BREAKING NEWS
ಸಚಿವ ಸಂಪುಟ ವಿಸ್ತರಣೆ ಕಸರತ್ತು: “ಮಂತ್ರಿ ಗಾದಿ”ಗಾಗಿ ಜಮೀರ್ ಅಹ್ಮದ್ ಖಾನ್ ದಿಲ್ಲಿಯತ್ತ ದೌಡು, ‘ರಾಜಕೀಯ ಗುರು’ ಹೇಳಿಕೆಯ ಸಂಚಲನ!   •   ‘ಸಿದ್ದರಾಮಯ್ಯ ಸ್ವಚ್ಛ ರಾಜಕಾರಣಿ, ಆದರೆ ಪುತ್ರ ಹಾಗೂ ಭೈರತಿ ಸುರೇಶ್‌ರಿಂದ ಕಲುಷಿತ’: ಸ್ವಪಕ್ಷದ ವಿರುದ್ಧವೂ ಗುಡುಗಿದ ಯತ್ನಾಳ್!   •   ಬಿಡದಿ ಟೌನ್‌ಶಿಪ್ ವಿರುದ್ಧ ರೈತರ ಹೋರಾಟಕ್ಕೆ ಹೊಸ ರೂಪ: ‘ಜೆನ್ ಜೀ’, ಐಟಿ ಉದ್ಯೋಗಿಗಳ ಬೆಂಬಲಕ್ಕೆ ರೈತರ ಕರೆ!   •   ಲೋಕಸಭೆಯಲ್ಲಿ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗಕ್ಕೆ ಅಮಿತ್ ಶಾ ಆದೇಶ: ರಾಹುಲ್ ಗಾಂಧಿ ಆರೋಪಕ್ಕೆ ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?   •   ರಾಜಕೀಯ ಕಲುಷಿತ, 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸಿದ್ದರಾಮಯ್ಯ   •   ಸೌಜನ್ಯ ಪ್ರಕರಣ: ಸಿಬಿಐ ತನಿಖೆ ‘ಕಳಪೆ’, ರಾಜ್ಯದಿಂದಲೇ ತನಿಖೆಯಾಗಲಿ ಎಂದ ಸುಪ್ರೀಂ ಕೋರ್ಟ್   •   ‘ಬಾರ್ ಕಟ್ಟಡದಲ್ಲೇ ಬಿಸಿಎಂ ಹಾಸ್ಟೆಲ್’ – ‘ಸಂಭ್ರಮಪ್ರಭ’ ವರದಿಗೆ ಎಚ್ಚೆತ್ತ ಸರ್ಕಾರ   •   ಫಲಾನುಭವಿಗಳ ಗಮನಕ್ಕೆ: ಗೃಹಲಕ್ಷ್ಮಿಗೆ ವೋಟರ್ ಐಡಿ ಕಡ್ಡಾಯ, ಗೃಹಜ್ಯೋತಿ ಗೊಂದಲಕ್ಕೆ ಬೆಸ್ಕಾಂ ಹೆಲ್ಪ್‌ಲೈನ್   •  

—Advertisement—

ಕುರ್ಚಿ ಗುದ್ದಾಟ: ‘ಇನ್ನು ರಾಜಕಾರಣ ಇಲ್ಲ.. ಜನರ ಸೇವೆ, ಆಡಳಿತ ಅಷ್ಟೇ’

Author Picture
Published On: November 29, 2025

—Advertisement—

Updated By: Priyalachhi

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಸಿಎಂ ಕುರ್ಚಿಗಾಗಿ ಗುದ್ದಾಟಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಮೊದಲ ಬಾರಿಗೆ ಡಿಸಿಎಂ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು.. ಕಳೆದ ಒಂದೂವರೆ ತಿಂಗಳಿಂದ ಕಾಂಗ್ರೆಸ್​ ಪಾಳಯದಲ್ಲಿ ಸಂಚಲನ ಸೃಷ್ಟಿಸಿದ್ದ ಸಿಎಂ ಬದಲಾವಣೆ ಚರ್ಚೆಗೆ ಖುದ್ದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ ತೆರೆ ಎಳೆದಿದ್ದಾರೆ.

ಬ್ರೇಕ್​ಫಾಸ್ಟ್​ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್​, ಇನ್ನು ರಾಜಕಾರಣ ಇಲ್ಲ. ಏನಿದ್ರೂ ಜನರ ಸೇವೆ, ಆಡಳಿತ ಅಷ್ಟೇ. ಡಿನ್ನರ್​ಗೆ ಸಿಎಂ ಕರೆಯುವ ದಿನಾಂಕ ನಿಮಗೆ ಹೇಳುತ್ತೇನೆ ಎಂದಿದ್ದಾರೆ.

ನನ್ನ ಆಹ್ವಾನದ ಮೇರೆಗೆ ಮನೆಗೆ ಬಂದು ಉಪಾಹಾರ ಸೇವಿಸಿದ ಡಿಕೆ ಉಪಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಅವರೂ ಕೂಡ ನನ್ನನ್ನು ಮನೆಗೆ ಉಪಾಹಾರಕ್ಕಾಗಿ ಆಮಂತ್ರಣ ನೀಡಿದ್ದಾರೆ. ನಮ್ಮಿಬ್ಬರ ಒಗ್ಗಟ್ಟು ಗಟ್ಟಿಯಾಗಿದ್ದು, ಯಾರೂ ಕೂಡ ಈ ಒಗ್ಗಟ್ಟನ್ನು ಮುರಿಯಲಾರರು” ಎಂದು ಸಿದ್ದರಾಮಯ್ಯ ಹೇಳಿದರು.

ಬೆಳಗಿನ ಉಪಾಹಾರ ಸಭೆಯು ಸೌಜನ್ಯದ ಭೇಟಿಯಾಗಿದ್ದು, ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಲಿಲ್ಲ. ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಸಂಬಂಧ ಅತ್ಯಂತ ಗಟ್ಟಿಯಾಗಿದ್ದು, ಅದನ್ನು ಯಾರೂ ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದರು.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp