• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಬೆಂಗಳೂರು ಎಟಿಎಂ ವ್ಯಾನ್ ದರೋಡೆ: 54 ಗಂಟೆಗಳಲ್ಲಿ ಮೂವರ ಬಂಧನ

Sambrama Prabha News by Sambrama Prabha News
November 22, 2025
in Home, Latest News
0
ಬೆಂಗಳೂರು ಎಟಿಎಂ ವ್ಯಾನ್ ದರೋಡೆ: 54 ಗಂಟೆಗಳಲ್ಲಿ ಮೂವರ ಬಂಧನ

Updated By: Priyalachhi

ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರು ಎಟಿಎಂ ವ್ಯಾನ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ನಾಲ್ವರನ್ನು ಬಂಧಿಸಿ, ಅವರಿಂದ ಸುಮಾರು 5.76 ಕೋಟಿ ಹಣ ಸೀಜ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶನಿವಾರ ಇಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದಿದ್ದ ಎಟಿಎಂ ಹಣ ಸಾಗಾಟ ವೇಳೆ ನಡೆದಿದ್ದ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

‘ಒಟ್ಟು 8 ಜನರ ಗುಂಪಿನಿಂದ ಕೃತ್ಯ ನಡೆದಿದೆ. ಈಗ ಸದ್ಯ 3 ಆರೋಪಗಳನ್ನು ಬಂಧಿಸಲಾಗಿದೆ. 5.76 ಕೋಟಿ ಹಣ ಸೀಜ್ ಮಾಡಲಾಗಿದೆ. ಒಟ್ಟು 8 ಜನರ ಗುಂಪಿನಿಂದ ಕೃತ್ಯ ನಡೆದಿದೆ. ಈಗ ಸದ್ಯ 3 ಆರೋಪಿಗಳನ್ನು ಬಂಧನ ಮಾಡಲಾಗಿದೆ. 30 ತಾಸು ತಡವಾಗಿ ಮಾಹಿತಿ ಬಂದಿದೆ. ಮೊದಲು ಡಿಜೆ ಹಳ್ಳಿಯಲ್ಲಿ ಆಗಿದೆ ಅಂತ ಮಾಹಿತಿ ಬಂದಿತ್ತು.

ಘಟನೆ ನಡೆದ ಒಂದೂವರೆ ಗಂಟೆಯ ಬಳಿಕ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎಲ್ಲಾ ಭಾಗಗಳಲ್ಲಿ ನಾಕಾಬಂಧಿ ಹಾಕಲಾಗಿತ್ತು. ದರೋಡೆಕೋರರು ಮೊಬೈಲ್ ಬಳಸುತ್ತಿರಲಿಲ್ಲ. ಸಿಸಿಟಿವಿ ಕಾಣದ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿದ್ದರು. ತನಿಖೆಯ ದಾರಿ ತಪ್ಪಿಸಲು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಿದ್ದಾರೆ. ಘಟನೆ ನಡೆದ ದಿನ ಹಣ ತೆಗೆದುಕೊಂಡು ಹೋದ ವಾಹನ ಹಿಡಿಯಲಿಕ್ಕೆ ಆಗ್ಲಿಲ್ಲ. ಅನೇಕ ವಾಹನ ಬಳಸಿದ್ದಾರೆ. ವಾಹನಗಳ ನಂಬರ್ ಪದೇ ಪದೇ ಬದಲಿಸಿದ್ದಾರೆ ಎಂದು ಸೀಮಂತ್ ಕುಮಾರ್ ಮಾಹಿತಿ ನೀಡಿದರು.

Tags: ಎಟಿಎಂ ವ್ಯಾನ್ಬೆಂಗಳೂರು
Previous Post

ರಾಜ್ಯ ಸರ್ಕಾರ ರೈತರ ದಾರಿ ತಪ್ಪಿಸೋ ಕೆಲಸ ಮಾಡುತ್ತಿದೆ: ಪ್ರಲ್ಹಾದ್ ಜೋಶಿ

Next Post

ಐಟಿ ಸಿಟಿ ಬೆಂಗಳೂರಿನ ಮಕ್ಕಳು ಕಲಿಕೆಯಲ್ಲಿ ಹಿಂದೆ

Next Post
ಐಟಿ ಸಿಟಿ ಬೆಂಗಳೂರಿನ ಮಕ್ಕಳು ಕಲಿಕೆಯಲ್ಲಿ ಹಿಂದೆ

ಐಟಿ ಸಿಟಿ ಬೆಂಗಳೂರಿನ ಮಕ್ಕಳು ಕಲಿಕೆಯಲ್ಲಿ ಹಿಂದೆ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.