Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ಫೈನಾನ್ಸ್ ಡಿಪಾರ್ಟ್‌ಮೆಂಟ್ ಪತ್ರ ಲೀಕ್: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

ಧಾರವಾಡ ತಹಶೀಲ್ದಾರ್ ಲಂಚ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲಂಚ ನೀಡಿದ್ದ ಮಂಜುನಾಥ್ ವಿರುದ್ಧವೇ ಕೇಳಿಬಂತು ಭೂಕಬಳಿಕೆ ಆರೋಪ!

ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನ ಇಂದಿನಿಂದ ಆರಂಭ: ‘ಬರ’ ಚರ್ಚೆಗೂ ಮುನ್ನವೇ ‘ವಂದೇ ಮಾತರಂ’ ಕಿಚ್ಚು!

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಹೆಣ್ಣು ಮಕ್ಕಳ ದುರುಪಯೋಗ ಆರೋಪ; ಬೆಂಗಳೂರು ಕೇಂದ್ರವೊಂದರಲ್ಲೇ 1,776 ಮಹಿಳೆ, ಹೆಣ್ಣು ಮಕ್ಕಳ ನಾಪತ್ತೆ, ಗಡುವು ಮೀರಿದರೂ ವರದಿ ನೀಡದ ಡಿಜಿಪಿ, ಸರ್ಕಾರದ ಕಾರ್ಯದರ್ಶಿ
Crime News Exclusive

ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಹೆಣ್ಣು ಮಕ್ಕಳ ದುರುಪಯೋಗ ಆರೋಪ; ಬೆಂಗಳೂರು ಕೇಂದ್ರವೊಂದರಲ್ಲೇ 1,776 ಮಹಿಳೆ, ಹೆಣ್ಣು ಮಕ್ಕಳ ನಾಪತ್ತೆ, ಗಡುವು ಮೀರಿದರೂ ವರದಿ ನೀಡದ ಡಿಜಿಪಿ, ಸರ್ಕಾರದ ಕಾರ್ಯದರ್ಶಿ

Sub EditorBy Sub EditorAugust 11, 2026Updated:August 11, 2026No Comments3 Mins Read
Share WhatsApp Facebook Twitter Telegram
Share
WhatsApp Facebook Twitter Telegram

ವಿಶೇಷ ವರದಿ: ‘ದಿ-ಫೈಲ್’ ಜಾಲತಾಣದ ತನಿಖಾ ವರದಿ ಆಧಾರಿತ

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಗರದ ಸ್ವೀಕಾರ ಕೇಂದ್ರದಿಂದ ಬರೋಬ್ಬರಿ 1,776 ಮಹಿಳೆಯರು ಮತ್ತು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ. ಸ್ವೀಕಾರ ಕೇಂದ್ರದ ಅನಾಥ ಹಾಗೂ ನಿರ್ಗತಿಕ ಹೆಣ್ಣು ಮಕ್ಕಳು ಅನೈತಿಕ ಚಟುವಟಿಕೆಗಳ ಜಾಲಕ್ಕೆ ಸಿಲುಕಿರುವ ಶಂಕೆಯಿದ್ದು, ಇದರಲ್ಲಿ ಕೇಂದ್ರದ ಕೆಲ ಸಿಬ್ಬಂದಿಯ ನಿರ್ಲಕ್ಷ್ಯ ಅಥವಾ ಶಾಮೀಲಾತಿ ಇರಬಹುದು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಈ ಮಹಾ ಅವ್ಯವಹಾರದ ಬಗ್ಗೆ ‘ದಿ-ಫೈಲ್’ (The-File) ಜಾಲತಾಣವು ಎಕ್ಸ್‌ಕ್ಲೂಸಿವ್ ದಾಖಲೆಗಳನ್ನು ಕಲೆಹಾಕಿ ವರದಿ ಪ್ರಕಟಿಸಿದ್ದು, ಸರ್ಕಾರದ ವ್ಯವಸ್ಥೆ ಯಾವ ಮಟ್ಟಿಗೆ ಕುಸಿದಿದೆ ಎಂಬುದನ್ನು ಎತ್ತಿ ತೋರಿಸಿದೆ. 

7 ವರ್ಷಗಳಿಂದ ಕೊಳೆಯುತ್ತಿರುವ ದೂರು, ಕಣ್ಣುಮುಚ್ಚಿ ಕುಳಿತ ಆಯೋಗ 

ಈ ಪ್ರಕರಣದ ಕುರಿತು ಗಜೇಂದ್ರಕುಮಾರ್ ಗೌಡ ಎಂಬುವರು 2019ರಲ್ಲೇ ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದರು. ಆದರೆ, 7 ವರ್ಷಗಳು ಕಳೆದರೂ ಆಯೋಗ ಕೇವಲ ಪತ್ರ ವ್ಯವಹಾರಗಳಲ್ಲೇ ಕಾಲಹರಣ ಮಾಡುತ್ತಿದೆ. 2019ರಲ್ಲಿ ಅಂದಿನ ಇಲಾಖಾ ಸಚಿವರಾಗಿದ್ದ ಜಯಮಾಲಾ ಹಾಗೂ ಪೊಲೀಸ್ ಆಯುಕ್ತರಿಗೂ ದೂರು ನೀಡಲಾಗಿತ್ತು. ಸಚಿವರು ಟಿಪ್ಪಣಿ ಹೊರಡಿಸಿದರೂ ಇಲಾಖೆ ಯಾವುದೇ ಕ್ರಮ ವಹಿಸಲಿಲ್ಲ.

ಪ್ರಸ್ತುತ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧುರಿ ಅವರ ಗಮನಕ್ಕೂ ಈ ವಿಚಾರ ಬಂದಿದ್ದರೂ, ಪ್ರಕರಣದ ಗಂಭೀರತೆ ಅರಿತು ಸರ್ಕಾರಕ್ಕೆ ‘ವಿಶೇಷ ತನಿಖಾ ತಂಡ’ (SIT) ರಚಿಸುವಂತೆ ಆಯೋಗ ಈವರೆಗೂ ಶಿಫಾರಸ್ಸು ಮಾಡಿಲ್ಲ.

ಗಡುವು ಮೀರಿದರೂ ವರದಿ ನೀಡದ ಡಿಜಿಪಿ ಹಾಗೂ ಇಲಾಖಾ ಕಾರ್ಯದರ್ಶಿ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಂಡು 15 ದಿನದೊಳಗೆ ವರದಿ ಸಲ್ಲಿಸುವಂತೆ ಆಯೋಗವು ಡಿಜಿಪಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2026ರ ಜುಲೈ 4ರಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಜೊತೆಗೆ, ಸಿಡಬ್ಲ್ಯೂಸಿ (CWC) ಕಮಿಟಿಯ ಅಧ್ಯಕ್ಷರಾಗಿರುವ ಬೆಂಗಳೂರು ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದು, ಖುದ್ದಾಗಿ ಸ್ವೀಕಾರ ಕೇಂದ್ರಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೆ ಈ ಮೂವರೂ ಅಧಿಕಾರಿಗಳು ಗಡುವು ಮೀರಿದರೂ ಆಯೋಗಕ್ಕೆ ಯಾವುದೇ ವರದಿ ಸಲ್ಲಿಸದೆ ದಿವ್ಯ ನಿರ್ಲಕ್ಷ್ಯ ಮೆರೆದಿದ್ದಾರೆ.

ಮುಖ್ಯ ಕಾರ್ಯದರ್ಶಿಗಳ ಷರಾಕ್ಕೂ ಕವಡೆ ಕಾಸಿನ ಬೆಲೆಯಿಲ್ಲ!

ದೂರುದಾರರು 2026ರ ಜೂನ್ 23ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರರ್ಜಿ ಸಲ್ಲಿಸಿದ್ದರು. “ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದ್ದರು. ಅರ್ಜಿ ಪರಿಶೀಲಿಸಿದ ಮುಖ್ಯ ಕಾರ್ಯದರ್ಶಿಗಳು “ವಿವರಗಳೊಂದಿಗೆ ಮಂಡಿಸಿ” ಎಂದು ಷರಾ ಬರೆದಿದ್ದರು. ಆದರೆ, ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಮುಖ್ಯ ಕಾರ್ಯದರ್ಶಿಗಳಿಗೆ ಈವರೆಗೂ ಕನಿಷ್ಠ ವಿವರಗಳನ್ನೂ ಒದಗಿಸಿಲ್ಲ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವಾಲಯದ ಅಧಿಕೃತ ಕಡತ (ಸಂಖ್ಯೆ: ಮಮಿ 347 ಎಸ್‌ಜೆಪಿ 2018) ದಲ್ಲಿ ಉಲ್ಲೇಖಿಸಿರುವಂತೆ, ಬೆಂಗಳೂರು ನಗರ ಸ್ವೀಕಾರ ಕೇಂದ್ರದಲ್ಲಿ ದಾಖಲಾಗಿದ್ದ 1,776 ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಬಗ್ಗೆ ಯಾವುದೇ ಜೀವಂತ ಸುಳಿವು ಇಲ್ಲ. ಇದನ್ನು ಮುಚ್ಚಿಹಾಕಲು ಇಲಾಖೆ ನಿರಂತರ ಯತ್ನ ನಡೆಸುತ್ತಿದೆ.

ಉಪನಿರ್ದೇಶಕರಿಗೆ ನಿರ್ದೇಶಕರಿಂದ ಪತ್ರ: ಆದರೂ ಶೂನ್ಯ ಕ್ರಮ

“ಸ್ವೀಕಾರ ಕೇಂದ್ರದಲ್ಲಿ 1,776 ಅನಾಥ, ನಿರ್ಗತಿಕ ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆ ಮತ್ತು ವೇಶ್ಯಾವಾಟಿಕೆಗೆ ದುಡಿಸಿಕೊಳ್ಳುತ್ತಿದ್ದು, ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂಬ ಗಜೇಂದ್ರ ಕುಮಾರ್ ಗೌಡರ ದೂರಿನ ಅನ್ವಯ, ಇಲಾಖೆಯ ನಿರ್ದೇಶಕರು 2026ರ ಮಾರ್ಚ್ 17ರಂದು ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಸ್ವೀಕಾರ ಕೇಂದ್ರದ ಅಧೀಕ್ಷಕರಿಂದ ದಾಖಲೆ ಪರಿಶೀಲಿಸಿ ವರದಿ ಪಡೆಯುವಂತೆ ಸ್ಪಷ್ಟ ಸೂಚನೆ ನೀಡಿದ್ದರೂ, ಉಪನಿರ್ದೇಶಕರು ಅದನ್ನು ಗಾಳಿಗೆ ತೂರಿದ್ದಾರೆ.

ಬೆಚ್ಚಿಬೀಳಿಸುವ ರಾಜ್ಯದ ನಾಪತ್ತೆ ಅಂಕಿ-ಅಂಶಗಳು (2020-2025)

ಸರ್ಕಾರದ ಅಧಿಕೃತ ಅಂಕಿ-ಅಂಶಗಳೇ ರಾಜ್ಯದಲ್ಲಿ ನಾಪತ್ತೆಯಾಗುತ್ತಿರುವ ಪ್ರಕರಣಗಳ ಭೀಕರತೆಯನ್ನು ಬಿಚ್ಚಿಡುತ್ತವೆ. 5 ವರ್ಷಗಳಲ್ಲಿ ಕಾಣೆಯಾದವರ ವಿವರ ಇಲ್ಲಿದೆ:

  • ಮಕ್ಕಳು (18 ವರ್ಷದೊಳಗಿನವರು): ಒಟ್ಟು 16,106 ಮಕ್ಕಳು ನಾಪತ್ತೆಯಾಗಿದ್ದು, ಇದರಲ್ಲಿ 14,089 ಮಕ್ಕಳನ್ನು ಪತ್ತೆಹಚ್ಚಲಾಗಿದೆ. ಇನ್ನುಳಿದ 2,017 ಮಕ್ಕಳ ಸುಳಿವೇ ಇಲ್ಲ.

  • ಹದಿಹರೆಯದ ಮಕ್ಕಳು (13-18 ವರ್ಷ): ಈ ವಯೋಮಾನದ 11,202 ಮಂದಿ ನಾಪತ್ತೆಯಾಗಿದ್ದು, 10,431 ಮಂದಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದೆ. ಆದರೆ, ಈ ಪೈಕಿ 910 ಹೆಣ್ಣು ಮಕ್ಕಳು ಇಂದಿಗೂ ಪತ್ತೆಯಾಗದೆ ಉಳಿದಿದ್ದಾರೆ.

  • ಮಹಿಳೆಯರು: 71,699 ಮಹಿಳೆಯರು ನಾಪತ್ತೆಯಾಗಿದ್ದು, 68,718 ಮಂದಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

  • ಪುರುಷರು: 38,073 ಮಂದಿ ನಾಪತ್ತೆಯಾಗಿದ್ದು, ಇದರಲ್ಲಿ 31,603 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ಉಳಿದವರ ಮಾಹಿತಿ ಈವರೆಗೂ ದೊರೆತಿಲ್ಲ.

ಮಾನವ ಕಳ್ಳಸಾಗಾಣಿಕೆ ಜಾಲದ ಶಂಕೆ: ನ್ಯಾಯಾಲಯದ ಕಳವಳ

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ, ಅದರಲ್ಲೂ ಅಪ್ರಾಪ್ತ ಹೆಣ್ಣುಮಕ್ಕಳು ಕಾಣೆಯಾಗುತ್ತಿರುವುದರ ಹಿಂದೆ ಬೃಹತ್ ‘ಮಾನವ ಕಳ್ಳಸಾಗಾಣಿಕೆ’ ಜಾಲ ಇರಬಹುದು ಎಂದು ನ್ಯಾಯಾಲಯವೇ ಆತಂಕ ವ್ಯಕ್ತಪಡಿಸಿದೆ. ನಾಪತ್ತೆ ಪ್ರಕರಣಗಳ ಪತ್ತೆಗಾಗಿ ಪೊಲೀಸ್ ಇಲಾಖೆ ಜನವರಿ 29ರಂದು ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.
ಗೃಹ ಸಚಿವರಾಗಿದ್ದ ಅವಧಿಯಲ್ಲಿ ಆರಗ ಜ್ಞಾನೇಂದ್ರ ಅವರು ವಿಧಾನಸಭೆಯಲ್ಲಿ ನೀಡಿದ್ದ ಅಂಕಿ-ಅಂಶಗಳ ಪ್ರಕಾರ, 5 ವರ್ಷದಲ್ಲಿ 763 ಮಾನವ ಕಳ್ಳಸಾಗಾಣಿಕೆ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೆ, ಸರ್ಕಾರದ ಬಾಲಮಂದಿರಗಳಿಂದಲೇ 485 ಮಕ್ಕಳು ನಾಪತ್ತೆಯಾಗಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ, ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಅಧಿವೇಶನಗಳಲ್ಲಿ ಈ ಬಗ್ಗೆ ಗಂಭೀರ ಚರ್ಚೆಗಳೇ ನಡೆದಿಲ್ಲ ಎಂಬುದು ದುರಂತ.

ರಕ್ಷಣೆ ನೀಡಬೇಕಾದ ಸರ್ಕಾರದ ಕೇಂದ್ರಗಳೇ ಹೆಣ್ಣುಮಕ್ಕಳ ಪಾಲಿಗೆ ನರಕವಾಗುತ್ತಿವೆಯೇ? ವ್ಯವಸ್ಥೆಯ ಕಾವಲುಗಾರರೇ ಬೇಲಿಯೆದ್ದು ಹೊಲ ಮೇಯ್ದಂತೆ ವರ್ತಿಸುತ್ತಿದ್ದಾರೆಯೇ? ಈ 1,776 ಜೀವಗಳು ಏನಾದವು ಎಂಬುದಕ್ಕೆ ಸರ್ಕಾರವೇ ನೇರ ಹೊಣೆ ಹೊರಬೇಕಿದ್ದು, ಉನ್ನತ ಮಟ್ಟದ ತನಿಖೆಯೊಂದೇ ಇದಕ್ಕೆ ಉಳಿದಿರುವ ದಾರಿ.

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
Bengaluru News Bengaluru Reception Centre Human Trafficking Karnataka Karnataka State Women Commission The File News Women and Child Development Department Women Missing Case ಬೆಂಗಳೂರು ಸುದ್ದಿ ಮಹಿಳಾ ಆಯೋಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾನವ ಕಳ್ಳಸಾಗಾಣಿಕೆ ಹೆಣ್ಣುಮಕ್ಕಳ ನಾಪತ್ತೆ
Add as Preferred on Google Follow on Google News
Share. WhatsApp Facebook Twitter Telegram
Previous Articleಯಶ್ ಅಭಿನಯದ ‘ಟಾಕ್ಸಿಕ್’ ಟ್ರೈಲರ್ ಔಟ್: ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಅಬ್ಬರಿಸಿದ ರಾಕಿಂಗ್ ಸ್ಟಾರ್!
Next Article ಬಿ. ನಾಗೇಂದ್ರ ಸಂಪುಟಕ್ಕೆ ಯಾಕೆ?: ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ, ರವಿಕುಮಾರ್ ಆಕ್ರೋಶ
Sub Editor
  • Website

Related Posts

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2 ಕೆ.ಜಿ. ಚಿನ್ನ ಸಾಗಣೆ ಕೇಸ್: ಹೈಕೋರ್ಟ್‌ ಮಹತ್ವದ ತೀರ್ಪು

September 2, 2026

ಚಿಕ್ಕಲ್ಲೂರು ಎನ್‌ಕೌಂಟರ್: ‘ಸ್ವರಕ್ಷಣೆ’ ಕಥೆ ಸುಳ್ಳು? ಮರಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ಸತ್ಯ ಬಯಲು

August 31, 2026

ಮಂತ್ರಾಲಯದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವ ವೈಭವ: ಸಪ್ತರಾತ್ರೋತ್ಸವ

August 29, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ಫೈನಾನ್ಸ್ ಡಿಪಾರ್ಟ್‌ಮೆಂಟ್ ಪತ್ರ ಲೀಕ್: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

ಧಾರವಾಡ ತಹಶೀಲ್ದಾರ್ ಲಂಚ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲಂಚ ನೀಡಿದ್ದ ಮಂಜುನಾಥ್ ವಿರುದ್ಧವೇ ಕೇಳಿಬಂತು ಭೂಕಬಳಿಕೆ ಆರೋಪ!

ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನ ಇಂದಿನಿಂದ ಆರಂಭ: ‘ಬರ’ ಚರ್ಚೆಗೂ ಮುನ್ನವೇ ‘ವಂದೇ ಮಾತರಂ’ ಕಿಚ್ಚು!

ಡಿ.ಕೆ. ಶಿವಕುಮಾರ್ ಮಂಗಳೂರಿನಲ್ಲಿ, ಸಿದ್ದರಾಮಯ್ಯ ತುಮಕೂರಿನಲ್ಲಿ: ಆಪ್ತ ರಾಜಣ್ಣ ಭೇಟಿ ಹಿಂದಿನ ಲೆಕ್ಕಾಚಾರವೇನು?

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.