Updated By: Priyalachhi

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಇಂದು ಮಂಡಿಸಿದರು. ಈ ಬಾರಿಯ ಆಯವ್ಯಯದಂತೆ ಕೇಂದ್ರ ಸರ್ಕಾರಕ್ಕೆ ಯಾವ ಮೂಲದಿಂದ ಆದಾಯ ಬರುತ್ತದೆ ಮತ್ತು ಹೇಗೆ ಖರ್ಚಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಯಾವ ಮೂಲದಿಂದ ಸರ್ಕಾರಕ್ಕೆ ಆದಾಯ?: ಸರ್ಕಾರದ ಖಜಾನೆಗೆ ಬರುವ ಪ್ರತಿ ರೂಪಾಯಿಯಲ್ಲಿ 64 ಪೈಸೆಯು ನೇರ ಮತ್ತು ಪರೋಕ್ಷ ತೆರಿಗೆಗಳಿಂದಲೇ ಬರುತ್ತದೆ ಎಂದು ಕೇಂದ್ರ ಬಜೆಟ್ 2026-27 ದಾಖಲೆಗಳು ತಿಳಿಸಿವೆ. ಇದೇ ಸರ್ಕಾರಕ್ಕೆ ಬಹುದೊಡ್ಡ ಆದಾಯದ ಮೂಲವಾಗಿದೆ.

UNION BUDGET HIGHLIGHT

ಸರ್ಕಾರ ನೀಡಿದ ಸಾಲಗಳಿಗೆ ಬರುವ ಬಡ್ಡಿಯಿಂದ ಸುಮಾರು 24 ಪೈಸೆ, ಹೂಡಿಕೆಯಂತಹ ತೆರಿಗೆಯೇತರ ಆದಾಯದಿಂದ 10 ಪೈಸೆ, ಸಾಲವಲ್ಲದ ಬಂಡವಾಳ ರಶೀದಿಗಳಿಂದ 2 ಪೈಸೆ, ಆದಾಯ ತೆರಿಗೆಯಿಂದ 21 ಪೈಸೆ, ಕಾರ್ಪೊರೇಷನ್ ತೆರಿಗೆಯಿಂದ 18 ಪೈಸೆ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಿಂದ ಪ್ರತಿ ರೂಪಾಯಿಗೆ 15 ಪೈಸೆ ಬರುತ್ತದೆ ಎಂದು ಬಜೆಟ್ ದಾಖಲೆಗಳಲ್ಲಿ ತೋರಿಸಲಾಗಿದೆ.

ಇದಲ್ಲದೆ, ಸರ್ಕಾರವು ಪ್ರತಿ ರೂಪಾಯಿ ಆದಾಯದಲ್ಲಿ ಅಬಕಾರಿ ಸುಂಕದಿಂದ 6 ಪೈಸೆ ಮತ್ತು ಕಸ್ಟಮ್ಸ್ ಸುಂಕದಿಂದ 4 ಪೈಸೆ ಗಳಿಸಲು ಯೋಜಿಸಿದೆ. ಸಾಲ ಮತ್ತು ಇತರ ಹೊಣೆಗಾರಿಕೆಗಳಿಂದ ಪ್ರತಿ ರೂಪಾಯಿಗೆ 24 ಪೈಸೆ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಸಂಸತ್ತಿನಲ್ಲಿ ಮಂಡಿಸಿದ 2026-27ರ ಕೇಂದ್ರ ಬಜೆಟ್​​ನಲ್ಲಿ ತಿಳಿಸಲಾಗಿದೆ.

ಯಾವುದಕ್ಕೆಲ್ಲಾ ಎಷ್ಟು ಖರ್ಚು? 2026ರ ಬಜೆಟ್​ನಲ್ಲಿ ಅತಿ ದೊಡ್ಡ ಪಾಲು ರಾಜ್ಯಗಳಿಗೆ ಹಂಚಿಕೆಯಾಗಿದೆ. ಸರ್ಕಾರಕ್ಕೆ ಬರುವ 1 ರೂಪಾಯಿ ಆದಾಯದಲ್ಲಿ ಅದನ್ನು ವಿವಿಧ ಕ್ಷೇತ್ರಗಳಿಗೆ ವ್ಯಯ ಮಾಡಲಾಗುತ್ತದೆ. ಅದರಲ್ಲಿ ಸರ್ಕಾರ ಪಡೆದ ಸಾಲಕ್ಕೆ ಬಡ್ಡಿ ಪಾವತಿ, ರಾಜ್ಯಗಳ ತೆರಿಗೆ ಮತ್ತು ಸುಂಕಗಳ ಪಾಲು ಸೇರಿ ಕ್ರಮವಾಗಿ ಪ್ರತಿ ರೂಪಾಯಿಗೆ 20 ಪೈಸೆ ಮತ್ತು 22 ಪೈಸೆ ಖರ್ಚಾಗಲಿದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version