Updated By: Priyalachhi 

ಬೆಂಗಳೂರು: ಮಕರ ಸಂಕ್ರಾಂತಿ ದಿನವಾದ ಗುರುವಾರ ಸಂಜೆ ನಗರ ಗವಿಗಂಗಾಧರೇಶ್ವರ ದೇಗುಲ ಗರ್ಭಗುಡಿಯನ್ನು ಸೂರ್ಯರಶ್ಮಿಗಳು ಪ್ರವೇಶಿಸಲಿವೆ.

ಸೂರ್ಯರಶ್ಮಿಯ ನೆಲಮಟ್ಟಕ್ಕಿಂತ 120 ಅಡಿ ಆಳದಲ್ಲಿರುವ ಗವಿ ಗಂಗಾಧರೇಶ್ವರ ಸ್ವಾಮಿಯ ಗರ್ಭಗುಡಿಯನ್ನು ಸಂಜೆ 5:02 ರಿಂದ 5:05 ಮಧ್ಯದಲ್ಲಿ 2 ನಿಮಿಷ ಹಾದು ಹೋಗಲಿದೆ. ಇದರಂತೆ ದೇಗುಲದಲ್ಲಿ ಈಗಾಗಲೇ ವಿಶೇಷ ಪೂಜೆಗಳು ಆರಂಭವಾಗಿದ್ದು, ಶಿವನ ಲಿಂಗಕ್ಕೆ ಹಾಲು, ಎಳನೀರಿನ ಅಭಿಷೇಕಗಳನ್ನು ನಡೆಸಲಾಗುತ್ತದೆ.

ಗವಿಗಂಗಾಧರೇಶ್ವ ಸ್ವಾಮಿ ದೇಗುಲ 16ನೇ ಶತಮಾನದ ಕೆಂಪೇಗೌಡರ ಕಾಲದ್ದಾಗಿದ್ದು, ದೇಗುಲದಲ್ಲಿ ಸಾಕಷ್ಟು ಕೌತುಕಗಳು ಅಡಗಿವೆ ಎಂದು ಹೇಳಲಾಗುತ್ತದೆ.

ಮಕರ ಸಂಕ್ರಾಂತಿಯ ದಿನದಂದು ಸೂರ್ಯನ ಕಿರಣಗಳು ನಂದಿಯ ತಲೆಯ ಮಧ್ಯಭಾಗದ ಮೂಲಕ ಹಾದು ಗುಹೆಯೊಳಗಿರುವ ಶಿವಲಿಂಗದ ತಳಭಾಗವನ್ನು ಮೊದಲು ಸ್ಪರ್ಶಿಸುತ್ತದೆ. ನಂತರ ಸ್ವಲ್ಪ ಸ್ವಲ್ಪವಾಗಿ ಮೇಲೆ ಸಾಗುತ್ತ ಸುಮಾರು 1 ಗಂಟೆಗಳ ಕಾಲ ಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ ಮಾಡುತ್ತದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version