BREAKING NEWS
‘ಮೇಕಿನ್ ಇಂಡಿಯಾ ಕೇಳಿದ್ರೆ, ಲೀಕ್ ಇನ್ ಇಂಡಿಯಾ ಕೊಟ್ರಿ’: ದೆಹಲಿಯಲ್ಲಿ ‘ಕಾಕ್ರೋಚ್ ಪಾರ್ಟಿ’ಯಿಂದ ಬೃಹತ್ ಪ್ರತಿಭಟನೆ!   •   ಸಿಎಂ ಸ್ಥಾನದಿಂದ ಇಳಿದರೂ ಕಡಿಮೆಯಾಗದ ಸಿದ್ದರಾಮಯ್ಯ ಖದರ್: ಬಿ.ಕೆ. ಹರಿಪ್ರಸಾದ್ ಹೊಸ ಕೆಪಿಸಿಸಿ ಅಧ್ಯಕ್ಷ, ಆಪ್ತರಿಗೆ ಮಂತ್ರಿಗಿರಿ!   •   ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್   •   ಡಿಕೆ ಶಿವಕುಮಾರ್‌ಗೆ ಒಲಿದ ಸಿಎಂ ಪಟ್ಟ: ಮತ್ತೆ ಮುನ್ನೆಲೆಗೆ ಬಂತು ಕುಮಾರಕೃಪಾ ರಸ್ತೆಯ ‘ಅದೃಷ್ಟದ ಮನೆ’ಯ ರೋಚಕ ಕಥೆ!   •   ಬೆಂಗಳೂರು: 15 ಲಕ್ಷ ರೂ. ಲಂಚ ಪಡೆಯುತ್ತಿದ್ದ ರಾಜಾಜಿನಗರ ಬೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ   •   40,000 ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ   •   ಸಿದ್ದರಾಮಯ್ಯ ರಾಜೀನಾಮೆ ವಿರೋಧ: “ಸಿದ್ದಣ್ಣ ಹೋದ್ರೆ 2028ಕ್ಕೆ ಕಾಂಗ್ರೆಸ್ ಗೆಲ್ಲಲ್ಲ” – ಅಭಿಮಾನಿಗಳ ಎಚ್ಚರಿಕೆ   •   ರಾಜ್ಯ ರಾಜಕೀಯದಲ್ಲಿ ಮಹಾಸ್ಪೋಟ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಹೈಕಮಾಂಡ್‌ನಿಂದ ಬಂಪರ್ ಆಫರ್!   •  

—Advertisement—

ಎರಡೂವರೇ ವರ್ಷ ಸಿಎಂ ಅಂತಾ ತೀರ್ಮಾನ‌ ಆಗಿಲ್ಲ: ಸಿಎಂ

Author Picture
Published On: December 19, 2025

—Advertisement—

Updated By: Priyalachhi

ಬೆಳಗಾವಿ: ನನ್ನ ಪ್ರಕಾರ ಹೈಕಮಾಂಡ್ ನನ್ನ ಪರವಾಗಿದೆ. ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಎರಡೂವರೆ ವರ್ಷ ಮುಖ್ಯಮಂತ್ರಿ ಅಂತಾ ತೀರ್ಮಾನ ಆಗಿಲ್ಲ. ಇವಾಗ ನಾನು ಮುಖ್ಯಮಂತ್ರಿ ಆಗಿದ್ದೇನೆ, ಮುಂದೆಯೂ ನಾನೇ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾಸಭೆಯಲ್ಲಿ ಪುನರುಚ್ಚರಿಸಿದರು.

ಉತ್ತರ ಕರ್ನಾಟಕ ಕುರಿತ ಚರ್ಚೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉತ್ತರಿಸುವಾಗ ನಾಯಕತ್ವ ಬದಲಾವಣೆ ವಿಚಾರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಸುನೀಲ್​ ಕುಮಾರ್​, ಮುನಿರತ್ನ ಸೇರಿದಂತೆ ಮತ್ತಿತರರು ಸಿದ್ದರಾಮಯ್ಯ ಅವರ ಕಾಲೆಳೆದರು. ಐದು ವರ್ಷ ನೀವೇ ಸಿಎಂ ಎಂದು ಘಂಟಾಘೋಷವಾಗಿ ಹೇಳಿ ನೋಡೋಣ ಎಂದು ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರಿಗೆ ಸವಾಲೆಸೆದರು. ಈ ವೇಳೆ ಕೆಲಕಾಲ ಸ್ವಾರಸ್ಯಕರ ಚರ್ಚೆ ಆಯಿತು.

ಬಿಜೆಪಿ ಯಾವುದೇ ಕಾರಣಕ್ಕೂ‌ ಅಧಿಕಾರಕ್ಕೆ ಬರುವುದಿಲ್ಲ- ಸಿಎಂ ತಿರುಗೇಟು: ಮುಖ್ಯಮಂತ್ರಿಗಳು ಮಾತನಾಡುತ್ತಿದ್ದಾಗ, ಬಿಜೆಪಿ ಶಾಸಕ ಸಿದ್ದು ಸವದಿ ಇನ್ಮುಂದೆ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಇರಲಿದೆ ಎಂದರು‌. ಅದಕ್ಕೆ ನಿಮ್ಮ ಅಪ್ಪರಾಣೆಗೂ ಬರಲ್ಲ. ಕರ್ನಾಟಕದಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ‌ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಿಎಂ ತಿರುಗೇಟು ಕೊಟ್ಟರು.

ಆಗ ಮಧ್ಯಪ್ರವೇಶಿಸಿದ ಆರ್.ಅಶೋಕ, ಯಡಿಯೂರಪ್ಪ ಅವರಿಗೆ ಯಾವತ್ತೂ ನೀವು ಸಿಎಂ ಆಗಲ್ಲ ಎಂದು ಹೇಳುತ್ತಿದ್ದಿರಿ, ಆದರೆ, ನಾಲ್ಕು ಬಾರಿ ಸಿಎಂ ಆದರು ಎಂದರು. ಬಳಿಕ ಮಾತು ಮುಂದುವರಿಸಿದ ಸಿಎಂ ಸಿದ್ದರಾಮಯ್ಯ, ಅದಕ್ಕೆ ಯಡಿಯೂರಪ್ಪ ಅವರನ್ನು ಐದು ವರ್ಷ ಅಧಿಕಾರ ಪೂರ್ಣಗೊಳಿಸಲು ನೀವು ಬಿಡಲೇ ಇಲ್ಲ. 2008 ರಿಂದ ಮೂರು ಮಂದಿ ಮುಖ್ಯಮಂತ್ರಿ ಆದಿರಿ ಎಂದರು.

ಮತ್ತೆ ಸಿಎಂ ಮಾತಿನ ವೇಳೆ ಮಧ್ಯಪ್ರವೇಶಿಸಿದ ಆರ್​ ಅಶೋಕ್​, ಕಳೆದ ಬಾರಿ ಐದು ವರ್ಷ ಸಿಎಂ ಸ್ಥಾನ ಕೊಟ್ಟಿದ್ದರು. ಈ ಬಾರಿ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಎರಡೂವರೆ ವರ್ಷ ಅಂತಾ ಬರೆದು ಕೊಟ್ಟಿದ್ದಾರೆ. ಒಮ್ಮೆ ಚೆಕ್ ಮಾಡಿ ನೋಡಿ ಎಂದರು.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp