Author: Sambrama Prabha News
'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)
Updated By: Priyalachhi ಇಂದಿನ ಪಂಚಾಂಗ: ದಿನಾಂಕ – 05-01-2026 ವಾರ – ಸೋಮವಾರ ಸಂವತ್ಸರ – ವಿಶ್ವವಸು ಆಯನ – ಉತ್ತರಾಯಣ ತಿಥಿ – ಕೃಷ್ಣ ಪ್ರತಿಪದಾ ಮಾಸ – ದ್ವಿತೀಯಾ ನಕ್ಷತ್ರ – ಪುಷ್ಯ ಸೂರ್ಯೋದಯ – ಮುಂಜಾನೆ 7:16ಕ್ಕೆ ಅಮೃತ ಮುಹೂರ್ತ – ಮಧ್ಯಾಹ್ನ 01:44 ರಿಂದ 03:01ರ ವರೆಗೆ ದುರ್ಮೂಹೂರ್ತ – ಮಧ್ಯಾಹ್ನ 01:40 ರಿಂದ 02:28 ಮತ್ತು 04:04 ರಿಂದ 04:52ರ ವರೆಗೆ ರಾಹುಕಾಲ – ಬೆಳಗ್ಗೆ 08:33 ರಿಂದ 09:51ರ ವರೆಗೆ ಸೂರ್ಯಾಸ್ತ – ಸಂಜೆ 05:37ಕ್ಕೆ ರಾಶಿ ಭವಿಷ್ಯ ಮೇಷ: ಇಂದು ನೀವು ಭಾವನಾತ್ಮಕ ಮತ್ತು ಹತಾಶೆಯನ್ನು ಹೊಂದುತ್ತೀರಿ. ನಿಮ್ಮ ಬಾಂಧವ್ಯಗಳನ್ನು ಸದೃಢಗೊಳಿಸಲು ನೀವು ವಿಶೇಷ ಪ್ರಯತ್ನಗಳನ್ನು ಮಾಡುತ್ತೀರಿ. ಬದ್ಧತೆಗಳನ್ನು ಭವಿಷ್ಯಕ್ಕೆ ಭದ್ರತೆಯಾಗಿ ಕಾಣುತ್ತೀರಿ. ಇದರ ಫಲಿತಾಂಶದಿಂದ ನೀವು ಸದೃಢ, ದೀರ್ಘಾವಧಿ ಬಂಧಗಳನ್ನು ಬೆಳೆಸಿಕೊಳ್ಳುತ್ತೀರಿ. ವೃಷಭ: ವಿಷಯಗಳು ಅತ್ಯಂತ ಕಠಿಣ ಹಾಗೂ ಸಂಕೀರ್ಣವಾಗುತ್ತವೆ, ಇಂದು ಹಿನ್ನಡೆಗಳು ಮತ್ತು ಸವಾಲುಗಳಿಗೆ ಸಜ್ಜಾಗಿರಿ. ವಿಷಯ ಎಷ್ಟೇ ದೊಡ್ಡದಾಗಿದ್ದರೂ, ನಿಮ್ಮ ಸಾಮರ್ಥ್ಯ, ನಿಮ್ಮ ವ್ಯವಹಾರ ಕುಶಲತೆ ನಿಮ್ಮನ್ನು ಮುನ್ನಡೆಸುತ್ತದೆ. ಗಮನ ಕೇಂದ್ರೀಕರಿಸಿ ಹಾಗೂ ಎಚ್ಚರದಿಂದಿರಿ. ಜಾಗರೂಕತೆ…
Updated By: Priyalachhi ಬಾಲಿವುಡ್ ಬ್ಯೂಟಿ ತಾರಾ ಸುತಾರಿಯಾ (Tara Sutaria) ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಎಂಬ ಅದ್ಭುತ ಲೋಕಕ್ಕೆ ಕಾಲಿಟ್ಟಿದ್ದಾರೆ. ಈ ಬಹುನಿರೀಕ್ಷಿತ ಚಿತ್ರದಿಂದ ಹಿಂದಿ ನಟಿ-ಗಾಯಕಿಯ ಮೊದಲ ಪೋಸ್ಟರ್ ಅನಾವರಣಗೊಂಡಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಿನಿಪ್ರಿಯರಲ್ಲಿ ಸಂಚಲನ ಮೂಡಿಸಿದೆ. ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ‘ಟಾಕ್ಸಿಕ್’, ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ನಟಿಮಣಿಯರ ಪೋಸ್ಟರ್ಸ್ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿಯೆಬ್ಬಿಸುತ್ತಿದೆ. ತಮ್ಮ ಅಫೀಶಿಯಲ್ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ತಾರಾ ಸುತಾರಿಯಾ ಪೋಸ್ಟರ್ ಹಂಚಿಕೊಂಡ ಯಶ್, ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರದಿಂದ ತಾರಾ ಸುತಾರಿಯಾ ಅವರನ್ನು ರೆಬೆಕಾ ಪಾತ್ರದಲ್ಲಿ ಪರಿಚಯಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಪಿಸ್ತೂಲ್ ಹಿಡಿದು ಸಖತ್ ಸ್ಟನ್ನಿಂಗ್ ಲುಕ್ನಲ್ಲಿ ತಾರಾ ಸುತಾರಿಯಾ ಕಾಣಿಸಿಕೊಂಡಿದ್ದಾರೆ. 2023ರ ಜೂನ್ನಲ್ಲಿ ಹೆಂಡತಿ, ಮಕ್ಕಳೊಂದಿಗೆ ಮೈಸೂರಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದ ನಟ ಯಶ್ ಅವರಿಗೆ ಬಾಲಿವುಡ್ಗೆ ಹೋಗುತ್ತೀರಾ? ಎಂದು ಮಾಧ್ಯಮದವರಿಂದ…
Updated By: Priyalachhi ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಶುಕ್ರವಾರ ಭಾರತ ತಂಡವು ಈ ವರ್ಷ ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು, ಮೂರು ಏಕದಿನ ಪಂದ್ಯಗಳು ಮತ್ತು 3 T20 ಪಂದ್ಯಗಳನ್ನು ಆಡಲಿದೆ ಎಂದು ಘೋಷಿಸಿತ್ತು. ಇದೀಗ ಈ ಸರಣಿ ರದ್ದಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದಾಗ್ಯೂ ಬಾಂಗ್ಲಾದೇಶದಲ್ಲಿ ಪ್ರಸ್ತುತ ಸ್ಥಿರ ಸರ್ಕಾರವಿಲ್ಲದಿರುವ ಕಾರಣ ಮತ್ತು ಅಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳಿಂದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರವಾಸಕ್ಕೆ ಅಂತಿಮ ಅನುಮೋದನೆ ನೀಡುತ್ತದೆಯೇ ಇಲ್ಲವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸೆಪ್ಟೆಂಬರ್ನಲ್ಲಿ ಸರಣಿ: ಬಿಸಿಬಿ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಎರಡೂ ತಂಡಗಳು ಸೆಪ್ಟೆಂಬರ್ 1, 3 ಮತ್ತು 6 ರಂದು ಏಕದಿನ ಪಂದ್ಯಗಳನ್ನು ಆಡಲಿವೆ. ನಂತರ ಸೆಪ್ಟೆಂಬರ್ 9, 12 ಮತ್ತು 13 ರಂದು ಟಿ20ಐಗಳು ನಡೆಯಲಿವೆ. ಇದಕ್ಕಾಗಿ ಭಾರತ ತಂಡ ಆಗಸ್ಟ್ 28 ರಂದು ಬಾಂಗ್ಲಾದೇಶಕ್ಕೆ ಪ್ರವಾಸ ಬೆಳೆಸಬೇಕಿದೆ. ಕಳೆದ ವರ್ಷ ಪ್ರವಾಸ ರದ್ದು: ಇದಕ್ಕೂ ಮೊದಲು 2025ರಲ್ಲಿ ಜುಲೈನಲ್ಲಿ ಭಾರತದ…
Updated By: Priyalachhi ಬೆಂಗಳೂರು : ರಾಜಧಾನಿ ಬೆಂಗಳೂರು ನಗರದ ಲಾಲ್ ಬಾಗ್ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜನವರಿ 15ರಿಂದ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆಗಳು ಆರಂಭವಾಗಿವೆ. ಪ್ರಸಕ್ತ ಅವಧಿಯಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಮಗ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಜೀವನ ಕುರಿತ ವಿಷಯ ವಸ್ತುವನ್ನಾಧರಿಸಿ ಪ್ರದರ್ಶನ ಹಮ್ಮಿಕೊಳ್ಳುವುದಕ್ಕೆ ರಾಜ್ಯ ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಪ್ರತಿ ವರ್ಷದಂತೆ ಜನವರಿ 15ರಿಂದ ಪ್ರಾರಂಭವಾಗುವ ಫಲಪುಷ್ಪ ಪ್ರದರ್ಶನಕ್ಕೆ ಈಗಾಗಲೇ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಹಲವು ಸುತ್ತಿನ ಚರ್ಚೆ ನಡೆದಿದ್ದು, ಪ್ರಸಕ್ತ ವರ್ಷದಲ್ಲಿ ತೇಜಸ್ವಿಯವರ ಇಡೀ ಜೀವನ ಮತ್ತು ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ವಿವಿಧ ಜಾತಿಯ ಲಕ್ಷಾಂತರ ಪುಷ್ಪಗಳಿಂದ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಲಾಖೆ ಮುಂದಾಗಿದೆ. ತೇಜಸ್ವಿ ಅವರ ಕೃತಿಗಳೊಂದಿಗೆ ಯುವ ಪ್ರೇಕ್ಷಕರು ಮತ್ತು ರಾಜ್ಯದ ಹೊರಗಿನಿಂದ ಬರುವ ಸಂದರ್ಶಕರನ್ನು ಪರಿಚಯಿಸುವುದು ಮತ್ತು ಅವರ ಅಪ್ರತಿಮ ಕಾದಂಬರಿ ‘ಕರ್ವಾಲೋ’ ಪ್ರಕಟವಾದ 45 ವರ್ಷಗಳನ್ನು ಸ್ಮರಿಸುವುದು ಮತ್ತು ತೇಜಸ್ವಿ ಅವರ ಜೀವನ…
Updated By: Priyalachhi ತುಮಕೂರು : ಬಳ್ಳಾರಿ ಗಲಾಟೆ ವಿಚಾರವಾಗಿ ಈಗಾಗಲೇ ನಾನು ಅಲ್ಲಿಗೆ ಲಾ ಅಂಡ್ ಆರ್ಡರ್ ಎಡಿಜಿಪಿ ಅವರನ್ನು ಕಳುಹಿಸಿದ್ದೇನೆ. ಈಗಲೂ ಅವರು ಸ್ಪಾಟ್ನಲ್ಲಿಯೇ ಇದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಫೈರ್ ಮಾಡಿದ ಬುಲೆಟ್ ಪೊಲೀಸರದ್ದು ಅಲ್ಲ ಅಂತ ತಿಳಿದುಬಂದಿದೆ. ಯಾವುದೇ ಪೊಲೀಸನವರ ಗನ್ಗಳಿಂದ ಫೈರ್ ಆಗಿಲ್ಲ. ಮೃತನ ದೇಹಕ್ಕೆ ಹೊಕ್ಕ ಬುಲೆಟ್ ಸಂಗ್ರಹ ಮಾಡಿ ಪರಿಶೀಲನೆ ನಡೆಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ. ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ‘ಅದು ರೆಗ್ಯುಲರ್ ಪೊಲೀಸ್ ಬುಲೆಟ್ಗೆ ಮ್ಯಾಚ್ ಆಗ್ತಿಲ್ಲ. ಯಾರೋ ಖಾಸಗಿ ವ್ಯಕ್ತಿಗಳಿಂದ ಫೈರ್ ಆಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆ ಬುಲೆಟ್ ಅನ್ನ ಈಗ FSLಗೆ ಕಳುಹಿಸಿದ್ದಾರೆ. ಅಲ್ಲಿದ್ದಂತಹ ಎಲ್ಲಾ ರಿವಾಲ್ವಾರ್ ಅಥವಾ ಗನ್ಗಳನ್ನು ಸೀಜ್ ಮಾಡಿದ್ದಾರೆ. ಪರಿಶೀಲನೆ ಬಳಿಕ ಯಾರ ಬುಲೆಟ್ ಎಂದು ಗೊತ್ತಾಗಲಿದೆ. FSL ಎಕ್ಸ್ಫರ್ಟ್ಗಳು ಅದನ್ನು ಪತ್ತೆ ಹಚ್ಚುತ್ತಾರೆ. ಈಗ ಎರಡು ಕಡೆಯಿಂದಲೂ ದೂರು, ಪ್ರತಿದೂರು ಕೊಟ್ಟಿದ್ದಾರೆ’…
Updated By: Priyalachhi ಹಾವೇರಿ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸುಂಟರಗಾಳಿ ಬೀಸಿದ ಪರಿಣಾಮ ಕಾರ್ಯಕ್ರಮಕ್ಕೆಂದು ಹಾಕಲಾಗಿದ್ದ ಬೃಹತ್ ಪೆಂಡಾಲ್ ಕುಸಿದುಬಿದ್ದ ಘಟನೆ ರಾಣೆಬೆನ್ನೂರು ನಗರದಲ್ಲಿಂದು ನಡೆದಿದೆ. ರಾಣೆಬೆನ್ನೂರು ನಗರದಲ್ಲಿ ಏರ್ಪಡಿಸಲಾಗಿದ್ದ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಸತೀಶ್ ಜಾರಕಿಹೊಳಿ, ಕಾರ್ಯಕ್ರಮ ಮುಗಿಸಿ ಇನ್ನೇನು ತೆರಳಬೇಕಿತ್ತು. ಅಲ್ಲಿ ಸೇರಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಧೂಳು ಮಿಶ್ರಿತ ಭಾರೀ ಸುಂಟರಗಾಳಿ ಬೀಸಿದ್ದು, ಗಾಳಿಗೆ ಕಾರ್ಯಕ್ರಮಕ್ಕೆಂದು ಪೆಂಡಾಲ್ ಏಕಾಏಕಿ ಕುಸಿದು ಬಿದ್ದಿದೆ. ಸಚಿವರ ಬೆನ್ನಹಿಂದೆಯೇ ಈ ಪೆಂಡಾಲ್ ಇತ್ತು. ಪೆಂಡಾಲ್ ಕುಸಿಯುತ್ತಿದ್ದಂತೆಯೇ ಸಚಿವರು ಹಾಗೂ ಅಲ್ಲಿದ್ದವರು ಕ್ಷಣ ಕಾಲ ವಿಚಲಿತರಾದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿಯವರು ಇದೀಗ ಗಾಂಧಿ ವಿರೋಧ ಮಾಡುತ್ತಿದ್ದಾರೆ. ಮುಂದೆ ಬಾಬಾ ಸಾಹೇಬ್ ಅಂಬೇಡ್ಕರ್ ವಿರೋಧ ಮಾಡಿದರೂ ಆಶ್ಚರ್ಯಪಡಬೇಕಾಗಿಲ್ಲ. ಬಿಜೆಪಿಯವರು ಗಾಂಧಿಜಿಯಿಂದ ಸ್ವತಂತ್ರ ಸಿಗಲಿಲ್ಲ ಎನ್ನುತ್ತಾರೆ. ಮನರೇಗಾ ಯೋಜನೆಯಿಂದ ಗಾಂಧಿಜಿ ಹೆಸರು ತೆಗೆದಿದ್ದಾರೆ.…
Updated By: Priyalachhi ಬೆಂಗಳೂರು: ಬಳ್ಳಾರಿ ಬ್ಯಾನರ್ ಗಲಭೆ ಕುರಿತು ಸ್ಥಳೀಯ ಪರಿಸ್ಥಿತಿಯನ್ನು ಅವಲೋಕಿಸಲು ಕಾಂಗ್ರೆಸ್ ಸತ್ಯಶೋಧನಾ ಸಮಿತಿ ರಚಿಸಿದೆ. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್ ಎಂ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ಟಿ ರಘುಮೂರ್ತಿ, ಸಂಸದ ಕುಮಾರ್ ನಾಯಕ್, ವಿಧಾನ ಪರಿಷತ್ ಸದಸ್ಯ ಜಕ್ಕಪ್ಪನವರ್ ಮತ್ತು ಬಸನಗೌಡ ಬಾದರ್ಲಿ ಅವರು ಸಮಿತಿಯಲ್ಲಿರುತ್ತಾರೆ.
Updated By: Priyalachhi ಕೋಲಾರ: ಬೆಂಗಳೂರು ಉತ್ತರ ಸಮೀಪದ ಕೋಗಿಲು ಬಡಾವಣೆಯಲ್ಲಿ ನೆಲೆಸಿರುವವರು ಬಾಂಗ್ಲಾ ದೇಶದವರು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರ ಏನು ಮಾಡುತ್ತಿದೆ? ಎಂದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಪ್ರಶ್ನಿಸಿದ್ದಾರೆ. ಮಾಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಗಿಲುವಿನಲ್ಲಿ ಹೊರಹಾಕಲ್ಪಟ್ಟವರು ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ, ಹಾಗಾದರೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ. ಏಕೆ ಅವರನ್ನು ಇಲ್ಲಿಯವರೆಗೆ ಬರಲು ಬಿಟ್ಟರು? ಬಾಂಗ್ಲಾದಿಂದ ಅಕ್ರಮವಾಗಿ ಬಂದಿದ್ದರೆ ಬಂಧಿಸಿ ಜೈಲಿಗೆ ಹಾಕಲಿ ಎಂದು ಸವಾಲು ಹಾಕಿದರು. ರಾಜ್ಯದವರು ಅಥವಾ ಅಕ್ಕಪಕ್ಕದ ರಾಜ್ಯದವರು ಆಗಿದ್ದರೆ ಅರ್ಹರಿಗೆ ಮನೆ ನೀಡಬೇಕಾಗುತ್ತದೆ ಎಂದು ಹೇಳಿದರು. ಬೆಂಗಳೂರು ಸುತ್ತಮುತ್ತ ಬಿಜೆಪಿ ಶಾಸಕರು ಭೂ ಮಂಜೂರಾತಿ ಸಮಿತಿ ಮೂಲಕ ಸಾವಿರಾರು ಎಕರೆಯನ್ನು ಕಾರ್ಯಕರ್ತರಿಗೆ ನೀಡಿದ್ದಾರೆ. ಸಿಬಿಐ ತನಿಖೆ ನಡೆಸಿದರೆ ಎಲ್ಲವೂ ಹೊರಗೆ ಬರುತ್ತದೆ ಎಂದು ಹೇಳಿದರು.
Updated By: Priyalachhi ಬೆಂಗಳೂರು: ಅರಣ್ಯ ಇಲಾಖೆ ಯಲಹಂಕ ಬಳಿಯ ಮಾದಪ್ಪನಹಳ್ಳಿ 153 ಎಕರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಆ ಮೂಲಕ ಬೆಂಗಳೂರಲ್ಲಿ ಲಾಲ್ ಬಾಗ್, ಕಬ್ಬನ್ ಪಾರ್ಕ್ ಬಳಿಕ ಮೂರನೇ ಅತಿ ದೊಡ್ಡ ಉದ್ಯಾನ ನಿರ್ಮಾಣವಾಗಲಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಈ ಬಗ್ಗೆ ಸಚಿವ ಸಂಪುಟ ಬಳಿಕ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, 265 ವರ್ಷಗಳ ಹಿಂದೆ 1760ರಲ್ಲಿ 240 ಎಕರೆ ಪ್ರದೇಶದಲ್ಲಿ ಲಾಲ್ ಬಾಗ್ ನಿರ್ಮಾಣವಾಗಿತ್ತು. 155 ವರ್ಷಗಳ ಹಿಂದೆ 1870ರಲ್ಲಿ 197 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಬ್ಬನ್ ಪಾರ್ಕ್ ಜನಾಕರ್ಷಣೆಯ ತಾಣವಾಗಿದೆ. ಅಂದರೆ ಕಬ್ಬನ್ ಪಾರ್ಕ್ ನಿರ್ಮಾಣವಾಗಿ 155ವರ್ಷ ಆಗಿದೆ. ಆದಾದ ಬಳಿಕ ಬೆಂಗಳೂರಿನಲ್ಲಿ ಹಲವು ಸಣ್ಣ ಉದ್ಯಾನಗಳ ನಿರ್ಮಾಣವಾಗಿದೆಯಾದರೂ ಬೃಹತ್ ಉದ್ಯಾನ ನಿರ್ಮಾಣ ಆಗಿರಲಿಲ್ಲ. ಈಗ ಅಂತಹ ಒಂದು ಬೃಹತ್ ಜೀವವೈವಿಧ್ಯ ಉದ್ಯಾನವನ್ನು ನಮ್ಮ…
Updated By: Priyalachhi ಬೆಂಗಳೂರು: ಚುನಾವಣಾ ಆಯೋಗದ ಹಳೆಯ ಸಮೀಕ್ಷೆಯೊಂದನ್ನು ಬಳಸಿಕೊಂಡು ಜನರ ದಾರಿತಪ್ಪಿಸುವ ವ್ಯರ್ಥ ಪ್ರಯತ್ನ ರಾಜ್ಯದಲ್ಲಿ ವಿರೋಧ ಪಕ್ಷಗಳಿಂದ ನಡೆಯುತ್ತಿರುವುದು ವಿಷಾದನೀಯ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, ಚುನಾವಣಾ ಅಕ್ರಮಗಳ ಬಗ್ಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಎತ್ತಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅದನ್ನು ‘ತಪ್ಪು’ ಎಂದು ಬಿಂಬಿಸುವ ಕುತಂತ್ರ ನಡೆಯುತ್ತಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವ ಈ ಸುಳ್ಳು ಕಥನದ ವಿಶ್ವಾಸಾರ್ಹತೆಯನ್ನು ತುಸು ಆಳಕ್ಕೆ ಇಳಿದು ಪರಿಶೀಲಿಸಿದರೆ ಇದರ ಹಿಂದಿನ ದುರುದ್ದೇಶ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು. ಮೊದಲನೆಯದಾಗಿ, ಈ ತಥಾಕಥಿತ ಸಮೀಕ್ಷೆ ರಾಜ್ಯ ಚುನಾವಣಾ ಆಯೋಗವು ಮೇ 2025ರಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆಸಿದ ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಷನ್ ಆ್ಯಂಡ್ ಎಲೆಕ್ಟೋರಲ್ ಪಾರ್ಟಿಸಿಪೇಷನ್ (ಸ್ವೀಪ್) ಕಾರ್ಯಕ್ರಮದ ಒಂದು ಭಾಗವಾಗಿದೆ. ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿತ್ತೇ ಹೊರತು ಇದು ರಾಹುಲ್ ಗಾಂಧಿ ಅವರು ಆರೋಪಿಸಿರುವ ಮತಗಳ್ಳತನದ…
Subscribe to Updates
Get the latest creative news from FooBar about art, design and business.