ಬೆಂಗಳೂರು (ಸಂಭ್ರಮಪ್ರಭ ನ್ಯೂಸ್): ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, 8 ಐಎಎಸ್ ಹಾಗೂ ಓರ್ವ ಕೆಎಎಸ್ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಶನಿವಾರ (ಅ. 17, 2026) ಆದೇಶ ಹೊರಡಿಸಿದೆ.
ರಾಜ್ಯಪಾಲರ ಆದೇಶದ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಪ್ರಭಾರ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್. ಅವರು ಈ ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದಾರೆ. ವರ್ಗಾವಣೆಗೊಂಡ ಅಧಿಕಾರಿಗಳು ಮತ್ತು ಅವರಿಗೆ ನಿಯೋಜಿಸಲಾದ ನೂತನ ಹುದ್ದೆಗಳ ವಿವರ ಈ ಕೆಳಗಿನಂತಿದೆ:
-
ಶ್ರೀ ಕೃಷ್ಣ ಬಾಜಪೇಯಿ (ಐಎಎಸ್): ಸದಸ್ಯರು, ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ (KAT), ಬೆಂಗಳೂರು.
-
ಶ್ರೀಮತಿ ಲತಾ ಆರ್. (ಐಎಎಸ್): ಆಯುಕ್ತರು, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು.
-
ಶ್ರೀಮತಿ ಅರ್ಚನಾ ಎಂ.ಎಸ್. (ಐಎಎಸ್): ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ (KSMCL), ಬೆಂಗಳೂರು.
-
ಶ್ರೀ ದಯಾನಂದ ಕೆ.ಎ. (ಐಎಎಸ್): ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ, ಬೆಂಗಳೂರು.
-
ಶ್ರೀ ವೆಂಕಟ್ ರಾಜಾ (ಐಎಎಸ್): ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ.
-
ಶ್ರೀ ವೆಂಕಟೇಶ್ ಟಿ. (ಐಎಎಸ್): ನಿರ್ದೇಶಕರು, ತೋಟಗಾರಿಕೆ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಷನ್, ಬೆಂಗಳೂರು.
-
ಶ್ರೀ ಇಬ್ರಾಹಿಂ ಮೈಗೂರ್ (ಐಎಎಸ್): ಕಬ್ಬು ಅಭಿವೃದ್ಧಿ ಆಯುಕ್ತರು ಮತ್ತು ಸಕ್ಕರೆ ನಿರ್ದೇಶಕರು, ಬೆಂಗಳೂರು.
-
ಶ್ರೀಮತಿ ಮೋನಾ ರೋತ್ (ಐಎಎಸ್): ಹೆಚ್ಚುವರಿ ಆಯುಕ್ತರು (ಅಭಿವೃದ್ಧಿ), ಬೆಂಗಳೂರು ಉತ್ತರ ನಗರ ಪಾಲಿಕೆ, ಬೃಹತ್ ಬೆಂಗಳೂರು ಪ್ರದೇಶ, ಬೆಂಗಳೂರು.
-
ಶ್ರೀಮತಿ ಸೈಯದಾ ಆಯಿಷಾ (ಕೆಎಎಸ್): ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ, ಬೆಂಗಳೂರು.
ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR) ಪ್ರಕ್ರಿಯೆ ಚಾಲ್ತಿಯಲ್ಲಿರುವುದರಿಂದ, ಕೆಎಎಸ್ ಅಧಿಕಾರಿ ಸೈಯದಾ ಆಯಿಷಾ ಅವರ ವರ್ಗಾವಣೆಯು ಭಾರತೀಯ ಚುನಾವಣಾ ಆಯೋಗದ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
