Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

ಕೆಪಿಎಸ್‌ಸಿ: ಅರ್ಜಿ ಸಲ್ಲಿಕೆಗೆ 7ರವರೆಗೆ ಅವಕಾಶ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2 ಕೆ.ಜಿ. ಚಿನ್ನ ಸಾಗಣೆ ಕೇಸ್: ಹೈಕೋರ್ಟ್‌ ಮಹತ್ವದ ತೀರ್ಪು

ಮದ್ಯ ಕುಡಿದು ಗಲಾಟೆ: 50 ಸಸಿ ನೆಡುವ ವಿಶಿಷ್ಟ ಶಿಕ್ಷೆ ವಿಧಿಸಿದ ಚಿಕ್ಕೋಡಿ ನ್ಯಾಯಾಲಯ!

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2 ಕೆ.ಜಿ. ಚಿನ್ನ ಸಾಗಣೆ ಕೇಸ್: ಹೈಕೋರ್ಟ್‌ ಮಹತ್ವದ ತೀರ್ಪು
Home

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2 ಕೆ.ಜಿ. ಚಿನ್ನ ಸಾಗಣೆ ಕೇಸ್: ಹೈಕೋರ್ಟ್‌ ಮಹತ್ವದ ತೀರ್ಪು

Sub EditorBy Sub EditorSeptember 2, 2026No Comments3 Mins Read
Share WhatsApp Facebook Twitter Telegram
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಚಿನ್ನ ಕಳ್ಳಸಾಗಣೆ, ಕರ್ನಾಟಕ ಹೈಕೋರ್ಟ್, ಜಸ್ಟಿಸ್ ಎಂ ನಾಗಪ್ರಸನ್ನ, ಕಸ್ಟಮ್ಸ್ ಇಲಾಖೆ, ಬೆಂಗಳೂರು ಸುದ್ದಿ, Kempegowda International Airport, KIA Bengaluru, Gold Smuggling Syndicate, Karnataka High Court, Justice M Nagaprasanna, Customs Department, Bengaluru Crime News, Kannada News
Share
WhatsApp Facebook Twitter Telegram

ಬೆಂಗಳೂರು: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಮತ್ತು ನಿಷಿದ್ಧ ವಸ್ತುಗಳ ಕಳ್ಳಸಾಗಣೆ ದಂಧೆ ಸಂಘಟಿತ ರೂಪದಲ್ಲಿ ವಿಸ್ತೃತ ಜಾಲದ ಮೂಲಕ (ಸಿಂಡಿಕೇಟ್‌) ಕಾರ್ಯ ನಿರ್ವಹಿಸುತ್ತಿದೆ’ ಎಂಬ ಕೇಂದ್ರೀಯ ಕಸ್ಟಮ್ಸ್‌ ಪ್ರತಿಪಾದನೆಯನ್ನು ಹೈಕೋರ್ಟ್‌ ಪ್ರಮುಖವಾಗಿ ಉಲ್ಲೇಖಿಸಿದೆ.

2 ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದಿರುವ ಆರೋಪಿಯೊಬ್ಬರು ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದ ಕ್ರಿಮಿನಲ್‌ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಇಂತಹ ಚಟುವಟಿಕೆಗಳು ರಾಷ್ಟ್ರದ ಆರ್ಥಿಕ ಹಿತಾಸಕ್ತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ’ ಎಂದು ತೀವ್ರ ಆತಂಕ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ ಕೇಂದ್ರೀಯ ಕಸ್ಟಮ್ಸ್‌ ಪರ ವಕೀಲ ಮಧು ಎನ್‌.ರಾವ್‌, ‘ಅರ್ಜಿದಾರರು ದಂಧೆಯ ಮೊದಲ ಕೊಂಡಿಯೋ, ಮಧ್ಯವೋ ಅಥವಾ ದೊಡ್ಡ ಸಿಂಡಿಕೇಟ್‌ನ ಸಣ್ಣ ಕೊಂಡಿಯೋ ಎಂಬುದನ್ನು ತನಿಖೆಯಲ್ಲೇ ನಿಖರವಾಗಿ ಶೋಧಿಸಬೇಕಿದೆ. ಇಂತಹ ಅರ್ಜಿಯನ್ನು ಪುರಸ್ಕರಿಸಿದರೆ ಕಸ್ಟಮ್ಸ್ ಆಡಳಿತದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ’ ಎಂದು ವಿವರಿಸಿದ್ದರು.

‘ಜಾಲದಲ್ಲಿ ಪರದೆಯ ಹಿಂದೆ ಕಾರ್ಯ ನಿರ್ವಹಿಸುವ ವ್ಯಕ್ತಿಗಳ ಗುರುತು, ಚಿನ್ನದ ಮೂಲ, ಅದನ್ನು ಹೊತ್ತು ತಂದು ವಿಮಾನದಲ್ಲಿ ಬಿಟ್ಟ ಪ್ರಯಾಣಿಕ, ಅದರ ಸ್ಥಳವನ್ನು ತಿಳಿಸಿದ ವ್ಯಕ್ತಿಗಳು, ಅದನ್ನು ಮರಳಿ ಪಡೆದು ಶುಚಿಗೊಳಿಸುವ ಸಿಬ್ಬಂದಿ ಮತ್ತು ಅಂತಿಮವಾಗಿ ಅದನ್ನು ಸ್ವೀಕರಿಸಬೇಕಾದ ವ್ಯಕ್ತಿಗಳು… ಹೀಗೆ ಇದರ ಎಲ್ಲ ಕೊಂಡಿಗಳು ಎಲ್ಲಿವೆ ಎಂಬುದನ್ನು ಪತ್ತೆ ಮಾಡಬೇಕಿದೆ. ವಿಮಾನದಲ್ಲಿ ಚಿನ್ನ ಅಥವಾ ನಿಷೇಧಿತ ವಸ್ತುಗಳ ಕಳ್ಳಸಾಗಣೆಯ ಜಾಲದ ಕಾರ್ಯ ವೈಖರಿಯ ಬಗ್ಗೆ ಆಳವಾದ ತನಿಖೆಯ ಅಗತ್ಯವಿದೆ. ಆದ್ದರಿಂದ, ಅರ್ಜಿ ವಜಾ ಮಾಡಬೇಕು’ ಎಂದು ಕೋರಿದ್ದರು.

ಕಸ್ಟಮ್ಸ್‌ ಕೋರಿಕೆಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ಪ್ರಕರಣದ ವಿಚಾರಣೆ ಇನ್ನೂ ಆರಂಭಿಕ ಹಂತದಲ್ಲಿದೆ. ಅರ್ಜಿದಾರರು ಆಪಾದಿತ ವಹಿವಾಟಿನಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಸಾಬೀತುಪಡಿಸಲು ಎಲ್ಲ ಅವಕಾಶಗಳನ್ನು ಹೊಂದಿದ್ದಾರೆ. ಹಾಗಾಗಿ, ವಿಚಾರಣೆಯನ್ನು ತಡೆದರೆ ಪ್ರಾರಂಭದಲ್ಲಿಯೇ ಶಾಸನಬದ್ಧ ಪ್ರಕ್ರಿಯೆಯ ಕತ್ತು ಹಿಸುಕಿದಂತಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಇಂತಹ ಗಹನವಾದ ಪ್ರಕರಣಗಳಲ್ಲಿ ಹೈಕೋರ್ಟ್‌ ತನ್ನ ಅಸಾಧಾರಣ ನ್ಯಾಯವ್ಯಾಪ್ತಿಯನ್ನು ಬಳಸಿಕೊಂಡು ವಿಚಾರಣೆ ರದ್ದುಗೊಳಿಸುವುದು ಸಹನೀಯವಲ್ಲ. ಆರೋಪಗಳು ಆಳವಾದ ಪರಿಶೀಲನೆಯ ಅಗತ್ಯವನ್ನು ಒತ್ತಿ ಹೇಳುತ್ತಿರುವ ಕಾರಣ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದೆ.

ಸೌದಿಯಿಂದ ಬಂದ 2 ಕೆ.ಜಿ. ಗಟ್ಟಿ

ಕಸ್ಟಮ್ಸ್‌ ದೂರು: ‘ಅರ್ಜಿದಾರ ಎನ್‌.ನಂದೀಶ (33) ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ನಿವಾಸಿ. ಇವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ವಿಮಾನಗಳ ಕ್ಯಾಬಿನ್‌ ಕೇರ್‌ ಸಹಾಯಕನಾಗಿ ಕೆಲಸ ಮಾಡುತ್ತಿರುವ; ಏರ್‌ ಇಂಡಿಯಾ ಏರ್‌ಪೋರ್ಟ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ ಶುಚಿ ಸಿಬ್ಬಂದಿ’ ಎಂದು ದೂರಿನಲ್ಲಿ ವಿವರಿಸಲಾಗಿದೆ.

‘ಸೌದಿ ಏರ್‌ಲೈನ್ಸ್ ವಿಮಾನವೊಂದು (ಎಸ್‌ವಿ–866) 2025ರ ಜೂನ್‌ 29ರಂದು ಜೆಡ್ಡಾ, ಸೌದಿ ಅರೇಬಿಯಾ ಮುಖಾಂತರ ಬೆಂಗಳೂರಿನ ಕೆಐಎಗೆ ಬಂದಿಳಿದಿತ್ತು. ಅಂದು ನಂದೀಶ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳನ್ನು ಶುಚಿಗೊಳಿಸಿದ್ದರು. ವಿಮಾನದ ಸೀಟಿನ ಸಂಖ್ಯೆ 39ಎ ನಲ್ಲಿ ಅವರಿಗೆ ಎರಡು ಕೆ.ಜಿ ತೂಕದ ಚಿನ್ನದ ಬಾರ್‌ಗಳು ಮುಚ್ಚಿದ ಪ್ಯಾಕೆಟ್‌ನಲ್ಲಿ ಲಭ್ಯವಾಗಿದ್ದವು ಅಥವಾ ಅವುಗಳನ್ನು ಅವರು ಅಲ್ಲಿಂದ ತಮ್ಮ ಬಳಿ ಇರಿಸಿಕೊಂಡಿದ್ದರು. ನಂತರ ಕಸದ ಜತೆಗೆ ಹಾಕಿ, ಕಸ ಸಾಗಿಸುವ ವಾಹನದಲ್ಲಿ ಅದನ್ನು ಹೊರಗೆ ಕಳುಹಿಸುವ ಪ್ರಯತ್ನ ನಡೆದಿತ್ತು’ ಎಂಬುದು ಕಸ್ಟಮ್ಸ್‌ ಆರೋಪ.

ಆರೋಪಿ ನಂದೀಶ ಅವರ ವಿರುದ್ಧ ವಿಮಾನ ನಿಲ್ದಾಣ ಗುಪ್ತಚರ ಘಟಕದ ಅಧಿಕಾರಿಗಳು ಕಸ್ಟಮ್ಸ್‌ ಕಾಯ್ದೆ–1962ರ ಅನುಸಾರ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ‘ನನ್ನ ವಿರುದ್ಧ ವಾಯು ಗುಪ್ತಚರ ಘಟಕದ ಕಸ್ಟಮ್ಸ್ ಸೂಪರಿಂಟೆಂಡೆಂಟ್‌ ದಾಖಲಿಸಿರುವ ದೂರನ್ನು ರದ್ದುಪಡಿಸಬೇಕು’ ಎಂದು ಕೋರಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಕಳ್ಳರ ಕೊಂಡಿ: ಕಸ್ಟಮ್ಸ್‌ ಅಂದಾಜು

  • ಅಂತರರಾಷ್ಟ್ರೀಯ ವಿಮಾನದ ಮೂಲಕ ಚಿನ್ನವನ್ನು ಸಾಗಿಸಲಾಗುತ್ತದೆ.
  • ಪ್ರಯಾಣಿಕರು ಇಳಿಯುವ ಮೊದಲು ನಿರ್ದಿಷ್ಟ ಆಸನ ಸಂಖ್ಯೆಯಲ್ಲಿ ಅದನ್ನು ಪೂರ್ವ ನಿರ್ಧರಿತ ಆಸನದ ಕೆಳಗೆ ಮರೆ ಮಾಡಿ ಇರಿಸಲಾಗಿರುತ್ತದೆ.
  • ಪ್ರಯಾಣಿಕ ನಿಷೇಧಿತ ವಸ್ತುವನ್ನು ಅಲ್ಲೇ ಬಿಟ್ಟು ವಿಮಾನದಿಂದ ಇಳಿದು ಹೊರಗೆ ಬರುತ್ತಾನೆ.
  • ಎಲ್ಲರೂ ಇಳಿದ ನಂತರ ವಿಮಾನದೊಳಕ್ಕೆ ಕಾನೂನುಬದ್ಧವಾಗಿ ಪ್ರವೇಶಿಸುವ ಶುಚಿ ಸಿಬ್ಬಂದಿ, ಮರೆಮಾಡಿಟ್ಟ ಪ್ಯಾಕೆಟ್ ಅನ್ನು ತೆಗೆದಿರಿಸಿಕೊಳ್ಳುತ್ತಾರೆ.
  • ನಿಯಮಿತವಾಗಿ ಶುಚಿಗೊಳಿಸುವ ಕಾರ್ಯಾಚರಣೆಯ ಹೊದಿಕೆಯ ಅಡಿಯಲ್ಲಿ ಕಳ್ಳಸಾಗಣೆ ವಸ್ತುವನ್ನು ಪೂರ್ವನಿಗದಿತ ಸ್ಥಳದಲ್ಲಿ ಇರಿಸಲಾಗುತ್ತದೆ.
  • ಕಸ ಅಥವಾ ಶುಚಿಗೊಳಿಸುವ ವಸ್ತುಗಳ ನಡುವೆ ಅದನ್ನು ಮರೆಮಾಡಿಟ್ಟ ನಂತರ ವಿಮಾನ ಮತ್ತು ರನ್‌ವೇ ಪ್ರದೇಶದಿಂದ (ಟಾರ್ಮ್ಯಾಕ್‌ ಏರಿಯಾ) ಆಚೆಗೆ ಸಾಗಿಸಲಾಗುತ್ತದೆ.
  • ಅಲ್ಲಿಂದ ಅದು ಮತ್ತೊಬ್ಬರ ಕೈ ಸೇರುತ್ತದೆ.

ಅರ್ಜಿದಾರರು ತಮ್ಮ ಮುಗ್ಧತೆಯನ್ನು ವಿಚಾರಣೆಯಲ್ಲಿ ಪ್ರದರ್ಶಿಸಬೇಕು. ಷೋಕಾಸ್ ನೋಟಿಸ್ ಸ್ಪಷ್ಟ ಉತ್ತರವನ್ನು ಬಯಸುತ್ತದೆಯೇ ಹೊರತು ತಪ್ಪಿತಸ್ಥರು ಎಂದು ಘೋಷಿಸುವುದಿಲ್ಲ ಎಂ.ನಾಗಪ್ರಸನ್ನ, ನ್ಯಾಯಮೂರ್ತಿ

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
Bengaluru Crime News Customs Department Gold Smuggling Syndicate Justice M Nagaprasanna Kannada News Karnataka High Court Kempegowda International Airport KIA Bengaluru ಕರ್ನಾಟಕ ಹೈಕೋರ್ಟ್ ಕಸ್ಟಮ್ಸ್ ಇಲಾಖೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಚಿನ್ನ ಕಳ್ಳಸಾಗಣೆ ಜಸ್ಟಿಸ್ ಎಂ ನಾಗಪ್ರಸನ್ನ ಬೆಂಗಳೂರು ಸುದ್ದಿ
Add as Preferred on Google Follow on Google News
Share. WhatsApp Facebook Twitter Telegram
Previous Articleಮದ್ಯ ಕುಡಿದು ಗಲಾಟೆ: 50 ಸಸಿ ನೆಡುವ ವಿಶಿಷ್ಟ ಶಿಕ್ಷೆ ವಿಧಿಸಿದ ಚಿಕ್ಕೋಡಿ ನ್ಯಾಯಾಲಯ!
Next Article ಕೆಪಿಎಸ್‌ಸಿ: ಅರ್ಜಿ ಸಲ್ಲಿಕೆಗೆ 7ರವರೆಗೆ ಅವಕಾಶ
Sub Editor
  • Website

Related Posts

ನೇಪಾಳ ಪ್ರವಾಹ: ಹಿಮಪಾತ, ಭೂಕಂಪವೇ ಕಾರಣ? 100ಕ್ಕೂ ಹೆಚ್ಚು ಭಾರತೀಯರು ನಾಪತ್ತೆ | Nepal Floods

August 26, 2026

ನನ್ನನ್ನು ಸಿಎಂ ಮಾಡಿ ಎಂದು ಸಿದ್ದರಾಮಯ್ಯ ಹೈಕಮಾಂಡ್‌ಗೆ ಹೇಳಿದ್ದರು: ಸಚಿವ ಜಿ. ಪರಮೇಶ್ವರ್ ಮಹತ್ವದ ಹೇಳಿಕೆ

August 26, 2026

ಬಿ. ನಾಗೇಂದ್ರ ಸಂಪುಟಕ್ಕೆ ಯಾಕೆ?: ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ, ರವಿಕುಮಾರ್ ಆಕ್ರೋಶ

August 26, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

ಕೆಪಿಎಸ್‌ಸಿ: ಅರ್ಜಿ ಸಲ್ಲಿಕೆಗೆ 7ರವರೆಗೆ ಅವಕಾಶ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2 ಕೆ.ಜಿ. ಚಿನ್ನ ಸಾಗಣೆ ಕೇಸ್: ಹೈಕೋರ್ಟ್‌ ಮಹತ್ವದ ತೀರ್ಪು

ಮದ್ಯ ಕುಡಿದು ಗಲಾಟೆ: 50 ಸಸಿ ನೆಡುವ ವಿಶಿಷ್ಟ ಶಿಕ್ಷೆ ವಿಧಿಸಿದ ಚಿಕ್ಕೋಡಿ ನ್ಯಾಯಾಲಯ!

ಚಿಕ್ಕಲ್ಲೂರು ಎನ್‌ಕೌಂಟರ್: ‘ಸ್ವರಕ್ಷಣೆ’ ಕಥೆ ಸುಳ್ಳು? ಮರಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ಸತ್ಯ ಬಯಲು

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.