BREAKING NEWS
ಕೆಎಸ್ಆರ್ ರೈಲು ನಿಲ್ದಾಣದ ಯಾರ್ಡ್ ಮೇಲ್ದರ್ಜೆಗೇರಿಕೆ: ಇನ್ನು ಮುಂದೆ ರೈಲು ಸಂಚಾರ ಸರಾಗ   •   ಬಿಡದಿ ಟೌನ್‌ಶಿಪ್‌ ವಿವಾದ: ಮೋದಿ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆ – ಎಚ್‌ಡಿಕೆ ಕಿಡಿ | Bidadi Township Row   •   ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ರದ್ದು: ಚುನಾವಣಾ ಆಯೋಗದ ನಡೆಗೆ ಜಾಲತಾಣಗಳಲ್ಲಿ ಆಕ್ರೋಶ   •   ಗೃಹಲಕ್ಷ್ಮಿ & ಗೃಹಜ್ಯೋತಿ ಪುನಃ ಅರ್ಜಿ – CM DK ಆದೇಶ   •   ಬೆಂಗಳೂರು: ಭ್ರಷ್ಟಾಚಾರ ವಿರುದ್ಧ ಮುಖ್ಯಮಂತ್ರಿ ಶಿವಕುಮಾರ್ ಕಠಿಣ ನಿರ್ದೇಶನ   •   ‘ಮೇಕಿನ್ ಇಂಡಿಯಾ ಕೇಳಿದ್ರೆ, ಲೀಕ್ ಇನ್ ಇಂಡಿಯಾ ಕೊಟ್ರಿ’: ದೆಹಲಿಯಲ್ಲಿ ‘ಕಾಕ್ರೋಚ್ ಪಾರ್ಟಿ’ಯಿಂದ ಬೃಹತ್ ಪ್ರತಿಭಟನೆ!   •   ಸಿಎಂ ಸ್ಥಾನದಿಂದ ಇಳಿದರೂ ಕಡಿಮೆಯಾಗದ ಸಿದ್ದರಾಮಯ್ಯ ಖದರ್: ಬಿ.ಕೆ. ಹರಿಪ್ರಸಾದ್ ಹೊಸ ಕೆಪಿಸಿಸಿ ಅಧ್ಯಕ್ಷ, ಆಪ್ತರಿಗೆ ಮಂತ್ರಿಗಿರಿ!   •   ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್   •  

—Advertisement—

ಸತತ 2ನೇ ಬಾರಿಗೆ ಕಬಡ್ಡಿ ವಿಶ್ವಕಪ್​ ಗೆದ್ದ ಭಾರತ

Author Picture
Published On: November 25, 2025

—Advertisement—

Updated By: Priyalachhi

ಭಾರತೀಯ ಮಹಿಳಾ ಕಬಡ್ಡಿ ತಂಡ ವಿಶ್ವಕ್ಕೆ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದಿದ್ದ 2025ರ ಮಹಿಳಾ ಕಬಡ್ಡಿ ವಿಶ್ವಕಪ್ ಫೈನಲ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದೆ. ಪ್ರಶಸ್ತಿ ನಿರ್ಣಾಯಕ ಪಂದ್ಯದಲ್ಲಿ, ಭಾರತ ತಂಡವು ಬಲಿಷ್ಠ ಚೈನೀಸ್ ತೈಪೆಯನ್ನು 35-28 ಅಂತರದಿಂದ ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯಾವಳಿಯಲ್ಲಿ ಭಾರತ ಒಂದೇ ಒಂದು ಪಂದ್ಯವನ್ನು ಸೋಲದೆ ಅಜೇಯವಾಗಿ ವಿಶ್ವಕಪ್ ಗೆದ್ದುಕೊಂಡಿರುವದು ವಿಶೇಷ.

ರೋಚಕದಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವು ಭಾರತೀಯ ಮಹಿಳಾ ತಂಡಕ್ಕೆ ಕಠಿಣ ಸ್ಪರ್ಧೆ ನೀಡಿತು. ಆದಾಗ್ಯೂ, ಭಾರತೀಯ ನಾಯಕಿ ರಿತು ನೇಗಿ ಮತ್ತು ಉಪನಾಯಕಿ ಪುಷ್ಪಾ ರಾಣಾ ಅತ್ಯುತ್ತಮ ನಾಯಕತ್ವ ಕೌಶಲ್ಯವನ್ನು ಪ್ರದರ್ಶಿಸಿದರು. ವಿಶೇಷವಾಗಿ ಸಂಜು ದೇವಿ ಅವರ ಸೂಪರ್ ರೈಡ್ ತಂಡಕ್ಕೆ ನಿರ್ಣಾಯಕ ತಿರುವು ನೀಡಿ ಪಂದ್ಯದ ದಿಕ್ಕನ್ನು ಬದಲಾಯಿಸಿತು. ಇದರಿಂದಾಗಿ ಭಾರತಕ್ಕೆ ಗೆಲುವು ಸುಲಭವಾಯ್ತು. ಭಾರತ ತಂಡವು ಫೈನಲ್‌ನಲ್ಲಿ ಮಾತ್ರವಲ್ಲದೆ ಪಂದ್ಯಾವಳಿಯಾದ್ಯಂತ ಪ್ರಾಬಲ್ಯ ಮೆರೆಯಿತು.

ಗುಂಪು ಹಂತದ ಪಂದ್ಯಾವಳಿಗಳಲ್ಲಿ ಟೀಮ್​ ಇಂಡಿಯಾ, ಥೈಲ್ಯಾಂಡ್ ಅನ್ನು 68-17 ಮತ್ತು ನೇಪಾಳವನ್ನು 50-12 ಅಂತರದಿಂದ ಸೋಲಿಸಿತು. ಇದಲ್ಲದೇ ಸೆಮಿಫೈನಲ್‌ನಲ್ಲಿ ಬಲಿಷ್ಠ ಇರಾನ್ ತಂಡವನ್ನು 33-21 ಅಂತರದಿಂದ ಮಣಿಸಿ ಫೈನಲ್ ಪ್ರವೇಶ ಪಡೆದುಕೊಂಡಿತು. ಮತ್ತೊಂದೆಡೆ, ಚೈನೀಸ್ ತೈಪೆ ಕೂಡ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ನಾಕೌಟ್ ಹಂತವನ್ನು ತಲುಪಿತು. ತಂಡವು ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 25-18 ಅಂಕಗಳ ಅಂತರದಿಂದ ಮಣಿಸಿ ಫೈನಲ್ ತಲುಪಿತು.

ಭಾರತ ಮತ್ತು ಚೈನೀಸ್ ತೈಪೆ ಎರಡೂ ಅಜೇಯವಾಗಿ ಫೈನಲ್​ ಪಂದ್ಯಕ್ಕೆ ಅರ್ಹತೆ ಪಡೆದಿದ್ದರಿಂದ ಅಂತಿಮ ಕದನ ಮತ್ತಷ್ಟೋ ರೋಚಕತೆಗೆ ತೆರೆಳಿತ್ತು. ಏತನ್ಮಧ್ಯೆ ಈ ಪಂದ್ಯಾವಳಿಯಲ್ಲಿ ಒಟ್ಟು 11 ತಂಡಗಳು ಭಾಗವಹಿಸಿದ್ದವು. ಗುಂಪು ‘ಎ’ಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಭಾರತ ಗೆದ್ದಿತು. ಅದೇ ರೀತಿ, ಗುಂಪು ‘ಬಿ’ಯಲ್ಲಿ ಆಡಿದ ಐದು ಪಂದ್ಯಗಳಲ್ಲಿಯೂ ಚೈನೀಸ್ ತೈಪೆ ಜಯಗಳಿಸಿತು.

ಈ ಪಂದ್ಯಾವಳಿಯಲ್ಲಿ ಭಾರತ ತಂಡದ ಗೆಲುವಿನಲ್ಲಿ ನಾಯಕಿ ರಿತು ನೇಗಿ ಮತ್ತು ಉಪನಾಯಕಿ ಪುಷ್ಪಾ ರಾಣಾ ಪ್ರಮುಖ ಪಾತ್ರ ವಹಿಸಿದರು. ರಿತು ರೈಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಪುಷ್ಪಾ ರಾಣಾ ರಕ್ಷಣಾ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಇದರೊಂದಿಗೆ ಭಾರತ ಎದುರಾಳಿ ತಂಡಗಳ ಮೇಲೆ ಪ್ರಾಬಲ್ಯ ಸಾಧಿಸಿತು. ಅವರೊಂದಿಗೆ ಚಂಪಾ ಠಾಕೂರ್, ಭಾವನಾ ಠಾಕೂರ್ ಮತ್ತು ಸಾಕ್ಷಿ ಶರ್ಮಾ ಕೂಡ ಉತ್ತಮ ಪ್ರದರ್ಶನ ನೀಡಿದರು. ಕರ್ನಾಟಕದ ತೇಜಸ್ವಿ ಬಾಯಿ ತಂಡದ ಮುಖ್ಯ ಕೋಚ್ ಮತ್ತು ಸಹಾಯಕ ಕೋಚ್ ಪ್ರಿಯಾಂಕಾ ಆಟಗಾರ್ತಿಯರಲ್ಲಿ ಆತ್ಮವಿಶ್ವಾಸ ತುಂಬಿದರು ಇದು ಅದ್ಭುತ ಪ್ರದರ್ಶನಕ್ಕೆ ಸಹಾಯ ಮಾಡಿತು.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp