Author: Sambrama Prabha News

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Updated By: Priyalachhi ಮೈಸೂರು (ಅ.24): ಪವರ್​ ಶೇರಿಂಗ್ ವಿಚಾರ ರಾಜ್ಯ ಕಾಂಗ್ರೆಸ್​​ನಲ್ಲಿ (Congress) ಕೋಲಾಹಲವನ್ನೇ ಸೃಷ್ಟಿಸಿದೆ. ಸಿದ್ದರಾಮಯ್ಯ (Siddaramaiag) ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ತಿದ್ದಂತೆ ಅಧಿಕಾರ ಹಂಚಿಕೆ ವಿಚಾರ ಮುನ್ನಲೆಗೆ ಬಂದಿದ್ದು, ಸಿಎಂ ಸ್ಥಾನಕ್ಕೇರಲು ಡಿಸಿಎಂ ಡಿಕೆ ಶಿವಕುಮಾರ್​ (DCM DK Shivakumar) ಶತಪ್ರಯತ್ನ ಮಾಡ್ತಿದ್ದಾರೆ. ಇತ್ತ ಸಿದ್ದರಾಮಯ್ಯ 5 ವರ್ಷವೂ ನಾನೇ ಮುಖ್ಯಮಂತ್ರಿ ಅಂತಿದ್ದಾರೆ. ಇದರ ನಡುವೆ ಡಿಕೆಶಿ ಸಿಎಂ ಆಗಲಿ ಎನ್ನುವ ಕೂಗು ಕೂಡ ಹೆಚ್ಚಿದೆ. ಸಿದ್ದರಾಮಯ್ಯ ತವರಲ್ಲೇ ಡಿಕೆಶಿ ಮುಖ್ಯಮಂತ್ರಿಯಾಗಲಿ ಎಂದು ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ‘ಡಿಕೆ ಶಿವಕುಮಾರ್​ ಸಿಎಂ ಆಗಲಿ’ ಸಿದ್ದರಾಮಯ್ಯ ತವರು ಕ್ಷೇತ್ರ ಮೈಸೂರಿನಲ್ಲೇ ಡಿಸಿಎಂ ಡಿಕೆ ಶಿವಕುಮಾರ್​ ಸಿಎಂ ಆಗಲಿ ಎನ್ನುವ ಕೂಗು ಜೋರಾಗಿದೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪೂಜೆ ಸಲ್ಲಿಸಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪೂಜೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿಕೆ ಶಿವಕುಮಾರ್ ಬೆಂಬಲಿಗರು ವಿಶೇಷ ಪೂಜೆ ಸಲ್ಲಿದ್ದಾರೆ. ಡಿಸಿಎಂ…

Read More

Updated By: Priyalachhi ಬೆಂಗಳೂರು: ನವೆಂಬರ್ 20 ರಂದು ಮುಕ್ತಾಯಗೊಂಡ ಬೆಂಗಳೂರು ಟೆಕ್ ಶೃಂಗಸಭೆ (BTS) 2025 ರಲ್ಲಿಇಂಗಾಲ ಹೊರಸೂಸುವಿಕೆಯಲ್ಲಿ ಶೇ. 37 ರಷ್ಟು ಕಡಿತ ಸಾಧಿಸಿರುವುದಾಗಿ ಪ್ರಿಯಾಂಕ್ ಖರ್ಗೆ ಭಾನುವಾರ ಘೋಷಿಸಿದ್ದಾರೆ. ಖರ್ಗೆ ನೇತೃತ್ವದಲ್ಲಿ ಶೃಂಗಸಭೆ ನಡೆಸಲಾಯಿತು. “ಹೆಚ್ಚಿದ ಮೆಟ್ರೋ ಬಳಕೆ ಮತ್ತು ಸಂಬಂಧಿತ ಉಪಕ್ರಮಗಳಿಂದ ಇಂಗಾಲ ಹೂರಸೂಸುವಿಕೆಯಲ್ಲಿ ಶೇ. 37 ರಷ್ಟು ಕಡಿತ ಸಾಧಿಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ. ಪ್ರತಿನಿಧಿಗಳಿಗೆ 5,000ಕ್ಕೂ ಹೆಚ್ಚು ಬಾರಿ ಉಚಿತವಾಗಿ ಮೆಟ್ರೋದಲ್ಲಿ ಕರೆದೊಯ್ಯಲಾಗಿದೆ. ಇದರರ್ಥ ಸ್ಥಳಕ್ಕೆ 5,000 ಕಡಿಮೆ ವಾಹನದ ಪ್ರಯಾಣ ಎಂಬುದಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. ಸುಮಾರು 92,500 ಜನರು ಭಾಗವಹಿಸಿದ್ದ ಶೃಂಗಸಭೆಯಲ್ಲಿ 9,700 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗಿತ್ತು. ಅದನ್ನೆಲ್ಲ ಮರುಬಳಕೆ ಮಾಡಲಾಗಿದೆ. ಸುಸ್ಥಿರತೆ ಜಾಗೃತಿಯಾಗಿ ಸುಮಾರು 12,000 ಭಾಗವಹಿಸಿದ್ದ ಶೃಂಗಸಭೆಯಲ್ಲಿ 850 ಮಳಿಗೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಹೇಳಿದ್ದಾರೆ. “ನಾವೀನ್ಯತೆ ಮತ್ತು ಸುಸ್ಥಿರತೆ ಒಟ್ಟಿಗೆ ಹೋಗಬಹುದು ಮತ್ತು ಬೆಳೆಯಬಹುದು ಎಂಬುದನ್ನು ಬಿಟಿಎಸ್…

Read More

Updated By: Priyalachhi ಮೇಷ ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಇದು ಸಾಮಾನ್ಯವಾಗಿ ಒಳ್ಳೆಯ ಸಮಯ. ಮದುವೆಯಂತಹ ಶುಭ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿರುವವರಿಗೆ ಸು ಸಮಯ. ಖರೀದಿ ಮತ್ತು ಮಾರಾಟ, ಮನೆ ನಿರ್ಮಾಣ, ವಾಹನ ಲಾಭ, ಕೃಷಿಕರಿಗೆ ಉತ್ತಮ. ಉದ್ದೇಶಿತ ಕೆಲಸ ಸಾಧಿಸುವ ಯೋಗವಿದೆ. ವೃಷಭ ವೃತ್ತಿ ಸಂಬಂಧಿತ ಗಡುವುಗಳಿಂದ ನಿಮಗೆ ಒತ್ತಡ . ಕಠಿಣ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸುವ ಸಾಧ್ಯತೆ. ನೀವು ತಂಡದ ವಿಶ್ವಾಸಾರ್ಹ ಸದಸ್ಯರು. ಆದರೆ ಜಾಗರೂಕರಾಗಿರಿ. ಸ್ನೇಹಿತರ ಸಹವಾಸ, ಶಿಕ್ಷಣ, ಆರ್ಥಿಕ ಲಾಭ, ಭೂ ಲಾಭ ಇತ್ಯಾದಿಗಳಿಗೆ ಯೋಗವಿದೆ. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಅನಿರೀಕ್ಷಿತ ಧನಾಗಮ. ಜೊತೆಗೆ ಹೆಚ್ಚುವರಿ ವೆಚ್ಚ. ಭವಿಷ್ಯಕ್ಕಾಗಿ ಸ್ವಲ್ಪ ಹಣ ಮೀಸಲಿಡಿ. ಮಿಥುನ ಕುಟುಂಬ ವಿಚಾರದಲ್ಲಿ ಈ ವಾರ ನೀವು ತೆಗೆದುಕೊಳ್ಳುವ ಪ್ರಬಲ ನಿರ್ಧಾರದಿಂದ ಉತ್ತಮ ಫಲಿಕಾಂಶ. ಸಂಶೋಧನಾ ಅಧ್ಯಯನದಲ್ಲಿ ತೊಡಗಿರುವವರಿಗೆ ಲಾಭ, ಆರ್ಥಿಕ ಸಮೃದ್ಧಿ ಇತ್ಯಾದಿಗಳಿಗೆ ಯೋಗವಿದೆ. ನಿಮ್ಮ ಶಕ್ತಿಯನ್ನು ಸ್ಥಿರವಾಗಿರಿಸಿಕೊಳ್ಳಿ. ನಿಮ್ಮ ಸಂಬಂಧಿಕರಿಂದ ಹಣಕಾಸಿನ ವಿಷಯವಾಗಿ ಸಿಹಿ ಸುದ್ದಿ . ನಿಮ್ಮ…

Read More

Updated By: Priyalachhi ಬೆಂಗಳೂರು: ‘ಕರ್ನಾಟಕವು ಈಗ ಮೀನು ಉತ್ಪಾದನೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಜಾಗತಿಕ ಮೀನು ಉತ್ಪಾದನೆಯಲ್ಲಿ ಭಾರತದ ಪಾಲು ಸುಮಾರು ಶೇ 7.7 ರಷ್ಟಿದ್ದು, ರಫ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ. ವಿಶ್ವ ಮೀನುಗಾರಿಕಾ ದಿನಾಚರಣೆಯಂದು ‘ಮತ್ಸ್ಯ ಮೇಳ 2025’ದಲ್ಲಿ ಮಾತನಾಡಿದ ಅವರು, ಮೀನುಗಾರಿಕೆ ಲಕ್ಷಾಂತರ ಕುಟುಂಬಗಳಿಗೆ ಆಹಾರ ಭದ್ರತೆ, ಪೋಷಣೆ ಮತ್ತು ಜೀವನೋಪಾಯವನ್ನು ಖಾತ್ರಿಪಡಿಸುವ ನಿರ್ಣಾಯಕ ಉದ್ಯಮವಾಗಿದೆ ಎಂದು ಹೇಳಿದರು. ಕರ್ನಾಟಕವು 32 ಕಿ.ಮೀ ಕರಾವಳಿ ಮತ್ತು 5.5 ಲಕ್ಷ ಹೆಕ್ಟೇರ್ ಒಳನಾಡಿನ ಜಲ ಸಂಪನ್ಮೂಲಗಳನ್ನು ಹೊಂದಿದ್ದು, ಮೀನು ಉತ್ಪಾದನೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಈ ವಲಯವು ರಾಜ್ಯದಲ್ಲಿ ಸುಮಾರು 10 ಲಕ್ಷ ಜನರಿಗೆ ಆಧಾರವಾಗಿದೆ ಎಂದು ಹೇಳಿದರು. ಈ ವಲಯಕ್ಕೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಿಗೆ ವಾರ್ಷಿಕ ಡೀಸೆಲ್ ಕೋಟಾವನ್ನು 1.5 ಲಕ್ಷ ಕಿಲೋಲೀಟರ್‌ಗಳಿಂದ 2 ಲಕ್ಷ ಕಿಲೋಲೀಟರ್‌ಗಳಿಗೆ ಹೆಚ್ಚಿಸಲಾಗಿದೆ. ಸಾಂಪ್ರದಾಯಿಕ ದೋಣಿಗಳಿಗೆ ಲೀಟರ್‌ಗೆ 35 ರೂ. ಸಬ್ಸಿಡಿ…

Read More

Updated By: Priyalachhi ಬೆಂಗಳೂರು: ನಾಯಕತ್ವ ಬದಲಾವಣೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಲ್ಲದೆ ಅನೇಕ ಶಾಸಕರು ದೆಹಲಿ ಪ್ರವಾಸಕೈಗೊಳ್ಳುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಸದ್ಯದ ಬೆಳವಣಿಗೆ ಬಗ್ಗೆ ನಾನು ಏನೂ ಹೇಳಲ್ಲ, ನನ್ನ ಬಳಿ ಹೇಳಲು ಏನೂ ಇಲ್ಲ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈಗ ನಡೆದ ವಿದ್ಯಾಮನಗಳ ಬಗ್ಗೆ ಹೇಳಲು ನನ್ನ ಬಳಿ ಏನೂ ಇಲ್ಲ. ಯಾವ ವಿಚಾರದಲ್ಲಿಯೂ ಹೇಳಲು ಏನೂ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಆಂತರಿಕ ಕಚ್ಚಾಟದ ಈ ರಾಜಕೀಯ ನಾಟಕಕ್ಕೆ ತೆರೆ ಎಳೆಯಲು ಎಐಸಿಸಿ ಅಧ್ಯಕ್ಷರು ಬಂದು ರಾಜ್ಯ ನಾಯಕರ ಕೋಪವನ್ನು ತಣ್ಣಗಾಗಿಸಲು ಹೆಜ್ಜೆ ಹಾಕಿದ್ದಾರೆ. ಆದರೆ ಬಿಕ್ಕಟ್ಟನ್ನು ನಿಭಾಯಿಸಲು ಮಾರ್ಗ ಅಷ್ಟು ಸುಲಭವಾಗಿರುವಂತೆ ಕಾಣುತ್ತಿಲ್ಲ.

Read More

Updated By: Priyalachhi ಬೆಳಗಾವಿ: ಕೆಲವೇ ಜನರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾನು ಕೂಡಾ ಒಪ್ಪುವುದಿಲ್ಲ. ನಮಗಿರುವ 1 ಕೋಟಿ 25 ಲಕ್ಷ ಮತದಾರರಿಂದ ನಾವು ಶಾಸಕರು, ಮಂತ್ರಿ ಆಗಿದ್ದೇವೆ. ಹಾಗಾಗಿ, ನಮಗೆ ಇತಿಮಿತಿ ಇರಬೇಕು. ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವುದು ಬಹಳ ತಪ್ಪು ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್​ಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ಕೊಟ್ಟರು. ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಅಧಿಕಾರಕ್ಕೆ ಬರಲು ಬಹಳಷ್ಟು ಜನ ಪ್ರತ್ಯಕ್ಷ, ಪರೋಕ್ಷವಾಗಿ ದುಡಿದಿದ್ದಾರೆ. 1960ರಲ್ಲಿ ತೇನ್​ಸಿಂಗ್ ಹಿಮಾಲಯ ಪರ್ವತ ಏರಿದಾಗ ಇಡೀ ಜಗತ್ತಿನ ಎಲ್ಲ ಪತ್ರಿಕೆಗಳು ತೇನ್​ಸಿಂಗ್ ಹಿಮಾಲಯ ಏರಿದರು ಎಂದು ಬರೆದರು. ಅವರ ಜೊತೆಗೆ ಇನ್ನೂ 14 ಜನರಿದ್ದರು. ಅವರ ಹೆಸರು ಬರಲಿಲ್ಲ. ಇದೂ ಕೂಡಾ ಹಾಗೇ ಆಗಿದೆ ಎಂದರು. ಪಕ್ಷ ಅಧಿಕಾರಕ್ಕೆ ಬರಲು ಎಲ್ಲರ ಸಹಕಾರವಿದೆ. ಮೊದಲ‌ ಬಾರಿ ಆರಿಸಿ ಬಂದವರೂ ಸೇರಿ ಬಹಳಷ್ಟು ಶಾಸಕರು ಸಂಕಷ್ಟದಲ್ಲಿದ್ದಾರೆ. ಪಕ್ಷ, ಶಾಸಕರು ಮತ್ತು…

Read More

Updated By: Priyalachhi ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು ತಂಡವನ್ನು ಪ್ರಕಟಿಸಿದೆ. ಗಾಯದ ಕಾರಣ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಶುಭಮನ್ ಗಿಲ್ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿದ್ದು, ಕೆ.ಎಲ್.ರಾಹುಲ್​ಗೆ ನಾಯಕನ ಜವಾಬ್ದಾರಿ ನೀಡಲಾಗಿದೆ. ರಿಷಭ್ ಪಂತ್ ಮತ್ತು ರುತುರಾಜ್ ಗಾಯಕ್ವಾಡ್ ಅವರೂ ತಂಡ ಸೇರಿದ್ದಾರೆ. ವೇಗದ ಬೌಲರ್​ಗಳಾದ ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಮತ್ತು ಅರ್ಷದೀಪ್ ಸಿಂಗ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಭಾರತದ ಏಕದಿನ ತಂಡ: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಕೆ.ಎಲ್.ರಾಹುಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರುತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಧ್ರುವ್ ಜುರೆಲ್. ಎಲ್ಲಿ, ಯಾವಾಗ ಪಂದ್ಯ?: ಮೊದಲ ಏಕದಿನ ಪಂದ್ಯ: ಭಾನುವಾರ, ನವೆಂಬರ್ 30 (ರಾಂಚಿ) ಎರಡನೇ ಏಕದಿನ…

Read More

Updated By: Priyalachhi ಬೆಂಗಳೂರು: ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ, ಅಧಿಕಾರ ಹಂಚಿಕೆಯ ಒತ್ತಾಯ, ಬಣ ರಾಜಕೀಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸುವ ಅನಿವಾರ್ಯತೆ ಹೈಕಮಾಂಡ್​​ಗೆ ಎದುರಾಗಿದೆ. ಆದಷ್ಟು ಬೇಗ ಹೈಕಮಾಂಡ್​ ರಾಜ್ಯದ ಬಣ ರಾಜಕೀಯ ಕ್ಷಿಪ್ರ ಬೆಳವಣಿಗೆಯನ್ನು ತಣಿಸುವ ಸಂದಿಗ್ಧತೆ, ಅನಿವಾರ್ಯತೆಯಲ್ಲಿ ಸಿಲುಕಿದೆ. ಇಲ್ಲವಾದರೆ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆಯೂ ಗೋಚರಿಸಿದೆ.‌ ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿಯ ಚರ್ಚೆ ಇದೀಗ ಇನ್ನಷ್ಟು ಹೆಚ್ಚಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2.5 ವರ್ಷ ಪೂರ್ಣಗೊಳಿಸುತ್ತಿದ್ದ ಹಾಗೆಯೇ ಅಧಿಕಾರ ಹಂಚಿಕೆಯ ಒಳಸುಳಿ ಹೊರಚಿಮ್ಮುವ ಲಕ್ಷಣ ಕಾಣುತ್ತಿದೆ. ಡಿ.ಕೆ.ಶಿವಕುಮಾರ್ ಬಣದ ಕೆಲವರು ದೆಹಲಿ ಯಾತ್ರೆ ನಡೆಸಿದ್ದರೆ, ಇತ್ತ ಸಿಎಂ ಆಪ್ತ ಬಣದ ಸಚಿವರು ಡಿನ್ನರ್ ಮೀಟಿಂಗ್ ಆರಂಭಿಸಿದ್ದಾರೆ. ಅಧಿಕಾರ ಹಂಚಿಕೆ ಚರ್ಚೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಸಿದ್ದರಾಮಯ್ಯ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ನಾನೇ ಮುಂದಿನ ಬಜೆಟ್ ಮಂಡಿಸುತ್ತೇನೆ ಎನ್ನುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇತ್ತ ಡಿ.ಕೆ.ಬ್ರದರ್ಸ್ ಮನೆಯಲ್ಲೇ ಕೂತು ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ…

Read More

Updated By: Priyalachhi ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದಿ ಡೆವಿಲ್ ಚಿತ್ರ ಡಿಸೆಂಬರ್ 12 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ದರ್ಶನ್ ಸದ್ಯ ಜೈಲಿನಲ್ಲಿರುವುದರಿಂದ ಸಿನಿಮಾ ಅವರ ಅನುಪಸ್ಥಿತಿಯಲ್ಲಿ ರಿಲೀಸ್ ಆಗಲಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ರಾಜ್ಯಾದ್ಯಂತ ಅಭಿಮಾನಿಗಳಿಗೆ ಅವರ ಸಂದೇಶವನ್ನು ತಲುಪಿಸಲು ಮುಂದೆ ಬಂದಿದ್ದಾರೆ. ದರ್ಶನ್‌ ತಮ್ಮ ಪತ್ನಿ ಬಳಿ ಫ್ಯಾನ್ಸ್‌ಗೆ ಹೇಳು ಅಂತ ಒಂದು ಮಾತು ಹೇಳಿದ್ದಾರಂತೆ. ಅದನ್ನ ಸ್ವತಃ ವಿಜಯಲಕ್ಷ್ಮಿ ಅಭಿಮಾನಿಗಳ ಬಳಿ ಹೇಳಿದ್ದಾರೆ. ದರ್ಶನ್‌ ಫ್ಯಾನ್ಸ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಅಂತ ಹೇಳು ಅಂತ ಹೇಳಿದ್ರಂತೆ. ಇದನ್ನು ಸ್ವತಃ ವಿಜಯಲಕ್ಷ್ಮಿ ಹೇಳಿದ್ದಾರೆ. ಅಭಿಮಾನಿಗಳು ಶಾಂತವಾಗಿರಲು ಮತ್ತು ಅವರು ಯಾವಾಗಲೂ ತೋರಿಸಿರುವ ಪ್ರೀತಿಯನ್ನು ಮುಂದುವರಿಸಲು ನೆನಪಿಸುವಂತೆ ಅವರು ವೈಯಕ್ತಿಕವಾಗಿ ಕೇಳಿಕೊಂಡಿದ್ದಾರೆ ಎಂದು ಅವರು ಹೇಳಿದರು. ನೀವು ಇಲ್ಲಿಯವರೆಗೆ ಅವರಿಗೆ ನೀಡಿರುವ ಪ್ರೀತಿ ಮತ್ತು ಬೆಂಬಲವೇ ಎಲ್ಲವನ್ನೂ ಸೂಚಿಸುತ್ತದೆ ಎಂದು ಅವರು ಹೇಳಿದರು. ಈ ಚಿತ್ರಕ್ಕೆ, ನೀವು ಸ್ವಲ್ಪ ಹೆಚ್ಚು ಬೆಂಬಲಿಸುತ್ತೀರಿ ಎಂದು ಅವರು ಭಾವಿಸುತ್ತಾರೆ ಎಂದು…

Read More

Updated By: Priyalachhi ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆ ಅಧಿಕಾರ ಹಸ್ತಾಂತರ ಜಗಳಗಳಿಂದ ರಾಜ್ಯದಲ್ಲಿ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ. ಪಕ್ಷದ ಹೈಕಮಾಂಡ್ ತಕ್ಷಣ ಮುಖ್ಯಮಂತ್ರಿ ಯಾರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಒತ್ತಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಸ್ತಾಂತರ ಕಿತ್ತಾಟಗಳಿಂದಾಗಿ ಸರ್ಕಾರದ ಕೆಲಸಗಳು ಸ್ಥಗಿತಗೊಂಡಿದೆ. ಡಿ ಕೆ ಶಿವಕುಮಾರ್ ಅವರನ್ನು ಬೆಂಬಲಿಸುವ ಶಾಸಕರು ಅವರನ್ನು ಸಿಎಂ ಹುದ್ದೆಯಲ್ಲಿ ಕೂರಿಸಲು ಶತಾಯಗತಾಯ ಹೋರಾಟ ನಡೆಸುತ್ತಿದ್ದು, ನಿರ್ಣಾಯಕ ಹಂತವನ್ನು ತಲುಪಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ, ಸರ್ಕಾರದ ಕೆಲಸಗಳು ಕಾರ್ಯನಿರ್ವಹಿಸುವುದಿಲ್ಲ, ಅಧಿಕಾರಿಗಳು ಕೆಲಸ ಮಾಡುವುದಿಲ್ಲ ಮತ್ತು ಆಡಳಿತ ಯಂತ್ರವು ಕೋಮಾ ಸ್ಥಿತಿಗೆ ತಲುಪಿದೆ ಎಂದು ಅವರು ನಿನ್ನೆ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ಕೆಲವು ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಲ್ಲಿ ಉಳಿಸಲು ಕೆಲಸ ಮಾಡುತ್ತಿದ್ದಾರೆ, ಆದರೆ ಇನ್ನೊಂದು ಗುಂಪು ಅವರನ್ನು ತೆಗೆದುಹಾಕಲು ಕೆಲಸ…

Read More