Updated By: Priyalachhi

ಬೆಂಗಳೂರು: ದೆಹಲಿ ರೀತಿಯಲ್ಲೇ ಬೆಂಗಳೂರಿನ ವಾಯು ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ ಎಂಬ ವರದಿಗಳ ನಡುವೆಯೇ ಮಂಗಳವಾರ ಸಿಲಿಕಾನ್ ಸಿಟಿಯ ವಾಯುಗುಣಮಟ್ಟ ಗಣನೀಯವಾಗಿ ಚೇತರಿಸಿಕೊಂಡಿದೆ.

ಹೌದು.. ಕಳೆದ ಕೆಲ ವರ್ಷಗಳಿಂದಲೂ ಅಪಾಯಕಾರಿ ಮಟ್ಟದಲ್ಲೇ ಇದ್ದ ಬೆಂಗಳೂರು ವಾಯುಗುಣ ಮಟ್ಟ ಮಂಗಳವಾರ ಚೇತರಿಕೆ ಕಂಡಿದೆ.

ಬೆಂಗಳೂರು ಮಾತ್ರವಲ್ಲದೇ ರಾಜ್ಯದೆಲ್ಲೆಡೆ ವಾಯುಗುಣಮಟ್ಟ ಆತಂಕಕಾರಿ ಮಟ್ಟದಲ್ಲಿದ್ದರೂ ಇಂದಿನ ಮಟ್ಟಿಗೆ ಬೆಂಗಳೂರಿನ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ಹಿಂದೆ ಬೆಂಗಳೂರಿನ ವಾಯುಗುಣಮಟ್ಟ 200ಕ್ಕೇರಿ ದೆಹಲಿ ಹಾದಿಯಲ್ಲೇ ಸಾಗುತ್ತಿದೆ ಎಂಬ ಟೀಕೆಗಳಿಗೆ ಗುರಿಯಾಗಿತ್ತು. ಇದಾದ ಬಳಿಕ ಕೆಲ ದಿನ ಸುಧಾರಿಸಿದಂತೆ ಕಂಡರೂ ಮತ್ತೊಮ್ಮೆ ಏರ್ ಕ್ವಾಲಿಟಿ ಕಳಪೆಯಾಗಿತ್ತು.

ಆದರೆ ಇದೀಗ ಕಳೆದ 2-3 ತಿಂಗಳಿಗೆ ಹೋಲಿಸಿದರೆ ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version