Author: Sambrama Prabha News

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Updated By: Priyalachhi ಪಂಚಾಂಗ: ದಿನಾಂಕ : 09-12-2025 ವಾರ : ಮಂಗಳವಾರ ಸಂವತ್ಸರ : ವಿಶ್ವವಸು ಆಯನ : ದಕ್ಷಿಣಾಯಣ ಮಾಸ : ಕಾರ್ತಿಕ ಪಕ್ಷ : ಕೃಷ್ಣ ತಿಥಿ : ಪಂಚಮಿ ನಕ್ಷತ್ರ : ಆಶ್ಲೇಷ ಸೂರ್ಯೋದಯ : ಮುಂಜಾನೆ 06:28 ಗಂಟೆಗೆ ಅಮೃತ ಕಾಲ : ಮಧ್ಯಾಹ್ನ 12:10 ರಿಂದ 13:35 ರವರೆಗೆ ದುರ್ಮುಹೂರ್ತ : ಬೆಳಗ್ಗೆ 08:53 ರಿಂದ 09:41 & ಮಧ್ಯಾಹ್ನ 12:5 ರಿಂದ 12:53 ರವರೆಗೆ ರಾಹುಕಾಲ : ಮಧ್ಯಾಹ್ನ 03:00 ರಿಂದ ಸಂಜೆ 04:25 ರವರೆಗೆ ಸೂರ್ಯಾಸ್ತ : ಸಂಜೆ 05:49 ಗಂಟೆಗೆ ರಾಶಿ ಭವಿಷ್ಯ: ಮೇಷ : ನೀವು ನಿಮ್ಮ ಆರೋಗ್ಯದತ್ತ ಗಮನ ನೀಡಬೇಕು, ಮತ್ತು ಕೊನೆಗೂ ನೀವು ಪಥ್ಯ ಮತ್ತು ವ್ಯಾಯಾಮದ ಮಹತ್ವವನ್ನು ಅರ್ಥ ಮಾಡಿಕೊಂಡಿದ್ದೀರಿ. ಆದರೆ, ಇಂದು ನೀವು ಹೊಸದು ಅಥವಾ ಭಿನ್ನವಾದ ಆಹಾರ ಸೇವಿಸಲು ಬಯಸಬಹುದು. ಬಹಳ ಕಾಲದಿಂದ ನಿರ್ಲಕ್ಷಿಸುತ್ತಿರುವ ನಿಮ್ಮ ಹಳೆಯ ಮಿತ್ರರೊಂದಿಗೆ ಹೊರಗಡೆ ಹೋಗಿರಿ.…

Read More

Updated By: Priyalachhi ಬೆಳಗಾವಿ: ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣದ ಸಂಬಂಧ ಇರುವ ತೊಡಕುಗಳ ನಿವಾರಣೆಗೆ ಸದನ ಸಮಿತಿ ರಚಿಸಲು ನಿರ್ಧರಿಸಿರುವುದಾಗಿ ರಾಜ್ಯ ಸರ್ಕಾರ ಸೋಮವಾರ ಹೇಳಿದೆ. ವಿಧಾನಪರಿಷತ್ತಿನಲ್ಲಿ ಹಲವು ಸದಸ್ಯರ ಮನವಿಗೆ ಸ್ಪಂದಿಸಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರ ಸದನ ಸಮಿತಿ ರಚಿಸಲು ನಿರ್ಧರಿಸಿದೆ. ಮಾನ್ಯತೆ ನವೀಕರಣದ ನಿಯಮಗಳ ಸಡಿಲಿಕೆ ಕುರಿತು ಸದನ ಸಮಿತಿ ನೀಡುವ ವರದಿ ಆಧರಿಸಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸರ್ಕಾರವು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಶಾಲೆಗಳ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸುವ ವಿಷಯದ ಬಗ್ಗೆ ಸಮಗ್ರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲು ಸದನ ಸಮಿತಿ ರಚಿಸಲಾಗುತ್ತಿದೆ ಎಂದು ಅವರು ವಿವರಿಸಿದರು. ಪರಿಷತ್ತಿನ ಸದಸ್ಯರು ಪ್ರಸ್ತಾಪಿಸಿದಂತೆ, ಸದನ ಸಮಿತಿ ರಚಿಸಿ ಅನುಷ್ಠಾನಗೊಳಿಸುವವರೆಗೆ ಯಾವುದೇ ಖಾಸಗಿ ಸಂಸ್ಥೆಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಕೂಡಲೇ ಸದನ ಸಮಿತಿ ರಚಿಸಿ, ಸಮಿತಿಯಿಂದ ಅಭಿಪ್ರಾಯ ಪಡೆದು ಅನುಷ್ಠಾನ ಮಾಡುವುದಾಗಿ ಸಚಿವರು ಹೇಳಿದರು. ಶಾಲೆಗಳ ಮಾನ್ಯತೆ…

Read More

Updated By: Priyalachhi ಬೆಳಗಾವಿ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿ ಇಂದು ಮಂಗಳವಾರ ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೊದಲು 20,000 ಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ. ನಿನ್ನೆ ಮಾಲಿನಿ ಸಿಟಿ ಮೈದಾನದಲ್ಲಿ ಪ್ರತಿಭಟನಾ ಸ್ಥಳವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಪಕ್ಷದ ಶಾಸಕ ಅಭಯ್ ಪಾಟೀಲ್ ಮತ್ತು ಎಂಎಲ್‌ಸಿ ಸಿ.ಟಿ. ರವಿ ಅವರೊಂದಿಗೆ ವಿಜಯೇಂದ್ರ ಪರಿಶೀಲಿಸಿದರು. ಉತ್ತರ ಕರ್ನಾಟಕದ ಅಭಿವೃದ್ಧಿ, ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ 20 ಸಾವಿರ ರೈತರೊಂದಿಗೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಸಿದ್ಧತೆ ನಡೆಸಿದೆ. ಇಂದು ದೊಡ್ಡ ಮಟ್ಟದ ಹೋರಾಟದ ನಿರೀಕ್ಷೆಯಿದೆ. “ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರನ್ನು ನಿರ್ಲಕ್ಷಿಸಿದ್ದಕ್ಕಾಗಿ ನಮ್ಮ ಪ್ರತಿಭಟನೆ ಇದಾಗಿರುತ್ತದೆ. ಕಬ್ಬು, ಜೋಳ, ಭತ್ತ, ತೊಗರಿ ಬೆಳೆಗಾರರು ಮತ್ತು ಇತರ ರೈತರಿಗೆ ಅನ್ಯಾಯವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕಷ್ಟ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು,…

Read More

Updated By: Priyalachhi ಬೆಳಗಾವಿ: “ಎಲ್ಲಾ ಪಕ್ಷಗಳ ಶಾಸಕರು ತಮ್ಮ ರಾಜಕಾರಣ ಪಕ್ಕಕ್ಕಿಟ್ಟು ಕಿತ್ತೂರು ಕರ್ನಾಟಕ ಅಭಿವೃದ್ಧಿ ಪರವಾದ ಚಿಂತನೆಯನ್ನು ಹತ್ತು ದಿನಗಳ ಅಧಿವೇಶನದಲ್ಲಿ ಮಾಡಬೇಕು” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಕೋರಿದರು. ಸುವರ್ಣ ವಿಧಾನಸೌಧ ಬಳಿ ಭಾನುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಕಿತ್ತೂರು ಕರ್ನಾಟಕ ಏಳಿಗೆ ಮತ್ತು ಅಭಿವೃದ್ಧಿ ಕಡೆಗೆ ಆಡಳಿತ, ವಿಪಕ್ಷದ ಎಲ್ಲ ಶಾಸಕರು ವಿಚಾರ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರ ಮೇಲೂ ಜವಾಬ್ದಾರಿ ಇದೆ. ನಮ್ಮ ಭಾಗ ಬಹಳಷ್ಟು ಹಿಂದುಳಿದಿದೆ. ಈ ಬಗ್ಗೆ ನಮಗೂ ಅರಿವಿದೆ. ಸಾಕಷ್ಟು ನೀರಾವರಿ ಯೋಜನೆಗಳು ಬರಬೇಕು. ಹೆಚ್ಚಿನ ಅನುದಾನ ಈ ಭಾಗಕ್ಕೆ ಬರಬೇಕಿದೆ” ಎಂದರು. “ಅಖಂಡ ಕರ್ನಾಟಕದ ಚಿಂತನೆಯನ್ನು ನಾವೆಲ್ಲಾ ಹೊಂದಿರಬೇಕು. ಅಖಂಡ ಕರ್ನಾಟಕ ನಮ್ಮ ಹೆಮ್ಮೆ. ಇಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎನ್ನುವ ಪ್ರಶ್ನೆ ಬರುವುದಿಲ್ಲ. ಪ್ರತ್ಯೇಕ ಉತ್ತರ ಕರ್ನಾಟಕ ಮಾತು ಕೂಡ ಸರಿ ಅಲ್ಲ. ಕಿತ್ತೂರು ಕರ್ನಾಟಕದ ಸಮಗ್ರ…

Read More

Updated By: Priyalachhi ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ (TET) ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು. 5 ಮತ್ತು 8ನೇ ತರಗತಿಗಳಿಗೆ ಬೋಧಿಸಲು ಶಿಕ್ಷಕರ ನೇಮಕಾತಿಗೆ ಎರಡು ಅವಧಿಯಲ್ಲಿ ಪರೀಕ್ಷೆ ನಡೆಸಲಾಯಿತು. ಬೆಳಗಿನ ಮೊದಲ ಪರೀಕ್ಷಾ ಅವಧಿಯಲ್ಲಿ ಶೇ.93.35 ಮತ್ತು ಮಧ್ಯಾಹ್ನದ ನಂತರದ ಎರಡನೇ ಅವಧಿಯಲ್ಲಿ ಶೇ.94.79ರಷ್ಟು ಹಾಜರಾತಿ ದಾಖಲಾಗಿದೆ. ಯಾವುದೇ ಅಡೆತಡೆಗಳಿಲ್ಲದೆ ಪರೀಕ್ಷೆ ಸುಸೂತ್ರವಾಗಿ ನಡೆಯಿತು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಐದನೇ ತರಗತಿಗಾಗಿ ಮೊದಲ ಪರೀಕ್ಷೆ ಬೆಳಗ್ಗೆ 9:30ರಿಂದ 12:00ರ ವರೆಗೆ ನಡೆಯಿತು. ಒಟ್ಟು 85,042 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಶೇ.100ರಷ್ಟು ಹಾಜರಾತಿ ದಾಖಲಾಗಿದೆ. ಬಾಹ್ಯ ಮೌಲ್ಯಮಾಪನ ಕೆಟಗರಿಯಲ್ಲಿ ಒಟ್ಟು ನೋಂದಣಿಯಾದ 85,042 ಅಭ್ಯರ್ಥಿಗಳ ಪೈಕಿ 79,394 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಮೂಲಕ ಶೇ.93.35ರಷ್ಟು ಹಾಜರಾತಿ ದಾಖಲಾಗಿದೆ. 8ನೇ ತರಗತಿಗೆ ಮಧ್ಯಾಹ್ನದ ನಂತರದ ಎರಡನೇ ಅವಧಿಯ ಪರೀಕ್ಷೆ 2:00ರಿಂದ 4:30ರ ವರೆಗೆ ನಡೆಯಿತು. ಈ ಪರೀಕ್ಷೆಗೂ ಉತ್ತಮ ಹಾಜರಾತಿ ದಾಖಲಾಗಿದೆ. ನೋಂದಣಿಯಾದ ಎಲ್ಲ 2,50,189 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.…

Read More

Updated By: Priyalachhi ಬೆಂಗಳೂರು: ಕನ್ನಡ ರಾಷ್ಟ್ರ ಪ್ರಶಸ್ತಿ ವಿಜೇತ ತಿಥಿ ಚಿತ್ರದ ಹೀರೋ ‘ಅಭಿ’ ಈಗ ಏನು ಮಾಡುತ್ತಿದ್ದಾರೆ…? ಅವರ ಕುರಿತ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಹೌದು.. ಒಂದು ಚಿತ್ರದ ಯಶಸ್ಸು ಅದರ ಪಾತ್ರದಾರಿಗಳ ಜೀವನವನ್ನೇ ಬದಲಿಸುತ್ತದೆ. ತಾನು ನಟಿಸಿದ್ದ ಮೊದಲ ಚಿತ್ರವೇ ರಾಷ್ಟ್ರ ಪ್ರಶಸ್ತಿ ಪಡೆದು ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ತಿಥಿ ಚಿತ್ರದ ನಾಯಕ ಅಭಿಷೇಕ್ ಮತ್ತೆ ಸುದ್ದಿಯಲ್ಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರದಲ್ಲಿ ಹೀರೊ ಆಗಿ ನಟಿಸಿ ಬಳಿಕ ಬ್ಯಾಕ್ ಟು ಬ್ಯಾಕ್ 2 ಚಿತ್ರಗಳಲ್ಲಿ ನಟಿಸಿದ್ದ ನಾಯಕ ನಟ ಬಳಿಕ ಚಿತ್ರರಂಗದಿಂದ ನಾಪತ್ತೆಯಾಗಿದ್ದರು. ಕೆಲ ವರ್ಷಗಳ ಬಳಿಕ ಮತ್ತೆ ಕ್ಯಾಮೆರಾ ಕಣ್ಣಿಗೆ ಬಿದ್ದಿರುವ ನಟ ಅಭಿಷೇಕ್ ಸಿನಿಮೇತರ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದ ಈ ನಟ ಅಭಿಷೇಕ್ ಈಗ ಕೂಲಿ ಕೆಲಸ ಮಾಡುತ್ತಿದ್ದಾರೆ. 3 ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದ ಅಭಿ ಈಗ ಮರ ಹೊರುವ ಕೆಲಸ ಮಾಡುತ್ತಿದ್ದಾರೆ.

Read More

Updated By: Priyalachhi ಪಣಜಿ: ಗೋವಾದ ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಮಹಿಳೆಯರು, ಪ್ರವಾಸಿಗರು ಸೇರಿ ಒಟ್ಟು 25 ಮಂದಿ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಪೊಲೀಸರು ನಾಲ್ವರನ್ನು ಬಂಧನಕ್ಕೊಳಪಡಿಸಿದ್ದು, ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಕ್ಲಬ್‌ನ ಮುಖ್ಯ ಜನರಲ್ ಮ್ಯಾನೇಜರ್ ರಾಜೀವ್ ಮೋಡಕ್, ಜನರಲ್ ಮ್ಯಾನೇಜರ್ ವಿವೇಕ್ ಸಿಂಗ್, ಬಾರ್ ಮ್ಯಾನೇಜರ್ ರಾಜೀವ್ ಸಿಂಘಾನಿಯಾ ಮತ್ತು ಗೇಟ್ ಮ್ಯಾನೇಜರ್ ರಿಯಾನ್ಶು ಠಾಕೂರ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಾಹಿತಿ ನೀಡಿದ್ದಾರೆ. ಇದಲ್ಲದೆ ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ನಡುವೆ ನೈಟ್‌ಕ್ಲಬ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಅವಕಾಶ ನೀಡುವಲ್ಲಿ ನಿಯಮಗಳನ್ನು ಪಾಲನೆ ಮಾಡದೆ, ನಿರ್ಲಕ್ಷ್ಯ ತೋರಿದ ಪಂಚಾಯತ್‌ಗಳ ನಿರ್ದೇಶಕರು ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಉತ್ತರ ಗೋವಾದ ಅರ್ಪೋರಾದ ರೋಮಿಯೋ ಲೇನ್‌ನಲ್ಲಿರುವ…

Read More

Updated By: Priyalachhi ಬೆಂಗಳೂರು : ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚುನಾವಣೆಯಲ್ಲಿ 191 ಮತಗಳ ಅಂತರದಿಂದ ಜಯ ಸಾಧಿಸಿದ ಟೀಂ‌ ಇಂಡಿಯಾದ ಮಾಜಿ ಕ್ರಿಕೆಟಿಗ ಬಿ.ಕೆ.ವೆಂಕಟೇಶ್ ಪ್ರಸಾದ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಬೆಳಗ್ಗೆಯಿಂದ ನಡೆದ ಮತದಾನ ಪ್ರಕ್ರಿಯೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವು ಮಂದಿ ಸದಸ್ಯರು ಮತದಾನ ಮಾಡಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಿದೆ. 20 ಸುತ್ತುಗಳ ಮತದಾನ ಎಣಿಕೆ ಪ್ರಕ್ರಿಯೆಯಲ್ಲಿ ವೆಂಕಟೇಶ್ ಪ್ರಸಾದ್‌ಗೆ ಒಟ್ಟು 749 ಮತಗಳು ದೊರೆತರೆ, ಬ್ರಿಜೇಶ್ ಪಟೇಲ್ ಬಣದ ಕೆ.ಎನ್.ಶಾಂತಕುಮಾರ್ ಅವರಿಗೆ 558 ಮತಗಳು ಲಭಿಸಿವೆ. ಇದರೊಂದಿಗೆ ಪ್ರಸಾದ್‌ 191 ಮತಗಳ ಅಂತರದಿಂದ ಗೆದ್ದು ಅಧ್ಯಕ್ಷ ಗಾದಿಗೇರಿದ್ದಾರೆ. ವೆಂಕಟೇಶ್ ಪ್ರಸಾದ್ ಬಣದಲ್ಲಿದ್ದ ಮತ್ತೋರ್ವ ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್ ಬಿ – ಉಪಾಧ್ಯಕ್ಷ, ಸಂತೋಷ್ ಮೆನನ್ – ಪ್ರಧಾನ ಕಾರ್ಯದರ್ಶಿ, ಬಿ.ಎನ್.ಮಧುಕರ್ – ಖಜಾಂಚಿ, ಬಿ.ಕೆ.ರವಿ – ಜಂಟಿ‌ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಒಟ್ಟು 1,315…

Read More

Updated By: Priyalachhi ಉಡುಪಿ: ಖ್ಯಾತ ನಟ, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್​​ ಕಲ್ಯಾಣ್ ಅವರು​ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸೋಮವಾರ ನಡೆದ ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ರಥ ಬೀದಿಗೆ ಆಗಮಿಸಿ ಕನಕನ ಗುಡಿಗೆ ಮಾಲಾರ್ಪಣೆ ಮಾಡಿ ಕನಕನ ಕಿಂಡಿಯ ಮೂಲಕ ದೇವರ ದರ್ಶನ ಮಾಡಿದರು. ಬಳಿಕ ಅನಂತೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜಿ ಸಲ್ಲಿಸಿದರು. ಪರ್ಯಾಯ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಪವನ್ ಕಲ್ಯಾಣ್​ಗೆ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಮಾಡಿಸಿ, ಸುವರ್ಣತೀರ್ಥ ಮಂಟಪದಲ್ಲಿ ಪ್ರಸಾದ ನೀಡಿದರು. ಬಳಿಕ ಗೀತಾ ಮಂದಿರಕ್ಕೆ ತೆರಳಿದ ಡಿಸಿಎಂ, ಧ್ಯಾನ ಮಂದಿರದ ಅನಂತಪದ್ಮನಾಭ ಸ್ವಾಮಿ ಮೂರ್ತಿ ದರ್ಶನ ಮಾಡಿಸಿದರು. ಸಂಜೆ ಮಠದ ರಾಜಾಂಗಣದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪರ್ಯಾಯ ಮಠದ ವತಿಯಿಂದ ಅಭಿನವ ಶ್ರೀ ಕೃಷ್ಣದೇವರಾಯ ಪ್ರಶಸ್ತಿಯನ್ನು ಪವನ್ ಕಲ್ಯಾಣ್​ಗೆ ನೀಡಿ ಗೌರವಿಸಲಾಯಿತು. ಧರ್ಮರಕ್ಷಣೆಯ ಕಾರ್ಯವನ್ನು ಮಾಡುತ್ತಿರುವುದರಿಂದ ಈ ಬಿರುದು ನೀಡುತ್ತಿದ್ದೇವೆ ಎಂದು ಸ್ವಾಮೀಜಿ ಆಶೀರ್ವಚನದಲ್ಲಿ ಹೇಳಿದರು. ಯುದ್ಧಕಾಲಕ್ಕೆ ಭಗವದ್ಗೀತೆಯೆ ಪರಿಹಾರ: “ಯುವ…

Read More

Updated By: Priyalachhi ಬೆಂಗಳೂರು: “ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ (ಬಿಡಿಸಿಸಿ ಬ್ಯಾಂಕ್) ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು. ಚಾಮರಾಜಪೇಟೆಯ ಬಿಡಿಸಿಸಿ ಬ್ಯಾಂಕ್​ನಲ್ಲಿ ಭಾನುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುರೇಶ್ ಅವರು, ಚುನಾವಣೆ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದರು. “ಭಾನುವಾರ ಬ್ಯಾಂಕಿನ ಚುನಾವಣೆ ನಡೆದಿದ್ದು, 18 ಕ್ಷೇತ್ರಗಳ ಪೈಕಿ 15ರಲ್ಲಿ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿಗಳು ನೇರವಾಗಿ ಗೆದ್ದಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ 2 ಕ್ಷೇತ್ರಗಳು, ಚನ್ನಪಟ್ಟಣದ 1, ಕನಕಪುರದ 2, ಮಾಗಡಿಯ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ” ಎಂದು ತಿಳಿಸಿದರು. “ಸೋಮಶೇಖರ್ ಅವರು ನಮ್ಮ ಜೊತೆ ಕೈಜೋಡಿಸಿದ್ದು, ಅವರ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಬೆಂಗಳೂರು ಉತ್ತರ ಜಿಲ್ಲೆಯ ಹೊಸಕೋಟೆಯ 2, ದೇವನಹಳ್ಳಿಯಲ್ಲಿ 1, ದೊಡ್ಡಬಳ್ಳಾಪುರದಲ್ಲಿ 1, ಆನೇಕಲ್​ನಲ್ಲಿ 1, ಬೆಂಗಳೂರು ಉತ್ತರ ಕ್ಷೇತ್ರದಿಂದ 1 ಕ್ಷೇತ್ರದಲ್ಲಿ…

Read More