Author: Sambrama Prabha News
'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)
Updated By: Priyalachhi ಬೆಂಗಳೂರು: ಲಿಂಗಾಯತ ಮತ್ತು ಬಸವ ಕಾರ್ಯಕರ್ತರು ಯಾವುದೇ ಪಕ್ಷಕ್ಕೆ ಕೇವಲ ಮತಬ್ಯಾಂಕ್ ಆಗಿ ಉಳಿಯಲು ಬಯಸುವುದಿಲ್ಲ, ಮತ್ತು ರಾಜಕೀಯ ಜಾಗೃತಿ ಮೂಡಿಸಲು ಮತ್ತು ಸಮುದಾಯವನ್ನು ಬಲಪಡಿಸಲು ‘ಬಸವ ಶಕ್ತಿ’ ಸಮಾವೇಶ ಎಂಬ ಕಾರ್ಯಕ್ರಮವನ್ನು ಯೋಜಿಸುತ್ತಿದ್ದಾರೆ. ಜೈನ, ಬೌದ್ಧ ಮತ್ತು ಸಿಖ್ ಧರ್ಮದ ಮಾದರಿಯಲ್ಲಿ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಬೇಡಿಕೆಯೊಂದಿಗೆ, ಲಿಂಗಾಯತ ಸಮುದಾಯದ ಗುರುತನ್ನು ಎತ್ತಿ ತೋರಿಸುವ ಇತ್ತೀಚಿನ ಜನಸಾಮಾನ್ಯರ ಅಭಿಯಾನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಲಿಂಗಾಯತ ಮತಗಳನ್ನು ಬಳಸಿಕೊಂಡು ಚುನಾಯಿತರಾಗುವ ಆದರೆ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುವ ರಾಜಕಾರಣಿಗಳ ವಿರುದ್ಧ ಕಾರ್ಯಕರ್ತರು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ ವರ್ಷ, ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಸಭೆಗಳ ಸರಣಿಯನ್ನು ನಡೆಸಲಾಯಿತು. ಹಲವಾರು ಜಿಲ್ಲೆಗಳಲ್ಲಿ ಸರಾಸರಿ 50,000 ಜನರು ಭಾಗವಹಿಸಿದ್ದರು. ಈ ಅಭಿಯಾನವು 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಮೇಲೆ ಕೇಂದ್ರೀಕರಿಸಿತು. ಪ್ರಮುಖ ಹಣಕಾಸು ಅಥವಾ ರಾಜಕೀಯ ಬೆಂಬಲವಿಲ್ಲದೆ, ತಳಮಟ್ಟದಲ್ಲಿ ಸಜ್ಜುಗೊಳಿಸುವ ಸಮುದಾಯದ…
Updated By: Priyalachhi ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕೇರಳದ ಪ್ರಸಿದ್ಧ ಯಾತ್ರಾ ಕ್ಷೇತ್ರ ಶಬರಿಮಲೆಯಲ್ಲಿ ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರವನ್ನು ಕರ್ನಾಟಕ ಸರ್ಕಾರ ತೆರೆದಿದೆ. ವಿಶೇಷ ಮಾಹಿತಿ ಮತ್ತು ತುರ್ತು ಸಂದರ್ಭಗಳಲ್ಲಿ ಇದು ನೆರವಿಗೆ ಬರಲಿದೆ. ಶಬರಿಮಲೆಯಲ್ಲಿ ನಡೆಯುವ ಮಂಡಲ ಪೂಜೆ ಮತ್ತು ಮಕರವಿಳಕ್ಕು ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಹೆಚ್ಚಿನ ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ. ಈ ಕಾರಣದಿಂದಾಗಿ ಯಾತ್ರಾರ್ಥಿಗಳಿಗೆ ಸೂಕ್ತ ಸಹಕಾರ ನೀಡಲು ಮತ್ತು ಮಾಹಿತಿ ಒದಗಿಸಲು ಸಹಾಯವಾಣಿ ಕೇಂದ್ರವನ್ನು ಮುಜರಾಯಿ ಇಲಾಖೆ ಆರಂಭಿಸಿದೆ. ಜ.14ರಿಂದ 19ರ ತನಕ ಸಹಾಯವಾಣಿ ಕೇಂದ್ರ ಕೆಲಸ ಮಾಡಲಿದೆ. ಬೆಂಗಳೂರಿನ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಂ.ಮೋಹನ್ ಕುಮಾರ್, ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಚೇರಿ ಅಧೀಕ್ಷಕ ಕೆ.ಎಂ.ಗೋಪಿನಾಥ್ ನಂಬೀಶ, ಕುಕ್ಕೆ ದೇವಳದ ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್ ಅವರನ್ನು ಸಹಾಯವಾಣಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಮುಜರಾಯಿ ಇಲಾಖೆ ನಿಯೋಜಿಸಿದೆ. ಸಂಕ್ರಾತಿ ವೇಳೆ ಅತ್ಯಧಿಕ ಸಂಖ್ಯೆಯಲ್ಲಿ ಕರ್ನಾಟದ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳುವ ಕಾರಣ ತುರ್ತು…
Updated By: Priyalachhi ಬೆಂಗಳೂರು: ಇತ್ತೀಚಿಗೆ ಮೈಸೂರಿನಲ್ಲಿ ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವುದರ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಾಡಿಕೆಯಂತೆ ರಾಹುಲ್ ಗಾಂಧಿ ಅವರೊಂದಿಗೆ ರಾಜಕೀಯ ಕುರಿತಂತೆ ಮಾತನಾಡಿದ್ದೇನೆ. ವಿವಿಧ ವಿಷಯಗಳ ಬಗ್ಗೆ ಪಕ್ಷದ ನಾಯಕತ್ವದೊಂದಿಗೆ ಮಾತನಾಡುವುದು ಮುಂದುವರೆಯುತ್ತದೆ ಎಂದು ಹೇಳಿದ್ದರೂ ಅದಕ್ಕೆ ಹೆಚ್ಚಿನ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ಈ ಮಧ್ಯೆ “ಪ್ರಯತ್ನ ವಿಫಲವಾಗಬಹುದು ಆದರೆ ಪ್ರಾರ್ಥನೆಗಳು ವಿಫಲ ಆಗುವುದಿಲ್ಲ’ ಎಂದು ಮತ್ತೆ ಗೂಡಾರ್ಥದ ಟ್ವೀಟ್ ಮಾಡಿದ್ದಾರೆ. ಮಂಗಳವಾರ ತಮಿಳುನಾಡಿಗೆ ತೆರಳುತ್ತಿದ್ದ ರಾಹುಲ್ ಗಾಂಧಿ ಅವರನ್ನು ಡಿಕೆ ಶಿವಕುಮಾರ್ ಭೇಟಿಯಾಗಿದ್ದರು. ನಂತರ ಇಬ್ಬರ ನಡುವಿನ ಚರ್ಚೆ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಾನು ಅವರೊಂದಿಗೆ ಮಾತನಾಡಿಲ್ಲ ಎಂದು ಹೇಳುವುದಿಲ್ಲ. ನಾವು ಏನು ಚರ್ಚಿಸಿದ್ದೇವೆ ಎಂಬುದನ್ನು ಬಹಿರಂಗಪಡಿಸಲಾರೆ. ಅದು ನನ್ನ ಮತ್ತು ಅವರ ನಡುವೆ ಇದೆ. ಶುಕ್ರವಾರ ದೆಹಲಿಗೆ ತೆರಳಿ ರಾಹುಲ್ ಗಾಂಧಿ…
Updated By: Priyalachhi ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ಅಮೀರ್ ಖಾನ್ ಗುರುವಾರ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಮತ ಚಲಾಯಿಸಿದ ಬಳಿಕ ಮತದಾನದ ಮಹತ್ವದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಟ್ಟೆಯಲ್ಲಿನ ವ್ಯವಸ್ಥೆಗಳನ್ನು ಶ್ಲಾಘಿಸಿದರು. ಮತದಾನ ಮತ್ತು BMC ವ್ಯವಸ್ಥೆ ಕುರಿತು ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ಅಮೂಲ್ಯವಾದ ಮತಗಳನ್ನು ಖಂಡಿತವಾಗಿ ಚಲಾಯಿಸುವಂತೆ ನಾನು ಹೇಳುತ್ತೇನೆ BMC ಇಲ್ಲಿ ಉತ್ತಮ ವ್ಯವಸ್ಥೆಗಳನ್ನು ಮಾಡಿದೆ ಎಂದರು. ಅಮೀರ್ ಖಾನ್ ಮರಾಠಿಯಲ್ಲಿ ಮಾತನಾಡುತ್ತಿದ್ದಂತೆ, ಕೆಲವು ಮಾಧ್ಯಮದವರು ಹಿಂದಿಯಲ್ಲಿ ಸಂದೇಶವನ್ನು ಪುನರಾವರ್ತಿಸುವಂತೆ ಕೇಳಿದರು. ಆಗ ನಗುತ್ತಾ ಹೇಳಿದ ಅಮೀರ್ ಖಾನ್ “Hindi mein? ಇದು ಮಹಾರಾಷ್ಟ್ರ ಎಂದರು. ಆಗ ಪತ್ರಕರ್ತರೊಬ್ಬರು ತಮ್ಮ ಸಂದೇಶ ದೆಹಲಿಯಲ್ಲೂ ಪ್ರಸಾರ ಆಗುತ್ತೆ ಎಂದಾಗ, “ಓಹ್, ಅದು ದೆಹಲಿಗೂ ಹೋಗುತ್ತದೆಯೇ? ಉತ್ತಮ ವ್ಯವಸ್ಥೆ ಮಾಡಲಾಗಿದೆ, ನಾನು ಎಲ್ಲರಿಗೂ ಮನವಿ ಮಾಡುತ್ತೇನೆ: ಬಂದು ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಎಂದು ಹೇಳಿದರು.
Updated By: Priyalachhi ಇಂದಿನ ಪಂಚಾಂಗ ದಿನಾಂಕ : 15-01-2026 ವಾರ : ಗುರುವಾರ ಸಂವತ್ಸರ : ವಿಶ್ವವಸು ಆಯನ : ಉತ್ತರಾಯಣ ತಿಥಿ : ಕೃಷ್ಣ ಮಾಸ : ದ್ವಾದಶಿ ನಕ್ಷತ್ರ : ಜ್ಯೇಷ್ಠ ಸೂರ್ಯೋದಯ : ಮುಂಜಾನೆ 6:45ಕ್ಕೆ ಅಮೃತ ಕಾಲ : ಮುಂಜಾನೆ 09:36 ರಿಂದ 11:01ರ ವರೆಗೆ ದುರ್ಮೂಹೂರ್ತ : ಮುಂಜಾನೆ 10:45 ರಿಂದ 11:33 ಮತ್ತು 15:33 ರಿಂದ 16:21ರ ವರೆಗೆ ರಾಹುಕಾಲ : ಮಧ್ಯಾಹ್ನ 13:52 ರಿಂದ 15:18ರ ವರೆಗೆ ಸೂರ್ಯಾಸ್ತ : ಸಂಜೆ 06:09ಕ್ಕೆ ಇಂದಿನ ರಾಶಿ ಭವಿಷ್ಯ ಮೇಷ : ಇಂದು ನೀವು ಗಾಢವಾದ ನಿಗೂಢ ಮತ್ತು ಅತಿಮಾನುಷ ವಿಷಯಗಳತ್ತ ಆಸಕ್ತಿ ವಹಿಸುತ್ತೀರಿ, ನೀವು ಅದಕ್ಕೆ ಸಂಬಂಧಿಸಿ ಏನೋ ಒಂದು ಆನಂದಿಸಬಹುದು. ನೀವು ಈ ವಿಷಯಗಳ್ನು ವಿವರವಾಗಿ ಚರ್ಚಿಸುವ ಪುಸ್ತಕಗಳ ಮೇಲೆ ಖರ್ಚು ಮಾಡುತ್ತೀರಿ ಮತ್ತು ಈ ಅಂಶಗಳನ್ನು ವಿವರವಾಗಿ ಚರ್ಚಿಸುತ್ತೀರಿ. ನೀವು ಅಂತಹ ಮಾಹಿತಿಯನ್ನು ಶಾಂತಿಯುತ ಕಾರಣಕ್ಕೆ ಮಾತ್ರ ಬಳಸಬೇಕು ಯುದ್ಧಕ್ಕಲ್ಲ. ವೃಷಭ : ಇಂದು ನೀವು ನಿಮ್ಮ ಸಕಾರಾತ್ಮಕ ಹೊರನೋಟ ಅಥವಾ ಒಳ್ಳೆಯ ಸ್ವಭಾವ ಬದಲಾಯಿಸುವವರನ್ನು…
Updated By: Priyalachhi ಬೆಂಗಳೂರು: ಮೆಟ್ರೋ, ಸುರಂಗ ಮಾರ್ಗದಿಂದ ತೊಂದರೆ ಇಲ್ಲ. ಈ ಭಾಗದಲ್ಲಿ ಮೆಟ್ರೋ ಹಾಗೂ ಸುರಂಗದಿಂದ ಲಾಲ್ಬಾಗ್ಗೆ ತೊಂದರೆಯಾಗುತ್ತದೆ ಎಂದು ಕೆಲವರು ರಾಜಕಾರಣ ಮಾಡಿದ್ದಾರೆ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಲಾಲ್ಬಾಗ್ನಲ್ಲಿ ಏರ್ಪಡಿಸಲಾಗಿರುವ ಪೂರ್ಣಚಂದ್ರ ತೇಜಸ್ವಿ ಕುರಿತ ತೇಜಸ್ವಿ ವಿಸ್ಮಯ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಲಾಲ್ಬಾಗ್ ಐತಿಹಾಸಿಕ ಉದ್ಯಾನವಾಗಿದ್ದು, ಅದನ್ನು ಕಾಪಾಡಲು ಬೇರೆಯವರಿಗಿಂತ ಹೆಚ್ಚಿನ ಆಸಕ್ತಿ ನನಗಿದೆ. ನಾಗರಿಕರ ಸೌಲಭ್ಯಕ್ಕೆ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಬೆಂಗಳೂರು ನಗರದ ಜನಸಂಖ್ಯೆ 70 ಲಕ್ಷದಿಂದ 1.50 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಇಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಬೇಕಾಗಿದೆ. ಎಲ್ಲಾ ಪಾರ್ಕ್ ಹಾಗೂ ಕೆರೆ ಉಳಿಸುವುದು ನಮ್ಮ ಕರ್ತವ್ಯ. ಅದಕ್ಕೆ ಅಗತ್ಯ ಕ್ರಮವನ್ನು ನಮ್ಮ ಸರ್ಕಾರ ಕೈಗೊಳ್ಳುತ್ತಿದೆ ಎಂದು ಭರವಸೆ ನೀಡಿದರು. ಬೆಂಗಳೂರಿನ ನಾಗರೀಕರು, ಶಾಲಾ ಮಕ್ಕಳು, ವಿದ್ಯಾರ್ಥಿಗಳು 10 ದಿನಗಳ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಇದಕ್ಕೆ…
Updated By: Priyalachhi ಶಬರಿಮಲೆ, ಕೇರಳ: ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆಯಲ್ಲಿ ಮಕರ ಜ್ಯೋತಿ ರೂಪದಲ್ಲಿ ಭಗವಾನ್ ಅಯ್ಯಪ್ಪ ತನ್ನ ಭಕ್ತರಿಗೆ ಕಾಣಿಸಿಕೊಂಡರು. ಮಕರ ಜ್ಯೋತಿ ದರ್ಶನ ಪಡೆದ ಭಕ್ತರು ಮಣಿಕಂಠನ ಜಪ ಮಾಡಿ ಭಕ್ತಿ ಸಮರ್ಪಿಸಿದರು. ತಿರುವಾ ಭರಣ ಘಟ್ಟದ ನಂತರ ಮಕರ ಜ್ಯೋತಿ ಪೊನ್ನಂಬಲಮೇಡು ಪರ್ವತದ ಶಿಖರಗಳ ಮೇಲೆ ಕಾಣಿಸಿಕೊಂಡಿತು. ಜ್ಯೋತಿಯ ದರ್ಶನ ಪಡೆಯಲು ಲಕ್ಷಾಂತರ ಅಯ್ಯಪ್ಪ ಭಕ್ತರು ಶಬರಿಮಲೆಯಲ್ಲಿ ಸೇರಿದ್ದರು. ಶಬರಿ ಬೆಟ್ಟಗಳು ಅಯ್ಯಪ್ಪ ನಾಮ ಜಪದಿಂದ ತುಂಬಿ ಹೋಗಿದ್ದವು. ಕಾಂತಮಾಲೆ ಬೆಟ್ಟಗಳ ಮೇಲೆ ಭಗವಂತನಿಗೆ ಆರತಿ ಮಾಡಲು ದೇವರುಗಳು ಮತ್ತು ಋಷಿ ಮುನಿಗಳು ಒಟ್ಟಾಗಿ ಬರುತ್ತಾರೆ ಎಂಬುದು ಅಯ್ಯಪ್ಪ ಭಕ್ತರ ಆಳವಾದ ನಂಬಿಕೆ. ಇದಕ್ಕೂ ಮೊದಲು ಮುಖ್ಯ ಅರ್ಚಕರು ಪಂದಳಗಳಿಂದ ತಂದ ತಿರುವಾ ಭರಣದಿಂದ ಭಗವಂತನನ್ನು ಅಲಂಕರಿಸಿದ್ದರು. ಆ ಬಳಿಕ ಮೂಲ ದೇವರಿಗೆ ಆರತಿ ಮಾಡಲಾಯಿತು. ತಕ್ಷಣವೇ ಕತ್ತಲೆಯನ್ನು ಹೋಗಲಾಡಿಸಲು ಎಂಬಂತೆ ಪೊನ್ನಂಬಲಮೇಡು ಪರ್ವತದ ಶಿಖರಗಳ ಮೇಲೆ ಮಕರ ಜ್ಯೋತಿ ಕಾಣಿಸಿಕೊಂಡಿತು. ಅದನ್ನು ಕಣ್ತುಂಬಿಕೊಂಡ ಭಕ್ತರು ಅಯ್ಯಪ್ಪ ಸ್ವಾಮಿ…
Updated By: Priyalachhi ಬೆಂಗಳೂರು: ಮಕರ ಸಂಕ್ರಾಂತಿ ದಿನವಾದ ಗುರುವಾರ ಸಂಜೆ ನಗರ ಗವಿಗಂಗಾಧರೇಶ್ವರ ದೇಗುಲ ಗರ್ಭಗುಡಿಯನ್ನು ಸೂರ್ಯರಶ್ಮಿಗಳು ಪ್ರವೇಶಿಸಲಿವೆ. ಸೂರ್ಯರಶ್ಮಿಯ ನೆಲಮಟ್ಟಕ್ಕಿಂತ 120 ಅಡಿ ಆಳದಲ್ಲಿರುವ ಗವಿ ಗಂಗಾಧರೇಶ್ವರ ಸ್ವಾಮಿಯ ಗರ್ಭಗುಡಿಯನ್ನು ಸಂಜೆ 5:02 ರಿಂದ 5:05 ಮಧ್ಯದಲ್ಲಿ 2 ನಿಮಿಷ ಹಾದು ಹೋಗಲಿದೆ. ಇದರಂತೆ ದೇಗುಲದಲ್ಲಿ ಈಗಾಗಲೇ ವಿಶೇಷ ಪೂಜೆಗಳು ಆರಂಭವಾಗಿದ್ದು, ಶಿವನ ಲಿಂಗಕ್ಕೆ ಹಾಲು, ಎಳನೀರಿನ ಅಭಿಷೇಕಗಳನ್ನು ನಡೆಸಲಾಗುತ್ತದೆ. ಗವಿಗಂಗಾಧರೇಶ್ವ ಸ್ವಾಮಿ ದೇಗುಲ 16ನೇ ಶತಮಾನದ ಕೆಂಪೇಗೌಡರ ಕಾಲದ್ದಾಗಿದ್ದು, ದೇಗುಲದಲ್ಲಿ ಸಾಕಷ್ಟು ಕೌತುಕಗಳು ಅಡಗಿವೆ ಎಂದು ಹೇಳಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಸೂರ್ಯನ ಕಿರಣಗಳು ನಂದಿಯ ತಲೆಯ ಮಧ್ಯಭಾಗದ ಮೂಲಕ ಹಾದು ಗುಹೆಯೊಳಗಿರುವ ಶಿವಲಿಂಗದ ತಳಭಾಗವನ್ನು ಮೊದಲು ಸ್ಪರ್ಶಿಸುತ್ತದೆ. ನಂತರ ಸ್ವಲ್ಪ ಸ್ವಲ್ಪವಾಗಿ ಮೇಲೆ ಸಾಗುತ್ತ ಸುಮಾರು 1 ಗಂಟೆಗಳ ಕಾಲ ಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ ಮಾಡುತ್ತದೆ.
Updated By: Priyalachhi ಬೆಂಗಳೂರು: ಎಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತಿದೆ. ವಿಶೇಷವಾಗಿ ಗವಿಪುರದಲ್ಲಿರುವ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ದೇವಾಲಯ ಇಂದು ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಗವಿಗಂಗಾಧರ ದೇವಸ್ಥಾನದ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಲಿದ್ದು, ಈ ವಿಶೇಷ ಕೌತುಕಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೂರ್ಯ ದಕ್ಷಿಣಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವ ವೇಳೆ ಸೂರ್ಯ ಕಿರಣವು ಶಿವ ಲಿಂಗವನ್ನು ಸ್ಪರ್ಶಿಸಲಿದೆ. ಹೀಗಾಗಿ ಇಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಬೆಳ್ಳಗ್ಗೆ 5 ಗಂಟೆಯಿಂದಲೇ ಗಂಗಾಧರನಿಗೆ ವಿಶೇಷ ಪೂಜೆ ಆರಂಭವಾಗಿದೆ. ಗಂಗಾಧರನಿಗೆ ಪಂಚಾಭೀಷೇಕ, ಪುಷ್ಪಾಭಿಷೇಕ, ಮಹಮಂಗಳಾರತಿ ಮಾಡಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ವಿಶೇಷ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲಿರುವ ಭಕ್ತರು ಕಾತರದಿಂದ ಇದ್ದು, ಸಾವಿರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರುವ ನಿರೀಕ್ಷೆ ಇದೆ. ಹಬ್ಬದ ಹಿನ್ನೆಲೆ ಮುಂಜಾನೆಯಿಂದಲೇ ದೇಗುಲಕ್ಕೆ ಭಕ್ತಸಾಗರ ಹರಿದುಬರುತ್ತಿದೆ.
Updated By: Priyalachhi ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ(ಕೆಎಸ್ಸಿಸಿಎಫ್)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 34 ಹುದ್ದೆಗಳ ನೇಮಕಾತಿ ನಡೆಯಲಿದೆ. ಹುದ್ದೆಗಳ ವಿವರ: ಫಾರ್ಮಸಿಸ್ಟ್ – 7 ಪ್ರಥಮ ದರ್ಜೆ ಗುಮಾಸ್ತರು – 10 ವಿಕ್ರಯ ಸಹಾಯಕರು – 16 ವಿಕ್ರಯ ಸಹಾಯಕರು – 01 ವಿದ್ಯಾರ್ಹತೆ: ಫಾರ್ಮಸಿಸ್ಟ್ – ಡಿಪ್ಲೋಮಾ ಇನ್ ಫಾರ್ಮಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಪ್ರಥಮ ದರ್ಜೆ ಗುಮಾಸ್ತರು – ಅಧಿಕೃತ ವಿವಿಯಿಂದ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ವಿಕ್ರಯ ಸಹಾಯಕರು – ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕು. ಮೇಲಿನ ಎಲ್ಲ ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನದೊಂದಿಗೆ ಕನ್ನಡ ಭಾಷಾ ಜ್ಞಾನ ಹೊಂದಿರಬೇಕು. ಅರ್ಜಿ ಸಲ್ಲಿಕೆ ಹೇಗೆ?: ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಪ.ಜಾತಿ, ಪ್ರವರ್ಗ ಎ, ಪ.ಜಾತಿ ಪ್ರ.ಬಿ, ಪ.ಜಾತಿ ಪ್ರ.ಸಿ, ಪ.ಪಂ, ಪ್ರ.1 ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 500 ರೂ ಹಾಗೂ ಇತರೆ ಅಭ್ಯರ್ಥಿಗಳಿಗೆ 1,000 ರೂ ನಿಗದಿಪಡಿಸಲಾಗಿದೆ.…
Subscribe to Updates
Get the latest creative news from FooBar about art, design and business.