ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ನವದೆಹಲಿ: ಬಿಜೆಪಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ವಿದೇಶ ಪ್ರಯಾಣ ವೆಚ್ಚವನ್ನು ಪ್ರಶ್ನಿಸಿದ ನಂತರ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಸರಿ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಫಂಡಿಂಗ್ ಬಗ್ಗೆ ಆಡಿಟ್ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಆರ್ ಎಸ್ಎಸ್ ಮುಖಂಡರ ದಿನನಿತ್ಯದ ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರಯಾಣದ ಹಣಕಾಸಿನ ಮೂಲ ಯಾವುದು ಎಂದು ಬಹಿರಂಗಪಡಿಸಬೇಕು. ಆರ್‌ಎಸ್‌ಎಸ್ ಮತ್ತು ಅದರ 2,500 ಕ್ಕೂ ಹೆಚ್ಚು ಅಂಗಸಂಸ್ಥೆಗಳ “ಸಾರ್ವಜನಿಕ ಲೆಕ್ಕಪರಿಶೋಧನೆ” ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಪ್ರವೇಶಿಸುವ ಮೊದಲು ಅವರ ಸ್ವಂತ ಪ್ರಯಾಣದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

IT, ED ರಾಹುಲ್ ಗಾಂಧಿ ಮೇಲೆ ಬಿಟ್ಟಿದ್ದೀರಾ. ಮಾಹಿತಿ ತಗೊಳ್ಳಿ. ರಾಹುಲ್ ಗಾಂಧಿ ಕಾನೂನು ಉಲ್ಲಂಘನೆ ಮಾಡಿದ್ರೆ ಯಾಕೆ ಬಿಟ್ಟಿದ್ದೀರಾ? ಒಳಗೆ ಹಾಕಿಬಿಡಿ. 13 ವರ್ಷದಿಂದ ಅದೇ ಹಾಡು, ಅದೇ ಟೋಪಿ ಹಾಕ್ತೀರಾ. ರಾಹುಲ್ ಗಾಂಧಿ, ನೆಹರೂ ಕುಟುಂಬ ದೇಶದ್ರೋಹಿ ಅಂತೀರಾ ಸಾಬೀತು‌‌ ಮಾಡಿ. ನೀವು ಆಗ ಎಲ್ಲೆಲ್ಲಿ ಹೋಗಿದ್ರಿ ಮಾಹಿತಿ ‌ಕೊಡಿ. RSS ಅವರದ್ದು IT ಇದೆಯಾ? ID ಇದೆಯಾ? ಅವರು ರಿಜಿಸ್ಟರ್ ಆಗೇ ಇಲ್ಲ. RSS ಅವರಷ್ಟು ದೊಡ್ಡ ದೇಶದ್ರೋಹಿಗಳು ಮತ್ತೊಬ್ಬರಿಲ್ಲ ಎಂದು ಆರೋಪಿಸಿದರು.

ಇದಲ್ಲದೆ, “ವಿಶ್ವದ ಅತಿದೊಡ್ಡ ನೋಂದಾಯಿಸದ ಸಂಘಟನೆಯಾಗಿರುವ ಆರ್ ಎಸ್ಎಸ್, ಬೃಹತ್ ಆರ್ಥಿಕ, ರಾಜಕೀಯ ಮತ್ತು ಆಡಳಿತಾತ್ಮಕ ಪ್ರಭಾವವನ್ನು ಹೊಂದಿದೆ”. ಆರ್‌ಎಸ್‌ಎಸ್, ಐದು ಪ್ರಮುಖ ಕಚೇರಿ ಸಂಕೀರ್ಣಗಳಿಗೆ ಹೇಗೆ ಹಣಕಾಸು ಒದಗಿಸುತ್ತದೆ ಮತ್ತು ಅದರ ಜಾಗತಿಕ ಸಂಪರ್ಕ ಮತ್ತು ವಿದೇಶಿ ಲಾಬಿಗೆ ಹೇಗೆ ಹಣ ನೀಡುತ್ತದೆ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.

RSS ನವ್ರು ಪಾಕಿಸ್ತಾನದ ಏಜೆಂಟ್‌ಗಳು

ಇನ್ನು ಪಾಕಿಸ್ತಾನದ ಜೊತೆಗಿನ ಮಾತುಕತೆಯ ಎಲ್ಲಾ ಬಾಗಿಲುಗಳನ್ನ ಮುಚ್ಚಬಾರದು ಎಂಬ ಹೊಸಬಾಳೆ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, RSS ಅವರು ಪಾಕಿಸ್ತಾನದ ಏಜೆಂಟ್‌ಗಳು. ಎರಡು ನೇಷನ್ ಥಿಯರಿ. ಭಾರತ- ಪಾಕಿಸ್ತಾನ ವಿಭಾಗ ಆಗಬೇಕು ಅಂತ ಮೊದಲು ಪ್ರಸ್ತಾಪ ಮಾಡಿದ್ದೇ RSSನ ವಿ.ಡಿ.ಸಾವರ್ಕರ್. ಇತಿಹಾಸ ಮೊದಲು ಬಿಜೆಪಿ ಸರಿಯಾಗಿ ಓದಲಿ. ನಮ್ಮ ಯಾವ ಚಾಲೆಂಜ್ ಬಿಜೆಪಿ ಸ್ವೀಕಾರ ಮಾಡಿಲ್ಲ. ಸಾವರ್ಕರ್ ಬ್ರಿಟಿಷರ ಏಜೆಂಟ್. 60 ರೂಪಾಯಿ ಪೆನ್ಶನ್ ತಗೋತಾ ಇದ್ದರು. RSS ನವರೆಲ್ಲ ಪಾಕಿಸ್ತಾನ ಏಜೆಂಟ್‌ಗಳೇ ಎಂದು ಕಿಡಿಕಾರಿದರು.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version