ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದನ್ನು ಖಂಡಿಸಿ ಹಾಗೂ ಕಾವೇರಿ ನದಿ ನೀರಿನ ರಕ್ಷಣೆಗಾಗಿ ಆಗಸ್ಟ್ 13 ರಂದು ‘ಅಖಂಡ ಕರ್ನಾಟಕ ಬಂದ್’ಗೆ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ 

ತಮ್ಮ ಹೋರಾಟದ ಕುರಿತು ಮಾತನಾಡಿದ ಅವರು, “ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡಲು ಸಾಧ್ಯವಿಲ್ಲ. ಕಾವೇರಿ ಹಿತರಕ್ಷಣೆಗಾಗಿ ಇಡೀ ರಾಜ್ಯಾದ್ಯಂತ ಬಲವಾದ ಹೋರಾಟ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ತಿಂಗಳ 13ನೇ ತಾರೀಕು (ಗುರುವಾರ) ಅಖಂಡ ಕರ್ನಾಟಕ ಬಂದ್ ನಡೆಸಲಾಗುವುದು” ಎಂದು ತಿಳಿಸಿದರು 

ಬಂದ್‌ನ ಪ್ರಮುಖ ವಿವರಗಳು:

  • ಬಂದ್ ದಿನಾಂಕ: ಆಗಸ್ಟ್ 13 (ಗುರುವಾರ) 

  • ಸಮಯ: ಬೆಳಗ್ಗೆ 6:00 ರಿಂದ ಸಂಜೆ 6:00 ರವರೆಗೆ

  • ವ್ಯಾಪ್ತಿ: ಬೆಳಗಾವಿಯಿಂದ ಚಾಮರಾಜನಗರದವರೆಗೆ, ಕಲಬುರಗಿಯಿಂದ ಮಂಗಳೂರು ಹಾಗೂ ಕೋಲಾರದವರೆಗೆ ಸಮಗ್ರ ಕರ್ನಾಟಕ ಬಂದ್ ಆಗಲಿದೆ

  • ವಿನಾಯಿತಿ: ಆಸ್ಪತ್ರೆಗಳು, ತುರ್ತು ವೈದ್ಯಕೀಯ ಸೇವೆಗಳು ಮತ್ತು ಅವಶ್ಯಕ ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ

ಕನ್ನಡಿಗರು ಹಾಗೂ ರೈತರಿಗೆ ಮನವಿ

“ಇದು ಕನ್ನಡಿಗರ ಮತ್ತು ರೈತರ ಹಿತದೃಷ್ಟಿಯಿಂದ ನಡೆಯುತ್ತಿರುವ ಹೋರಾಟ. ರಾಜ್ಯದ ಪ್ರತಿಯೊಬ್ಬ ಕನ್ನಡಿಗರು, ರೈತ ಬಾಂಧವರು ಹಾಗೂ ಬೆಂಗಳೂರಿನ ನಾಗರಿಕರು ಈ ಬಂದ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಯಾರೂ ಇದಕ್ಕೆ ವಿರೋಧ ವ್ಯಕ್ತಪಡಿಸದೆ, ಕೇವಲ ‘ನೈತಿಕ ಬೆಂಬಲ’ ಎಂದು ಹೇಳದೆ ಸಂಪೂರ್ಣವಾಗಿ ಕೈಜೋಡಿಸಿ ಈ ಐತಿಹಾಸಿಕ ಬಂದ್ ಅನ್ನು ಯಶಸ್ವಿಗೊಳಿಸಬೇಕು” ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ

Share.
Leave A Reply

Exit mobile version