Updated By: Priyalachhi 

ಕಿಚ್ಚ ಸುದೀಪ್ ಅಭಿನಯದ 2025ರ ಬಹುನಿರೀಕ್ಷೆಯ ‘ಮಾರ್ಕ್’ ಸಿನಿಮಾ ಕ್ರಿಸ್ಮಸ್​ಗೆ ತೆರೆಕಂಡು ಸೂಪರ್​ ಹಿಟ್ ಆಗಿದೆ. ಡಿಸೆಂಬರ್​​ 25ರಂದು ರಾಜ್ಯಾದ್ಯಂತ 180+ ಚಿತ್ರಮಂದಿರಗಳಲ್ಲಿ ತೆರೆಕಂಡ ವಿಜಯ್​ ಕಾರ್ತಿಕೇಯನ್​​​ ನಿರ್ದೇಶನದ ಚಿತ್ರ, ಪ್ರೇಕ್ಷಕರಿಂದ ಬಹುತೇಕ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿತು.

ಪ್ರೇಕ್ಷಕರ ಮೆಚ್ಚುಗೆ ಪಡೆದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುವ ಮೂಲಕ ‘ಮಾರ್ಕ್’​ ಯಶಸ್ವಿಯಾಗಿದೆ. ಹೌಸ್​ಫುಲ್​ ಪ್ರದರ್ಶನ ಕಂಡಿರುವ ಚಿತ್ರ ಬಾಕ್ಸ್ ಆಫೀಸ್‌ನಲ್ಲೂ ಕಮಾಲ್​ ಮಾಡಿದೆ.

ಮಾರ್ಕ್ ಚಿತ್ರತಂಡ ಅಧಿಕೃತ ಮಾಹಿತಿ ಕೊಟ್ಟಿದ್ದು, ಮೊದಲ ವಾರಾಂತ್ಯದಲ್ಲಿಯೇ‌ 35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವೀಕೆಂಡ್​ನಲ್ಲಿ ಮಾತ್ರವಲ್ಲದೇ ಸೋಮವಾರವೂ ಕಿಚ್ಚನ ಚಿತ್ರ ಹೌಸ್​ಫುಲ್ ಪ್ರದರ್ಶನ ಕಾಣುವ ಮೂಲಕ ಮುನ್ನುಗ್ಗುತ್ತಿದೆ.

ಸಿನಿಮಾ ವಿಮರ್ಶಕರು ಹಾಗೂ ವಿತರಕರು ಮಾರ್ಕ್ ಸಿನಿಮಾವನ್ನು ಕಮರ್ಷಿಯಲಿ ಹಿಟ್ ಎಂದು ಶ್ಲಾಘಿಸಿದ್ದಾರೆ. ಹಿಂದಿ ಹಾಗೂ ಹಾಲಿವುಡ್ ಸಿನಿಮಾಗಳಿಗೆ ಟಕ್ಕರ್ ಕೊಟ್ಟು ದೊಡ್ಡ ಮಟ್ಟದ ಗೆಲುವನ್ನು‌ ಕಿಚ್ಚನ ಸಿನಿಮಾ ಪಡೆದುಕೊಂಡಿದೆ. ಕಿಚ್ಚನ ಸ್ವಾಗ್, ಸ್ಟೈಲ್, ಅಟಿಟ್ಯೂಡ್ ಕಂಡು ಚಿತ್ರರಸಿಕರು ಫಿದಾ ಆಗಿದ್ದಾರೆ. ಮ್ಯಾಕ್ಸ್ ಬಳಿಕ ಮತ್ತೊಮ್ಮೆ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯನ್​ ಜೋಡಿ ಬೆಳ್ಳಿಪರದೆ ಮೇಲೆ‌ ಮೋಡಿ‌ ಮಾಡಿದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version