Author: Sambrama Prabha News
'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)
Updated By: Priyalachhi ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲು ಶೀಘ್ರವೇ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಗ್ರಾಮೀಣ ಕಾರ್ಮಿಕರ ಉದ್ಯೋಗದ ಹಕ್ಕನ್ನು ರಕ್ಷಿಸಲು AICC ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ “ನರೇಗಾ ಉಳಿಸಿ” ಜನಾಂದೋಲನ ಆಯೋಜಿಸುವ ಕುರಿತಂತೆ ಹೋಟೆಲ್ ಅಶೋಕದಲ್ಲಿ ನಡೆದ ಹಿರಿಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿ ಮಾತನಾಡಿದರು. ಈ ವೇಳೆ ವಿಶೇಷ ವಿಧಾನಮಂಡಲ ಅಧಿವೇಶನ ಕರೆಯುವುದಾಗಿ ತಿಳಿಸಿದ್ದಾರೆ. ಇದು ಬಿಜೆಪಿಯವರ ಹುನ್ನಾರ. ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂತು. ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆ. ದಲಿತರು, ಮಹಿಳೆಯರು, ರೈತರಿಗೆ ಉದ್ಯೋಗ ಒದಗಿಸುವುದು ಯೋಜನೆ ಉದ್ದೇಶ. ವರ್ಷದಲ್ಲಿ ನೂರು ದಿನ ಉದ್ಯೋಗ ಅವಕಾಶ ಈ ಯೋಜನೆಯಲ್ಲಿ ಸಿಗುತ್ತಿತ್ತು ಎಂದು ವಿವರಿಸಿದರು. ಈ ಉದ್ಯೋಗವನ್ನೇ…
Updated By: Priyalachhi ಬೆಂಗಳೂರು: ಕೋಗಿಲು ಬಡಾವಣೆ ತೆರವು ಪ್ರಕರಣದಲ್ಲಿ ಸಂತ್ರಸ್ತರಾದ 161 ಕುಟುಂಬಗಳ ಪೈಕಿ ಕೇವಲ 26 ಮಂದಿಗಷ್ಟೇ ಪರ್ಯಾಯವಾಗಿ ಮನೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ಈ ಕುರಿತಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಹಿತಿ ನೀಡಿದ್ದು, 26 ಮಂದಿಯ ದಾಖಲೆ ಪರಿಶೀಲನೆ ನಡೆಸಲಾಗಿದೆ. ಕೋಗಿಲು ಸಂತ್ರಸ್ತರಿಗೆ ಮನೆ ನೀಡುವ ವಿಚಾರವಾಗಿ ಸಚಿವ ಕೃಷ್ಣಬೈರೇಗೌಡರು ನನಗೆ ಕರೆ ಮಾಡಿದ್ದರು. 26 ಜನರ ದಾಖಲೆ ಪರಿಶೀಲನೆ ಮುಗಿದಿದೆ ಎಂದು ಹೇಳಿದ್ದಾರೆ ಎಂದರು. ಕೋಗಿಲು ಸಂತ್ರಸ್ತರ ದಾಖಲೆಗಳನ್ನು ಇನ್ನು ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟು 261 ಮನೆಗಳ ಪೈಕಿ 161 ಮನೆಗಳನ್ನು ತೆರವು ಮಾಡಲಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅರ್ಜಿಗಳು ಜಾಸ್ತಿ ಬಂದಿವೆ. ಆದರೆ ಅವರಿಗೆಲ್ಲ ಮನೆಗಳು ಕೊಡಲು ಆಗುವುದಿಲ್ಲ. ಯಾರ ಮನೆಗಳನ್ನು ತೆರವು ಮಾಡಲಾಗಿದೆ ಅವರನ್ನು ಪರಿಗಣಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ತೀರ್ಮಾನ ಮಾಡಿದ್ದಾರೆ. ಸಂತ್ರಸ್ತರ ಪೈಕಿ ಸ್ಥಳೀಯರು ಹಾಗೂ…
Updated By: Priyalachhi ಬೆಂಗಳೂರು: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025ಯು ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಹೇಳಲು ವಿಷಾಧಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ. ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿ ಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಕಾಸರಗೋಡು ಇಂದು ಆಡಳಿತಾತ್ಮಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ ಅದು ಭಾವನಾತ್ಮಕವಾಗಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಜೊತೆ ಮಿಳಿತವಾಗಿದ್ದಾರೆ. ಅವರು ಕರ್ನಾಟಕದ ಕನ್ನಡಿಗರಿಗಿಂತ ಕಡಿಮೆ ಕನ್ನಡಿಗರೇನಲ್ಲ. ಅವರ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ…
Updated By: Priyalachhi ಇಂದಿನ ಪಂಚಾಂಗ: ದಿನಾಂಕ : 09-01-2026 ವಾರ : ಶುಕ್ರವಾರ ಸಂವತ್ಸರ : ವಿಶ್ವವಸು ಆಯನ : ಉತ್ತರಾಯಣ ತಿಥಿ : ಕೃಷ್ಣ ಮಾಸ : ಷಷ್ಠಿ ನಕ್ಷತ್ರ : ಉತ್ತರಾಫಾಲ್ಗುಣಿ ಸೂರ್ಯೋದಯ : ಮುಂಜಾನೆ 6:43ಕ್ಕೆ ಅಮೃತ ಕಾಲ : ಮುಂಜಾನೆ 08:09 ರಿಂದ 09:34ರ ವರೆಗೆ ದುರ್ಮೂಹೂರ್ತ : ಮುಂಜಾನೆ 09:07 ರಿಂದ 09:55 ಹಾಗೂ ಮಧ್ಯಾಹ್ನ 03:31 ರಿಂದ 04:19ರ ವರೆಗೆ ರಾಹುಕಾಲ : ಮುಂಜಾನೆ 10:59 ರಿಂದ ಮಧ್ಯಾಹ್ನ 12:25ರ ವರೆಗೆ ಸೂರ್ಯಾಸ್ತ – ಸಂಜೆ 06:06ಕ್ಕೆ ರಾಶಿ ಭವಿಷ್ಯ: ಮೇಷ: ಒಂದು ಮಹತ್ತರ ಸುದ್ದಿ ನಿಮ್ಮನ್ನು ಇಂದು ಅತ್ಯಂತ ಉತ್ಸಾಹದಲ್ಲಿರಿಸುತ್ತದೆ. ಈ ಸುದ್ದಿ ವೈಯಕ್ತಿಕ ಅಥವಾ ಹಣಕಾಸಿನ ಅನುಕೂಲದ್ದಾಗಿರಬಹುದು. ನೀವು ಬಲವಾದ ಪ್ರಯತ್ನ ಹಾಕುತ್ತೀರಿ ಮತ್ತು ಇಂದು ನೀವು ಅತ್ಯುತ್ತಮ ಫಲಿತಾಂಶಗಳನ್ನು ಕಾಣುತ್ತೀರಿ. ವೃಷಭ: ನೀವು ಇಂದು ಅತ್ಯುತ್ತಮವಾಗಿ ಸಂಘಟಿತ ಮತ್ತು ಕೇಂದ್ರಿತವಾಗಿರುತ್ತೀರಿ ಮತ್ತು ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ವಿನಯಪೂರ್ವಕರಾಗಿರುತ್ತೀರಿ. ಪರಿಸ್ಥಿತಿಗಳಿಗೆ ಅನುಗುಣವಾದ ಅತ್ಯುತ್ತಮ ತಂತ್ರ, ಕಾರ್ಯಯೋಜನೆಯನ್ನು ನೀವು ಗುರುತಿಸಿ ರೂಪಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಇಂದು, ನೀವು ಪ್ರಭಾವಿ, ನೈಜ…
Updated By: Priyalachhi ಹಾವೇರಿ: ಅಧಿಕಾರದಲ್ಲಿ ಎಷ್ಟು ದಿನ ಇರುತ್ತಿನೋ ಗೊತ್ತಿಲ್ಲ. ಆದರೆ ನನ್ನ ಆಡಳಿತದ ಬಗ್ಗೆ ನನಗೆ ತೃಪ್ತಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಹಾವೇರಿಯಲ್ಲಿ ವೈದ್ಯಕೀಯ ಕಾಲೇಜು ಉದ್ಘಾಟನೆಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಾವೇರಿಗೆ ನಾನೇ ಮೆಡಿಕಲ್ ಕಾಲೇಜು ಘೋಷಣೆ ಮಾಡಿ ನಾನೇ ಉದ್ಘಾಟನೆ ಮಾಡುತ್ತಿದ್ದೇನೆ. ಈ ಮೆಡಿಕಲ್ ಕಾಲೇಜಿಗೆ ಸುಮಾರು 500 ಕೋಟಿ ಖರ್ಚು ಮಾಡಿದ್ದೇವೆ ಎಂದರು. ಅರಸು ದಾಖಲೆ ಮುರಿದ ವಿಚಾರ ಕುರಿತಂತೆ ಮಾತನಾಡಿದ ಅವರು, ಜನರ ಆಶೀರ್ವಾದದಿಂದ ಇಲ್ಲಿವರೆಗೂ ಬಂದಿದ್ದೇನೆ. ಇನ್ನೂ ಎಷ್ಟು ದಿನ ಅಧಿಕಾರದಲ್ಲಿ ಇರುತ್ತಿನೋ ಗೊತ್ತಿಲ್ಲ. ಆದರೆ ನನ್ನ ಆಡಳಿತ ಬಗ್ಗೆ ತೃಪ್ತಿಯಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಅನ್ನ ಭಾಗ್ಯ ಕೊಟ್ಟವರು ಯಾರು?, ಕೃಷಿ ಭಾಗ್ಯ ಮಾಡಿದವರು ಯಾರು?, ರೈತರಿಗೆ ಮನಸ್ವಿನಿ ಮಾಡಿದವರು? ಶಕ್ತಿ ಯೋಜನೆ ಮಾಡಿದವರು ಯಾರು? ಗೃಹ ಲಕ್ಷ್ಮಿ, ಗೃಹ ಜ್ಯೋತಿ ಮಾಡಿದವರು ಯಾರು? ಪ್ರತಿ ವರ್ಷ 3 ಲಕ್ಷ ಮನೆ ಕಟುತ್ತೇವೆ ಅಂತ…
Updated By: Priyalachhi ದಾವಣಗೆರೆ: ಸತೀಶ್ ರೆಡ್ಡಿ ಗನ್ಮ್ಯಾನ್ಗಳು ಫೈರಿಂಗ್ ಮಾಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿರುವುದು, ಈ ಪ್ರಕರಣದಲ್ಲಿ ಪೋಲಿಸರ ವೈಫಲ್ಯ ಹೆಚ್ಚಿದೆ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಬಿಝಡ್ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಮಾತನಾಡಿದ ಅವರು ಮಧ್ಯಾಹ್ನ 2.30ಕ್ಕೆ ಗಲಾಟೆ ಶುರುವಾಗಿದೆ, ತಡೆಯಬಹುದಿತ್ತು ಎಂದರು. ಶಾಸಕ ನಾರಾ ಭರತ್ ರೆಡ್ಡಿ ಬಂಧನಕ್ಕೆ ಬಿಜೆಪಿ ಒತ್ತಾಯ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಭರತ್ ರೆಡ್ಡಿ ಸ್ಥಳಕ್ಕೆ ಬಂದಿರಲಿಲ್ಲ ಅಂದ್ರೆ ಇನ್ನೂ ಹೆಚ್ಚು ಸಮಸ್ಯೆ ಆಗ್ತಿತ್ತು. ಐಜಿಯವರು ನನಗೆ ಹಾಗೂ ಡಿಸಿಎಂಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭರತ್ ರೆಡ್ಡಿ 7 ಗಂಟೆ ಮೇಲೆ ಘಟನಾ ಸ್ಥಳಕ್ಕೆ ಬಂದಿರೋದು. ಐಜಿ ವರ್ಗಾವಣೆ ಬಗ್ಗೆ ಸಿಎಂ ಅವರನ್ನೇ ಕೇಳಬೇಕು ಎಂದರು. ಇನ್ನು ಸತೀಶ್ ರೆಡ್ಡಿ ಸಂಜೆ 4.30ಕ್ಕೆ ಸ್ಥಳಕ್ಕೆ ಹೋಗಿರೋದು. ಎಸ್ಪಿ, ಐಜಿ ಅಲ್ಲಿಯವರೆಗೂ ಘಟನಾ ಸ್ಥಳಕ್ಕೆ ಹೋಗಿಲ್ಲ. ಸತೀಶ್ ರೆಡ್ಡಿ ಗನ್ಮ್ಯಾನ್ ಗುಂಡಿನಿಂದಲೇ ರಾಜಶೇಖರ ಸತ್ತಿರೋದು. ಸತೀಶ್…
Updated By: Priyalachhi ಕಡಬ/ದ.ಕ: ಚಾಲನಾ ಪರವಾನಗಿ (Driving Licence) ಎನ್ನುವುದು ಕೇವಲ ವಾಹನ ಚಾಲನೆಗೆ ಮಾತ್ರವಲ್ಲ, ನಾಗರಿಕರ ಗುರುತಿನ ಪ್ರಮುಖ ದಾಖಲೆಗಳಲ್ಲೊಂದು. ಆದರೆ ಇಂತಹ ಮಹತ್ವದ ದಾಖಲೆಗಳಲ್ಲಿ ಸಂಭವಿಸಿರುವ ಪೋಷಕರ ಹೆಸರು ತಿದ್ದುಪಡಿ ಮತ್ತು ಜನನ ದಿನಾಂಕದ ತಪ್ಪುಗಳನ್ನು ತಿದ್ದುಪಡಿ ಮಾಡಲು ಅವಕಾಶವೇ ಇಲ್ಲ ಎನ್ನುವ ಕಠಿಣ ನಿಯಮ ಸಾರ್ವಜನಿಕರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ರಾಜ್ಯಾದ್ಯಂತ ಅನೇಕರು, ತಮ್ಮ ಚಾಲನಾ ಪರವಾನಗಿಯಲ್ಲಿ ಪೊಷಕರ ಹೆಸರಿನ ಅಕ್ಷರದ ತಪ್ಪುಗಳು, ಜನನ ವರ್ಷ ಅಥವಾ ದಿನಾಂಕದ ಲಘು ವ್ಯತ್ಯಾಸ ಕಂಡುಬಂದರೂ, ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗದೇ ಆರ್ಟಿಒ ಕಚೇರಿಗಳ ಮೆಟ್ಟಿಲು ಹತ್ತಿ ಹತ್ತಿ ಬೇಸತ್ತಿದ್ದಾರೆ. ಕಾನೂನು ಏನು ಹೇಳುತ್ತದೆ?: ಮೋಟಾರ್ ವಾಹನ ಕಾಯ್ದೆ ಹಾಗೂ ಸಾರಿಗೆ ಇಲಾಖೆಯ ಪ್ರಚಲಿತ ಮಾರ್ಗಸೂಚಿಗಳ ಪ್ರಕಾರ, ಒಮ್ಮೆ ದಾಖಲಾಗಿರುವ ಜನನ ದಿನಾಂಕವನ್ನು ಮತ್ತು ಪೊಷಕರ ಹೆಸರು ತಿದ್ದುಪಡಿ ಮಾಡಲು ಅವಕಾಶ ಇಲ್ಲ. ಅರ್ಜಿದಾರರು ಜನನ ಪ್ರಮಾಣಪತ್ರ, ಶಾಲಾ ದಾಖಲಾತಿ ಅಥವಾ ಆಧಾರ್ ಕಾರ್ಡ್ ಮುಂತಾದ ದಾಖಲೆಗಳನ್ನು ಸಲ್ಲಿಸಿದರೂ ಸಹ, ನಿಯಮ ಅವಕಾಶ…
Updated By: Priyalachhi ರಾಕಿಂಗ್ ಸ್ಟಾರ್ ಯಶ್ ಸದ್ಯ ಕನ್ನಡ ಚಿತ್ರರಂಗ ಅಲ್ಲದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ. ಸದ್ಯ ಟಾಕ್ಸಿಕ್ ಸಿನಿಮಾದ ಜಪ ಮಾಡುತ್ತಿರುವ ಯಶ್ ಬರ್ತ್ ಡೇ ಇಂದು. ಈ ವಿಶೇಷ ದಿನ ಅಭಿಮಾನಿಗಳಿಗೆ ರಾಮಾಚಾರಿ ಒಂದು ಸಂದೇಶ ನೀಡಿದ್ದಾರೆ. ಈ ಸಲವೂ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ.. ಬದಲಾಗಿ ಟಾಕ್ಸಿಕ್ ಸಿನಿಮಾದ ದೊಡ್ಡ ಸಂಭ್ರಮವನ್ನು ಮಾರ್ಚ್ 19 ರಂದು ಜೊತೆಯಾಗಿ ಆಚರಿಸೋಣವೆಂದು ಯಶ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. 2024ರಂದು ಗದಗ ಜಿಲ್ಲೆಯ ಸುರನಗಿ ಗ್ರಾಮದಲ್ಲಿ ಅಭಿಮಾನಿಗಳು ಬ್ಯಾನರ್ ಕಟ್ಟುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಅಭಿಮಾನಿಗಳ ಜೊತೆ ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಕೊಳ್ಳದಿರಲು ನಿರ್ಧರಿಸಿದ್ದು, ಕಳೆದ ವರ್ಷ ಕೂಡ ಯಶ್ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಈ ಬಾರಿ ನನ್ನ ಟಾಕ್ಸಿಕ್ ಸಿನಿಮಾದ ಟೀಸರ್ ಅನ್ನು ಸಂಭ್ರಮಿಸೋಣ ಎಂದಿದ್ದಾರೆ. ಇನ್ನು ಯಶ್ ಅವರು ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 2022ರ ಏಪ್ರಿಲ್ನಲ್ಲಿ.…
Updated By: Priyalachhi ಇಂದಿನ ಪಂಚಾಂಗ: ದಿನಾಂಕ : 08-01-2026 ವಾರ : ಗುರುವಾರ ಸಂವತ್ಸರ : ವಿಶ್ವವಸು ಆಯನ : ಉತ್ತರಾಯಣ ತಿಥಿ : ಕೃಷ್ಣ ಮಾಸ : ಪಂಚಮಿ ನಕ್ಷತ್ರ : ಪೂರ್ವಾಫಾಲ್ಗುಣಿ ಸೂರ್ಯೋದಯ : ಮುಂಜಾನೆ 6:43ಕ್ಕೆ ಅಮೃತ ಕಾಲ : ಮುಂಜಾನೆ 09:34 ರಿಂದ 10:59ರ ವರೆಗೆ ದುರ್ಮೂಹೂರ್ತ : ಮುಂಜಾನೆ 10:43 ರಿಂದ 11:31 ಹಾಗೂ ಮಧ್ಯಾಹ್ನ 15:31 ರಿಂದ 16:19ರ ವರೆಗೆ ರಾಹುಕಾಲ : ಮಧ್ಯಾಹ್ನ 13:49 ರಿಂದ 15:15ರ ವರೆಗೆ ಸೂರ್ಯಾಸ್ತ – ಸಂಜೆ 06:05ಕ್ಕೆ ರಾಶಿ ಭವಿಷ್ಯ: ಮೇಷ : ನಿಮ್ಮ ಮಕ್ಕಳ ಬೇಡಿಕೆಗಳಿಗೆ ನೀವು ಒಪ್ಪಿಕೊಳ್ಳುವ ಹೆಚ್ಚಿನ ಅವಕಾಶಗಳಿವೆ. ನೀವು ಉಳಿದ ಎಲ್ಲ ಯೋಜನೆಗಳನ್ನೂ ಮುಗಿಸುವ ಸಾಧ್ಯತೆ ಇದೆ. ವೈದ್ಯಕೀಯ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಫಲಪ್ರದ ದಿನ ಮುಂದಿದೆ. ವೃಷಭ : ಇಂದು ನಿಮ್ಮ ಸೃಜನಶೀಲ ಭಾಗವು ನಿಮ್ಮ ಅತ್ಯಂತ ಸ್ಪರ್ಧಾತ್ಮಕ ಲಕ್ಷಣದೊಂದಿಗೆ ಸೇರಿದೆ. ಕೆಲಸದಲ್ಲಿ ನಿಮ್ಮ ದಕ್ಷತೆ ಮತ್ತು ಉತ್ಪಾದಕತೆ ಪ್ರತಿಯೊಬ್ಬರಿಂದಲೂ ಶ್ಲಾಘಿಸಲ್ಪಡುತ್ತದೆ ಮತ್ತು ಕೆಲವರು ನಿಮ್ಮನ್ನು ಅವರ ಸ್ಫೂರ್ತಿಯಾಗಿಯೂ ಪರಿಗಣಿಸಬಹುದು. ನಿಮ್ಮ ಸಹೋದ್ಯೋಗಿಗಳು…
Updated By: Priyalachhi ಬಳ್ಳಾರಿ: “ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಅವರನ್ನು ಉದ್ದೇಶ ಪೂರ್ವಕವಾಗಿ ಹತ್ಯೆ ಮಾಡಲಾಗಿದೆ” ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಜನಾರ್ದನ ರೆಡ್ಡಿ ಅವರ ನಿವಾಸದಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಘಟನೆಯ ವಿಡಿಯೋ ರಿಲೀಸ್ ಮಾಡಲಾಯಿತು. ಈ ವೇಳೆ ಜನಾರ್ದನ ರೆಡ್ಡಿ ಮಾತನಾಡಿ, “ರೆಡ್ಡಿ ಜೊತೆಗೆ ನಗರ ಶಾಸಕ ಭರತ್ ರೆಡ್ಡಿ ಆಪ್ತ ಚಾನಾಳ ಶೇಖರ್ ಅವರನ್ನು ಹತ್ಯೆ ಮಾಡಿ ಜನಾರ್ದನ ರೆಡ್ಡಿ ತಲೆಗೆ ಕಟ್ಟುವ ಪ್ರಯತ್ನ ನಡೆದಿತ್ತು. ಆದರೆ, ಶೇಖರ್ ಅದೃಷ್ಟವಶಾತ್ ಪಾರಾದ. ಇದರ ರೂವಾರಿಯಾದ ನಗರ ಶಾಸಕ ಭರತ್ ರೆಡ್ಡಿ ಹಾಗೂ ಆಪ್ತ ಸತೀಶ್ ರೆಡ್ಡಿ ಅವರನ್ನು ಕೂಡಲೇ ಬಂಧಿಸಬೇಕು” ಎಂದು ಒತ್ತಾಯಿಸಿದರು. “ಗಾಂಜಾ ಸೇವನೆ ಮಾಡಿದರೋ, ಮದ್ಯ ಸೇವಿಸಿದರೋ ಗೊತ್ತಿಲ್ಲ. ನನ್ನ ನಿವಾಸದ ಎದುರು ನಡೆದ ಗಲಾಟೆಯಲ್ಲಿ ನಾನು ಒಂದು ಕರೆ ಕೊಟ್ಟರೆ ಇಡೀ ಬಳ್ಳಾರಿ ಸುಟ್ಟು ಹೋಗುತ್ತಿತ್ತು. ಮನಸ್ಸು ಮಾಡಿದ್ರೆ ಜನಾರ್ದನ…
Subscribe to Updates
Get the latest creative news from FooBar about art, design and business.