Updated By: Priyalachhi

ಬೆಳಗಾವಿ: “ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟರೆ ಮಾತ್ರ ಅಧಿಕಾರ” ಎನ್ನುವ ಮೂಲಕ‌ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಬಿಟ್ಟು ಕೊಡುವವರೆಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಅಧಿಕಾರ ಸಿಗುವುದಿಲ್ಲ ಅಂತಾ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಜ್ಯೋತಿಷ್ಯ ಭವಿಷ್ಯದಲ್ಲಿ ಒಂದು ಸಂಕ್ರಾಂತಿ ಫಲ. ಮತ್ತೊಂದು ಯಗಾದಿ ಫಲ ಅಂತಾ ಇರುತ್ತದೆ. ಸಂಕ್ರಾಂತಿ ಫಲದಲ್ಲಿ ಸೂರ್ಯ ಉತ್ತರಾಯಣ ಕಡೆ ಹೋಗುತ್ತಾನೆ. ಇದು ವಿಶೇಷವಾಗಿ ರಾಜರು, ಮಹಾರಾಜರು, ದೊಡ್ಡ ದೊಡ್ಡ ವ್ಯಾಪಾರಸ್ಥರು, ದುಡಿಮೆದಾರರಿಗೆ ಬರುತ್ತದೆ. 14ರ ನಂತರ ಸಂಕ್ರಾಂತಿ ಕಳೆದ ಮೇಲೆ ಈ ಭವಿಷ್ಯ ಹೇಳಬಹುದು” ಎಂದರು.

“ಯುಗಾದಿ ಕಳೆದ ಮೇಲೆ ಮಳೆ, ಬೆಳೆ, ರೈತರು, ಭೂಮಿ ಬಗ್ಗೆ ಹೇಳಬಹುದು. ಆದರೆ, ಈಗ ಅತಂತ್ರ ಇದೆ. ಹಾಗಾಗಿ ಈಗ ಭವಿಷ್ಯ ಹೇಳುವುದು ಕಷ್ಟ.‌ 2025ಕ್ಕಿಂತ 2026 ಹೆಚ್ಚು ಕಷ್ಟ ಇದೆ. 8-10 ಪರ್ಸಂಟ್ ಜಗತ್ತೇ ಮುಳುಗಿ ಹೋಗುವ ಲಕ್ಷಣ ಇದೆ. ಯಗಾದಿಗೆ ಅದನ್ನು ಹೇಳುವೆ” ಎಂದು ಸ್ವಾಮೀಜಿ ಆತಂಕದ ಭವಿಷ್ಯ ನುಡಿದರು.
Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version