BREAKING NEWS
ಸಚಿವ ಸಂಪುಟ ವಿಸ್ತರಣೆ ಕಸರತ್ತು: “ಮಂತ್ರಿ ಗಾದಿ”ಗಾಗಿ ಜಮೀರ್ ಅಹ್ಮದ್ ಖಾನ್ ದಿಲ್ಲಿಯತ್ತ ದೌಡು, ‘ರಾಜಕೀಯ ಗುರು’ ಹೇಳಿಕೆಯ ಸಂಚಲನ!   •   ‘ಸಿದ್ದರಾಮಯ್ಯ ಸ್ವಚ್ಛ ರಾಜಕಾರಣಿ, ಆದರೆ ಪುತ್ರ ಹಾಗೂ ಭೈರತಿ ಸುರೇಶ್‌ರಿಂದ ಕಲುಷಿತ’: ಸ್ವಪಕ್ಷದ ವಿರುದ್ಧವೂ ಗುಡುಗಿದ ಯತ್ನಾಳ್!   •   ಬಿಡದಿ ಟೌನ್‌ಶಿಪ್ ವಿರುದ್ಧ ರೈತರ ಹೋರಾಟಕ್ಕೆ ಹೊಸ ರೂಪ: ‘ಜೆನ್ ಜೀ’, ಐಟಿ ಉದ್ಯೋಗಿಗಳ ಬೆಂಬಲಕ್ಕೆ ರೈತರ ಕರೆ!   •   ಲೋಕಸಭೆಯಲ್ಲಿ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗಕ್ಕೆ ಅಮಿತ್ ಶಾ ಆದೇಶ: ರಾಹುಲ್ ಗಾಂಧಿ ಆರೋಪಕ್ಕೆ ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?   •   ರಾಜಕೀಯ ಕಲುಷಿತ, 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸಿದ್ದರಾಮಯ್ಯ   •   ಸೌಜನ್ಯ ಪ್ರಕರಣ: ಸಿಬಿಐ ತನಿಖೆ ‘ಕಳಪೆ’, ರಾಜ್ಯದಿಂದಲೇ ತನಿಖೆಯಾಗಲಿ ಎಂದ ಸುಪ್ರೀಂ ಕೋರ್ಟ್   •   ‘ಬಾರ್ ಕಟ್ಟಡದಲ್ಲೇ ಬಿಸಿಎಂ ಹಾಸ್ಟೆಲ್’ – ‘ಸಂಭ್ರಮಪ್ರಭ’ ವರದಿಗೆ ಎಚ್ಚೆತ್ತ ಸರ್ಕಾರ   •   ಫಲಾನುಭವಿಗಳ ಗಮನಕ್ಕೆ: ಗೃಹಲಕ್ಷ್ಮಿಗೆ ವೋಟರ್ ಐಡಿ ಕಡ್ಡಾಯ, ಗೃಹಜ್ಯೋತಿ ಗೊಂದಲಕ್ಕೆ ಬೆಸ್ಕಾಂ ಹೆಲ್ಪ್‌ಲೈನ್   •  

—Advertisement—

, ,

ಭಾರತೀಯ ಸೇನೆ ಸಹ ಮೇಲ್ಜಾತಿಯವರಿಂದ ನಿಯಂತ್ರಿಸಲ್ಪಡುತ್ತದೆ

Author Picture
Published On: November 4, 2025

—Advertisement—

Updated By: Priyalachhi

ಔರಂಗಾಬಾದ್‌: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಭಾರತೀಯ ಸೇನೆ ಸಹ ಶೇ.10 ರಷ್ಟು ಜನರಿಂದ ನಿಯಂತ್ರಿಸಲ್ಪಡುತ್ತದೆ’ ಎಂದು ಹೇಳುವ ಮೂಲಕ ಮಂಗಳವಾರ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ

ಇಂದು ಬಿಹಾರದ ಔರಂಗಾಬಾದ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಲೋಕಸಭೆ ಪ್ರತಿಪಕ್ಷದ ನಾಯಕ, ಮುಖ್ಯವಾಗಿ ಮೇಲ್ಜಾತಿಗಳಿಂದ ಬಂದವರು ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಇದರಲ್ಲಿ ಸಶಸ್ತ್ರ ಪಡೆಗಳು ಸೇರಿವೆ ಎಂದು ಹೇಳಿದರು.

“ದೇಶದ ಜನಸಂಖ್ಯೆಯ ಕೇವಲ ಶೇ. 10 ರಷ್ಟು ಮೇಲ್ಜಾತಿಯ ಜನರು, ಕಾರ್ಪೊರೇಟ್ ವಲಯ, ಅಧಿಕಾರಶಾಹಿ ಮತ್ತು ನ್ಯಾಯಾಂಗದಲ್ಲಿ ಉನ್ನತ ಅವಕಾಶಗಳನ್ನು ಪಡೆಯುತ್ತಾರೆ. ಭಾರತೀಯ ಸೇನೆ ಕೂಡ ಅವರ ನಿಯಂತ್ರಣದಲ್ಲಿದೆ” ಎಂದು ಆರೋಪಿಸಿದರು.

ಹಿಂದುಳಿದ ವರ್ಗಗಳು, ದಲಿತರು, ಪರಿಶಿಷ್ಟ ಪಂಗಡಗಳು ಮತ್ತು ಇತರ ಅಲ್ಪಸಂಖ್ಯಾತರನ್ನು ಒಳಗೊಂಡ ಉಳಿದ ಶೇ. 90 ರಷ್ಟು ಭಾರತೀಯರು ಹೆಚ್ಚಾಗಿ ಪ್ರಮುಖ ಸ್ಥಾನಗಳಿಂದ ಹೊರಗುಳಿದಿದ್ದಾರೆ ಎಂದು ರಾಹುಲ್ ಗಾಂಧಿ ವಾದಿಸಿದರು.

ರಾಷ್ಟ್ರೀಯ ಜಾತಿ ಜನಗಣತಿಯ ಬೇಡಿಕೆಯನ್ನು ಪುನರುಚ್ಚರಿಸಿದ ರಾಹುಲ್ ಗಾಂಧಿ, ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂವಿಧಾನವನ್ನು ರಕ್ಷಿಸಲು ಅಂತಹ ದತ್ತಾಂಶದ ಅತ್ಯಗತ್ಯ ಇದೆ ಎಂದರು.

“ಆಡಳಿತದ ಪ್ರಮುಖ ಸ್ಥಾನಗಳಲ್ಲಿ ಎಷ್ಟು ಜನ ದಲಿತರು, ಒಬಿಸಿಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಇದ್ದಾರೆ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಶೇ. 90 ರಷ್ಟು ಜನರಿಗೆ ಭಾಗವಹಿಸುವ ಹಕ್ಕುಗಳಿಲ್ಲದಿದ್ದರೆ, ಸಂವಿಧಾನ ರಕ್ಷಿಸಲು ಸಾಧ್ಯವಿಲ್ಲ” ಎಂದರು.

“ಭಾರತದ ಅಗ್ರ 500 ಕಂಪನಿಗಳಲ್ಲಿ ದಲಿತರೇ ಇಲ್ಲ. ಇದು ಅವಕಾಶಗಳನ್ನು ಪಡೆಯುವಲ್ಲಿ ಆಳವಾಗಿ ಬೇರೂರಿರುವ ಅಸಮಾನತೆ” ಎಂದು ಅವರು ವಿವರಿಸಿದ್ದಾರೆ.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp