• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ರಜನಿಗೆ ಗೌರವ

Sambrama Prabha News by Sambrama Prabha News
November 29, 2025
in Special News
0
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ರಜನಿಗೆ ಗೌರವ

Updated By: Priyalachhi

ಪಣಜಿ (ಗೋವಾ): 56ನೇ ಇಂಟರ್​​​​ನ್ಯಾಷನಲ್​​ ಫಿಲ್ಮ್​​ ಫೆಸ್ಟಿವಲ್​ ಆಫ್​ ಇಂಡಿಯಾ (ಐಎಫ್​ಎಫ್​ಐ) ಶುಕ್ರವಾರ ಮುಕ್ತಾಯಗೊಂಡಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮೆಗಾಸ್ಟಾರ್ ರಜನಿಕಾಂತ್, ಕನ್ನಡ ನಟ – ನಿರ್ದೇಶಕ ರಿಷಬ್ ಶೆಟ್ಟಿ, ಬಾಲಿವುಡ್​ ನಟ ರಣ್​​ವೀರ್ ಸಿಂಗ್ ಅವರಂತಹ ಚಿತ್ರರಂಗದ ಗಣ್ಯರು ಸಮಾರೋಪ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಐಎಫ್‌ಎಫ್‌ಐನ ಸಮಾರೋಪ ಸಮಾರಂಭವು ಪ್ರಸಿದ್ಧ ತಾರಾಬಳಗದಿಂದ ಕೂಡಿತ್ತು. ಈ ಕಾರ್ಯಕ್ರಮದಲ್ಲಿ ಅದ್ಭುತ ನೃತ್ಯ ಮತ್ತು ಸಂಗೀತ ಪ್ರದರ್ಶನಗಳು, ಆಕರ್ಷಕ ಚಲನಚಿತ್ರ ಚರ್ಚೆಗಳು ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದವು. ಕೆಲವೇ ಕ್ಷಣಗಳಲ್ಲಿ, ಸಮಾರಂಭದಿಂದ ಹಲವು ಸ್ಮರಣೀಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು. ಅಭಿಮಾನಿಗಳಿಂದ ಮೆಚ್ಚುಗೆ ಸ್ವೀಕರಿಸಿದವು.

ಭಾರತೀಯ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ರಜನಿಕಾಂತ್ ಅವರನ್ನು ಸಮಾರೋಪ ಸಮಾರಂಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ರಜನಿಕಾಂತ್​ ಕುಟುಂಬ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸೂಪರ್‌ಸ್ಟಾರ್​ಗೆ ಶಾಲು ಹೊದಿಸಿ ಸನ್ಮಾನಿಸಿದರು.

ಅರ್ಧ ಶತಮಾನದಿಂದ ಭಾರತೀಯ ಪ್ರೇಕ್ಷಕರನ್ನು ಆಕರ್ಷಿಸಿರುವ ಐಕಾನಿಕ್ ಸ್ಟಾರ್ ರಜನಿಕಾಂತ್​, ಈ ವಿಶೇಷ ಗೌರವಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. “ನಾನು ಹಿಂತಿರುಗಿ ನೋಡಿದಾಗ, ಸಮಯ ಬೇಗ ಮುಗಿದಿದೆ ಎಂದು ಅನಿಸುತ್ತದೆ, ಏಕೆಂದರೆ ನನಗೆ ಸಿನಿಮಾ ಮತ್ತು ನಟನೆ ತುಂಬಾ ಇಷ್ಟ. ನಾನು ನಟನಾಗಿ – ರಜನಿಕಾಂತ್ ಆಗಿ ನೂರು ಜನ್ಮಗಳನ್ನು ತಾಳಲು ಬಯಸುತ್ತೇನೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯಕ್ಕೆ ತುಂಬಾ ಧನ್ಯವಾದಗಳು. ಈ ಗೌರವವು ಇಡೀ ಚಲನಚಿತ್ರೋದ್ಯಮಕ್ಕೆ – ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ವಿತರಕರು, ಪ್ರದರ್ಶಕರು ಮತ್ತು ಎಲ್ಲರಿಗೂ ಸಲ್ಲುತ್ತದೆ” ಎಂದು ತಿಳಿಸಿದರು.

Tags: ರಜನಿಕಾಂತ್
Previous Post

ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ, ಒಟ್ಟಿಗೆ ಹೋಗಲು ತೀರ್ಮಾನಿಸಿದ್ದೇವೆ

Next Post

ಕುರ್ಚಿ ಗುದ್ದಾಟ: ‘ಇನ್ನು ರಾಜಕಾರಣ ಇಲ್ಲ.. ಜನರ ಸೇವೆ, ಆಡಳಿತ ಅಷ್ಟೇ’

Next Post
ಕುರ್ಚಿ ಗುದ್ದಾಟ: ‘ಇನ್ನು ರಾಜಕಾರಣ ಇಲ್ಲ.. ಜನರ ಸೇವೆ, ಆಡಳಿತ ಅಷ್ಟೇ’

ಕುರ್ಚಿ ಗುದ್ದಾಟ: 'ಇನ್ನು ರಾಜಕಾರಣ ಇಲ್ಲ.. ಜನರ ಸೇವೆ, ಆಡಳಿತ ಅಷ್ಟೇ'

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.