Close Menu
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
What's Hot

‘ಸಿದ್ದರಾಮಯ್ಯ ನೆರಳಲ್ಲಿ ಬೆಳೆದವರೆಲ್ಲಾ ಈಗ ಯಾಕೆ ಮೌನವಾಗಿದ್ದೀರಿ?’ – ಕಾಂಗ್ರೆಸ್ ನಾಯಕರಿಗೆ ಹೆಚ್.ಡಿ. ಕುಮಾರಸ್ವಾಮಿ ನೇರ ಸವಾಲು!

‘ಈ ಸರ್ಕಾರದಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆಯೇ ಇಲ್ಲ!’ – ಸಿಎಂ ಡಿಕೆಶಿ ಪತ್ನಿ ಪುಷ್ಪಾರ್ಚನೆ ವಿವಾದಕ್ಕೆ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯ

ವಿಜಯದಶಮಿ ಆಚರಣೆಯ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಏನು? ಮೈಸೂರಿನ ಧಾರ್ಮಿಕ ಚಿಂತಕ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ವಿಶ್ಲೇಷಣೆ

Facebook X (Twitter) Instagram
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Facebook X (Twitter) Instagram
Subscribe
Trending Topics:
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
  • Home
  • Latest News
  • Special News
  • Crime News
  • Nation News
  • international
  • Politics
  • Exclusive
  • Sports News
Home » ‘ಈ ಸರ್ಕಾರದಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆಯೇ ಇಲ್ಲ!’ – ಸಿಎಂ ಡಿಕೆಶಿ ಪತ್ನಿ ಪುಷ್ಪಾರ್ಚನೆ ವಿವಾದಕ್ಕೆ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯ
Latest News Politics

‘ಈ ಸರ್ಕಾರದಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆಯೇ ಇಲ್ಲ!’ – ಸಿಎಂ ಡಿಕೆಶಿ ಪತ್ನಿ ಪುಷ್ಪಾರ್ಚನೆ ವಿವಾದಕ್ಕೆ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯ

Sub EditorBy Sub EditorOctober 23, 2026No Comments2 Mins Read
Share WhatsApp Facebook Twitter Telegram
ಹೆಚ್.ಡಿ ಕುಮಾರಸ್ವಾಮಿ
Share
WhatsApp Facebook Twitter Telegram

ಬೆಂಗಳೂರು: ಮೈಸೂರು ದಸರಾ ಮಹೋತ್ಸವದ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ ವಿವಾದ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಸ್ವಪಕ್ಷೀಯರೇ ಬ್ಲಾಕ್‌ಮೈಲ್ ಮಾಡುತ್ತಿರುವ ವಿಚಾರದ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯದ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದರು.

ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ

ದಸರಾ ಅಂಬಾರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರ ಪತ್ನಿ ಪುಷ್ಪಾರ್ಚನೆ ಮಾಡಿದ್ದು ಶಿಷ್ಟಾಚಾರದ ಉಲ್ಲಂಘನೆಯಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಹೆಚ್.ಡಿ.ಕೆ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವ್ಯಂಗ್ಯವಾಡಿದರು.

“ಈ ಸರ್ಕಾರದಲ್ಲಿ ಯಾವುದು ತಪ್ಪಿಲ್ಲ. ಅವರು ಏನು ಮಾಡಿದರೂ ಅದು ಸರಿ, ಎಲ್ಲರೂ ಅದನ್ನು ಒಪ್ಪಿಕೊಳ್ಳಲೇಬೇಕು” ಎಂದು ಅವರು ಕಟಕಿಯಾಡಿದರು. “ಈ ಬಾರಿಯ ದಸರಾದಲ್ಲಿ ‘ಹಲವಾರು ಪ್ರಥಮಗಳು’ ಎಂದು ಮಾಧ್ಯಮಗಳಲ್ಲಿ ಬಂದಿದ್ದನ್ನು ನಾನು ನೋಡಿದ್ದೆ. ಬಹುಶಃ ಇಂತಹ ಶಿಷ್ಟಾಚಾರ ಉಲ್ಲಂಘನೆ ಕೂಡ ಆ ಪ್ರಥಮಗಳಲ್ಲಿ ಒಂದು ಇರಬಹುದು” ಎಂದು ಮಾರ್ಮಿಕವಾಗಿ ನುಡಿದರು.

ಸಿದ್ದರಾಮಯ್ಯ ಇಮೇಜ್ ಹಾಳು ಮಾಡಲು ಸ್ವಪಕ್ಷೀಯರಿಂದಲೇ ಷಡ್ಯಂತ್ರ!

ಇದೇ ವೇಳೆ, ಸ್ಟಿಂಗ್ ಆಪರೇಷನ್ ಪ್ರಕರಣವೊಂದರಲ್ಲಿ ಸಿದ್ದರಾಮಯ್ಯನವರನ್ನು ಅವರದೇ ಪಕ್ಷದವರು ಬ್ಲಾಕ್‌ಮೈಲ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ವಿಚಾರದಲ್ಲಿ ಯಾವುದೇ ಸಂಶಯವಿಲ್ಲ ಎಂದರು.

“ಇದು ಹುಡುಗಾಟಿಕೆಯಲ್ಲಿ ತೆಗೆದುಕೊಳ್ಳುವ ವಿಚಾರವಲ್ಲ. ಇವತ್ತು ಸಿದ್ದರಾಮಯ್ಯನವರ ಇಮೇಜ್ ಅನ್ನು ಹಾಳು ಮಾಡುವ ನಿಟ್ಟಿನಲ್ಲಿ ಇಂತಹ ಷಡ್ಯಂತ್ರಗಳು ನಡೆಯುತ್ತಿವೆ. ಅಷ್ಟು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯನವರ ಧ್ವನಿಯನ್ನು ಅಡಗಿಸಬೇಕು ಅಂತಲೇ ವ್ಯವಸ್ಥಿತವಾಗಿ ಇದೆಲ್ಲ ನಡೆಯುತ್ತಿದೆ. ಇದರಲ್ಲಿ ಖುದ್ದು ಮುಖ್ಯಮಂತ್ರಿಗಳೇ ಭಾಗಿಯಾಗಿದ್ದಾರೆ ಎಂಬುದು ಇವತ್ತಲ್ಲ ನಾಳೆ ಹೊರಗೆ ಬರಲಿದೆ” ಎಂದು ಅವರು ಆರೋಪಿಸಿದರು.

ಮುಖ್ಯಮಂತ್ರಿಗಳಿಗೆ ನೇರ ಎಚ್ಚರಿಕೆ

“ನಿರೀಕ್ಷಣಾ ಜಾಮೀನಿಗೆ (Anticipatory Bail) ಅರ್ಜಿ ಹಾಕಿಕೊಂಡಿರುವ ಆ ವ್ಯಕ್ತಿಯ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿ ಸರಿಯಾದ ಕ್ರಮ ಕೈಗೊಂಡು ಹದ್ದುಬಸ್ತಿನಲ್ಲಿ ಇಡದೆ ಹೋದರೆ, ಮುಂದೊಂದು ದಿನ ಆ ವ್ಯಕ್ತಿಯೇ ಇವರ ರಾಜಕೀಯ ಭವಿಷ್ಯವನ್ನು ನಿರ್ಣಾಮ ಮಾಡುತ್ತಾನೆ” ಎಂದು ಕುಮಾರಸ್ವಾಮಿ ಮುಖ್ಯಮಂತ್ರಿಗಳಿಗೆ ನೇರ ಎಚ್ಚರಿಕೆ ರವಾನಿಸಿದ್ದಾರೆ.

ಒಟ್ಟಾರೆಯಾಗಿ, ಹೆಚ್.ಡಿ. ಕುಮಾರಸ್ವಾಮಿಯವರ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಆಡಳಿತ ಪಕ್ಷದೊಳಗಿನ ಆಂತರಿಕ ಬೇಗುದಿಯನ್ನು ಮತ್ತೊಮ್ಮೆ ಬಯಲಿಗೆಳೆದಿದೆ.

ವರದಿ: ಸಂಭ್ರಮಪ್ರಭ ನ್ಯೂಸ್ ಡೆಸ್ಕ್

ಸಂಭ್ರಮಪ್ರಭ
ನಾಡಿನ ಪ್ರಮುಖ ಸುದ್ದಿ ಜಾಲ
ಬ್ರೇಕಿಂಗ್ ನ್ಯೂಸ್
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ಷಣ ಕ್ಷಣದ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಪರದೆಯ ಮೇಲೆ.
ಈಗಲೇ ಭೇಟಿ ನೀಡಿ
sambramaprabha.com
CM DK Shivakumar Congress Dasara Ambari Controversy HD Kumaraswamy JDS Kannada News Karnataka Politics Mysuru Dasara Sambramaprabha Siddaramaiah Sting Operation ಕನ್ನಡ ಸುದ್ದಿ ಕರ್ನಾಟಕ ರಾಜಕೀಯ. ಪುಷ್ಪಾರ್ಚನೆ ವಿವಾದ ಮೈಸೂರು ದಸರಾ ಶಿಷ್ಟಾಚಾರ ಉಲ್ಲಂಘನೆ ಸಂಭ್ರಮಪ್ರಭ ಸಿಎಂ ಡಿ.ಕೆ. ಶಿವಕುಮಾರ್ ಸಿದ್ದರಾಮಯ್ಯ ಹೆಚ್.ಡಿ.ಕುಮಾರಸ್ವಾಮಿ
Add as Preferred on Google Follow on Google News
Share. WhatsApp Facebook Twitter Telegram
Previous Articleವಿಜಯದಶಮಿ ಆಚರಣೆಯ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಏನು? ಮೈಸೂರಿನ ಧಾರ್ಮಿಕ ಚಿಂತಕ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ವಿಶ್ಲೇಷಣೆ
Next Article ‘ಸಿದ್ದರಾಮಯ್ಯ ನೆರಳಲ್ಲಿ ಬೆಳೆದವರೆಲ್ಲಾ ಈಗ ಯಾಕೆ ಮೌನವಾಗಿದ್ದೀರಿ?’ – ಕಾಂಗ್ರೆಸ್ ನಾಯಕರಿಗೆ ಹೆಚ್.ಡಿ. ಕುಮಾರಸ್ವಾಮಿ ನೇರ ಸವಾಲು!
Sub Editor
  • Website

Related Posts

‘ಸಿದ್ದರಾಮಯ್ಯ ನೆರಳಲ್ಲಿ ಬೆಳೆದವರೆಲ್ಲಾ ಈಗ ಯಾಕೆ ಮೌನವಾಗಿದ್ದೀರಿ?’ – ಕಾಂಗ್ರೆಸ್ ನಾಯಕರಿಗೆ ಹೆಚ್.ಡಿ. ಕುಮಾರಸ್ವಾಮಿ ನೇರ ಸವಾಲು!

October 23, 2026

ವಿಜಯದಶಮಿ ಆಚರಣೆಯ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಏನು? ಮೈಸೂರಿನ ಧಾರ್ಮಿಕ ಚಿಂತಕ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ವಿಶ್ಲೇಷಣೆ

October 21, 2026

ಮೈಸೂರು ದಸರಾ: ಸರ್ಕಾರದ ಜಾಹೀರಾತಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಫೋಟೋ ಕಡೆಗಣನೆ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

October 20, 2026
Leave A Reply Cancel Reply

ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Latest Posts

‘ಸಿದ್ದರಾಮಯ್ಯ ನೆರಳಲ್ಲಿ ಬೆಳೆದವರೆಲ್ಲಾ ಈಗ ಯಾಕೆ ಮೌನವಾಗಿದ್ದೀರಿ?’ – ಕಾಂಗ್ರೆಸ್ ನಾಯಕರಿಗೆ ಹೆಚ್.ಡಿ. ಕುಮಾರಸ್ವಾಮಿ ನೇರ ಸವಾಲು!

‘ಈ ಸರ್ಕಾರದಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆಯೇ ಇಲ್ಲ!’ – ಸಿಎಂ ಡಿಕೆಶಿ ಪತ್ನಿ ಪುಷ್ಪಾರ್ಚನೆ ವಿವಾದಕ್ಕೆ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯ

ವಿಜಯದಶಮಿ ಆಚರಣೆಯ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಏನು? ಮೈಸೂರಿನ ಧಾರ್ಮಿಕ ಚಿಂತಕ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ವಿಶ್ಲೇಷಣೆ

ಮೈಸೂರು ದಸರಾ: ಸರ್ಕಾರದ ಜಾಹೀರಾತಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಫೋಟೋ ಕಡೆಗಣನೆ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

Latest Posts

Subscribe to News

Get the latest sports news from NewsSite about world, sports and politics.

Advertisement
ಸಂಭ್ರಮಪ್ರಭ
ಕರುನಾಡಿನ ನಂಬಿಕಸ್ಥ ಸುದ್ದಿ ತಾಣ
ಕ್ಷಣ ಕ್ಷಣದ ಅಪ್ಡೇಟ್ಸ್
ರಾಜ್ಯ (STATE)
ಕರ್ನಾಟಕದ ಪ್ರಮುಖ ವಿದ್ಯಮಾನಗಳು ಮತ್ತು ರಾಜಕೀಯ ವಿಶ್ಲೇಷಣೆ.
ರಾಷ್ಟ್ರೀಯ (NATIONAL)
ದೇಶದ ಮೂಲೆ-ಮೂಲೆಗಳ ತಾಜಾ ಹಾಗೂ ನಿಖರ ವರದಿಗಳು.
ಸುದ್ದಿ ಓದಲು ಕ್ಲಿಕ್ ಮಾಡಿ
sambramaprabha.com
Sambramaprabha logo
Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 Sambramaprabha.com. Designed by Suresha B.
  • Privacy Policy
  • Terms
  • Accessibility

Type above and press Enter to search. Press Esc to cancel.