್ತಿದ್ದ 2 ಕಂಟೇನರ್ಗಳನ್ನು ಹೈಜಾಕ್ ಮಾಡಲಾಗಿದೆ. ಈ ಪ್ರಕರಣ ಬಗ್ಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಮಹಾರಾಷ್ಟ್ರ ಪೊಲೀಸರು ತನಿಖೆ ಮಾಡುತ್ತಿದ್ದು, ನಾವು ಸಹಕಾರ ಕೊಡುತ್ತೇವೆ. ಚೋರ್ಲಾ ಘಾಟ್ ಮೂರು ರಾಜ್ಯಗಳಿಗೆ ಸಂಬಂಧಿಸಿದೆ. ಇಲ್ಲಿ ಘಟನೆ ಆಗಿರುವ ಕಾರಣ ಯಾರೇ ಬಂದು ದೂರು ಕೊಟ್ಟರೂ ನಾವು ತೆಗೆದುಕೊಳ್ಳುತ್ತೇವೆ ಎಂದರು. ಜನವರಿ 6 ರಂದು ನಾಸಿಕ್ ಎಸ್ ಪಿಯಿಂದ ನಮಗೆ ಪತ್ರ ಬರುತ್ತೆ. ಚೋರ್ಲಾ ಘಾಟ್ ನಲ್ಲಿ ರಾಬರಿಯಾಗಿದೆ. ಹಳೆಯ 400 ಕೋಟಿ ರೂ.ಆಗಿರಬಹುದು ಅಂತಾ ಪತ್ರದಲ್ಲಿತ್ತು.ಈ ಕಾರಣಕ್ಕೆ ಖಾನಾಪುರದ ಸಬ್ ಇನ್ಸ್ ಪೆಕ್ಟರ್ ಸೇರಿ ಒಂದು ತಂಡವನ್ನು ಕಳುಹಿಸಿದ್ದೇವೆ ಎಂದರು. ಡಿವೈಎಸ್ಪಿ ಈ ವಿಷಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಪ್ರತಿದಿನವೂ ಮಾಹಿತಿ ನೀಡುತ್ತಿದ್ದಾರೆ. ನಾಸಿಕ್ ಪೊಲೀಸರು ಹಿರಿಯ…
Updated By: Priyalachhi ನವದೆಹಲಿ: ಭಾರತದ 77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತೀಯ ವಾಯುಪಡೆಯ ವಿಮಾನಗಳ ರೋಮಾಂಚಕ ವೈಮಾನಿಕ ಪ್ರದರ್ಶನ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿತು. 16 ಯುದ್ಧ ವಿಮಾನಗಳು, ನಾಲ್ಕು ಸಾರಿಗೆ ವಿಮಾನಗಳು ಮತ್ತು ಒಂಬತ್ತು ಹೆಲಿಕಾಪ್ಟರ್ಗಳು ಸೇರಿದಂತೆ ಒಟ್ಟು 29 ವಾಯುಪಡೆಯ ವಿಮಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡವು. ಇವುಗಳಲ್ಲಿ ಎರಡು ರಫೆಲ್ ಜೆಟ್ ಗಳು, ಎರಡು ಮಿಗ್-29,ಎರಡು SU-30 ಮತ್ತು ಒಂದು ಜಾಗ್ವಾರ್ ವಿಮಾನಗಳು ‘ಸಿಂಧೂರ ತಿಲಕ’ ರಚನೆಯಕಾರದಲ್ಲಿ ಹಾರಾಟ ನಡೆಸಿದವು. ಕಳೆದ ವರ್ಷ ಮೇ ತಿಂಗಳಲ್ಲಿ ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯ ಪಾತ್ರವನ್ನು ಸ್ಮರಿಸುವ ನಿಟ್ಟಿನಲ್ಲಿ ಈ ಪ್ರದರ್ಶನ ನಡೆಸಲಾಯಿತು.
Updated By: Priyalachhi ಬೆಂಗಳೂರು: ಮತದಾರರು ತಮ್ಮ ಮತದಾನದ ಹಕ್ಕನ್ನು ಭಯ, ಒತ್ತಡ ಮತ್ತು ಯಾವುದೇ ಪ್ರಚೋದನೆಯಿಲ್ಲದೆ ಮುಕ್ತವಾಗಿ ಮತ್ತು ನ್ಯಾಯಯುತವಾಗಿ ಚಲಾಯಿಸಬೇಕೆಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಕರೆ ನೀಡಿದ್ದಾರೆ. ರಾಜ್ಯ ಚುನಾವಣಾ ಆಯೋಗವು ನಗರದಲ್ಲಿ ಆಯೋಜಿಸಿದ್ದ 16 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಮಾತನಾಡಿದರು. ಚುನಾವಣಾ ಕಾರ್ಯಕ್ಷಮತೆಯಲ್ಲಿನ ಶ್ರೇಷ್ಠತೆಗಾಗಿ ಭಾರತ ಚುನಾವಣಾ ಆಯೋಗವು ನೀಡುವ ರಾಜ್ಯ ಮಟ್ಟದ ಪ್ರಶಸ್ತಿಗಳನ್ನೂ ರಾಜ್ಯಪಾಲರು ವಿತರಿಸಿದರು. ಅತ್ಯುತ್ತಮ ಚುನಾವಣಾ ಕಾರ್ಯ ನಿರ್ವಹಿಸಿದ ತುಮಕೂರು ಜಿಲ್ಲೆಯ ಶುಭಾ ಕಲ್ಯಾಣ್, ಚಾಮರಾಜ ನಗರದ ಶಿಲ್ಪಾನಾಗ್ ಸಿ.ಟಿ, ಕೊಪ್ಪಳದ ಸುರೇಶ್ ಬಿ. ಇಟ್ನಾಳ್, ಹಾವೇರಿಯ ಡಾ.ವಿಜಯ ಮಹಾಂತೇಶ ಬಿ. ದಾನಮ್ಮನವರ್, ಬೆಂಗಳೂರು ನಗರದ ಜಿ. ಜಗದೀಶ್ ಹಾಗೂ ಯಾದಗಿರಿಯ ಡಾ. ಸುಶೀಲಾ ಬಿ ಅವರಿಗೆ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದರು.
Updated By: Priyalachhi ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ದಾಖಲೆಯ ಒಂಬತ್ತನೇ ಬಜೆಟ್ಗೆ ಅಂತಿಮ ಸ್ಪರ್ಶ ನೀಡಲು ಆರಂಭಿಸಿದ್ದಾರೆ. 9ನೇ ಬಜೆಟ್ ಮಂಡಿಸಲು ಅಣಿಯಾಗುತ್ತಿರುವ ಸಚಿವರಿಗೆ ಹಣಕಾಸು ಸಚಿವಾಲಯದ ಅನುಭವಿ ಅಧಿಕಾರಿಗಳ ತಂಡವು ಸಹಾಯ ಮಾಡುತ್ತಿದೆ. 1. ಅನುರಾಧಾ ಠಾಕೂರ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆಗಿರುವ ಇವರು ಬಜೆಟ್ನ ಪ್ರಾಥಮಿಕ ವಾಸ್ತುಶಿಲ್ಪಿ. ಇಲಾಖೆಯ ಮುಖ್ಯಸ್ಥೆಯಾಗಿ, ಅವರು 2026-27ರ ಸಂಪನ್ಮೂಲಗಳ ಹಂಚಿಕೆ ಮತ್ತು ಸ್ಥೂಲ-ಆರ್ಥಿಕ ಚೌಕಟ್ಟನ್ನು ನಿರ್ಧರಿಸುವ ಪ್ರಮುಖ ಅಧಿಕಾರಿಯಾಗಿದ್ದಾರೆ. ಬಜೆಟ್ ದಾಖಲೆಗಳನ್ನು ಸಿದ್ಧಪಡಿಸುವ ಜವಾಬ್ದಾರಿಯುತ ಬಜೆಟ್ ವಿಭಾಗವನ್ನು ಅವರು ಮುನ್ನಡೆಸುತ್ತಾರೆ. 1994ರ ಬ್ಯಾಚ್ನ ಹಿಮಾಚಲ ಪ್ರದೇಶ ಕೇಡರ್ನ ಐಎಎಸ್ ಅಧಿಕಾರಿ ಠಾಕೂರ್, ಜುಲೈ 1, 2025 ರಂದು ಇಲಾಖೆಯ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ ಇದು ಅವರ ಮೊದಲ ಬಜೆಟ್ ಆಗಲಿದೆ. ಕುತೂಹಲಕಾರಿ ವಿಷಯ ಎಂದರೆ ಇವರು ಈ ಇಲಾಖೆಯ ಮುಖ್ಯಸ್ಥರಾಗಿರುವ ಮೊದಲ ಮಹಿಳಾ ಐಎಎಸ್ ಅಧಿಕಾರಿ. 2. ಅರವಿಂದ್ ಶ್ರೀವಾಸ್ತವ, ಕಂದಾಯ ಕಾರ್ಯದರ್ಶಿ ಆಗಿದ್ದು ಇವರು ತೆರಿಗೆ ಪ್ರಸ್ತಾವನೆಗಳಿಗೆ ಜವಾಬ್ದಾರರು (ಬಜೆಟ್ ಭಾಷಣದ…
Updated By: Priyalachhi ಬೆಂಗಳೂರು: ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಹೇಳಿದ್ದಾರೆ. ಕನಕಪುರ ಸಮೀಪದ ರಾಮ ಮಂದಿರ ಉದ್ಘಾಟನೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಡದಿ ಟೌನ್ಶಿಪ್ ಬಗ್ಗೆ ಕುಮಾರಸ್ವಾಮಿಯವರೊಂದಿಗೆ ಚರ್ಚೆಗೆ ನಾನು ಸಿದ್ಧ. ದಿನಾಂಕವನ್ನು ಮಾಧ್ಯಮವೇ ನಿಗದಿ ಮಾಡಲಿ. ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಚರ್ಚೆಗೆ ನಾನು ಸಮ್ಮತಿಸಿದ್ದೆ. ಈಗಲೂ ಅವರನ್ನೇ ಚರ್ಚೆಗೆ ಆಹ್ವಾನಿಸುತ್ತಿದ್ದೇನೆಂದು ಪ್ರತಿ ಸವಾಲು ಹಾಕಿದರು. ಕುಮಾರಸ್ವಾಮಿ ಚರ್ಚೆಗೆ ಯಾವಾಗ ಸಿದ್ಧರಿರುತ್ತಾರೋ ಆಗ ನಾನು ಸಿದ್ಧ. ಮೂರು ದಿನಗಳ ಮುಂಚಿತವಾಗಿ ತಿಳಿಸಿದರೆ ಸಾಕು, ಚರ್ಚೆಗೆ ಬರಲು ಸಮಯ ಮಾಡಿಕೊಳ್ಳುತ್ತೇನೆ. ಈ ಯೋಜನೆ ರಾಜಕೀಯದ ವಿಷಯವಾಗುತ್ತಿದೆ. ಈ ಯೋಜನೆಯನ್ನು ಆರಂಭಿಸಿದ್ದು ನಾನಲ್ಲ, ಕುಮಾರಸ್ವಾಮಿಯವರೇ ಎಂದು ಹೇಳಿದರು. ಬಿಡದಿ ಟೌನ್ಶಿಪ್ ಯೋಜನೆಗೆ ತಾನು ಅವಕಾಶ ನೀಡುವುದಿಲ್ಲ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ, “ರೈತರಿಗೆ 800 ಚದರ ಅಡಿ…
Subscribe to Updates
Get the latest creative news from FooBar about art, design and business.