Author: Sambrama Prabha News
'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)
‘ಸಂಭ್ರಮ ಪ್ರಭ’ ದಿನಪತ್ರಿಕೆಯಲ್ಲಿ ಜುಲೈ 9 ರಂದು ಪ್ರಕಟವಾದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳ ಸಚಿವಾಲಯ. ವಾಸ್ತವಾಂಶ ಪರಿಶೀಲಿಸಿ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರಿ ಕಾರ್ಯದರ್ಶಿಗೆ ಸೂಚನೆ. ಅತಿ ಜರೂರಾಗಿ ಅನುಪಾಲನಾ ವರದಿ (Compliance Report) ಸಲ್ಲಿಸುವಂತೆ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ ಆದೇಶ. ಸೂಕ್ತ ಕ್ರಮಕ್ಕಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೂ ಪತ್ರದ ಪ್ರತಿ ರವಾನೆ; ಬಡ ವಿದ್ಯಾರ್ಥಿಗಳಿಗೆ ಶೀಘ್ರವೇ ನ್ಯಾಯ ಸಿಗುವ ಭರವಸೆ. ಬೆಂಗಳೂರು (ಕೆ.ಆರ್. ಪುರಂ):ಕೆ.ಆರ್. ಪುರಂ ತಾಲೂಕಿನ ಅವಲಹಳ್ಳಿಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಇರುವ ಕಟ್ಟಡದಲ್ಲೇ ನಡೆಯುತ್ತಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (ಬಿಸಿಎಂ) ಬಾಲಕರ ವಿದ್ಯಾರ್ಥಿ ನಿಲಯದ ದಾರುಣ ಸ್ಥಿತಿ ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರದಾಟದ ಕುರಿತು ‘ಸಂಭ್ರಮ ಪ್ರಭ’ ದಿನಪತ್ರಿಕೆ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಈ ವರದಿಗೆ ಇದೀಗ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಸಚಿವಾಲಯ ತಕ್ಷಣವೇ ಸ್ಪಂದಿಸಿದೆ. ಜುಲೈ 09, 2026 ರಂದು…
ಬೆಂಗಳೂರು (ಸಂಭ್ರಮಪ್ರಭಾ ನ್ಯೂಸ್): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ‘ಗೃಹಲಕ್ಷ್ಮಿ’ ಹಾಗೂ ‘ಗೃಹಜ್ಯೋತಿ’ ಕುರಿತಂತೆ ಫಲಾನುಭವಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಯೋಜನೆಗಳ ದುರ್ಬಳಕೆ ತಡೆಯಲು ಮತ್ತು ಸಾರ್ವಜನಿಕರ ಗೊಂದಲಗಳನ್ನು ನಿವಾರಿಸಲು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಕೆಲವು ಹೊಸ ನಿಯಮ ಮತ್ತು ಸೌಲಭ್ಯಗಳನ್ನು ಜಾರಿಗೆ ತಂದಿವೆ. ಇದರ ಸಂಪೂರ್ಣ ವಿವರ ಇಲ್ಲಿದೆ. ಗೃಹಜ್ಯೋತಿ ಗೊಂದಲಗಳಿಗೆ ಬೆಸ್ಕಾಂನಿಂದ ವಿಶೇಷ ಹೆಲ್ಪ್‌ಲೈನ್ ರಾಜ್ಯಾದ್ಯಂತ ಉಚಿತ ವಿದ್ಯುತ್ ಒದಗಿಸುವ ಗೃಹಜ್ಯೋತಿ ಯೋಜನೆಯಡಿ ಪ್ರಸ್ತುತ ದತ್ತಾಂಶ ಹಾಗೂ ಮಾಹಿತಿ ಪರಿಶೀಲನಾ ಕಾರ್ಯವನ್ನು ಜುಲೈ 1ರಿಂದಲೇ ಚುರುಕುಗೊಳಿಸಲಾಗಿದೆ. ಆದರೆ, ಈ ಪ್ರಕ್ರಿಯೆ ವೇಳೆ ಗ್ರಾಹಕರಲ್ಲಿ ಹಲವು ರೀತಿಯ ಗೊಂದಲಗಳು ಸೃಷ್ಟಿಯಾಗಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಸಾರ್ವಜನಿಕರ ಈ ಗೊಂದಲಗಳಿಗೆ ತೆರೆ ಎಳೆಯಲು ಬೆಸ್ಕಾಂ (BESCOM) ಇದೀಗ ವಿಶೇಷ ಸಹಾಯವಾಣಿಯನ್ನು ಆರಂಭಿಸಿದೆ. ಗ್ರಾಹಕರು ಪ್ರತಿದಿನ ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ ತಮ್ಮ ಯಾವುದೇ ಸಮಸ್ಯೆಗಳು ಅಥವಾ ಪ್ರಶ್ನೆಗಳಿದ್ದರೂ ಪರಿಹರಿಸಿಕೊಳ್ಳಬಹುದು…
ಕರಕಾಸ್: ವೆನೆಜುವೆಲಾ ರಾಜಧಾನಿ ಕರಕಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ‘ಅವಳಿ ಭೂಕಂಪ’ (Doublet Earthquakes) ಅಪಾರ ವಿನಾಶವನ್ನು ಸೃಷ್ಟಿಸಿದೆ. ಕೇವಲ 39 ಸೆಕೆಂಡುಗಳ ಅಂತರದಲ್ಲಿ ರಿಕ್ಟರ್ ಮಾಪಕದಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಬೆನ್ನಲ್ಲೇ ಸಂಭವಿಸಿದ್ದು, ಇಡೀ ದೇಶವೇ ತತ್ತರಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಕನಿಷ್ಠ 188 ಜನರು ಮೃತಪಟ್ಟಿದ್ದು 1,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ, ಕುಸಿದುಬಿದ್ದಿರುವ ಕಟ್ಟಡಗಳ ಅವಶೇಷಗಳಡಿ ಇನ್ನೂ ಸಾವಿರಾರು ಜನರು ಸಿಲುಕಿರುವ ಸಾಧ್ಯತೆಯಿದೆ. ಹೀಗಾಗಿ ಸಾವಿನ ಸಂಖ್ಯೆ ಹತ್ತು ಸಾವಿರ ದಾಟುವ ಭೀತಿಯನ್ನು ಅಮೆರಿಕದ ಭೂಗರ್ಭ ಸಮೀಕ್ಷಾ ಸಂಸ್ಥೆ (USGS) ವ್ಯಕ್ತಪಡಿಸಿದೆ. ‘ಸಿಸ್ಮಿಕ್ ಡಬ್ಲೆಟ್’ ಎಂದರೇನು? ಯಾಕಿಷ್ಟು ವಿನಾಶಕಾರಿ? ಸಾಮಾನ್ಯವಾಗಿ ಒಂದು ದೊಡ್ಡ ಭೂಕಂಪ (Mainshock) ಸಂಭವಿಸಿದ ನಂತರ, ಸಣ್ಣಪುಟ್ಟ ಕಂಪನಗಳು (Aftershocks) ಬರುವುದು ವಾಡಿಕೆ. ಆದರೆ ವೆನೆಜುವೆಲಾದಲ್ಲಿ ನಡೆದದ್ದು ವಿಭಿನ್ನ. ಇಲ್ಲಿ ಮೊದಲು 7.2 ತೀವ್ರತೆಯ ಭೂಕಂಪನವಾಗಿ, ಕೇವಲ 39 ಸೆಕೆಂಡುಗಳ ಬಳಿಕ 7.5…
ಬೆಂಗಳೂರು: ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರದು ಕೇವಲ ಪಂಚೆ ಮಾತ್ರ ಸಿಂಪಲ್, ಆದರೆ ಅವರ ಲೈಫ್ ಸ್ಟೈಲ್, ಕಾರು, ಫಾರ್ಮ್ ಹೌಸ್ ಹಾಗೂ ಅವರು ಕಟ್ಟುವ ವಾಚ್‌ಗಳು ಅತ್ಯಂತ ದುಬಾರಿ ಎಂದು ಅವರು ಲೇವಡಿ ಮಾಡಿದ್ದಾರೆ. “ಕೋಟ್ಯಂತರ ರೂಪಾಯಿ ಮೌಲ್ಯದ 85 ವಾಚ್‌ಗಳ ಕಲೆಕ್ಷನ್!” ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, “ನೀವು ಮುಖ್ಯಮಂತ್ರಿಯಾಗಿದ್ದಾಗ 62 ವಿವಿಧ ವಾಚ್‌ಗಳನ್ನು ಕಟ್ಟಿದ್ದೀರಿ ಎಂಬುದನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಆ ವಾಚ್‌ಗಳ ಆರಂಭಿಕ ಬೆಲೆಯೇ 10 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ. ಅದರಲ್ಲಿ 75 ಲಕ್ಷ ಬೆಲೆಯ ವಾಚ್‌ಗಳೂ ಇವೆ. ಇದೀಗ ನನಗೆ ತಿಳಿದಿರುವ ಪ್ರಕಾರ ನಿಮ್ಮ ವಾಚ್ ಕಲೆಕ್ಷನ್ 85ಕ್ಕೆ ಏರಿಕೆಯಾಗಿದ್ದು, ಇವುಗಳ ಒಟ್ಟು ಮೌಲ್ಯ 15 ರಿಂದ 20 ಕೋಟಿ ರೂಪಾಯಿ ಆಗಬಹುದು” ಎಂದು ಆರೋಪಿಸಿದ್ದಾರೆ. “ಪಾಪ, ಬಿಡದಿಯ ರೈತರು ನೀವೇನೋ ವೈಟ್ ಅಂಡ್…
ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣವಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣದಲ್ಲಿ ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಹಾಗೂ ರೈಲುಗಳು ಹೊರವಲಯದಲ್ಲಿ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಲು ನೈರುತ್ಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದೆ. ರೈಲ್ವೆ ಯಾರ್ಡ್ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಜೂನ್ 15ರಿಂದ ಕೆಎಸ್ಆರ್ ನಿಲ್ದಾಣದಲ್ಲಿ ಈ ಕಾಮಗಾರಿ ಆರಂಭವಾಗಲಿದ್ದು, ಆಗಸ್ಟ್ ಮೊದಲ ವಾರದವರೆಗೆ ನಡೆಯಲಿದೆ. ಕಾಮಗಾರಿಯ ಹಿನ್ನೆಲೆಯಲ್ಲಿ 58 ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ಹಾಗೂ 116 ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಪ್ಲಾಟ್‌ಫಾರ್ಮ್ ವಿಸ್ತರಣೆ ಮತ್ತು ಹೊಸ ಲೂಪ್ ಲೈನ್ ಕೆಎಸ್ಆರ್ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ಗಳ ಕೊರತೆ ಬಹುದೊಡ್ಡ ಸಮಸ್ಯೆಯಾಗಿತ್ತು. ಪ್ರಸ್ತುತ ಕೇವಲ 460 ಮೀಟರ್ ಉದ್ದವಿರುವ 7ನೇ ಪ್ಲಾಟ್‌ಫಾರ್ಮ್ ಅನ್ನು ಸುಮಾರು 600 ಮೀಟರ್‌ಗೆ ವಿಸ್ತರಿಸಲು ಯೋಜಿಸಲಾಗಿದೆ. ಇದರಿಂದಾಗಿ 21-24 ಬೋಗಿಗಳ ಉದ್ದದ ರೈಲುಗಳು ಸುಲಭವಾಗಿ ನಿಲ್ಲಲು ಸಾಧ್ಯವಾಗಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಇತರ ಪ್ಲಾಟ್‌ಫಾರ್ಮ್‌ಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಇದಲ್ಲದೆ,…
ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಸ್ವಾಧೀನಕ್ಕಾಗಿ ಸರಕಾರ ಅಂತಿಮ ಅಧಿಸೂಚನೆ ಹಾಗೂ ಟೌನ್‌ಶಿಪ್‌ಗೆ ಪ್ರಧಾನಿ ಮೋದಿ ಮೇಲ್ವಿಚಾರಣಾ ಸಮಿತಿ ಪ್ರಸ್ತಾಪದ ಬಗ್ಗೆ ಬಿಜೆಪಿ, ಜೆಡಿಎಸ್ ಕಿಡಿಕಾರಿದ್ದು ಸರಕಾರದ ನಡೆಯನ್ನು ಖಂಡಿಸಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿವೆ. ಸಿಎಂ ಡಿಕೆಶಿ ತಮ್ಮ ರಿಯಲ್ ಎಸ್ಟೇಟ್ ದಂಧೆಗೆ ಮೋದಿ ಹೆಸರು ಬಳಸಿ ರೈತರನ್ನು ವಂಚಿಸಲು ಮುಂದಾಗಿದ್ದಾರೆ. ಇದು ಖಂಡನೀಯವೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ರೈತ ವಿರೋಧಿ ನಿರ್ಧಾರ ಕೈಬಿಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಬೇಕೆಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪತ್ರ ಬರೆದಿದ್ದಾರೆ. ರಾಹುಲ್ ಗಾಂಧಿಗೆ ವಿಜಯೇಂದ್ರ ಪತ್ರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಭಾನುವಾರ ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ, ”ದೇಶದಾದ್ಯಂತ ರೈತರ ಭೂಮಿ ಉಳಿಸುವ ಹಾಗೂ ಕಾರ್ಪೊರೇಟ್ ಕಂಪನಿಗಳಿಂದ ದೇಶವನ್ನು ರಕ್ಷಿಸುವ ಘೋಷಣೆ ಕೂಗುತ್ತೀರಿ, ಯಾತ್ರೆ ನಡೆಸುತ್ತೀರಿ. ಆದರೆ ಕಾಂಗ್ರೆಸ್ ಸರಕಾರವಿರುವ ಕರ್ನಾಟಕದಲ್ಲಿ ನಿಮ್ಮ ಮುಖ್ಯಮಂತ್ರಿಗಳೇ ರೈತರ…
ವಿಶೇಷ ಪ್ರತಿನಿಧಿ ನವದೆಹಲಿ/ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ರದ್ದತಿ ಹಾಗೂ ಆ ಬಳಿಕದ ರಾಜಕೀಯ ವಿದ್ಯಮಾನಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಈ ಇಡೀ ಪ್ರಕ್ರಿಯೆಯ ಹಿಂದೆ ನಡೆದಿವೆ ಎನ್ನಲಾದ ಸಾಲು ಸಾಲು ವಿದ್ಯಮಾನಗಳ “ಸಮಯಪ್ರಜ್ಞೆ” (ಟೈಮಿಂಗ್) ಮತ್ತು ಚುನಾವಣಾ ಆಯೋಗದ ನಿಲುವನ್ನು ಪ್ರಶ್ನಿಸಿ ನೆಟ್ಟಿಗರು ಹಾಗೂ ರಾಜಕೀಯ ವಿಶ್ಲೇಷಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡಿಜಿಟಲ್ ವೇದಿಕೆಗಳಲ್ಲಿ ದೇಶದ ಪ್ರಜಾಪ್ರಭುತ್ವದ ಸಾಂಸ್ಥಿಕ ನಡವಳಿಕೆಗಳ ಕುರಿತು ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದ್ದು, ಸಾರ್ವಜನಿಕರು ಈ ಪ್ರಕರಣದಲ್ಲಿನ ಕೆಲವು ಮುಖ್ಯ ‘ಕಾಕತಾಳೀಯ’ಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ‘ಕ್ರೋನಾಲಜಿ’: ಸಾಮಾಜಿಕ ಜಾಲತಾಣಗಳಾದ ಎಕ್ಸ್ (ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿ ಸಾರ್ವಜನಿಕರು ಈ ಕೆಳಗಿನ ಪ್ರಮುಖ ಅಂಶಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ: ಅನಾಮಧೇಯ ದೂರು ಮತ್ತು ರದ್ದತಿ: ತೆಲಂಗಾಣದ ನ್ಯಾಯಾಲಯದಲ್ಲಿದ್ದ ಯಾವುದೋ ಒಂದು ಅನಾಮಧೇಯ ದೂರಿನ ಆಧಾರದ ಮೇಲೆ, ಚುನಾವಣಾ ಆಯೋಗವು ಅತ್ಯಂತ ತರಾತುರಿಯಲ್ಲಿ ಮೀನಾಕ್ಷಿ ನಟರಾಜನ್…
ಗೃಹಲಕ್ಷ್ಮಿ & ಗೃಹಜ್ಯೋತಿ ಯೋಜನೆಗಳಿಗೆ ಮತ್ತೆ ಅರ್ಜಿ ಸಲ್ಲಿಸಬೇಕು ಎಂದು ಸ್ವತಃ CM ಡಿಕೆಶಿ ಫಲಾನುಭವಿಗಳಿಗೆ ಸೂಚಿಸಿದ್ದಾರೆ. ನೈಜ ಫಲಾನುಭವಿಗಳನ್ನು ಗುರುತಿಸುವ ಹಾಗೂ ಯೋಜನೆಯ ದುರ್ಬಳಕೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ನೂರಾರು ಕೋಟಿ ರೂ. ಮೃತಪಟ್ಟವರ ಖಾತೆಗಳಿಗೆ ಹೋಗಿರುವುದು ಪತ್ತೆಯಾಗಿದ್ದು, ಫಲಾನುಭವಿಗಳ ಬ್ಯಾಂಕ್ ಮಾಹಿತಿ ಸ್ಪಷ್ಟವಾಗಿ ಲಭ್ಯವಾಗಬೇಕಿದೆ. ಗೃಹಜ್ಯೋತಿಗೂ ಉಚಿತ ವಿದ್ಯುತ್ ಪಡೆಯುತ್ತಿರುವ 1.64 ಲಕ್ಷ ಜನರೂ ಸಹ ಮರು ಅರ್ಜಿ ಸಲ್ಲಿಸಬೇಕು ಎಂದಿದ್ದಾರೆ.
ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ‘ನೀಟ್’ (NEET 2026) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ (NTA) ವೈಫಲ್ಯವನ್ನು ಖಂಡಿಸಿ ಶನಿವಾರ ನವದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರು ಬೃಹತ್ ಪ್ರತಿಭಟನೆ ನಡೆಸಿದರು. ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. “ನಾವು ‘ಮೇಕ್ ಇನ್ ಇಂಡಿಯಾ’ ಕೇಳಿದ್ರೆ, ನೀವು ನಮಗೆ ‘ಲೀಕ್ ಇನ್ ಇಂಡಿಯಾ’ ಕೊಟ್ರಿ” ಎಂಬ ಆಕ್ರೋಶಭರಿತ ಘೋಷಣೆಗಳು ಜಂತರ್ ಮಂತರ್‌ನಲ್ಲಿ ಮೊಳಗಿದವು. ಕೈಯಲ್ಲಿ ಕಪ್ಪು ಭಿತ್ತಿಪತ್ರಗಳನ್ನು ಹಿಡಿದ ಸಾವಿರಾರು ಯುವಕರು ಎನ್‌ಟಿಎ (NTA) ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ಏನಿದು ಕಾಕ್ರೋಚ್ ಪಾರ್ಟಿ? ನೀಟ್ ಅಕ್ರಮ ಹಾಗೂ ಸಿಬಿಎಸ್‌ಇ ಆನ್‌ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆಯಲ್ಲಿನ ಲೋಪಗಳನ್ನು ಕಟುವಾಗಿ ವಿರೋಧಿಸಲು ಯುವಜನರೇ ಸೇರಿ…
ಬೆಂಗಳೂರು: ರಾಜಕೀಯದಲ್ಲಿ ಪರಿಶ್ರಮ, ಲೆಕ್ಕಾಚಾರಗಳ ಜೊತೆಗೆ ಕೆಲವೊಮ್ಮೆ ‘ಅದೃಷ್ಟ’ ಕೂಡ ದೊಡ್ಡ ಪಾತ್ರ ವಹಿಸುತ್ತದೆ ಎಂಬುದಕ್ಕೆ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಒಂದು ಸರ್ಕಾರಿ ನಿವಾಸವೇ ದೊಡ್ಡ ಸಾಕ್ಷಿ. ಹೌದು, ಡಿಸಿಎಂ ಆಗಿದ್ದ ಡಿ.ಕೆ. ಶಿವಕುಮಾರ್ ಅವರು ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಈ ‘ಅದೃಷ್ಟದ ಮನೆ’ಯ ಕಥೆ ಮತ್ತೆ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬುಧವಾರ ಡಿಕೆಶಿ ಪ್ರಮಾಣವಚನ: ಮುಖ್ಯಮಂತ್ರಿ ಹುದ್ದೆಗೇರಬೇಕು ಎಂಬ ಡಿ.ಕೆ. ಶಿವಕುಮಾರ್ ಅವರ ಬಹುಕಾಲದ ಕನಸು ನನಸಾಗುವ ಶುಭಗಳಿಗೆ ಹತ್ತಿರವಾಗಿದೆ. ಇದೇ ಬುಧವಾರ ಸಂಜೆ 4:05ಕ್ಕೆ ರಾಜ್ಯಪಾಲರ ಕಚೇರಿಯಲ್ಲಿ (ಲೋಕಭವನ) ಡಿ.ಕೆ. ಶಿವಕುಮಾರ್ ಅವರು ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಕರ್ನಾಟಕ ರಾಜಕಾರಣದಲ್ಲಿ ‘ಡಿಕೆಶಿ ಸರ್ಕಾರ್’ ಯುಗಾರಂಭವಾಗಲಿದೆ. ಏನಿದು ‘ಅದೃಷ್ಟದ ಮನೆ’ಯ ರಹಸ್ಯ? ಕುಮಾರಕೃಪಾ ರಸ್ತೆಯಲ್ಲಿರುವ ಈ ಸರ್ಕಾರಿ ನಿವಾಸವು ಕೇವಲ ಒಂದು ಮನೆಯಲ್ಲ, ಬದಲಾಗಿ ಇದು ಹಲವು ನಾಯಕರ ರಾಜಕೀಯ ಏಳುಬೀಳುಗಳನ್ನು, ಕನಸುಗಳನ್ನು ಕಂಡಿರುವ ಐತಿಹಾಸಿಕ ಸಾಕ್ಷಿ. ಇಲ್ಲಿ ವಾಸ…
Subscribe to Updates
Get the latest creative news from FooBar about art, design and business.