ಸಿನಿಮಾ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಪ್ರದರ್ಶನ

ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ಮಾಲೀಕತ್ವದ ಒಡೆಯರ್‌ ಮೂವೀಸ್‌ ಲಾಂಛನದ ಅಡಿ ನಿರ್ಮಾಣವಾದ ಡೊಳ್ಳು ಸಿನಿಮಾ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ಮಾಲೀಕತ್ವದ ಒಡೆಯರ್‌ ಮೂವೀಸ್‌ ಲಾಂಛನದ ಅಡಿ ನಿರ್ಮಾಣವಾದ ಡೊಳ್ಳು ಸಿನಿಮಾ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಈ ಚಿತ್ರವು ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ಕಲೈಡೊಸ್ಕೋಪ್ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ ಮೊದಲ ಪ್ರದರ್ಶನ ಕಂಡಿತ್ತು. ಢಾಕಾ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್ ಹಾಗೂ ಡಲ್ಲಾಸ್‌ನ ದಕ್ಷಿಣ ಏಷ್ಯಾ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಇತ್ತೀಚೆಗೆ ಇನ್ನೋವೇಟಿವ್ ಇಂಟರ್‌ನ್ಯಾಷನಲ್‌ ಚಿತ್ರೋತ್ಸವದಲ್ಲಿ ಸರಸ್ವತಿ ಪಿಂಪ್ಳೆ ಫೌಂಡೇಶನ್ ವತಿಯಿಂದ ನೀಡಲಾದ ದಾದಾಸಾಹೇಬ್ ಫಾಲ್ಕೆ ಉತ್ತಮ ಚಲನಚಿತ್ರ ಪ್ರಶಸ್ತಿ ದೊರಕಿದೆ.

ಡೊಳ್ಳು ಜನಪದ ಕಲೆ ಮತ್ತು ಸಿನಿಮಾದ ಒಂದು ಸುಂದರ ಮಿಲನ’ ಎಂದು ನಿರ್ಮಾಪಕ ಪವನ್ ಒಡೆಯರ್ ಅಭಿಪ್ರಾಯ  ಪಟ್ಟಿದ್ದಾರೆ. ಈ ಚಿತ್ರ ಇನ್ನಷ್ಟು ಜನಮನ್ನಣೆ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪವನ್ ಒಡೆಯರ್ ಬೆಂಬಲವಿಲ್ಲದೆ ಡೊಳ್ಳು ಚಿತ್ರಕ್ಕೆ ಮನ್ನಣೆ ಸಿಗುತ್ತಿರಲಿಲ್ಲ ಎನ್ನುತ್ತಾರೆ ರಾಷ್ಟ್ರ ಪ್ರಶಸ್ತಿ ಪುರಸ್ತಿ ಪುರಸ್ಕೃತ ನಿರ್ದೇಶಕ ಸಾಗರ್ ಪುರಾಣಿಕ್ ಹೇಳಿದ್ದಾರೆ. . “ನಾನು ಉತ್ತಮ ತಂಡವನ್ನು ಹೊಂದಿದ್ದೇನೆ ಮತ್ತು ಅತ್ಯುತ್ತಮವಾದ ಪಾತ್ರವನ್ನು ನೀಡಿದ್ದೇನೆ. ನಮ ಎಲ್ಲಾ ಪ್ರಶಸ್ತಿಗಳು ಮತ್ತು ಮನ್ನಣೆಗಳಿಗೆ ನಾನು ಕೃತಜ್ಞನಾಗಿದ್ದೇನೆ ಮತ್ತು ಪ್ರೇಕ್ಷಕರು ನಮ್ಮ ಚಿತ್ರವನ್ನು ಇಷ್ಟಪಟ್ಟು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ನಿರ್ದೇಶಕ ಸುನೀಲ್  ಸಾಗರ್.

ಡೊಳ್ಳು ಚಿತ್ರದಲ್ಲಿ ಡಿಒಪಿ ಅಭಿಲಾಷ್ ಕಲತಿ ಮತ್ತು ಎಂ ಅನಂತ್ ಕಾಮತ್ ಸಂಗೀತ, ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ, ಚಂದ್ರ ಮಯೂರ, ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್, ಡಾ ಪ್ರಭುದೇವ, ವರುಣ್ ಶ್ರೀನಿವಾಸ್, ಮತ್ತು ಚಂದ್ರಮನು ಇತರರು ನಟಿಸಿದ್ದಾರೆ.

ಇದನ್ನೂ ಓದಿ...

Back to top button
>