Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ನಮ್ಮ ಮನೆ ಮೇಲೆ ಐಟಿ ರೇಡ್ ಆಗಲ್ಲ: ಬಾಲಕೃಷ್ಣ

DKS 100 Days: 15 ಲಕ್ಷ ಉಚಿತ ಸೈಟ್, ಶಕ್ತಿ ಸ್ಮಾರ್ಟ್ ಕಾರ್ಡ್; ಡಿಕೆಶಿ ಸರ್ಕಾರದ ಬಂಪರ್ ಯೋಜನೆಗಳ ವಿವರ

ಸತೀಶ್ ಜಾರಕಿಹೊಳಿ ಮೇಲೆ ಇ.ಡಿ ದಾಳಿ: ಅಹಿಂದ ನಾಯಕನಾಗುವ ಆತಂಕವೇ? | Satish Jarkiholi ED Raid

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ನಮ್ಮ ಮನೆ ಮೇಲೆ ಐಟಿ ರೇಡ್ ಆಗಲ್ಲ: ಬಾಲಕೃಷ್ಣ
Latest News

ನಮ್ಮ ಮನೆ ಮೇಲೆ ಐಟಿ ರೇಡ್ ಆಗಲ್ಲ: ಬಾಲಕೃಷ್ಣ

Sambrama Prabha NewsBy Sambrama Prabha NewsSeptember 12, 2026No Comments2 Mins Read
Share WhatsApp Facebook Twitter Telegram
ಸಚಿವ ಬಾಲಕೃಷ್ಣ
Share
WhatsApp Facebook Twitter Telegram

ಸಂಭ್ರಮಪ್ರಭ ನ್ಯೂಸ್, ಬೆಂಗಳೂರು: ರಾಜ್ಯ ಸಹಕಾರ ಕ್ಷೇತ್ರದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಡಿಸಿಸಿ ಅಪೆಕ್ಸ್ ಬ್ಯಾಂಕ್ ಚುನಾವಣೆಯಲ್ಲಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಅಧ್ಯಕ್ಷ ಸ್ಥಾನ ಕೈತಪ್ಪಿದೆ. ರವಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಬಾಲಕೃಷ್ಣ, ಹಿರಿಯ ನಾಯಕರಾಗಿರುವ ರಾಜಣ್ಣ ಅವರಿಗೆ ಪಕ್ಷದಲ್ಲಿ ಸೂಕ್ತ ಗೌರವ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಾವೆಲ್ಲರೂ ಕುಳಿತು ಚರ್ಚೆ ಮಾಡಿಯೇ ತೀರ್ಮಾನ ಕೈಗೊಂಡಿದ್ದೇವೆ. ಕೆ.ಎನ್. ರಾಜಣ್ಣ ಅವರು ಈ ಹಿಂದೆ ಐದು ವರ್ಷಗಳ ಕಾಲ ಇದೇ ಬ್ಯಾಂಕ್‌ಗೆ ಅಧ್ಯಕ್ಷರಾಗಿ ಯಶಸ್ವಿಯಾಗಿ ಕೆಲಸ ಮಾಡಿದ್ದರು. ಅವರು ಪಕ್ಷದ ಹಿರಿಯ ಮುಖಂಡರು ಹಾಗೂ ಮಂತ್ರಿಯಾಗಿದ್ದವರು. ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ರವಿ ಅವರಿಗೆ ಮಣೆ ಹಾಕಲಾಗಿದೆ. ರಾಜಣ್ಣ ಅವರಿಗೆ ತಕ್ಕುದಾದ ಸ್ಥಾನಮಾನ ಮತ್ತು ಗೌರವವನ್ನು ಪಕ್ಷ ಖಂಡಿತ ನೀಡಲಿದೆ” ಎಂದರು.

ನಮ್ಮ ಮನೆ ಮೇಲೆ ಐಟಿ ರೇಡ್ ಆಗಲ್ಲ!

ಇನ್ನು, ರಾಜ್ಯದಲ್ಲಿ ಮಂತ್ರಿಗಳ ಮೇಲೆ ಐಟಿ, ಇಡಿ ದಾಳಿಗಳು ನಡೆಯಬಹುದು ಎಂಬ ಸಿಎಂ ಸಿದ್ದರಾಮಯ್ಯ ಅವರ ಅನುಮಾನದ ಕುರಿತು ಕೇಳಿದ ಪ್ರಶ್ನೆಗೆ ಲಘುವಾಗಿ ಉತ್ತರಿಸಿದ ಸಚಿವರು, “ಯಾರ ಬಳಿ ಕಾಸು ಇದೆಯೋ ಅವರ ಮೇಲೆ ರೇಡ್ ಮಾಡ್ತಾರೆ ಬಿಡಿ. ನಮ್ಮ ಬಳಿ ಆ ಮಟ್ಟದ ದುಡ್ಡಿಲ್ಲ, ಹೀಗಾಗಿ ನಮ್ಮ ಮನೆಯಂತೂ ರೇಡ್ ಆಗುವುದಿಲ್ಲ, ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ” ಎಂದು ನಕ್ಕರು.

ಬಿಜೆಪಿಗೆ ಟೀಕಿಸುವ ನೈತಿಕತೆ ಇಲ್ಲ:

‘ವಂದೇ ಮಾತರಂ’ ಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಿಸುವ ತೀರ್ಮಾನದ ಬಗ್ಗೆ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಬಾಲಕೃಷ್ಣ ತೀಕ್ಷ್ಣ ತಿರುಗೇಟು ನೀಡಿದರು. “ಯಾರು ತಮ್ಮ ಆರ್.ಎಸ್.ಎಸ್ ಕಚೇರಿಯ ಮೇಲೆ ವರ್ಷಾನುಗಟ್ಟಲೆ ರಾಷ್ಟ್ರಧ್ವಜವನ್ನೇ ಹಾರಿಸಲಿಲ್ಲವೋ, ಯಾರು ರಾಷ್ಟ್ರಗೀತೆಗೆ ಗೌರವ ಕೊಡಲಿಲ್ಲವೋ ಅಂತವರಿಗೆ ನಮ್ಮನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ. ನಾವು ವಂದೇ ಮಾತರಂಗೆ ಸಂಪೂರ್ಣ ಗೌರವ ಕೊಡುತ್ತೇವೆ. ರಾಷ್ಟ್ರಕವಿ ಕುವೆಂಪು ಅವರು ಬರೆದ ನಾಡಗೀತೆ ತುಂಬಾ ಉದ್ದವಿದೆ ಎಂದು ಕೆಲವು ಸಾಲುಗಳನ್ನು ಮೊಟಕುಗೊಳಿಸಲಿಲ್ಲವೇ? ಅದೇ ರೀತಿಯೇ ಇಲ್ಲೂ ನಡೆದಿದೆ. ಬಿಜೆಪಿ ಅವರಿಂದ ನಾವು ದೇಶಭಕ್ತಿಯ ಪಾಠ ಕಲಿಯುವ ಅಗತ್ಯವಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದ ಪರ ದನಿ ಎತ್ತಲು ಸಿದ್ಧ:

ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಜನರಿಗೆ ನಿಖರ ಮಾಹಿತಿ ನೀಡಲು ಎಂಟು ಜನ ಸಚಿವರ ತಂಡವನ್ನು ನೇಮಿಸಿರುವ ಬಗ್ಗೆಯೂ ಬಾಲಕೃಷ್ಣ ಹರ್ಷ ವ್ಯಕ್ತಪಡಿಸಿದರು. “ಮುಖ್ಯಮಂತ್ರಿಗಳು ನಮ್ಮ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿ ನೀಡಿದ್ದಾರೆ. ಸಿಕ್ಕ ಅವಕಾಶ ಬಳಸಿಕೊಂಡು, ಮಾಧ್ಯಮಗಳ ಮೂಲಕ ಸರ್ಕಾರದ ಮತ್ತು ಪಕ್ಷದ ಪರವಾಗಿ ಜನರಿಗೆ ಸತ್ಯಾಂಶವನ್ನು ಮುಟ್ಟಿಸುವ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ” ಎಂದು ತಿಳಿಸಿದರು.

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
Apex Bank Election ED Raids Karnataka Congress Karnataka Politics KN Rajanna Minister Balakrishna S Ravi Vande Mataram
Add as Preferred on Google Follow on Google News
Share. WhatsApp Facebook Twitter Telegram
Previous ArticleDKS 100 Days: 15 ಲಕ್ಷ ಉಚಿತ ಸೈಟ್, ಶಕ್ತಿ ಸ್ಮಾರ್ಟ್ ಕಾರ್ಡ್; ಡಿಕೆಶಿ ಸರ್ಕಾರದ ಬಂಪರ್ ಯೋಜನೆಗಳ ವಿವರ
Sambrama Prabha News
  • Website

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Related Posts

DKS 100 Days: 15 ಲಕ್ಷ ಉಚಿತ ಸೈಟ್, ಶಕ್ತಿ ಸ್ಮಾರ್ಟ್ ಕಾರ್ಡ್; ಡಿಕೆಶಿ ಸರ್ಕಾರದ ಬಂಪರ್ ಯೋಜನೆಗಳ ವಿವರ

September 10, 2026

ಸತೀಶ್ ಜಾರಕಿಹೊಳಿ ಮೇಲೆ ಇ.ಡಿ ದಾಳಿ: ಅಹಿಂದ ನಾಯಕನಾಗುವ ಆತಂಕವೇ? | Satish Jarkiholi ED Raid

September 9, 2026

ಸತೀಶ್ ಜಾರಕಿಹೊಳಿ ಬೆನ್ನಿಗೆ ನಿಂತ ಡಿಕೆಶಿ, ದಲಿತ ನಾಯಕರ ಬೆಳವಣಿಗೆ ಸಹಿಸುತ್ತಿಲ್ಲ ಎಂದು ಕೇಂದ್ರ ವಿರುದ್ಧ ಕೆಂಡ

September 9, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ನಮ್ಮ ಮನೆ ಮೇಲೆ ಐಟಿ ರೇಡ್ ಆಗಲ್ಲ: ಬಾಲಕೃಷ್ಣ

DKS 100 Days: 15 ಲಕ್ಷ ಉಚಿತ ಸೈಟ್, ಶಕ್ತಿ ಸ್ಮಾರ್ಟ್ ಕಾರ್ಡ್; ಡಿಕೆಶಿ ಸರ್ಕಾರದ ಬಂಪರ್ ಯೋಜನೆಗಳ ವಿವರ

ಸತೀಶ್ ಜಾರಕಿಹೊಳಿ ಮೇಲೆ ಇ.ಡಿ ದಾಳಿ: ಅಹಿಂದ ನಾಯಕನಾಗುವ ಆತಂಕವೇ? | Satish Jarkiholi ED Raid

ಸತೀಶ್ ಜಾರಕಿಹೊಳಿ ಬೆನ್ನಿಗೆ ನಿಂತ ಡಿಕೆಶಿ, ದಲಿತ ನಾಯಕರ ಬೆಳವಣಿಗೆ ಸಹಿಸುತ್ತಿಲ್ಲ ಎಂದು ಕೇಂದ್ರ ವಿರುದ್ಧ ಕೆಂಡ

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.