• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಟಿವಿಕೆ ಸೇರುವ ಊಹಾಪೋಹಗಳ ನಡುವೆ, ಶಾಸಕ ಸ್ಥಾನಕ್ಕೆ ಸೆಂಗೊಟ್ಟೈಯನ್ ರಾಜೀನಾಮೆ

Sambrama Prabha News by Sambrama Prabha News
November 26, 2025
in Nation News
0
ಟಿವಿಕೆ ಸೇರುವ ಊಹಾಪೋಹಗಳ ನಡುವೆ, ಶಾಸಕ ಸ್ಥಾನಕ್ಕೆ ಸೆಂಗೊಟ್ಟೈಯನ್ ರಾಜೀನಾಮೆ

Updated By: Priyalachhi

ಚೆನ್ನೈ: ಒಂಬತ್ತು ಬಾರಿ ಶಾಸಕರಾಗಿರುವ ಉಚ್ಚಾಟಿತ ಎಐಎಡಿಎಂಕೆ ಶಾಸಕ ಕೆಎ ಸೆಂಗೋಟ್ಟೈಯನ್ ಅವರು ಬುಧವಾರ ತಮಿಳುನಾಡು ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ತೀವ್ರ ಊಹಾಪೋಹಗಳಿಗೆ ಕಾರಣವಾಗಿದೆ.

ಸೆಂಗೋಟ್ಟೈಯನ್ ಅವರು ಇಂದು ರಾಜ್ಯ ಸಚಿವಾಲಯದಲ್ಲಿ ವಿಧಾನಸಭಾ ಸ್ಪೀಕರ್ ಎಂ ಅಪ್ಪಾವು ಅವರನ್ನು ಭೇಟಿ ಮಾಡಿ ಕೈಬರಹದ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಅದನ್ನು ಸ್ಪೀಕರ್ ಶೀಘ್ರದಲ್ಲೇ ಅಂಗೀಕರಿಸುವ ನಿರೀಕ್ಷೆಯಿದೆ.

72 ವರ್ಷದ ನಾಯಕ ಸೆಂಗೊಟ್ಟೈಯನ್ ಅವರು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಸೇರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಮಧ್ಯೆ ಆಡಳಿತಾರೂಢ ಡಿಎಂಕೆ ಕೂಡ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸಿದೆ. ಸೆಂಗೊಟ್ಟೈಯನ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ವಲ್ಪ ಸಮಯದ ನಂತರ ಡಿಎಂಕೆ ಸಚಿವ ಪಿಕೆ ಶೇಖರಬಾಬು ಅವರೊಂದಿಗೆ ಚರ್ಚೆ ನಡೆಸಿದ್ದು, ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಸ್ಪೀಕರ್ ಗೆ ರಾಜೀನಾಮೆ ಪತ್ರ ಸಲ್ಲಿಸುವ ಮುನ್ನ ನೀವು ಟಿವಿಕೆ ಸೇರುತ್ತೀರಾ ಎಂದು ವರದಿಗಾರರು ಕೇಳಿದಾಗ, ಮಾಜಿ ಸಚಿವರು ಊಹಾಪೋಹಗಳಿಗೆ ಉತ್ತರಿಸಲು ನಿರಾಕರಿಸಿದರು ಮತ್ತು “ದಯವಿಟ್ಟು ಒಂದು ದಿನ ಕಾಯಿರಿ” ಎಂದು ಮಾತ್ರ ಹೇಳಿದರು.

ಎಐಎಡಿಎಂಕೆಯಿಂದ ಹೊರಹಾಕಲ್ಪಟ್ಟ ನಂತರ ಇತ್ತೀಚೆಗೆ ಡಿಎಂಕೆಗೆ ಸೇರಿದ ಮಾಜಿ ಶಾಸಕ ಅನ್ವರ್ ರಾಜ ಅವರು ಟಿಎನ್‌ಐಇ ಜೊತೆ ಮಾತನಾಡುತ್ತಾ, “ಸೆಂಗೋಟ್ಟೈಯನ್‌ಗೆ ಈಗ ಸರಿಯಾದ ಸ್ಥಳ ಡಿಎಂಕೆ, ಏಕೆಂದರೆ ಡಿಎಂಕೆ ಮತ್ತು ಎಐಎಡಿಎಂಕೆ ಸಾಮಾನ್ಯ ಸಿದ್ಧಾಂತಗಳನ್ನು ಹೊಂದಿವೆ” ಎಂದರು.

ಸೆಂಗೋಟ್ಟಯ್ಯನ್ ಸೆಪ್ಟೆಂಬರ್ 5 ರಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿದ್ದರು. ಮಾಜಿ ಮುಖ್ಯಮಂತ್ರಿ ಓ ಪನ್ನೀರ್ಸೆಲ್ವಂ, ಟಿಟಿವಿ ದಿನಕರನ್ ಮತ್ತು ವಿಕೆ ಶಶಿಕಲಾ ಸೇರಿದಂತೆ ಉಚ್ಚಾಟಿತ ನಾಯಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.

Tags: ಟಿವಿಕೆ
Previous Post

ಚಿತ್ರದುರ್ಗದ ಮುರುಘಾ ಶ್ರೀಗೆ ಬಿಗ್ ರಿಲೀಫ್

Next Post

ನಂದಿನಿ ಬ್ರ್ಯಾಂಡ್​ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ: ಕಿಂಗ್​ಪಿನ್ ದಂಪತಿ ಬಂಧನ

Next Post
ನಂದಿನಿ ಬ್ರ್ಯಾಂಡ್​ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ: ಕಿಂಗ್​ಪಿನ್ ದಂಪತಿ ಬಂಧನ

ನಂದಿನಿ ಬ್ರ್ಯಾಂಡ್​ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ: ಕಿಂಗ್​ಪಿನ್ ದಂಪತಿ ಬಂಧನ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.