Author: Sambrama Prabha News

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Updated By: Priyalachhi  ಮೆಚ್ಚಿನ ತಾರೆಯರ ಜನ್ಮದಿನ ಎಂದಾಗ ಫ್ಯಾನ್ಸ್ ಬೃಹತ್ ಕಟೌಟ್ ಹಾಕಿ, ಅದಕ್ಕೆ ಹಾಲಿನ ಅಭಿಷೇಕ ಮಾಡೋದು ಸಹಜ. ಇದೀಗ ಯಶ್ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಚಿತ್ರರಂಗದಲ್ಲೇ ಇತಿಹಾಸ ಬರೆದಿದ್ದಾರೆ. ಹೌದು, ಜನವರಿ 8 ರಾಕಿಂಗ್ ಸ್ಟಾರ್ ಯಶ್ ಹುಟ್ಟಿದ ದಿನ. ಹೀಗಾಗಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಯಶ್ ಫೋಟೋ ರಾರಾಜಿಸುತ್ತಿದೆ. ಯಶ್ ಅವರನ್ನು ಹತ್ತಿರದಿಂದ ನೋಡಿರುವ ಅಭಿಮಾನಿ ಸಂಘಟನೆ ಮೆಟ್ರೋಗೆ ಜಾಹೀರಾತು ನೀಡಿ, ಯಶ್​​ ಬರ್ತ್​ಡೇಗೆ ವಿಶೇಷವಾಗಿ ಶುಭ ಕೋರಿದ್ದಾರೆ. ಸದ್ಯ ಕಾಡುಗೋಡಿ ಟು ಚಲಘಟ್ಟ ಮೆಟ್ರೊ ಟ್ರೈನ್​​ನಲ್ಲಿ ಯಶ್ ಭಾವಚಿತ್ರ ಒಳಗೊಂಡಿರುವ ಪೋಸ್ಟರ್ ಹಾಕಲಾಗಿದೆ. ಇಂದಿನಿಂದ ಯಶ್ ಬರ್ತ್ ಡೇ ದಿನವರೆಗೂ ಈ ಪೋಸ್ಟರ್ಸ್​​ ಕಾಣಿಸಿಕೊಳ್ಳಲಿದೆ. ಈ ಮೆಟ್ರೋ ರೈಲಿನಲ್ಲಿ ಒಂದು ದಿನಕ್ಕೆ ಸರಿಸುಮಾರು 6‌ ಲಕ್ಷ ಜನ ಓಡಾಡುತ್ತಾರೆ. ಯಶ್ ಆಪ್ತರೊಬ್ಬರು ಹೇಳುವ ಹಾಗೇ, ಮೂರು ದಿನದ ಜಾಹೀರಾತಿಗೆ 10 ಲಕ್ಷ ರೂಪಾಯಿಂದ 15 ಲಕ್ಷ ರೂಪಾಯಿ ಕೊಡಲಾಗಿದೆ. ಕನ್ನಡ…

Read More

Updated By: Priyalachhi  ಚಿಕ್ಕೋಡಿ(ಬೆಳಗಾವಿ): ಮುಂದಿನ ಬಜೆಟ್ ಅನ್ನೂ ಸಿದ್ದರಾಮಯ್ಯನವರೇ ಮಂಡಿಸುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರ್ತಾರೆ ಅಂತ ಭಾವಿಸಿದ್ದೇವೆ. ಈಗಾಗಲೇ ಎರಡೂವರೆ ವರ್ಷ ಮುಗಿಸಿದ್ದಾರೆ. ಸಿಎಂ ಆಗಿ ಪೂರ್ಣಾವಧಿ ಮುಗಿಸುವ ವಿಶ್ವಾಸವಿದೆ ಎಂದು ಸ್ವತಃ ಅವರೇ ಹೇಳಿದ್ದಾರೆ ಎಂದರು. ದೇವರಾಜ ಅರಸು ಅವರ ಸುದೀರ್ಘ ಸೇವೆಯ ನಂತರ ಸಿಎಂ ಸಿದ್ದರಾಮಯ್ಯ ಸೇವೆ ಮುಂದುವರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ, ನಮಗೆ ಇದೊಂದು ಹೆಮ್ಮೆಯ ವಿಷಯವಾಗಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಸಾಕಷ್ಟು ಶ್ರಮಪಟ್ಟಿದ್ದಾರೆ, ಹೋರಾಟ ಮಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಸಿದ್ದರಾಮಯ್ಯ ಬದಲಾವಣೆ ಕುರಿತ ಮಾಜಿ ಸಚಿವ ಕೆ.ಎನ್​. ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಸಮಯ ಬಂದಾಗ ಚರ್ಚೆ ಮಾಡೋಣ ಸದ್ಯ ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದಿಲ್ಲ. ಅವರೇ ಮುಂದುವರಿಯುತ್ತಾರೆ ಎಂದರು. ಬಳ್ಳಾರಿ ಗಲಾಟೆ ವಿಚಾರವಾಗಿ ಮಾತನಾಡಿ, ಈಗಾಗಲೇ ತನಿಖೆ ನಡೆಯುತ್ತಿದೆ. ಎರಡೂ…

Read More

Updated By: Priyalachhi  ಹುಬ್ಬಳ್ಳಿ: ದೇವರಾಜ ಅರಸು ಅವರು ಎರಡು ಅವಧಿ ಗ್ಯಾಪ್ ಇಲ್ಲದೇ ಸಿಎಂ ಆಗಿ ದಾಖಲೆ ಮಾಡಿದರು. ಆದರೆ, ಸಿದ್ದರಾಮಯ್ಯನವರು ಸತತ ಎರಡು ಅವಧಿ ಸಿಎಂ ಆಗಿಲ್ಲ, ಗ್ಯಾಪ್ ಇದೆ ಎಂದು ಮಾಜಿ‌ ಸಿಎಂ ಹಾಗೂ ಸಂಸದ ಜಗದೀಶ್​ ಶೆಟ್ಟರ್​ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾಖಲೆ ಮಾಡುವುದು ಮುಖ್ಯವಲ್ಲ. ಜನಪರ ಆಡಳಿತ ಎಷ್ಟರಮಟ್ಟಿಗೆ ನೀಡಿದರು ಅನ್ನೋದು ಮುಖ್ಯ. ಈಗಿನ ಸಿದ್ದರಾಮಯ್ಯನವರ ಅವಧಿಯಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಸಿದ್ದರಾಮಯ್ಯನವರು ಈಗ ಅಡಳಿತದ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಆರ್ಥಿಕ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಜನಪರ ಯೋಜನೆಗಳಿಗೆ ಅನುದಾನ ಇಲ್ಲ, ಗುತ್ತಿಗೆದಾರರ ಬಿಲ್ ಬಾಕಿ ಉಳಿದಿವೆ. ಕೇಂದ್ರ ಸರ್ಕಾರಗಳ ಯೋಜನೆಗೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು. ಸಿಎಂಗೆ ಯಾವ ನೈತಿಕತೆ ಇದೆ?: ಬೆಳಗಾವಿ – ಧಾರವಾಡ ರೈಲ್ವೆ ಯೋಜನೆ ಇಲ್ಲಿನ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯದಿಂದ ನಿಂತಿದೆ. ದಾಖಲೆಯ…

Read More

Updated By: Priyalachhi  ಬೆಂಗಳೂರು: ಯಾವುದನ್ನೇ ಆಗಲಿ ತಿಳಿದು ಮಾತನಾಡಬೇಕು. ತಿಳಿಯದೇ ಮಾತನಾಡಿದರೆ ಇಂಪ್ಯಾಕ್ಟ್ ಹೆಚ್ಚುತ್ತದೆ. ಸಮಾಜದಲ್ಲಿ ಏನಾಗುತ್ತೆ ಅರಿತು ಮಾತನಾಡಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದರು.‌ ಬಳ್ಳಾರಿ ಘರ್ಷಣೆಯಲ್ಲಿ ಮೃತ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮರಣೋತ್ತರ ಪರೀಕ್ಷೆಯನ್ನು 2 ಬಾರಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಯಾವುದನ್ನೇ ಆಗಲಿ ತಿಳಿದು ಮಾತನಾಡಬೇಕು. ತಿಳಿಯದೇ ಮಾತನಾಡಿದರೆ ಇಂಪ್ಯಾಕ್ಟ್ ಹೆಚ್ಚುತ್ತದೆ. ಸಮಾಜದಲ್ಲಿ ಏನಾಗುತ್ತೆ ಅರಿತು ಮಾತನಾಡಬೇಕು. ಈಗಾಗಲೇ ಡಾಕ್ಟರ್ ಅದರ ಬಗ್ಗೆ ಹೇಳಿದ್ದಾರೆ‌. ಎರಡು ಬಾರಿ ಪೋಸ್ಟ್ ಮಾರ್ಟಂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನ ನಾಯಕರು ನೋಡಿದ್ದಾರಾ?. ನಾನು ವೈದ್ಯರ ಮಾತನ್ನು ಒಪ್ತೇನೆ ಎಂದರು. ನಾನು ಗೃಹ ಸಚಿವನಾಗಿ ಹೇಳ್ತೇನೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕು?. ಏನು ತೀರ್ಮಾನ ಮಾಡಬೇಕು ಗೊತ್ತಿದೆ. 38 ವರ್ಷದಿಂದ ರಾಜಕೀಯದಲ್ಲಿದ್ದೇನೆ. ನನಗೂ ಅಪಾರ ಅನುಭವವಿದೆ. ಕಾನೂನು ಸುವ್ಯವಸ್ಥೆ ಕಾಪಾಡೋದಕ್ಕೆ ನಾನು ಎಲ್ಲ ರೀತಿಯ ತೀರ್ಮಾನ ಮಾಡಿದ್ದೇನೆ.…

Read More

Updated By: Priyalachhi  ಬೆಂಗಳೂರು: ಮೆಜೆಸ್ಟಿಕ್‌ನಿಂದ ಮಲ್ಲೇಶ್ವರದ ಮಂತ್ರಿಮಾಲ್‌ವರೆಗಿನ ರಸ್ತೆಗೆ ವೈಟ್‌ ಟ್ಯಾಪಿಂಗ್‌ ನಡೆಯಲಿರುವ ಕಾರಣ ಮೂರು ತಿಂಗಳು ಬಂದ್‌ ಆಗಲಿದೆ. ಇದು ಮುಖ್ಯರಸ್ತೆಯಾಗಿರುವ ಕಾರಣ ತುಂಬಾ ಮಂದಿಗೆ ಓಡಾಟಕ್ಕೆ ಸಮಸ್ಯೆಯಾಗಲಿದೆ. ಬಿ ಸ್ಮೈಲ್ ಕಡೆಯಿಂದ ವೈಟ್ ಟ್ಯಾಪಿಂಗ್ ಕಾಮಗಾರಿ ಕೈಗೊಂಡಿದ್ದು ಮುಂದಿನ ಮೂರು ತಿಂಗಳು ರಸ್ತೆ ಬಂದ್‌ ಆಗಲಿದೆ. ಬಂದ್‌ ಆಗಿರುವುದರಿಂದ ಮೆಜೆಸ್ಟಿಕ್‌ನಿಂದ ಬರುವ ವಾಹನಗಳು ಓಕುಳಿಪುರಂ ಅಂಡರ್ ಪಾಸ್ ಸುಜಾತ್ ಸರ್ಕಲ್ ಮಾರ್ಗವಾಗಿ ಮಲ್ಲೇಶ್ವರಂ ಪ್ರವೇಶ ಮಾಡಬೇಕಿದೆ ಹೀಗಾಗಿ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಸ್ತಿ ಆಗಲಿದೆ. ಮೊದಲು ಮೆಜೆಸ್ಟಿಕ್‌ನಿಂದ ಮಂತ್ರಿಮಾಲ್ ಮಾರ್ಗವಾಗಿ ಕೇವಲ 10 ನಿಮಿಷದಲ್ಲಿ ಮಲ್ಲೇಶ್ವರಂ ಪ್ರವೇಶ ಮಾಡಬಹುದಿತ್ತು. ಆದರೆ ರಸ್ತೆ ಬಂದ್‌ ಆಗಿರುವ ಕಾರಣ ಪೀಕ್‌ ಅವಧಿಯಲ್ಲಿ ಮಲ್ಲೇಶ್ವರಂಗೆ ಬರಲು ಕನಿಷ್ಠ 30 ರಿಂದ 1 ಗಂಟೆ ಸಮಯ ಬೇಕಾಗಿದ್ದು ವಾಹನ ಸವಾರರು ಹೈರಾಣಾಗಿದ್ದಾರೆ.

Read More

Updated By: Priyalachhi  ಮೈಸೂರು: ಮೈಸೂರಿನ ಜಿಲ್ಲಾ ನ್ಯಾಯಾಲಯಕ್ಕೆ ಮಂಗಳವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಕಲಾಪ ಸ್ಥಗಿತಗೊಳಿಸಿ, ಅಲ್ಲಿದ್ದವರನ್ನು ಹೊರಗೆ ಕಳುಹಿಸಲಾಯಿತು. ಬಾಂಬ್ ಬೆದರಿಕೆ ನಂತರ, ನ್ಯಾಯಾಂಗ ಅಧಿಕಾರಿಗಳು, ವಕೀಲರು, ದಾವೆದಾರರು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನು ಕೋರ್ಟ್ ಆವರಣದಿಂದ ಸ್ಥಳಾಂತರಿಸಲಾಯಿತು ಮತ್ತು ನ್ಯಾಯಾಲಯದ ಕಲಾಪಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳವು ಸ್ಥಳಕ್ಕೆ ಧಾವಿಸಿದ್ದು, ಆವರಣದಲ್ಲಿ ಸಂಪೂರ್ಣ ಶೋಧ ನಡೆಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Read More

Updated By: Priyalachhi  ಮೈಸೂರು: ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ. ಈ ದಾಖಲೆ ಕಾಕತಾಳೀಯ. ದೇವರಾಜ ಅರಸು ಅವರು ಎಷ್ಟು ವರ್ಷ ಆಡಳಿತ ಮಾಡಿದ್ದಾರೆಂದು ತಿಳಿದಿರಲಿಲ್ಲ. ಜನರ ಆಶೀರ್ವಾದದಿಂದ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ, ದೇವರಾಜ ಅರಸು ಹಾಗೂ ನಾನು ಮೈಸೂರಿನವರೇ. ಇಬ್ಬರೂ ದೀರ್ಘಾವಧಿ ಮುಖ್ಯಮಂತ್ರಿಗಳಾಗಿದ್ದು, ಕಾಲಘಟ್ಟ ಬೇರೆ ಬೇರೆ. ದೇವರಾಜ ಅರಸು ಅವರು 1972 ರಿಂದ 80ವರೆಗೆ ಮುಖ್ಯಮಂತ್ರಿಯಾಗಿದ್ದರು. ನಾನು ಎರಡನೇ ಅವಧಿಗೆ ಸಿಎಂ ಆಗಿದ್ದೇನೆ ಎಂದರು. ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಈ ಕುರಿತು ಪಕ್ಷದ ವರಿಷ್ಠರು ತೀರ್ಮಾನಿಸಬೇಕಿದೆ. ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸುವ ವಿಶ್ವಾಸವಿದೆ ಎಂದರು. ಇದೇ ವೇಳೆ ಸಂಪುಟ ಪುನಾರಚನೆ ಬಗ್ಗೆ ದೆಹಲಿಯಿಂದ ಕರೆ ಬಂದಾಗ ಮಾತನಾಡುವುದಾಗಿ ಸಿಎಂ ತಿಳಿಸಿದರು. ರಾಜಕಾರಣ ತೃಪ್ತಿ ತಂದಿದೆ: ಇಷ್ಟು ವರ್ಷಗಳ ರಾಜಕಾರಣ ತೃಪ್ತಿ…

Read More

Updated By: Priyalachhi  ಬೆಂಗಳೂರು: ವಾಹನ ದಟ್ಟಣೆ ಸಮಸ್ಯೆಗೆ ಸಿಲುಕಿರುವ ಸಿಲಿಕಾನ್​ ಸಿಟಿ ಬೆಂಗಳೂರು ಮಂದಿಗೆ ನಮ್ಮ ಮೆಟ್ರೋ ಗುಡ್​​ನ್ಯೂಸ್​​ ಕೊಟ್ಟಿದ್ದು, ಎರಡು ಹೊಸ ಮಾರ್ಗಗಗಳು ಈ ವರ್ಷದಿಂದಲೇ ಕಾರ್ಯಾರಂಭ ಮಾಡಲಿವೆ. ಈಗಾಗಲೇ ಸೇವೆ ಒದಗಿಸುತ್ತಿರುವ ಗ್ರೀನ್, ಪರ್ಪಲ್ ಮತ್ತು ಯಲ್ಲೋ ಮಾರ್ಗಗಳ ಜೊತೆ ಮತ್ತೆರಡು ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಲಿದೆ. ಹೊಸ ಮಾರ್ಗಗಳು 2026ರ ಅಂತ್ಯದ ಒಳಗೆ ಪಿಂಕ್​ ಮತ್ತು ಬ್ಲೂ ಲೈನ್​​ಗಳಲ್ಲಿ ಮೆಟ್ರೋ ರೈಲುಗಳು ವಾಣಿಜ್ಯ ಸಂಚಾರ ನಡೆಸಲಿವೆ. ಮೇ ತಿಂಗಳಿನಲ್ಲಿ ಪಿಂಕ್ ಲೈನ್ ಮೊದಲ ಹಂತ ಆರಂಭವಾದರೆ, ಡಿಸೆಂಬರ್​​ ವೇಳೆಗೆ ಬ್ಲೂ ಲೈನ್ ಮೊದಲ ಹಂತವೂ ಕಾರ್ಯಾಚರಣೆ ಆರಂಭಿಸಲಿದೆ. ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ಪಿಂಕ್ ಲೈನ್​​ 21.25 ಕಿ.ಮೀ. ವಿಸ್ತೀರ್ಣವಿದ್ದು, ಆ ಪೈಕಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ.ಯ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್​​ಗಳು ಮೇನಲ್ಲಿ ಆರಂಭವಾಗಲಿದೆ. ನವೆಂಬರ್​​ನಲ್ಲಿ ತಾವರೆಕೆರೆಯಿಂದ ನಾಗವಾರ 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್​​ಗಳ ಕಾರ್ಯಾಚರಣೆ ಆರಂಭವಾಗಲಿದೆ. ಪಿಂಕ್ ಲೈನ್​​ಗಾಗಿ…

Read More

Updated By: Priyalachhi  ಮೈಸೂರು: ಸಿದ್ದರಾಮಯ್ಯ 40 ವರ್ಷದ ರಾಜಕೀಯ ಜೀವನದಲ್ಲಿ ಬೇಕಾದಷ್ಟು ಚಾಲೆಂಜ್‌ ಎದುರಿಸಿದ್ದಾರೆ. ಅಗ್ನಿ ಪರೀಕ್ಷೆಗಳನ್ನ ನೋಡಿದ್ದಾರೆ. ನಾಯಕತ್ವದ ಪ್ರಶ್ನೆ ಸಂಭಾವ್ಯ ಸಚಿವ ಸಂಪುಟ ಪುನರ್ರಚನೆ ಕುರಿತು ಮುಂದುವರಿದ ಊಹಾಪೋಹಗಳ ನಡುವೆ, ಬುಧವಾರ ಸಿದ್ದರಾಮಯ್ಯ ಅವರು ಕರ್ನಾಟಕದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ಬೆಂಗಳೂರಿನಲ್ಲಿ ರಾಜಕೀಯ ವಲಯಗಳು ಅನಿಶ್ಚಿತತೆಯಿಂದ ತುಂಬಿದ್ದರೂ, ಅವರ ತವರು ಮೈಸೂರು ಜಿಲ್ಲೆಯಲ್ಲಿ ಸಂಭ್ರಮಾಚರಣೆಯ ವಾತಾವರಣ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಾಮಾಜಿಕ ನ್ಯಾಯದ ಹರಿಕಾರರಾಗಿ ಗುರುತಿಸಿಕೊಂಡಿದ್ದ ದೇವರಾಜ​ ಅರಸು 2,789 ದಿನಗಳು, ಅಂದರೆ 7 ವರ್ಷ 239 ದಿನ (ಎರಡು ಅವಧಿಗೆ) ಮುಖ್ಯಮಂತ್ರಿ ಆಗಿದ್ದರು. ಈ ದಾಖಲೆಯನ್ನು ಸಿದ್ದರಾಮಯ್ಯ ಮುರಿಯಲಿದ್ದಾರೆ. ಅರಸು​ ಅವರು 1972ರ ಮಾರ್ಚ್​ 20ರಿಂದ 1980 ಜನವರಿ 7ರವರೆಗೆ ಸತತ ಏಳೂವರೆ ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಸಿದ್ದರಾಮಯ್ಯ 2013ರಿಂದ 2018ರ ಅವಧಿಯಲ್ಲಿ ಮೊದಲ ಬಾರಿ 1,829 ದಿನ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು. 2023ರ ಮೇ 20ರಿಂದ ಎರಡನೇ ಬಾರಿ ಮುಖ್ಯಮಂತ್ರಿ…

Read More

Updated By: Priyalachhi  ಸ್ಯಾಂಡಲ್‌ವುಡ್‌ನ ‘ಪವರ್ ಸ್ಟಾರ್’ ದಿವಂಗತ ಪುನೀತ್ ರಾಜ್‌ಕುಮಾ‌ರ್ ಅಭಿನಯದ ಆಕಾಶ್ ಚಿತ್ರದ ಮತ್ತೆ ಬಿಡುಗಡೆಯಾಗಲಿದೆ. ಮಾರ್ಚ್ 17ರಂದು ಪುನೀತ್ ಅವರ ಹುಟ್ಟು ಹಬ್ಬದ ಪ್ರಯುಕ್ತ ‘ಆಕಾಶ್’ ಚಿತ್ರ ಮಾರ್ಚ್ 13ರಂದು ಮರು ಬಿಡುಗಡೆಯಾಗುತ್ತಿದೆ. ನೀನೆ ನೀನೆ ನನಗೆಲ್ಲಾ ನೀನೆ… ಮಾತು ನೀನೆ ಮನಸೆಲ್ಲಾ ನೀನೆ ಎಂದು ಅಡಿಬರಹ ಬರೆದು ‘ಆಕಾಶ್’ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಪುನೀತ್‌ ಪತ್ನಿ ಅಶ್ವಿನಿ ಅವರು, ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಚಿತ್ರದ ಬಿಡುಗಡೆ ಕುರಿತಂತೆ ಮಾಹಿತಿ ನೀಡಿದ್ದಾರೆ.

Read More