• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ನಿರ್ವಾಹಕನ ಭಾಷಾ ಪ್ರೇಮ: ‘ಕನ್ನಡ ರಥ’ವಾದ ಬಸ್​

Sambrama Prabha News by Sambrama Prabha News
November 13, 2025
in Home, Latest News
0
ನಿರ್ವಾಹಕನ ಭಾಷಾ ಪ್ರೇಮ: ‘ಕನ್ನಡ ರಥ’ವಾದ ಬಸ್​

Updated By: Priyalachhi

ಶಿವಮೊಗ್ಗ: ಇವರು ವೃತ್ತಿಯಲ್ಲಿ ನಿರ್ವಾಹಕ, ಪವೃತ್ತಿಯಲ್ಲಿ ಚುಟುಕು ಕವಿ. ಅಪ್ಪಟ್ಟ ಕನ್ನಡ ಪ್ರೇಮಿ. ತಾವು ಕೆಲಸ ಮಾಡುವ ಬಸ್​ ಅನ್ನು ಕನ್ನಡದ ರಥವನ್ನಾಗಿಸಿ, ಭಾಷಾ ಪ್ರೇಮ ಮೆರೆದಿದ್ದಾರೆ. ಕಳೆದ 20 ವರ್ಷಗಳಿಂದಲೂ ತಮ್ಮ ಸ್ವಂತ ಖರ್ಚಿನಲ್ಲೇ ಕನ್ನಡಮ್ಮನ ಸೇವೆ ಮಾಡುತ್ತಾ ಮೆಚ್ಚುಗೆ ಗಳಿಸಿದ್ದಾರೆ.

ಇವರ ಹೆಸರು ನಟರಾಜ್. ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದವರು. ಸದ್ಯ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಆನವಟ್ಟಿ ಗ್ರಾಮೀಣ ಭಾಗದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಸಾರಿಗೆ ಸಂಸ್ಥೆಯಲ್ಲಿ ಕೆಲಸ ಪ್ರಾರಂಭಿಸಿದಾಗಿನಿಂದ ಇಂದಿನವರೆಗೂ ಇವರ ಮಾತೃಭಾಷಾ ಪ್ರೇಮ ಮುಂದುವರಿದಿದೆ.

ಬಸ್​​ನಲ್ಲಿ ಕನ್ನಡದ ಪರಿಚಯ: ನಟರಾಜ್ ಅವರು ಬಸ್​ ಅನ್ನು ಸಂಪೂರ್ಣವಾಗಿ ಕನ್ನಡದ ರಥವನ್ನಾಗಿಸಿದ್ದಾರೆ. ಪ್ರಯಾಣಿಕರಿಗೆ ಬಸ್ಸಿನೊಳಗೆ ಬಂದ ಕೂಡಲೇ ಕನ್ನಡ ಲೋಕಕ್ಕೆ ಬಂದ ಅನುಭವವಾಗುತ್ತದೆ.

ಬಸ್​ ಮುಂಭಾಗ ಕರ್ನಾಟಕ ಭೂಪಟ, ಮಧ್ಯದಲ್ಲಿ ತಾಯಿ ಭುವನೇಶ್ವರಿ ದೇವಿ ಕಂಗೊಳಿಸುತ್ತಾರೆ. ಎಡ ಮತ್ತು ಬಲ ಭಾಗದಲ್ಲಿ ಕನ್ನಡಕ್ಕೆ ಸೇವೆ ಸಲ್ಲಿಸಿದ ಕನ್ನಡದ ಹೆಸರಾಂತ ಕವಿಗಳು, ಮುಖ್ಯಮಂತ್ರಿಗಳ ಭಾವಚಿತ್ರಗಳನ್ನು ಹಾಕಲಾಗಿದೆ‌. ಅಷ್ಟೇ ಅಲ್ಲ, ಬಸ್​ನೊಳಗೆ ಪ್ರತಿ ಆಸನವನ್ನು ಕನ್ನಡ ವರ್ಣಮಾಲೆ ಸಿಂಗರಿಸಲಾಗಿದೆ. ಹಾಗೆಯೇ ರಾಜ್ಯದ ಪ್ರತಿ ಜಿಲ್ಲೆಯ ಸಾಮಾಜಿಕ ಆರ್ಥಿಕ ವಿಷಯಗಳು, ಕವಿಗಳ ಕಿರುಪರಿಚಯ ಇಲ್ಲಿ ಸಿಗುತ್ತದೆ.

ಕನ್ನಡದ ಬಗ್ಗೆ ರಸ್ತಪ್ರಶ್ನೆ: ನಟರಾಜ್ ಅವರು ಪ್ರಯಾಣದ ನಡುವೆ ಪ್ರಯಾಣಿಕರಿಗೆ ಕನ್ನಡದ ರಸಪ್ರಶ್ನೆ ಕಾರ್ಯಕ್ರಮ ಮಾಡಿ, ಗೆದ್ದವರಿಗೆ ಉಡುಗೂರೆಯಾಗಿ ಕನ್ನಡದ ಪುಸ್ತಕಗಳನ್ನು ನೀಡಿ, ಓದುವ ಅಭ್ಯಾಸವನ್ನು ಪ್ರೋತ್ಸಾಹಿಸುತ್ತಿದ್ದಾರೆ.

ನವೆಂಬರ್ ತಿಂಗಳಲ್ಲಿ ಬಸ್​ ಅನ್ನು ಕನ್ನಡಮಯವನ್ನಾಗಿಸುವ ನಟರಾಜ್, ತಮ್ಮ ಸ್ವಂತ ಹಣದಿಂದಲೇ ಪ್ರತಿ ತಿಂಗಳು ಇದಕ್ಕಾಗಿ 2 ಸಾವಿರ ರೂ.ಗಳನ್ನು ಮೀಸಲಿಡುತ್ತಾರೆ.

Tags: 'Kannada Ratha' bus
Previous Post

Delhi Red Fort Blast: ಮೃತರ ಸಂಖ್ಯೆ 12ಕ್ಕೆ ಏರಿಕೆ

Next Post

ಕಬ್ಬು ಬೆಳೆಗಾರರ ಸಮಸ್ಯೆಗೆ ರಾಜ್ಯ ಸರ್ಕಾರವೇ ನೇರ ಹೊಣೆ: ಸಿಎಂಗೆ ಜೋಶಿ ಬಹಿರಂಗ ಪತ್ರ

Next Post
ಕಬ್ಬು ಬೆಳೆಗಾರರ ಸಮಸ್ಯೆಗೆ ರಾಜ್ಯ ಸರ್ಕಾರವೇ ನೇರ ಹೊಣೆ: ಸಿಎಂಗೆ ಜೋಶಿ ಬಹಿರಂಗ ಪತ್ರ

ಕಬ್ಬು ಬೆಳೆಗಾರರ ಸಮಸ್ಯೆಗೆ ರಾಜ್ಯ ಸರ್ಕಾರವೇ ನೇರ ಹೊಣೆ: ಸಿಎಂಗೆ ಜೋಶಿ ಬಹಿರಂಗ ಪತ್ರ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.