Author: Sambrama Prabha News

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಆಟೋ LPG ಸರಬರಾಜನ್ನು ಹೆಚ್ಚಿಸಿದೆ. ಜಾಗತಿಕ ಭೂರಾಜಕೀಯ ಅಸ್ಥಿರತೆಯ ಪರಿಣಾಮವಾಗಿ ಬೇಡಿಕೆ ತೀವ್ರವಾಗಿ ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ. ರಾಜ್ಯದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು (OMCs) ಒಟ್ಟು 72 ಆಟೋ ಎಲ್ ಪಿಜಿ ಡಿಸ್ಪೆನ್ಸಿಂಗ್ ಸ್ಟೇಷನ್‌ಗಳನ್ನು (ALDS) ನಡೆಸುತ್ತಿವೆ. ಇದರಲ್ಲಿ ಇಂಡಿಯನ್ ಆಯಿಲ್ 55 ಸ್ಟೇಷನ್‌ಗಳನ್ನು ನಿರ್ವಹಿಸುತ್ತಿದೆ. 300ಕ್ಕೂ ಹೆಚ್ಚು ಖಾಸಗಿ ಎಎಲ್ ಡಿಎಸ್ ಗಳಿದ್ದರೂ, ಅವುಗಳಲ್ಲಿ ಸುಮಾರು 80 ಶೇಕಡಾದಷ್ಟು ಕಾರ್ಯನಿರ್ವಹಿಸದಿರುವುದರಿಂದ ಸರಬರಾಜಿನಲ್ಲಿ ಕೊರತೆ ಉಂಟಾಗಿದೆ. ಸೀಮಿತ ಮೂಲಸೌಕರ್ಯ ಮತ್ತು ವಿತರಣೆ ಸಾಮರ್ಥ್ಯವೂ ಲಭ್ಯತೆ ಮೇಲೆ ಪರಿಣಾಮ ಬೀರುತ್ತಿವೆ ಎಂದು ಕಂಪನಿ ತಿಳಿಸಿದೆ. ಬೆಲೆ ವ್ಯತ್ಯಾಸವೂ ಬೇಡಿಕೆ ಮೇಲೆ ಪ್ರಭಾವ ಬೀರಿದೆ. ಬೆಂಗಳೂರಿನಲ್ಲಿ ಸರ್ಕಾರಿ ಪೆಟ್ರೋಲ್ ಬಂಕ್‌ಗಳಲ್ಲಿ ಆಟೋ LPG ಲೀಟರ್‌ಗೆ 89.52 ರೂಪಾಯಿಗೆ ಲಭ್ಯವಿದ್ದರೆ, ಖಾಸಗಿ ಸ್ಟೇಷನ್‌ಗಳಲ್ಲಿ 99 ರೂಪಾಯಿಯಿಂದ 105ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ. ಇದರಿಂದ ಸರ್ಕಾರಿ ಬಂಕ್‌ಗಳಲ್ಲಿ ದೀರ್ಘ ಸಾಲಿನಲ್ಲಿ…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಬೆಂಗಳೂರು : ಕಳೆದ ಮೂರು ವಾರಗಳಿಂದ ರಾಜ್ಯದ ವಿದ್ಯುತ್ ಬೇಡಿಕೆ ಗಗನಕ್ಕೇರಿದ್ದು, ಬಳಕೆನೂ ಶರವೇಗದಲ್ಲಿ ಮೇಲಕ್ಕೇರುತ್ತಿದೆ. ಬಿರು ಬೇಸಿಗೆ ಧಗೆ ಜೊತೆಗೆ ಮಧ್ಯಪ್ರಾಚ್ಯ ಯುದ್ಧವೂ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಇನ್ನಷ್ಟು ಉಲ್ಬಣಗೊಳಿಸುವ ಆತಂಕ ಎದುರಾಗಿದೆ. ಈ ಹಿನ್ನೆಲೆ ವಿದ್ಯುತ್ ಬೇಡಿಕೆ ಪ್ರಮಾಣದ ಮೇಲೆ ಇಂಧನ ಇಲಾಖೆ ತೀವ್ರ ನಿಗಾ ಇರಿಸಿದೆ. ಅಷ್ಟಕ್ಕೂ ಸದ್ಯ ರಾಜ್ಯದ ವಿದ್ಯುತ್ ಬೇಡಿಕೆ, ಬಳಕೆ ಎಷ್ಟಿದೆ ಎಂಬ ಸಮಗ್ರ ವರದಿ ಇಲ್ಲಿದೆ. ಸಾಮಾನ್ಯವಾಗಿ ಏಪ್ರಿಲ್, ಮೇನಲ್ಲಿ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಉಲ್ಬಣಗೊಳ್ಳುತ್ತದೆ. ಬೇಸಿಗೆಯಲ್ಲಿ ತಾಪಮಾನ ವೃದ್ಧಿಯಾಗುತ್ತಿರುವುದರಿಂದ ಎಸಿ, ಕೂಲರ್ ಬಳಕೆ ಹೆಚ್ಚಾಗುತ್ತದೆ. ಇದರ ಜೊತೆಗೆ ಕೃಷಿ ಪಂಪ್ ಸೆಟ್ ಬಳಕೆ ಪ್ರಮಾಣವೂ ದುಪ್ಪಟ್ಟಾಗುತ್ತದೆ. ಹೀಗಾಗಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಉಲ್ಬಣವಾಗುತ್ತದೆ. ಹಾಗಾಗಿ, ಈ ವರ್ಷವೂ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಆದರೆ, ಇದರ ಜೊತೆಗೆ ಈ ಬಾರಿ ಮಧ್ಯಪ್ರಾಚ್ಯ ಯುದ್ದದ ಹಿನ್ನೆಲೆ ಎಲ್​ಪಿಜಿ ಕೊರತೆ ಎದುರಾಗಿದ್ದು, ಬಹುತೇಕ ಹೋಟೆಲ್​ಗಳು, ರೆಸ್ಟೋರೆಂಟ್​ಗಳು ಇಂಡಕ್ಷನ್,…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ವಾಷಿಂಗ್ಟನ್: ಪಶ್ಚಿಮ ಏಷ್ಯಾ ಯುದ್ಧವು ಕಳೆದ ಐದು ವಾರಗಳಿಂದ ನಡೆಯುತ್ತಿದೆ. ಇದು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ಜಗತ್ತು ಹಲವಾರು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದ್ದು ಇದಕ್ಕಾಗಿ ಇರಾನ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರಮಣಕಾರಿ ಹೇಳಿಕೆ ನೀಡಿದ್ದು ಅಂತಿಮ ಗಡುವು ಮಂಗಳವಾರ ಕೊನೆಯಾಗುತ್ತದೆ ಎಂದು ಪುನರುಚ್ಚರಿಸಿದರು. ಏನು ಮಾಡಬೇಕೋ ಅದನ್ನು ಮಾಡಿದರೆ, ಯುದ್ಧವು ಬಹಳ ಬೇಗನೆ ಕೊನೆಗೊಳ್ಳಬಹುದು. ಇರಾನ್‌ನ ಪ್ರತಿ-ಪ್ರಸ್ತಾಪವು ಮುಖ್ಯ. ಆದರೆ ಅವರು ನಿರೀಕ್ಷಿಸಿದಷ್ಟು ಉತ್ತಮವಾಗಿ ಸ್ಪಂದಿಸುತ್ತಿಲ್ಲ ಎಂದು ಟ್ರಂಪ್ ಹೇಳಿದರು. ನಮ್ಮ ಯುದ್ಧದ ಉದ್ದೇಶ ಒಂದೇ ಆಗಿದ್ದು ಅದು ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು ಎಂಬುದು ಎಂದು ಅಮೆರಿಕ ಅಧ್ಯಕ್ಷರು ಹೇಳಿದರು. ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವಂತೆ ಟ್ರಂಪ್ ಇರಾನ್ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. ಅದು ಸಂಭವಿಸದಿದ್ದರೆ, ಅವರು ಇರಾನ್‌ನ ಇಂಧನ ಸೌಲಭ್ಯಗಳು ಮತ್ತು ನಾಗರಿಕ ಮೂಲಸೌಕರ್ಯವನ್ನು ಹೊಡೆಯುವುದಾಗಿ ಎಚ್ಚರಿಸಿದ್ದಾರೆ. ಮಂಗಳವಾರ ರಾತ್ರಿ 8:00 ಗಂಟೆಗೆ ಅಂದರೆ…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಸೌದಿ ಅರೇಬಿಯಾದ ಪೂರ್ವ ಭಾಗದಲ್ಲಿರುವ ಅಲ್ ಜುಬೈಲ್ ಕೈಗಾರಿಕಾ ನಗರದ ಮೇಲೆ ಇರಾನ್ ಡ್ರೋನ್ ಹಾಗೂ ಮಿಸೈಲ್ ದಾಳಿ ನಡೆಸಿದ್ದು, ಪರಿಣಾಮ ಭಾರೀ ಅಗ್ನಿ ಅವಘಡ ಸಂಭಿಸಿದೆ ಎಂದು ತಿಳಿದುಬಂದಿದೆ. ಈ ಅಗ್ನಿ ಅವಘಡವು ಗಲ್ಫ್ ಪ್ರದೇಶದ ಭದ್ರತೆ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯನ್ನು ಸೂಚಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇರಾನ್ ಮೂಲದ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಪರಿಣಾಮವಾಗಿ ಈ ಅವಘಡ ಸಂಭವಿಸಿದೆ ಎಂದು ಅಂತರಾಷ್ಟ್ರೀಯ ವರದಿಗಳು ತಿಳಿಸಿವೆ. ಮಾಹಿತಿಗಳ ಪ್ರಕಾರ, ಈ ದಾಳಿ ಜಂಟಿಯಾಗಿ ರೀತಿಯಲ್ಲಿ ನಡೆದಿದ್ದು, ಹಲವು ಡ್ರೋನ್‌ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ ಕೈಗಾರಿಕಾ ಘಟಕಗಳನ್ನು ಗುರಿಯಾಗಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆಗಳು ಬಹುತೇಕ ದಾಳಿಗಳನ್ನು ಮಧ್ಯದಲ್ಲೇ ಹೊಡೆದುರುಳಿಸಿದರೂ, ಕೆಲವು ಕ್ಷಿಪಣಿಗಳ ಅವಶೇಷಗಳು ಅಥವಾ ದಾಳಿಗಳು ಪೆಟ್ರೋಕೆಮಿಕಲ್ ಘಟಕಗಳಲ್ಲಿ ಭಾರಿ ಸ್ಫೋಟಗಳನ್ನು ಸೃಷ್ಟಿವೆ ಎಂದು ತಿಳಿದುಬಂದಿದೆ. ಈ ಸ್ಫೋಟಗಳಿಂದ ಬೆಂಕಿ…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಇಂದಿನ ಪಂಚಾಂಗ ದಿನಾಂಕ : 07-04-2026 ವಾರ : ಮಂಗಳವಾರ ಸಂವತ್ಸರ : ಶ್ರೀ ಪರಾಭವ ನಾಮ ಆಯನ : ಉತ್ತರಾಯಣ ಪಕ್ಷ : ಕೃಷ್ಣ ತಿಥಿ : ಪಂಚಮಿ ನಕ್ಷತ್ರ : ಜ್ಯೇಷ್ಠ ಸೂರ್ಯೋದಯ : ಬೆಳಗ್ಗೆ 6:10 ಗಂಟೆಗೆ ಅಮೃತ ಕಾಲ : ಮಧ್ಯಾಹ್ನ 12:20 ರಿಂದ 01:52ರವರೆಗೆ ದುರ್ಮುಹೂರ್ತ : ಬೆಳಗ್ಗೆ 8:34 ರಿಂದ 9:22ರವರೆಗೆ ಹಾಗೂ ಮಧ್ಯಾಹ್ನ 11:46 ರಿಂದ 12:34ರವರೆಗೆ ರಾಹುಕಾಲ : ಮಧ್ಯಾಹ್ನ 03:25 ರಿಂದ 04:57ರವರೆಗೆ ಸೂರ್ಯಾಸ್ತ : ಸಂಜೆ 06:30 ಗಂಟೆಗೆ ಇಂದಿನ ದಿನ ಭವಿಷ್ಯ ಮೇಷ : ಇಂದು ನೀವು ಗಾಢವಾದ ನಿಗೂಢ ಮತ್ತು ಅತಿಮಾನುಷ ವಿಷಯಗಳತ್ತ ಆಸಕ್ತಿ ವಹಿಸುತ್ತೀರಿ. ನೀವು ಅದಕ್ಕೆ ಸಂಬಂಧಿಸಿ ಏನೋ ಒಂದು ಆನಂದಿಸಬಹುದು. ನೀವು ಈ ವಿಷಯಗಳ್ನು ವಿವರವಾಗಿ ಚರ್ಚಿಸುವ ಪುಸ್ತಕಗಳ ಮೇಲೆ ಖರ್ಚು ಮಾಡುತ್ತೀರಿ ಮತ್ತು ಈ ಅಂಶಗಳನ್ನು ವಿವರವಾಗಿ ಚರ್ಚಿಸುತ್ತೀರಿ. ನೀವು ಅಂತಹ ಮಾಹಿತಿಯನ್ನು ಶಾಂತಿಯುತ ಕಾರಣಕ್ಕೆ ಮಾತ್ರ ಬಳಸಬೇಕು, ಯುದ್ಧಕ್ಕಲ್ಲ. ವೃಷಭ : ಇಂದು ನೀವು ನಿಮ್ಮ ಸಕಾರಾತ್ಮಕ ಹೊರನೋಟ ಅಥವಾ ಒಳ್ಳೆಯ ಸ್ವಭಾವ…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಕರ್ನಾಟಕದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸರ್ಕಾರಿ ಶಾಲೆಗಳ ಅಸ್ತಿತ್ವವನ್ನು ಉಳಿಸಲು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (SDMC) ಸಮನ್ವಯ ವೇದಿಕೆಯು ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಹಲವು ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸೋಮವಾರ(ಏ.6) ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರೊ. ಬಾಬು ಮ್ಯಾಥ್ಯೂ, “ಪಂಚಾಯತ್ ಮಟ್ಟದಲ್ಲಿ ಸಮನ್ವಯ ವೇದಿಕೆಗಳು ಗಟ್ಟಿಯಾದಾಗ ಮಾತ್ರ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಲು ಸಾಧ್ಯ. ಕಾರ್ಮಿಕ ಸಂಘಟನೆಗಳ ಮಾದರಿಯಲ್ಲಿ ಎಸ್‌ಡಿಎಂಸಿಗಳು ಒಗ್ಗೂಡಿ ಹೋರಾಡಬೇಕಿದೆ,” ಎಂದು ಕರೆ ನೀಡಿದರು. ವೇದಿಕೆಯ ಪ್ರಮುಖ 15 ನಿರ್ಣಯಗಳೇನು ? * ರಾಜ್ಯ ಸರ್ಕಾರವು ಪಂಚಾಯಿತಿಗೊಂದು ಕರ್ನಾಟಕ ಸಾರ್ವಜನಿಕ ಶಾಲೆಯನ್ನು ಪ್ರಾರಂಭಿಸುವ ನೆಪದಲ್ಲಿ 25, 683 ಶಾಲೆಗಳನ್ನು ಮುಚ್ಚುವ ಹುನ್ನಾರವನ್ನು ಸಮಿತಿ ಬಲವಾಗಿ ಖಂಡಿಸಿತು . ಕೂಡಲೇ ಸರ್ಕಾರಿ ಶಾಲೆ ಮುಚ್ಚುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು . * ರಾಜ್ಯ…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಭಾರತದ ನ್ಯಾಯಾಂಗ ವ್ಯವಸ್ಥೆಯು ಪ್ರಸ್ತುತ 5.6 ಕೋಟಿ ಬಾಕಿ ಪ್ರಕರಣಗಳ ಬೃಹತ್ ಹೊರೆಯಿಂದಾಗಿ ಸ್ಥಗಿತಗೊಂಡಿದೆ. ಈ ಆಘಾತಕಾರಿ ಅಂಕಿ-ಅಂಶವು ನಮ್ಮ ನ್ಯಾಯಾಂಗ ವ್ಯವಸ್ಥೆಯು ಕುಸಿತದ ಅಂಚಿಗೆ ತಲುಪಿರುವುದನ್ನು ಎತ್ತಿ ತೋರಿಸುತ್ತದೆ. ಈ ಒಟ್ಟಾರೆ ಕಾನೂನು ಹೊರೆಯ ಸುಮಾರು ಅರ್ಧದಷ್ಟು ಭಾಗಕ್ಕೆ ಸ್ವತಃ ಸರ್ಕಾರವೇ ಜವಾಬ್ದಾರಿಯಾಗಿದೆ ಎಂಬುದು ಆಘಾತಕಾರಿ ಸತ್ಯ. ಸುಪ್ರೀಂ ಕೋರ್ಟ್‌ನ ಆತಂಕಕಾರಿ ಅಂಕಿ-ಅಂಶಗಳು ಜನವರಿ 2026 ರ ಹೊತ್ತಿಗೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 92,828 ಕ್ಕೆ ತಲುಪಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. ಈಗಿರುವ ವೇಗವನ್ನು ಗಮನಿಸಿದರೆ, ಒಂದು ವೇಳೆ ಇಂದಿನಿಂದ ಯಾವುದೇ ಹೊಸ ಪ್ರಕರಣಗಳು ದಾಖಲಾಗದಿದ್ದರೂ ಸಹ, ಹಳೆಯ ಕೇಸ್‌ಗಳನ್ನು ಮುಗಿಸಲು ನ್ಯಾಯಾಲಯಕ್ಕೆ 1.4 ವರ್ಷಗಳು ಬೇಕಾಗುತ್ತವೆ. ಫೆಬ್ರವರಿ 2025 ರಿಂದ ಫೆಬ್ರವರಿ 2026 ರ ನಡುವೆ ನ್ಯಾಯಾಲಯವು 80,471 ಪ್ರಕರಣಗಳನ್ನು ಸ್ವೀಕರಿಸಿದ್ದರೆ, ಕೇವಲ 65,752 ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಿದೆ. ಸರ್ಕಾರದ ಪಾತ್ರ: ದೂರುದಾರನೂ ಅವನೇ, ಕಾರಣನೂ ಅವನೇ! ವಿವಿಧ…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ದೆಹಲಿ ವಿಧಾನಸಭೆಯ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಭಾರಿ ಭದ್ರತಾ ಲೋಪ ಸಂಭವಿಸಿದೆ. ಅಪರಿಚಿತ ವಾಹನವೊಂದು ಭದ್ರತಾ ತಡೆಗೋಡೆಯನ್ನು (ಬ್ಯಾರಿಕೇಡ್) ಭೇದಿಸಿ ವಿಧಾನಸಭೆಯ ಆವರಣದೊಳಗೆ ನುಗ್ಗಿದ್ದು, ಈ ವೇಳೆ ವಿಧಾನಸಭೆ ಸ್ಪೀಕರ್ ಅವರ ವಾಹನಕ್ಕೆ ಮಸಿ ಬಳಿಯಲಾಗಿದೆ ಎಂದು ವರದಿಯಾಗಿದೆ. ಘಟನೆಯ ವಿವರ ಉತ್ತರ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿದ್ದ ವಾಹನವೊಂದು ಗೇಟ್ ಸಂಖ್ಯೆ 2ರ ಮೂಲಕ ಬಲವಂತವಾಗಿ ನುಗ್ಗಿದೆ. ಕಬ್ಬಿಣದ ಬ್ಯಾರಿಕೇಡ್ ಅನ್ನು ಡಿಕ್ಕಿ ಹೊಡೆದು ವಾಹನವು ವಿಧಾನಸಭೆಯ ಹೈ-ಸೆಕ್ಯೂರಿಟಿ ಝೋನ್ ಪ್ರವೇಶಿಸಿತ್ತು. ಆವರಣದೊಳಗೆ ನುಗ್ಗಿದ ಚಾಲಕನು ವಿಧಾನಸಭೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಯತ್ತ ತೆರಳಿದ್ದಾನೆ. ಅಲ್ಲಿ ಸ್ಪೀಕರ್ ಅವರ ವಾಹನಕ್ಕೆ ಮಸಿ ಬಳಿಯಲಾಗಿದೆ ಎಂದು ಆರೋಪಿಸಲಾಗಿದೆ. ಅಚ್ಚರಿಯೆಂದರೆ, ಚಾಲಕನು ವಾಹನದಿಂದ ಕೆಳಗಿಳಿದು ಸ್ಪೀಕರ್ ಕಚೇರಿಯ ಮುಂಭಾಗ ಹೂಗುಚ್ಛವೊಂದನ್ನು (Bouquet) ಇಟ್ಟು ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯು ಮುಖವಾಡ ಧರಿಸಿದ್ದ ಎನ್ನಲಾಗಿದ್ದು, ಈ ಇಡೀ ಘಟನೆಯು ಭದ್ರತಾ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದೆ..

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ಸೇರಿದಂತೆ ತ್ರಿಭಾಷೆಗೆ ಅಂಕಗಳನ್ನು ರದ್ದುಪಡಿಸಿ ಗ್ರೇಡ್‌ ನೀಡಲು ನಿರ್ಧರಿಸಿರುವ ಸರ್ಕಾರದ ತೀರ್ಮಾನವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ ಬೆನ್ನಲ್ಲೇ, ರಾಜ್ಯದ್ಯಂತ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯಪಾಲರು ತಮ್ಮ ಆದೇಶವನ್ನು ಹಿಂಪಡೆಯದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಲೋಕ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆವೊಡ್ಡಿದ್ದಾರೆ. ರಾಜ್ಯದ ಮೊದಲ ಪ್ರಜೆ ಎನಿಸಿಕೊಂಡವರು ಹಿಂದಿ ಏಜೆಂಟ್‌ ರೀತಿ ಕೆಲಸ ಮಾಡಬಾರದು. ಎಸ್‌ಎಸ್‌ಎಲ್‌ಸಿಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾದಾಗ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಏನು ಮಾಡುತ್ತಿದ್ದರು? ಹಿಂದಿ ಪರವಾಗಿ ಮಾತನಾಡುವ ರಾಜ್ಯಪಾಲರು ನಮಗೆ ಬೇಡ. ತಮ್ಮ ರಾಜ್ಯಕ್ಕೆ ವಾಪಸ್‌ ಹೋಗಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ (ಏ.6) ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದಿ ಏರಿಕೆ ಮಾಡಿದರೆ ಕನ್ನಡಪರ ಸಂಘಟನೆಗಳ ಸಹಿಸುವುದಿಲ್ಲ. ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ. ರಾಜ್ಯಪಾಲರು ಹಿಂದಿ ಪರವಾಗಿ ನಿಂತರೆ, ಹಿಂದಿ…

Read More

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ ಟೆಹರಾನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಅಮೆರಿಕದ ಉದ್ದೇಶಿತ 15 ಅಂಶಗಳ ಮಾರ್ಗಸೂಚಿಯನ್ನು ಇರಾನ್ ತಿರಸ್ಕರಿಸಿದೆ. ಅಮೆರಿಕದ 15 ಅಂಶಗಳ ಬೇಡಿಕೆ ಪ್ರಸ್ತಾವನೆ’ ಅತಿಯಾದ ಬೇಡಿಕೆಯಾಗಿದೆ’ ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ತನ್ನದೇ ಆದ ಷರತ್ತುಗಳನ್ನು ರೂಪಿಸಿದೆ ಎಂದು ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಹೇಳಿದ್ದಾರೆ. ಬೆದರಿಕೆಯಡಿ ಮಾತುಕತೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ. ಯಾವುದೇ ಮೂಲಸೌಕರ್ಯಗಳ ಮೇಲಿನ ದಾಳಿ ಯುದ್ಧ ಅಪರಾಧಗಳಿಗೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ‘ಇಸ್ಫಹಾನ್‌ನಲ್ಲಿ ಪೈಲಟ್ ರಕ್ಷಣಾ ಕಾರ್ಯಾಚರಣೆಯು ಇರಾನ್ ನಲ್ಲಿ ಪ್ರಬಲವಾಗಿರುವ ಯುರೇನಿಯಂ ಅನ್ನು ವಶಪಡಿಸಿಕೊಳ್ಳುವ ಗುರಿ ಹೊಂದಿರುವ ಮೋಸದ ಕಾರ್ಯಾಚರಣೆಯಾಗಿರಬಹುದು ವರದಿಯಾಗಿದೆ. ಹೀಗಾಗಿ ಉಭಯ ರಾಷ್ಟ್ರಗಳ ನಡುವೆ ತೀವ್ರ ಅಪನಂಬಿಕೆ ಇದೆ. ತಕ್ಷಣದ ಕದನ ವಿರಾಮ ಎದುರಾಳಿ ತಂಡವನ್ನು ಮರುಸಂಘಟಿಸಲು ಮತ್ತು ಮಿಲಿಟರಿ ಕ್ರಮಗಳನ್ನು ಪುನರಾರಂಭಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ. ಗಟ್ಟಿ ನಿಲುವಿನ ಹೊರತಾಗಿಯೂ ರಾಜತಾಂತ್ರಿಕ ಮಾತುಕತೆ ನಡೆಯುತ್ತಿದೆ.…

Read More